Categories
ಚಿಕ್ಕಮಗಳೂರು

ಶೃಂಗೇರಿಯಲ್ಲಿ ಜಾರುಗಂಬ ಸ್ಪರ್ಧೆ ರಂಗು!

ಶೃಂಗೇರಿಯಲ್ಲಿ ಜಾರುಗಂಬ ಸ್ಪರ್ಧೆ ರಂಗು!
– ಶೃಂಗೇರಿಯ ರಥ ಬೀದಿಯಲ್ಲಿ ಶ್ರೀಕೃಷ್ಣನ ಉತ್ಸವ
– ಮಡಿಕೆ ಒಡೆಯುವುದು ಹಾಗೂ ಜಾರುಗಂಬ ಹತ್ತುವ ಸ್ಪರ್ಧೆ

NAMMUR EXPRESS NEWS
ಶೃಂಗೇರಿ: ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಪ್ರತಿವರ್ಷದ ಆಚರಣೆಯಂತೆ ಈ ವರ್ಷವೂ ಕೂಡ ಜಾರುಗಂಬ ಸ್ಪರ್ಧೆ ಏರ್ಪಡಿಸಲಾಗಿದ್ದು, ಸಂಭ್ರಮ ಕಂಡು ಬಂತು.
ಮೊದಲು ಶೃಂಗೇರಿಯ ರಥ ಬೀದಿಯಲ್ಲಿ ಶ್ರೀಕೃಷ್ಣನ ಉತ್ಸವ ನಡೆಯಿತು.ಉತ್ಸವದಲ್ಲಿ ಶ್ರೀಮಠದ ಶ್ರೀಲಕ್ಷ್ಮೀ ಗಜಲಕ್ಷ್ಮೀ ಆನೆಗಳು,ಪುರೋಹಿತ ವರ್ಗ ಪಾಲ್ಗೊಂಡು ಮಂತ್ರಘೋಷದೊಡನೆ ಉತ್ಸವ ನೆರವೇರಿತು. ನಂತರ ಶ್ರೀಮಠದ ಆವರಣದಲ್ಲಿ ಮಡಿಕೆ ಒಡೆಯುವುದು ಹಾಗೂ ಜಾರುಗಂಬ ಹತ್ತುವ ಸ್ಪರ್ಧೆ ನೆರವೇರಿತು. ಈ ಸ್ಪರ್ಧೆಯಲ್ಲಿ ತಾಲೂಕಿನ ತೆಕ್ಕೂರು ಗ್ರಾಮದ ಶ್ರೀಕಾಂತ್‌ರವರು ಜಯಗಳಿಸದರು. ಇರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಿ ಬಹುಮಾನ ನೀಡಲಾಯಿತು. ಈ ಸಾಂಪ್ರದಾಯಿಕ ಸ್ಪರ್ಧೆಯನ್ನು ನೋಡಲು ಸಾರ್ವಜನಿಕರು ನೆರೆದಿದ್ದರು ಹಾಗೂ ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು.

Categories
ಉಡುಪಿ

ಉಡುಪಿಯಲ್ಲಿ ಹೊಂಡದ ರಸ್ತೆಯಲ್ಲಿ ಪ್ರೇತಾತ್ಮ!

ಉಡುಪಿಯಲ್ಲಿ ಹೊಂಡದ ರಸ್ತೆಯಲ್ಲಿ ಪ್ರೇತಾತ್ಮ!
– ಸಂಪೂರ್ಣ ಹೊಂಡಮಯ ಹೈವೇ: ದೆವ್ವ ಕುಣಿತದ ಮೂಲಕ ಜಾಗೃತಿ
– ಯಮನೂ ಬಂದು ರಸ್ತೆ ನೋಡುವಂತೆ ಅಣಕು ಪ್ರದರ್ಶನ

