Categories
ತೀರ್ಥಹಳ್ಳಿ

ಕೋಣಂದೂರು ವಾರದ ಸಂತೆಯಲ್ಲಿ ಮೀನು ಗೋಲ್ ಮಾಲ್?!

ಕೋಣಂದೂರು ವಾರದ ಸಂತೆಯಲ್ಲಿ ಮೀನು ಗೋಲ್ ಮಾಲ್?!
– ತಿನ್ನಲು ಯೋಗ್ಯವಲ್ಲದ ಮೀನುಗಳ ಮಾರಾಟ
– ಗೋಪಿ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಆಡಳಿತದಿಂದ ಎಚ್ಚರಿಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕೋಣಂದೂರಲ್ಲಿ ಮಂಗಳವಾರ ವಾರದ ಸಂತೆ ನಡೆಯುತ್ತಿದ್ದು , ಈ ಸಂತೆಯಲ್ಲಿ ಕೆಲ ಮೀನು ವ್ಯಾಪಾರಿಗಳು ಈಗಾಗಲೇ ನಿಷೇಧ ಮಾಡಿರುವ ಮುರುಗೋಡು ಮೀನಿನಂತೆ ಕಾಣುವ ಆಫ್ರಿಕನ್ ಕ್ಯಾಟ್ ಫಿಷ್ ಮತ್ತು ಬಾಳೆಮೀನುಗಳನ್ನು ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಕೋಣಂದೂರು ಗ್ರಾಮ ಪಂಚಾಯತ್ ಆಡಳಿತ ಖಡಕ್ ಕ್ರಮ ಕೈಗೊಂಡಿದೆ.
ಇಲ್ಲಿ ಮಾರಾಟವಾಗುತ್ತಿದ್ದ ಕೆಲವು ಮೀನುಗಳು ಆರೋಗ್ಯಕ್ಕೆ ಹಾನಿಕಾರಕವಾಗಿದೆ ದೇಶ ವಿದೇಶಗಳಲ್ಲಿ ತಿನ್ನಲು ಯೋಗ್ಯವಲ್ಲ ಮನುಷ್ಯನ ದೇಹ ಮಲೆ ವ್ಯತಿರಿಕ್ತವಾಗಿ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಬ್ಯಾನ್ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಇದನ್ನು ಮನಗಂಡು ಕೋಣಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮಂಗಳ ಗೋಪಿ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಜುನಾಥ್, ಪಂಚಾಯತ್ ಅಡಳಿತಾಧಿಕಾರಿ ನಾಗರಾಜ್ ಮತ್ತು ಸಂತೋಷ್‌ ಸಂತೆಯಲ್ಲಿ ಈ ಮೀನುಗಳನ್ನು ಕದ್ದು ಮಾರುತ್ತಿದ್ದ ಅಂಗಡಿಗಳಿಗೆ ಧಿಡೀರ್ ಭೇಟಿ ನೀಡಿ ಇನ್ನು ಮುಂದೆ ಮಾರಿದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಗ್ರಾಮ ಪಂಚಾಯತ್ ಆಡಳಿತತ ಈ ಕ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Categories
ರಾಜ್ಯ

ದೇವರ ಪ್ರಸಾದ ಸೇವಿಸಿದ ತಕ್ಷಣ ಮೂವರು ಸಾವು!

ಟಾಪ್ 3 ನ್ಯೂಸ್ ಕರ್ನಾಟಕ

ದೇವರ ಪ್ರಸಾದ ಸೇವಿಸಿದ ತಕ್ಷಣ ಮೂವರು ಸಾವು!
– ಇನ್ನು ಮೂವರಿಗೆ ಪ್ರಾಣ ಭಯ: ತುಮಕೂರಲ್ಲಿ ಘಟನೆ
– ಗದ್ದೆ ಉಳುಮೆ ವೇಳೆ ಟ್ರ್ಯಾಕ್ಟರ್ ಪಲ್ಟಿ: ರೈತನ ಸಾವು
– ಪ್ರೇಯಸಿ ಹೆಸರಿಗೆ ಹಣ: ಅರಣ್ಯ ಅಧಿಕಾರಿ ಚಂದನ್ ಅಮಾನತು

NAMMUR EXPRESS NEWS
ತುಮಕೂರು:ತುಮಕೂರಿನ ಮಧುಗಿರಿಯಲ್ಲಿ ದೇವರ ಅನ್ನಪ್ರಸಾದ ಸೇವಿಸಿ ಮೂರು ಮಹಿಳೆಯರು ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಆರು ಮಂದಿ ತೀವ್ರತೆಯಿಂದ ಬಳಲುತ್ತಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವರ ಕಾರ್ಯಕ್ಕೆ ಮಾಡಿದ್ದ ಊಟ ಸೇವನೆ ಮಾಡಿದವರಿಗೆ ವಾಂತಿ ಬೇಧಿ ಕಾಣಿಸಿಕೊಂಡಿದೆ.
ವಾಂತಿ ಬೇಧಿಯಿಂದ ಮೂರು ಮಹಿಳೆಯರು ಮೃತಪಟ್ಟರೆ, ಆರು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಬುಳ್ಳಸಂದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು ಕಾಟಮ್ಮ(45), ಬುಳ್ಳುಸಂದ್ರ ಗ್ರಾಮದಲ್ಲಿ ವೃದ್ದೆ ತಿಮ್ಮಕ್ಕ (85), ಬಳಿಕ ವೃದ್ದೆ ಗಿರಿಯಮ್ಮ(90) ಎಂಬವರು ಮೃತಪಟ್ಟ ಮಹಿಳೆಯರು.
್ರಾಮದಲ್ಲಿ ುತ್ತುರಾಯಸ್ವಾಮಿ, ಕರಿಯಮ್ಮ ದೇವರಿಗೆ ಹರಿಸೇವೆ ಮಾಡಲಾಗಿತ್ತು. ಗ್ರಾಮಸ್ಥರಿಗೆ ಊಟ ಸೇವೆ ನೀಡಿ ಊಟ ಮಾಡಿದ ಬಳಿಕ ಗ್ರಾಮದ ಕೆಲವರಿಗೆ ವಾಂತಿ ಬೇಧಿ ಕಾಣಿಸಿಕೊಂಡಿರುವುದು ವಿಪರ್ಯಾಸವೇ ಸರಿ.

ಗದ್ದೆ ಉಳುಮೆ ವೇಳೆ ಟ್ರ್ಯಾಕ್ಟರ್ ಪಲ್ಟಿ: ರೈತನ ಸಾವು

ಚಿಕ್ಕಬಳ್ಳಾಪುರ: ಗದ್ದೆಯಲ್ಲಿ ಉಳುಮೆ ಮಾಡುವ ವೇಳೆ ಟ್ರ್ಯಾಕ್ಟರ್‌ ಕೆಸರಿನಲ್ಲಿ ಸಿಲುಕಿದ್ದು, ಮೇಲೆತ್ತಲು ಪ್ರಯತ್ನಿಸಿಲು ಹೋದಾಗ ಟ್ರ್ಯಾಕ್ಟರ್‌ ಪಲ್ಟಿಯಾಗಿ ರೈತನೊಬ್ಬ ಮೃತಪಟ್ಟಿದ್ದಾರೆ.ಚಿಕ್ಕಬಳ್ಳಾಪುರದ ಚೇಳೂರು ತಾಲ್ಲೂಕಿನ ದಿಗವಪ್ಯಯಲವಾರಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ.
ಟ್ರ್ಯಾಕ್ಟರ್ ಚಾಲನೆ ಮಾಡಿ ಗದ್ದೆ ಉಳುಮೆ ಮಾಡುತ್ತಿದ್ದ ವೇಳೆ ಕೆಸರಿನಲ್ಲಿ ಸಿಲುಕಿದ ಟ್ರ್ಯಾಕ್ಟರ್ ಮೇಲೆತ್ತಲು ಪ್ರಯತ್ನ ಪಟ್ಟಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಅದರ ಅಡಿ ಸಿಲುಕಿ ರೈತನೋರ್ವ ಮೃತಪಟ್ಟಿದ್ದಾರೆ. ಗ್ರಾಮಸ್ಥರು ಸ್ಥಳೀಯರು ಜೆಸಿಬಿ ಮೂಲಕ ಟ್ರ್ಯಾಕ್ಟರ್‌ನಡಿಯಲ್ಲಿದ್ದ ಮೃತ ದೇಹವನನ್ನು ಹೊರತೆಗೆದಿದ್ದಾರೆ.
ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಪ್ರೇಯಸಿ ಹೆಸರಿಗೆ ಹಣ: ಅರಣ್ಯ ಅಧಿಕಾರಿ ಚಂದನ್ ಅಮಾನತು