NAMMUR EXPRESS NEWS
ಉಡುಪಿ: ಉಡುಪಿಯಲ್ಲಿ ಹೊಂಡದ ರಸ್ತೆಯಲ್ಲಿ ಪ್ರೇತಾತ್ಮ!.ಸಂಪೂರ್ಣ ಹೊಂಡಮಯವಾದ ಹೈವೇ. ದೆವ್ವ ಕುಣಿತದ ಮೂಲಕ ಜಾಗೃತಿ. ಯಮನೂ ಬಂದು ರಸ್ತೆ ನೋಡುವಂತೆ ಅಣಕು ಪ್ರದರ್ಶನ.
ಹೌದು.ಸಂಪೂರ್ಣ ಹೊಂಡಮಯವಾದ ಆದಿ ಉಡುಪಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಮಧರ್ಮ, ಚಿತ್ರಗುಪ್ತ ಹಾಗೂ ಪ್ರೇತಾತ್ಮದ ವೇಷ ತೊಟ್ಟ ವೇಷಧಾರಿಗಳು ಹೆದ್ದಾರಿ ಸಮಸ್ಯೆಯನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆದಿಉಡುಪಿಯ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ತುಂಬಿದೆ. ಈ ರಸ್ತೆಯಲ್ಲಿ ಸಾರ್ವಜನಿಕರು ವಾಹನ ಸಂಚಾರ ಮಾಡುವಾಗ ಭಾರೀ ತೊಂದರೆ ಅುಭವಿಸು್ತಿದ್ದಾರೆ. ಅಪಾಯಕಾರಿ ಎನಿಸಿರುವ ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ವೇಷಧಾರಿಗಳು ವಿಶಿಷ್ಟ ರೀತಿಯ ಪ್ರದರ್ಶನ ನೀಡಿ ಆಡಳಿತ ಹಾಗೂ ಸಾರ್ವಜನಿಕರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರರಾದರು.
ಪ್ರೇತಾತ್ಮವೇಷ ಧರಿಸಿದ ಇಬ್ಬರು ಹೊಂಡಗಳ ಮೇಲಿಂದ ಜಿಗಿದರೆ, ಬಳಿಕ ಯಮಧರ್ಮ ಹಾಗೂ ಚಿತ್ರಗುಪ್ತ ಅವರ ಜಿಗಿತದ ಅಳತೆಯನ್ನು ಮಾಪನದಲ್ಲಿ ಅಳೆದರು. ಈ ಮೂಲಕ ಈ ಹೊಂಡಗಳು ಬಹಳ ಅಪಾಯಕಾರಿ ಎಂಬುದಾಗಿ ಬಿಂಬಿಸಿದರು.

Categories
ತೀರ್ಥಹಳ್ಳಿ

ಜೋಕೆ!..ಬಲಿಗಾಗಿ ಕಾದಿದೆ ಗುಂಡಿ ರಸ್ತೆಗಳು..!

ಜೋಕೆ!..ಬಲಿಗಾಗಿ ಕಾದಿದೆ ಗುಂಡಿ ರಸ್ತೆಗಳು..!
– ಗುಂಡಿ ತಪ್ಪಿಸುವ ಹರಸಾಹಸದಲ್ಲಿ ಜನರು
– ತೀರ್ಥಹಳ್ಳಿ ಪಟ್ಟಣದಲ್ಲಿ ಹೊಂಡ ಗುಂಡಿ ಮುಚ್ಚೋರು ಯಾರು?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳ ಹೊಂಡ ಗುಂಡಿ ಇದೀಗ ಪ್ರಯಾಣಿಕರ ಜೀವ ತೆಗೆಯುವ ಭೀತಿ ಎದುರಾಗಿದೆ.
ಯಡೇಹಳ್ಳಿ ಕೆರೆ ಬಳಿ, ಸಹ್ಯಾದ್ರಿ ಪಾಲಿಟೆಕ್ನಿಕ್ , ಸಾಗರ ಹೊಸನಗರ ಮುಖ್ಯ ರಸ್ತೆ, ಸೊಪ್ಪುಗುಡ್ಡೆ ರಸ್ತೆ, ಮುಖ್ಯ ರಸ್ತೆ ಸೇರಿ ಹಲವೆಡೆ ರಸ್ತೆಗಳಲ್ಲಿ ಹೊಂಡ ಗುಂಡಿಗಳ ರಸ್ತೆಯೇ ತುಂಬಿಹೋಗಿದ್ದು ವಾಹನ ಸವಾರರು ಓಡಾಡಲು ಪರದಾಟ ನಡೆಸುತ್ತಿದ್ದಾರೆ.
ದಿನ ಕಳೆದಂತೆ ರಸ್ತೆ ಗುಂಡಿಗಳು ಮೃತ್ಯುಸ್ವರೂಪಿಯಾಗಿ ಪರಿಣಮಿಸಿವೆ. ಗುಂಡಿಗೆ ಬಿದ್ದು, ಗುಂಡಿ ತಪ್ಪಿಸಲು ಹೋಗಿ ಪ್ರಾಣ ಕಳೆದುಕೊಳ್ಳುವುದು, ಗಾಯಗಳಾಗುವ ಆತಂಕಕ್ಕೆ ಒಳಗಾಗಿರುವ ಜನರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆ ಸುರಿದು ರಸ್ತೆ ಗುಂಡಿ ಸಮಸ್ಯೆ ವರ್ಷವಿಡೀ ಜನರನ್ನು ಬಿಡದೆ ಕಾಡುತ್ತಿದೆ. ಇತ್ತೀಚೆಂತೂ ರಸ್ತೆ ಗುಂಡಿಯಿಂದಾಗಿ ಸಾವುನೋವು ಭಯ ಕಾಡತೊಡಗಿದೆ. ಇಷ್ಟಾದರೂ ಅಧಿಕಾರಿಗಳು ರಸ್ತೆ ದುರಸ್ತಿಗೆ ಆದ್ಯತೆ ನೀಡದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ನಗರದ ರಸ್ತೆಯಲ್ಲಿ ಸಾಮಾನ್ಯ ವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದರೂ ದಿಢೀರ್ ಗುಂಡಿ ಎದುರಾದಾಗ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಓಡಾಡುವ ರಸ್ತೆಯಾದ್ದರಿಂದ ಚಾಲಕರು ವಿಚಲಿತಗೊಳ್ಳುತ್ತಾರೆ. ಗುಂಡಿಯೊಳಗೆ ವಾಹನ ಚಕ್ರ ಹರಿಯದಂತೆ ನಿಯಂತ್ರಿಸಲು ಹೋದಾಗ ಅಪಘಾತ ಸಂಭವಿಸುವ ಸಾಧ್ಯತೆಗಳಿರುತ್ತದೆ. ವೇಗದಲ್ಲಿದ್ದರೆ ವಾಹನ ಗುಂಡಿಗೆ ಇಳಿದು ಅಪಘಾತ ಸಂಭವಿಸುವ ಚಾಲಕರು ವೇಗ ನಿಯಂತ್ರಿಸುವಲ್ಲಿ ಯಶಸ್ವಿಯಾದರೂ ವಾಹನ ಗುಂಡಿಗೆ ಇಳಿದಾಗ ಬೆನ್ನು ಹುರಿ, ಸೊಂಟ, ಕುತ್ತಿಗೆಗೆ ಹಾನಿಯಾಗಲು ಕಾರಣವಾಗಬಹುದು. ಇಷ್ಟಾದರೂ ಸ್ಥಳೀಯ ಆಡಳಿತ ಗಮನಿಸಲ್ಲ.
ಈ ಬಗ್ಗೆ ನಮ್ಮೂರ್ ಎಕ್ಸ್ ಪ್ರೆಸ್ ವರದಿ ಮಾಡಿದಾಗ ಕೊಪ್ಪ ಸರ್ಕಲ್ ಮುಖ್ಯ ರಸ್ತೆಯಲ್ಲಿ ರಸ್ತೆ ಸರಿ ಮಾಡಲಾಗಿತ್ತು.