ಚಿಕ್ಕಮಗಳೂರು: ಬಲ್ಲರಾಯನದುರ್ಗ ಚಾರಣಕ್ಕೆ ಹೋಗುವ ಪ್ರವಾಸಿಗರಿಗೆ ನಕಲಿ ಟಿಕೆಟ್ ನೀಡಿ ಆ ಹಣವನ್ನು ತನ್ನ ಪ್ರೇಯಸಿಯ ಖಾತೆಗೆ ಹಾಕಿಸಿಕೊಳ್ಳುತ್ತಿದ್ದ ಅರಣ್ಯ ಅಧಿಕಾರಿ ಚಂದನ್, ಅಕ್ರಮ ಹೊರಬರುತ್ತಿದ್ದಂತೆಯೇ ಅಮಾನತು ಮಾಡಿ ಆದೇಶಿಸಲಾಗಿದೆ.
ಚಂದನ್ ಪುರಾಣ ಹೊಸತೇನಲ್ಲ! ಈ ಹಿಂದೆಯೂ ಬೇರೊಬ್ಬರ ಪತ್ನಿಯನ್ನು ತನ್ನ ಕ್ವಾರ್ಟರ್ಸ್ ಗೆ ಕರೆದುಕೊಂಡು ಬಂದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಸಾರ್ವಜನಿಕರಿಂದ ಗೂಸಾ ತಿಂದಿದ್ದ ಘಟನೆ ನಡೆದಿತ್ತು.ಮನೆಯ ಮೇಲೆ ಬೀಳುವಂತಿದ್ದ ಒಣಗಿದ ಮರವನ್ನು ಕಡಿದ ತಪ್ಪಿಗೆ ನನ್ನೊಂದಿಗೆ ಸಹಕರಿಸಿದರೆ ಪ್ರಕರಣ ಕ್ಲೋಸ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿ ಹಿಳೆಯೊಬ್ಬರನ್ನು ಮಂಕ್ಕೆ ಕರೆದು ಅಸಭ್ಯವಾಗಿ ವರ್ತಿಸಿದ ಅರಣ್ಯಾಧಿಕಾರಿ ಚಂದನ್ ಗೆ ಈ ಹಿಂದೆ ಗ್ರಾಮಸ್ಥರೇ ಗೂಸಾ ನೀಡಿದ್ದರು. 2020ರಲ್ಲಿ ಈ ಪ್ರಕರಣ ನಡೆದಿದ್ದು ಸ್ವತಃ ಮಹಿಳೆಯ ಪತಿಯೇ ಸ್ಥಳೀಯರೊಂದಿಗೆ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.ಈ ಬಗ್ಗೆ ಪ್ರತಿಭಟನೆ ನಡೆಸಿ ದೂರು ಸಹ ನೀಡಲಾಗಿದೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣ ಪಂಚಾಯತಿಗೆ ಅಸಾದಿ ಸಾರಥಿ!

ತೀರ್ಥಹಳ್ಳಿ ಪಟ್ಟಣ ಪಂಚಾಯತಿಗೆ ಅಸಾದಿ ಸಾರಥಿ!
– ಅಧ್ಯಕ್ಷರಾಗಿ ರಹಮತುಲ್ಲಾ ಅಸಾದಿ ಆಯ್ಕೆ, ಗೀತಾ ರಮೇಶ್ ಉಪಾಧ್ಯಕ್ಷೆ
– ನೂತನ ಪದಾಧಿಕಾರಿಗಳಿಗೆ ಶುಭಾಶಯಗಳು