Categories
ಚಿಕ್ಕಮಗಳೂರು

ಕೊಪ್ಪ ಬಿಜೆಪಿ ಕಚೇರಿಯಲ್ಲಿ ವರಮಹಾಲಕ್ಷ್ಮೀ ಪೂಜೆ

ಕೊಪ್ಪ ಬಿಜೆಪಿ ಕಚೇರಿಯಲ್ಲಿ ವರಮಹಾಲಕ್ಷ್ಮೀ ಪೂಜೆ
– ಸಂಭ್ರಮದಿಂದ ಭಾಗವಹಿಸಿದ ಮಹಿಳಾ ಪ್ರಮುಖರು ಹಾಗೂ ಕಾರ್ಯಕರ್ತರು

NAMMUR EXPRESS NEWS
ಕೊಪ್ಪ: ಕೊಪ್ಪ ತಾಲೂಕಿನ ಬಿಜೆಪಿ ಕಛೇರಿಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು.
ಕೊಪ್ಪ ತಾಲೂಕಿನ ಮಹಿಳಾ ಮೋರ್ಚಾ ಅಧ್ಯಕ್ಷರಾದ ಅನುಸೂಯ ಕೃಷ್ಣಮೂರ್ತಿ ಹಾಗೂ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೃತಿ ರೋಹಿತ್ ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತರು ಪೂಜೆಯಲ್ಲಿ ಭಾಗವಹಿಸಿದ್ದರು.
ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಜಗದೀಶ್ ನುಗ್ಗಿ,ಜಯಂತ್ ನಿಲುವಾಗಿಲು ಸೇರಿದಂತೆ ತಾಲೂಕಿನ ಪದಾಧಿಕಾರಿಗಳು,ಕಾರ್ಯಕರ್ತರು ಪೂಜಾ ಸಮಯದಲ್ಲಿ ಉಪಸ್ಥಿತರಿದ್ದರು.

Categories
Uncategorized

ಟೆಲಿಗ್ರಾಮ್ ಶೀಘ್ರದಲ್ಲಿ ನಿಷೇಧ?

ಟೆಲಿಗ್ರಾಮ್ ಶೀಘ್ರದಲ್ಲಿ ನಿಷೇಧ?
– ಕಂಪನಿಯ ವಿರುದ್ಧ ಸುಲಿಗೆ ಮತ್ತು ಜೂಜಾಟದ ತನಿಖೆ
– ಸಿನಿಮಾ ಫೈರಸಿಯಲ್ಲಿ ಈ ಆಪ್ ಸಹಕಾರ