NAMMUR EXPREES NEWS
ತೀರ್ಥಹಳ್ಳಿ: ತೀರ್ಥಹಳ್ಳಿ ನೂತನ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ರಹಮತುಲ್ಲಾ ಅಸಾದಿ, ಉಪಾಧ್ಯಕ್ಷರಾಗಿ ಮಾಜಿ ಅಧ್ಯಕ್ಷರಾದ ಗೀತಾ ರಮೇಶ್ ಆಯ್ಕೆಯಾಗಿದ್ದಾರೆ.
ಮುಂದಿನ 26 ತಿಂಗಳಿಗೆ ಅಧ್ಯಕ್ಷಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದ್ದು, ಆಗಸ್ಟ್ 27ರ ಮಂಗಳವಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯ ಮಾಜಿ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ, ಬಿಜೆಪಿಯಿಂದ ಸೊಪ್ಪುಗುಡ್ಡೆ ರಾಘವೇಂದ್ರ, ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಗೀತಾ ರಮೇಶ್, ಬಿಜೆಪಿಯಿಂದ ಜ್ಯೋತಿ ಗಣೇಶ್ ನಾಮ ಪತ್ರ ಸಲ್ಲಿಸಿದ್ದರು.
ನೂತನ ಅಧ್ಯಕ್ಷರಾಗಿ ರಹಮತುಲ್ಲಾ ಅಸಾದಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಗೀತಾ ರಮೇಶ್ ಆಯ್ಕೆಯಾಗಿದ್ದಾರೆ.
ಅಸಾದಿ, ರತ್ನಾಕರ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಅವರಿಗೆ ತಲಾ 8 ತಿಂಗಳ ಅಧಿಕಾರ ಸಿಗಲಿದೆ ಎಂದು ಹೇಳಲಾಗಿದೆ.

ಬಹುಮತ ಯಾರಿಗೆ?

ಪ.ಪಂ.ನಲ್ಲಿ ಬಹುಮತ ಇರುವ ಕಾಂಗ್ರೆಸ್‌ ಒಂಭತ್ತು ಕೌನ್ಸಿಲರ್‌ಗಳು ಇದ್ದಾರೆ. ಬಿಜೆಪಿ ಯಾವುದೇ ಪ್ಲಾನ್ ಮಾಡಿಲ್ಲ.
ನೂತನ ಪದಾಧಿಕಾರಿಗಳಿಗೆ ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್, ಆರ್. ಎಂ ಮಂಜುನಾಥ ಗೌಡ ಶುಭಾಶಯ ಸಲ್ಲಿಸಿದ್ದಾರೆ.

Categories
ರಾಜ್ಯ

ಕುವೆಂಪು ವಿವಿ ಅವ್ಯವಸ್ಥೆಗೆ ಹೊಣೆ ಯಾರು?

ಕುವೆಂಪು ವಿವಿ ಅವ್ಯವಸ್ಥೆಗೆ ಹೊಣೆ ಯಾರು?
– ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದರೂ, ಡಿಗ್ರಿ ಕಾಲೇಜುಗಳು ಆರಂಭವಾಗಿಲ್ಲ
– ಕಾಲೇಜು ಅಡ್ಮಿಶನ್ ಆಗದೆ ವಿದ್ಯಾರ್ಥಿಗಳ ಆತಂಕ!

NAMMUR EXPRESS NEWS
ಶಂಕರಘಟ್ಟ: ರಾಜ್ಯದಲ್ಲಿ ಅತಿ ಕಳಪೆ ವಿಶ್ವ ವಿದ್ಯಾನಿಲಯವಾಗಿ ಕುವೆಂಪು ವಿವಿ ಬೆಳೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಶಾಸಕ ದೂರಿದ್ದಾರೆ.
ರಾಜ್ಯದಲ್ಲಿ 41 ವಿಶ್ವವಿದ್ಯಾಲಯಗಳಿವೆ, ಇದರಲ್ಲಿ ಡೀಮ್ಡ್ ವಿಶ್ವವಿದ್ಯಾಲಯ 11 ಇದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ 9 ಇದೆ. ಕುವೆಂಪು ವಿವಿಯಲ್ಲಿ ಆರಂಭದಲ್ಲಿ 4 ಜಿಲ್ಲೆ ಇತ್ತು. ಈಗ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಮಾತ್ರ ವಿಶ್ವ ವಿದ್ಯಾಲಯ ಉಳಿದುಕೊಂಡಿದೆ.