NAMMUR EXPRESS NEWS
ನವ ದೆಹಲಿ: ಭಾರತದಲ್ಲಿ 5 ಮಿಲಿಯನ್‌ಗಿಂತಲೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್ ನಿಷೇಧವನ್ನು ಎದುರಿಸುವ ಸಾಧ್ಯತೆ ಇದೆ.
ಕಂಪನಿಯ ವಿರುದ್ಧ ಸುಲಿಗೆ ಮತ್ತು ಜೂಜಾಟದ ತನಿಖೆಯನ್ನು ಕೇಂದ್ರವು ಪ್ರಾರಂಭಿಸಿದೆ. ಭಾರತದಲ್ಲಿ ಮೆಸೇಜಿಂಗ್ ಅಪ್ಲಿಕೇಶನ್‌ನ ಭವಿಷ್ಯವು ತನಿಖೆಯ ಆವಿಷ್ಕಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎರಡೂ ತನಿಖೆಯನ್ನು ಪ್ರಾರಂಭಿಸಿವೆ ಮತ್ತು ಕಂಪನಿಯ P2P ಸಂವಹನಗಳನ್ನು ಪರಿಶೀಲಿಸುತ್ತಿವೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಭಾರತದಲ್ಲಿ ಟೆಲಿಗ್ರಾಮ್ ತನಿಖೆಯಲ್ಲಿದೆ. ಆದರೆ ನಿಷೇಧವು ಸನ್ನಿಹಿತವಾಗಿಲ್ಲ ಎಂದು ಭಾರತದಲ್ಲಿ ಅನೇಕ ವರದಿಗಳು ಹೇಳಿವೆ. ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರಾನ್ಸ್‌ನಲ್ಲಿ ಬಂಧಿಸಿದ ನಂತರ ಭಾರತದ ಮಾಹಿತಿ ತಂತ್ರಜ್ಞಾನ ಸಚಿವಾಲಯವು ೆಲಿಗ್ರಾಮ್ ತನಿಖೆಯ ನವೀಕರಣಕ್ಕಾಗಿ ರಾಷ್ಟ್ರದ ಗೃಹ ಸಚಿವಾಲಯವನ್ನು ಕೇಳಿದೆ.

ಸಿನಿಮಾ ಫೈರಸಿಯಲ್ಲಿ ಈ ಆಪ್ ಸಹಕಾರ

ಟೆಲಿಗ್ರಾಮ್ ಆಪ್ ಹೊಸ ಸಿನಿಮಾ ಪೈರಸಿ ಮತ್ತು ಶೇರ್ ಮಾಡುವ ಮೂಲಕ ಸಿನಿಮಾ ಮತ್ತು ಮನೋರಂಜನೆ ಮಾರುಕಟ್ಟೆಯ ನಿಯಮ ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ.

Categories
ಪುತ್ತೂರು

ರಾಜಕೀಯ ಷಡ್ಯಂತ್ರ ಎಂದ ಪುತ್ತಿಲ!

ರಾಜಕೀಯ ಷಡ್ಯಂತ್ರ ಎಂದ ಪುತ್ತಿಲ!
– ಪುತ್ತಿಲ ಪರಿವಾರದ ಲೆಟ‌ರ್ ಹೆಡ್ಡಿನಲ್ಲೇ ಮಹಿಳೆಯೊಂದಿಗಿನ ವೈರಲ್ ಆಡಿಯೋ ಕುರಿತು ಸ್ಪಷ್ಟನೆ

NAMMUR EXPRESS NEWS
ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಡಿಯೋ ಹಾಗೂ ಈ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿಗಳ ಕುರಿತಾಗಿ ಅರುಣ್ ಕುಮಾ‌ರ್ ಪುತ್ತಿಲ ಸ್ಪಷ್ಟನೆ ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಮತ್ತು ನಂತರ ನಡೆದಿರುವ ಆರೋಪ ಪ್ರತ್ಯಾರೋಪಗಳು ಎಲ್ಲವೂ ಜನತೆಯ ಮುಂದಿರುವುದು ನಮಗೆಲ್ಲ ತಿಳಿದ ವಿಚಾರ. ಚುನಾವಣಾ ಸಂದರ್ಭದಲ್ಲಿ 3.5 ಕೋಟಿ ರೂಪಾಯಿ ವ್ಯವಹಾರದ ಆಪಾದನೆ ಮತ್ತು ನಾನು ಅದರ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ಹೇಳಿರುವ ವಿಚಾರಕ್ಕೆ ಇಂದು ಕೂಡ ಬದ್ಧನಾಗಿದ್ದೇನೆ ಎಂದು ಹೇಳಿದ್ದು, ಆದರೆ ಈ ರೀತಿಯಾಗಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ನಾನು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ರಾಜಕೀಯ ಷಡ್ಯಂತರಗಳನ್ನು ನಡೆಯುವ ಬಗ್ಗೆ ನಾನು ಹಿರಿಯರ ಹಾಗೂ ಅಧಿಕಾರಿಗಳ ಸೂನೆಯಂತೆ ಕಾನೂನನ ಚೌಕಟ್ಟಿನಲ್ಲಿ ಮುಂದುವರಿಯುತ್ತೇನೆ. ಎಂದು ಹೇಳಿದ್ದಾರೆ.

Categories
ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸಾಧಕರಿಗೆ ರಾಜರತ್ನ ಪ್ರಶಸ್ತಿ!

 

ಶಿವಮೊಗ್ಗ ಜಿಲ್ಲೆಯ ಸಾಧಕರಿಗೆ ರಾಜರತ್ನ ಪ್ರಶಸ್ತಿ!
• ಚಿತ್ರೋತ್ಸವ, ಸಿನಿಮಾ, ಕಿರುಚಿತ್ರಗಳ ಕ್ಷೇತ್ರದಲ್ಲಿ ಮಲೆನಾಡೇ ಮೇಲು ಗೈ
• ಜನತೆಗೆ ಹೆಮ್ಮೆ ಮೂಡಿಸಿದ ಶಿವಮೊಗ್ಗ ಸಾಧಕರು

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಸಾಧಕರನ್ನು ರಾಜರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಜನತೆಯಲ್ಲಿ ಹೆಮ್ಮೆ ಮೂಡಿಸಿದೆ.
ಕಿಮ್ ಸ್ಟಾರ್ ಉಡುಪಿ ವತಿಯಿಂದ ಆ. 25ರಂದು ಬೆಂಗಳೂರಿನಲ್ಲಿ ಚಿತ್ರೋತ್ಸವ, ಸಿನಿಮಾ ಹಾಗೂ ಕಿರುಚಿತ್ರಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಮೊಗ್ಗದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವೈದ್ಯೆ ಡಾ. ರಕ್ಷಾ ರಾವ್, ಉದ್ಯಮಿ ಎ.ಆರ್.ಅವಿನಾಶ್, ವಿದ್ಯಾ, ಉಮಾ ದಿಲೀಪ್, ಪುನೀತ್ ಬೆಳ್ಳೂರು, ಪೂರ್ಣಿಮಾ, ಅಮೃತಾ ಹಾಗೂ ವಿಷ್ಣುಪ್ರಸಾದ್ ಅವರಿಗೆ ರಾಜರತ್ನ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದರು.
ಬೆಂಗಳೂರಿನ ಮೂಡಲಪಾಳ್ಯ ಕಲ್ಯಾಣ ನಗರದಲ್ಲಿರುವ ಜ್ಞಾನ ಸೌಧದಲ್ಲಿ ಆ. 25ರಂದು ಶಿವಮೊಗ್ಗ ಜಿಲ್ಲೆಯ ಸಾಧಕರು ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು. ಅತ್ಯುತ್ತಮ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ,ಚಿತ್ರಗೀತೆಗಳ ಸಮ್ಮಿಲನ ಕಾರ್ಯಕ್ರಮವನ್ನು ನಡೆಸಲಾಯಿತು.
ಗೋವಿಂದರಾಜಪುರ ಶಾಸಕ ಎಂ.ಪ್ರಿಯಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಜಯನಗರ ವಿಧಾನಸಭಾ ಕ್ಷೇತ್ರ ಶಾಸಕ ಎಂ.ಕೃಷ್ಣಪ್ಪ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಚಲನಚಿತ್ರ ಮಂಡಳಿ ಸದಸ್ಯ ಚಿಕ್ಕಣ್ಣ, ಬಿಬಿಎಂಪಿ ಸದಸ್ಯೆ ತಾರಾ ಲೋಕೇಶ್, ನಟಿ ಗೀತಾ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Categories
ಚಿಕ್ಕಮಗಳೂರು

ಬಂದೂಕು ಸಿಡಿದು ವ್ಯಕ್ತಿ ಸಾವು!

BREAKING NEWS

ಬಂದೂಕು ಸಿಡಿದು ವ್ಯಕ್ತಿ ಸಾವು!
– ಚಿಕ್ಕಮಗಳೂರಿನ ಕಳವಾಸೆ ಗ್ರಾಮದಲ್ಲಿ ನಡೆದ ಘಟನೆ
– ಆತ್ಮಹತ್ಯೆಯೋ ಅಥವಾ ಮಿಸ್ ಫೈರ್ ಆಯ್ತೋ..?

NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರಿನ ಕಳವಾಸೆ ಗ್ರಾಮದಲ್ಲಿ ಗನ್ ತೆಗೆದಿಡುವಾಗ ಮಿಸ್ ಫೈರ್ ಆಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಗ್ರಾಮದ ಅರುಣ್ (47) ಮೃತನಾದ ದುರ್ದೈವಿ.
ಶೆಡ್‌ನಲ್ಲಿದ್ದ ಗನ್‌ ಅನ್ನು ಒಳಗಿಡಲೆಂದು ಒರೆಸುವಾಗ ಮೃತನ ಬಲಗಣ್ಣಿನ್ನು ಸೀಳಿ ಗುಂಡು ಹೊರಬಂದಿದೆ. ಆದರೆ ಇದು ಆತ್ಮಹತ್ಯೆಯೋ ಅಥವಾ ಮಿಸ್ ಫೈರ್ ಅನ್ನುವುದು ಸ್ಪಷ್ಟವಾಗಿಲ್ಲ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಶೆಡ್‌ನಲ್ಲಿ ಈ ದುರಂತ ಸಂಭವಿಸಿದೆ.
ಮೃತ ದೇಹವನ್ನು ಹಾಸನದ ಆಸ್ಪತ್ರೆಗೆ ಪರೀಕ್ಷೆಗಾಗಿ ರವಾನಿಸಿದ್ದು,ಮಲ್ಲಂದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಜ್ಯೋತಿಷ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಲಕ್ಷ್ಮೀನಾರಾಯಣನ ಅನುಗ್ರಹದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶೈಕ್ಷಣಿಕ ಕೆಲಸಗಳತ್ತ ಗಮನ ಹರಿಸಿ. ಅಡೆತಡೆಗಳು ಇರಬಹುದು. ಮಿತ್ರರ ನೆರವಿನಿಂದ ವ್ಯಾಪಾರ ವೃದ್ಧಿಯಾಗಬಹುದು. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲೂ ಕೆಲವು ಬದಲಾವಣೆಗಳಾಗಬಹುದು. ಆದಾಯ ಹೆಚ್ಚಲಿದೆ. ಹೆಚ್ಚಿನ ಶ್ರಮ ಇರುತ್ತದೆ. ಮಾನಸಿಕ ನೆಮ್ಮದಿ ಇರುತ್ತದೆ. ದಾಂಪತ್ಯ ಸುಖ ಹೆಚ್ಚಲಿದೆ.