ಇನ್ನು ಡಿಗ್ರಿ ಕಾಲೇಜು ಶುರುವಾಗಿಲ್ಲ

ಏ.11ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಇಲ್ಲಿಯವರೆಗೂ ಡಿಗ್ರಿ ಕಾಲೇಜುಗಳು ಆರಂಭವಾಗಿಲ್ಲ. 4 ತಿಂಗಳು 11 ದಿನ ಆದರೂ ಡಿಗ್ರಿ ಕಾಲೇಜು ಆರಂಭವಾಗಿಲ್ಲ. 84 ಕಾಲೇಜು ಇದೆ. ಇವುಗಳಿಗೆ ಪ್ರತಿವರ್ಷ ಅಫೀಲಿಯೇಷನ್ ಗೆ ಬರೆಯಲಾಗುತ್ತದೆ. ಅರ್ಜಿ ಬರೆದಾಗ ಸ್ಥಯ ತಪಾಸಣೆ ನಡೆಸಿ ಅನುಗುಣವಾಗಿ ಸೀಟು ನೀಡಲಾಗುತ್ತದೆ. 84 ಕಾಲೇಜಿನ ಅಫೀಲಿಯೇಷನ್ ನನ್ನ ಸರ್ಕಾರಕ್ಕೆ ಕಳುಹಿಸುವ ವ್ಯವಸ್ಥೆ ಆರಂಭಿಸಿದ್ದರಿಂದ ಕುವೆಂಪು ವಿವಿಯಲ್ಲಿ ಇದುವರೆಗೂ ಕಾಲೇಜುಗಳು ಆರಂಭವಾಗಿಲ್ಲ. ಬೇರೆ ಎಲ್ಲಾ ವಿಶ್ವ ವಿದ್ಯಾನಿಲಯದ ಕಾಲೇಜುಗಳು ಆರಂಭವಾಗಿದೆ. ಅಫೀಲಿಯೇಷನ್ ಭಯ ಆರಂಭವಾಗಿದೆ ಎಂದರು.
ಅಡ್ಮಿಷನ್ ಪ್ರೊಸಸ್ ನಡೆಯಬೇಕು. ಆದರೆ ಅಡ್ಮಿಶನ್ ಪೋರ್ಟಲ್ ಗಳು ಓಪನ್ ಆಗದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಅಧಿಕಾರ ವಿಕೇಂದ್ರಿಕರಣ ಇಲ್ಲವಾಗಿದೆ.
ಕುವೆಂಪು ವಿವಿಯ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಶಾಕ್ ಆಗಿದೆ . ಉಪ ಕುಲಪತಿ ಅವರು ವಿದೇಶಿ ಪ್ರವಾಸದಲ್ಲಿದ್ದಾರೆ. ಹಿಂದುಳಿದ ಯೂನಿವರ್ಸಿಟಿ ಎಂದರೆ ಕುವೆಂಪು ವಿವಿ ಎಂದು ದೂರಿದರು.‌ ಅತಿಥಿ ಉಪನ್ಯಾಸಕರಿಗೆ ಐದು ತಿಂಗಳ ಸಂಬಳವಿಲ್ಲದಂತಾಗಿದೆ. ಮಕ್ಕಳ ಭವಿಷ್ಯದ ಬಗ್ಗೆ ಆಟ ಆಡುತ್ತಿದ್ದಾರೆ. ಯೂನಿವರ್ಸಿಟಿಯ ಅಧಿಕಾರಿಗಳೂ ಅತಿ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದರು.

Categories
ಬೆಂಗಳೂರು

ಆಸ್ತಿ ನೋಂದಣಿ ಸೆ.2ರಿಂದ ಹೊಸ ಯೋಜನೆ ಜಾರಿ!

ಆಸ್ತಿ ನೋಂದಣಿ ಸೆ.2ರಿಂದ ಹೊಸ ಯೋಜನೆ ಜಾರಿ!
– ಏನಿದು ಎನಿವೇರ್ ಆಸ್ತಿ ನೋಂದಣಿ ಪದ್ಧತಿ
– ನಕಲಿ ಅಸ್ತಿ ನೋಂದಣಿಗೆ ಇನ್ಮೇಲೆ ಮೂಗುದಾರ?