** ವೃಷಭ ರಾಶಿ :
ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಬರವಣಿಗೆ ಇತ್ಯಾದಿ ಕೆಲಸಗಳು ಆದಾಯದ ಮೂಲವಾಗಬಹುದು. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಆರೋಗ್ಯವನ್ನು ನೋಡಿಕೊಳಳಿ. ಾತಿನಲ್ಲಿ ಮಾಧುರ್ಯ ಇರುತ್ತದೆ. ಕುಟುಂಬದೊಂದಿಗೆ ಪ್ರಯಾಣ ಯೋಜನೆಯನ್ನು ಮಾಡಬಹುದು. ಖರ್ಚು ಅಧಿಕವಾಗಿ ಉಳಿಯುತ್ತದೆ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ.

** ಮಿಥುನ ರಾಶಿ
ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಸಂಘರ್ಷ ಉಂಟಾಗಬಹುದು. ನಿಮ್ಮ ಮನಸ್ಸಿನಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಮಾತಿನಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ಬಟ್ಟೆಗಾಗಿ ಖರ್ಚು ಹೆಚ್ಚಾಗುತ್ತದೆ. ಅನಗತ್ಯ ಜಗಳ ಮತ್ತು ವಿವಾದಗಳನ್ನು ತಪ್ಪಿಸಿ. ಕೆಲಸದ ಸ್ಥಳದಲ್ಲಿ ಬದಲಾವಣೆಯ ಸಾಧ್ಯತೆ ಇದೆ.

** ಕರ್ಕಾಟಕ ರಾಶಿ :
ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮನಸ್ಸಿಗೆ ಸಂತೋಷವಾಗುತ್ತದೆ. ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆಗಳಿವೆ, ಆದರೆ ಸ್ಥಳ ಬದಲಾವಣೆಯೂ ಇರಬಹುದು. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನೀವು ಸ್ನೇಹಿತರಿಂದ ವ್ಯಾಪಾರ ಅವಕಾಶಗಳನ್ನು ಪಡೆಯಬಹುದು. ಆದಾಯ ಹೆಚ್ಚಲಿದೆ. ಶೈಕ್ಷಣಿಕ ಮತ್ತು ಬೌದ್ಧಿಕ ಕೆಲಸಗಳಲ್ಲಿ ತೊಂದರೆಗಳು ಉಂಟಾಗುತ್ತವೆ.

** ಸಿಂಹ ರಾಶಿ :
ಮನಸ್ಸಿನಲ್ಲಿ ನಿರಾಶೆ ಮತ್ತು ಅತೃಪ್ತಿಯ ಭಾವನೆ ಇರುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ಉದ್ಯೋಗದಲ್ಲಿ ಕೆಲಸದ ಸ್ಥಳದಲ್ಲಿ ಬದಲಾವಣೆ ಉಂಟಾಗಬಹುದು. ಯಾವುದೇ ಆಸ್ತಿ ಆದಾಯದ ಮೂಲವಾಗಬಹುದು. ಪ್ರಯಾಣ ವೆಚ್ಚ ಹೆಚ್ಚಾಗಲಿದೆ. ತಾಳ್ಮೆಯಿಂದಿರಿ. ಅತಿಯಾದ ಕೋಪವನ್ನು ತಪ್ಪಿಸಿ. ಉತ್ತಮ ಸ್ಥಿತಿಯಲ್ಲಿರಿ. ಕೆಲಸದಲ್ಲಿ ಹೆಚ್ಚಳವಾಗಬಹುದು. ಆದಾಯದ ಪರಿಸ್ಥಿತಿ ಸುಧಾರಿಸಲಿದೆ. ಬಟ್ಟೆಯ ಮೇಲಿನ ಖರ್ಚು ಹೆಚ್ಚಾಗಬಹುದು.

** ಕನ್ಯಾ ರಾಶಿ :
ಇಂದು ಜೀವನ ಅಸ್ತವ್ಯಸ್ತವಾಗುತ್ತದೆ. ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಯೋಜನೇತರ ವೆಚ್ಚಗಳು ಹೆಚ್ಚಾಗಲಿವೆ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ತಾಯಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ದೈನಂದಿನ ಕೆಲಸದ ಪರಿಸ್ಥಿತಿ ಸುಧಾರಿಸುತ್ತದೆ. ಸ್ನೇಹಿತರ ಸಹಾಯದಿಂದ ವ್ಯಾಪಾರ ವಿಸ್ತರಣೆಗೆ ಅವಕಾಶಗಳು ಬರಬಹುದು. ರುಚಿಕರವಾದ ಆಹಾರದಲ್ಲಿ ಆಸಕ್ತಿ ಹೆಚ್ಚಾಗಬಹುದು.

** ತುಲಾ ರಾಶಿ :
ಇಂದು ಮನಸ್ಸಿನಲ್ಲಿ ಏರಿಳಿತಗಳಿರಬಹುದು. ಕೌಟುಂಬಿಕ ಜೀವನವು ನೋವಿನಿಂದ ಕೂಡಿರಬಹುದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ತಾಯಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರವು ತೃಪ್ತಿಕರವಾಗಿರುತ್ತದೆ. ನೀವು ಕೆಲಸದಲ್ಲಿ ಕೆಲವು ಹೆಚ್ಚವರಿ ಜವಾಬದಾರಿಯನ್ನು ಪಡೆಯಬಹುದು. ಕಠಿಣ ಪರಿಶ್ರಮ ಇರುತ್ತದೆ. ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ.

** ವೃಶ್ಚಿಕ ರಾಶಿ :
ಇಂದು ಮನಸ್ಸು ಸಂತೋಷದಿಂದ ಕೂಡಿರುತ್ತದೆ, ಆದರೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಶೈಕ್ಷಣಿಕ ಕೆಲಸದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಉನ್ನತಿಗೆ ಅವಕಾಶವಿರುತ್ತದೆ. ಕೆಲಸದ ಸ್ಥಳದಲ್ಲಿ ಬದಲಾವಣೆ ಕಂಡುಬರಬಹುದು. ನೀವು ರಾಜಕಾರಣಿಯನ್ನು ಭೇಟಿಯಾಗಬಹುದು. ದಿನಚರಿ ಅಸ್ತವ್ಯಸ್ತವಾಗಲಿದೆ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗಬಹುದು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗಬಹುದು.

** ಧನಸ್ಸು ರಾಶಿ :
ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ, ಆದರೆ ಶಾಂತವಾಗಿರಿ. ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಕುಟುಂಬದಲ್ಲಿ ಗೌರವ ಇರುತ್ತದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಮಾನಸಿಕ ನೆಮ್ಮದಿ ಇರುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಉದ್ಯೋಗದಲ್ಲಿ ಕೆಲಸದ ಸ್ಥಳದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ಆದರೆ ಫಲಿತಾಂಶವು ಅದಕ್ಕೆ ಅನುಗುಣವಾಗಿ ಸಿಗುವುದಿಲ್ಲ.

** ಮಕರ ರಾಶಿ :
ಇಂದು ಮನಸ್ಸು ಶಾಂತವಾಗಿರುತ್ತದೆ. ಆತ್ಮವಿಶ್ವಾಸ ಹೆಚ್ಚಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಜೀವನವು ನೋವಿನಿಂದ ಕೂಡಿರಬಹುದು. ಕುಟುಂಬ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ಆದಾಯ ಹೆಚ್ಚಲಿದೆ. ತಾಳ್ಮೆಯಿಂದಿರಿ. ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಬೌದ್ಧಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚಾಗಬಹುದು. ಖರ್ಚು ಅಧಿಕವಾಗಿ ಉಳಿಯುತ್ತದೆ.

** ಕುಂಭ ರಾಶಿ :
ಇಂದು ಮಾತಿನಲ್ಲಿ ಸೌಮ್ಯತೆ ಇರುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಧಾರ್ಮಿಕ ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಬಹುದು. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಮನಸ್ಸು ವಿಚಲಿತವಾಗಬಹುದು. ಕೆಲಸದ ಸ್ಥಳದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಉತ್ತಮ ಸ್ಥಿತಿಯಲ್ಲಿರಿ.

** ಮೀನ ರಾಶಿ :
ಇಂದು ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಶೈಕ್ಷಣಿಕ ಕೆಲಸದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಆದಾಯ ಹೆಚ್ಚಾಗುತ್ತದೆ. ಕಟ್ಟಡ ಸೌಕರ್ಯದಲ್ಲಿ ಹೆಚ್ಚಳವಾಗಬಹುದು. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಶೈಕ್ಷಣಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ.

Categories
ತೀರ್ಥಹಳ್ಳಿ

ಮತ್ತೆ ಗೆದ್ದ ತೀರ್ಥಹಳ್ಳಿ ರಾಜಕೀಯ ಜೋಡೆತ್ತುಗಳು!

ಮತ್ತೆ ಗೆದ್ದ ತೀರ್ಥಹಳ್ಳಿ ರಾಜಕೀಯ ಜೋಡೆತ್ತುಗಳು!
– ಕಿಮ್ಮನೆ, ಮಂಜುನಾಥ ಗೌಡ ಸಾರಥ್ಯದಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಮತ್ತೆ ಕಾಂಗ್ರೆಸ್ ಪಾಲು
– 1 ಸ್ಥಾನ ಉಲ್ಟಾ ಪಲ್ಟಾ ಆಗಿದ್ದರೂ ಬಿಜೆಪಿಗೆ ಕುರ್ಚಿ
– ಪಕ್ಷನಿಷ್ಠೆ ಮೆರೆದ ಕಾಂಗ್ರೆಸ್ ಬೆಂಬಲಿತ ಸದಸ್ಯರು

NAMMUR EXPREES NEWS
ತೀರ್ಥಹಳ್ಳಿ: ತೀರ್ಥಹಳ್ಳಿ ನೂತನ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ರಹಮತುಲ್ಲಾ ಅಸಾದಿ, ಉಪಾಧ್ಯಕ್ಷರಾಗಿ ಮಾಜಿ ಅಧ್ಯಕ್ಷರಾದ ಗೀತಾ ರಮೇಶ್ ಆಯ್ಕೆಯಾಗಿದ್ದಾರೆ. ಇದರ ಹಿಂದೆ ತೀರ್ಥಹಳ್ಳಿ ಇಬ್ಬರು ನಾಯಕರಾದ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕರಾದ ಡಾ.ಆರ್. ಎಂ.ಮಂಜುನಾಥ ಗೌಡ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಿಗ್ಗೆಯಿಂದಲೇ ಚುನಾವಣೆ ಪ್ರಕ್ರಿಯೆ ಶುರುವಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷದಿಂದ ಅಧ್ಯಕ್ಷ ಮತ್ತು ಉಪಾಧ್ಯರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಸದಸ್ಯ ಮಾಜಿ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ, ಬಿಜೆಪಿಯಿಂದ ಸೊಪ್ಪುಗುಡ್ಡೆ ರಾಘವೇಂದ್ರ, ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಗೀತಾ ರಮೇಶ್, ಿಜೆಪಿಯಿಂದ ಜ್ಯತಿ ಗಣೇಶ್ ನಾಮ ಪತ್ರ ಸಲ್ಲಿಸಿದ್ದರು.
ನೂತನ ಅಧ್ಯಕ್ಷರಾಗಿ ರಹಮತುಲ್ಲಾ ಅಸಾದಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಗೀತಾ ರಮೇಶ್ ಆಯ್ಕೆಯಾಗಿದ್ದಾರೆ. ಅಸಾದಿ, ರತ್ನಾಕರ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಅವರಿಗೆ ತಲಾ 8 ತಿಂಗಳ ಅಧಿಕಾರ ಸಿಗಲಿದೆ
ಪ.ಪಂ.ನಲ್ಲಿ ಬಹುಮತ ಇರುವ ಕಾಂಗ್ರೆಸ್‌ ಒಂಭತ್ತು ಕೌನ್ಸಿಲರ್‌ಗಳು ಇದ್ದಾರೆ. ಬಿಜೆಪಿ ಯಾವುದೇ ಪ್ಲಾನ್ ಮಾಡಿಲ್ಲ.
ನೂತನ ಪದಾಧಿಕಾರಿಗಳಿಗೆ ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್, ಆರ್. ಎಂ ಮಂಜುನಾಥ ಗೌಡ ಶುಭಾಶಯ ಸಲ್ಲಿಸಿದ್ದಾರೆ.
ಅಭಿನಂದನಾ ಸಭೆಯಲ್ಲಿ ಮಾತನಾಡಿ, ತೀರ್ಥಹಳ್ಳಿ ಅಭಿವೃದ್ಧಿಗೆ ಬದ್ಧವಾಗಿರಬೇಕು. ಪಕ್ಷ ನಿಷ್ಠೆ ತೋರಿದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
20 ವರ್ಷಗಳ ನಂತರ ಕಾಂಗ್ರೆಸ್ ಇಲ್ಲಿ ಬಹುಮತ ಪಡೆದಿದೆ. ಕಿಮ್ಮನೆ-ಆರ್‌ಎಂಎಂ ನೇತೃತ್ವದಲ್ಲಿ ಪಕ್ಷದ ಹಿರಿಯರು ಹಾಗೂ ಕಾಂಗ್ರೆಸ್ ಕೌನ್ಸಿಲರ್‌ಗಳ ಸಭೆಯಲ್ಲಿ ಎಲ್ಲಾ ಸದಸ್ಯರು ಒಮ್ಮತದ ನಿರ್ಧಾರ ಮಾಡಿದರು.
ಜಯಪ್ರಕಾಶ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಮಂಜುಳಾ ನಾಗೇಂದ್ರ, ಬಿ.ಗಣಪತಿ, ಗೀತಾ ರಮೇಶ್, ಶಬ್ದಂ, ಸುಶೀಲಾ ಶೆಟ್ಟಿ, ನಮೃತ್ ಪಕ್ಷನಿಷ್ಠೆ ಮೆರೆದರು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.