NAMMUR EXPRESS NEWS
ಬೆಂಗಳೂರು: ಆಸ್ತಿ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಯಾರದ್ದೋ ಆಸ್ತಿಗೆ ಮತ್ಯಾರೋ ನಕಲಿ ದಾಖಲೆ ಕೊಟ್ಟು ಮೋಸ ಮಾಡುವುದು, ವೈಯಕ್ತಿಕ ದಾಖಲೆ ನಕಲು ಮಾಡಿ ನಾನೇ ವಾರಸುದಾರ ಎಂದು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ, ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಆಸ್ತಿ ಸೇಫ್ಟಿಗಾಗಿ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ-2 ಜಾರಿಗೊಳಿಸಲಾಗಿದ್ದ, ಇಂದಿನಿಂದ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ತಮ್ಮ-ತಮ್ಮ ಆಸ್ತಿ ಒಡೆತನದವರು ಆಧಾರ್, ಪಾಸ್ಪೋರ್ಟ್, ಪ್ಯಾನ್ ಈ 3ರಲ್ಲಿ ಒಂದು ದಾಖಲೆ ನೀಡುವುದು ಕಡ್ಡಾಯವಾಗಿದೆ.
ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ-2 ಜಾರಿಗೊಳಿಸಿದ್ದೇವೆ. ಅಪಾಯಿಂಟ್ಮೆಂಟ್ ಸಿಸ್ಟಮ್ ಸರಿಯಾಗಿ ಪಾಲಿಸದೆ ಜನಜಂಗುಳಿಯಿತ್ತು. ಇನ್ಮುಂದೆ ಅಪಾಯಿಂಟ್ಮೆಂಟ್ ಸಿಸ್ಟಮ್ ಕಡ್ಡಾಯ ಮಾಡಿದ್ದೇವೆ ರಾಜ್ಯದಲ್ಲಿ 257 ಉಪನೋಂದಣಿ ಕಚೇರಿಗಳಿವೆ, 50 ಕೇರಿಗಳಲ್ಲಿ ಜನಜಂಗುಳಿ ಇೆ. ಉಳಿದ ಉಪನೋಂದಣಿ ಕಚೇರಿಗಳಲ್ಲಿ ಹೆಚ್ಚು ಜನಜಂಗುಳಿ ಇರಲ್ಲ. ಇವೆಲ್ಲವೂ ನಗರ ಪ್ರದೇಶದಲ್ಲಿರುವ ಕಾರಣ ಸ್ಥಳಾವಕಾಶ ಸಹ ಕಡಿಮೆ ಇದೆ. ಗ್ರಾಮೀಣ ಪ್ರದೇಶಗಳ ಉಪನೋಂದಣಿ ಕಚೇರಿಗಳಲ್ಲಿ ಕೆಲಸದ ಒತ್ತಡ ಇಲ್ಲ. ಸೆಪ್ಟೆಂಬರ್ 2ರಿಂದ ಆಯಾ ಜಿಲ್ಲೆಯ ಯಾವುದೇ ಉಪನೋಂದಣಿ ಕಚೇರಿಗೆ ಹೋಗಿ ನೋಂದಣಿ ಮಾಡಿಸಬಹುದು ಎಂದು ಸಚಿವ ಕೃಷ್ಣ ಬೈರೆಗೌಡ ತಿಳಿಸಿದ್ದಾರೆ.

Categories
ಉಡುಪಿ

ಅಮೃತ ಭಾರತಿ ಶಿಕ್ಷಣ ಸಂಸ್ಥೆ ಹೆಬ್ರಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ!!

ಅಮೃತ ಭಾರತಿ ಶಿಕ್ಷಣ ಸಂಸ್ಥೆ ಹೆಬ್ರಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ!!

* ಶ್ರೀ ಕೃಷ್ಣ ಜನ್ಮಾಷ್ಟಮಿ ಶೋಭಯಾತ್ರೆ ಕಾರ್ಯಕ್ರಮ!!

* ಕುಚ್ಚೂರು ಗೇರುಬೀಜ ಕಾರ್ಖಾನೆಯಿಂದ ಶೋಭಯಾತ್ರೆಗೆ ಆಗಮಿಸಿದ ವಿದ್ಯಾರ್ಥಿಗಳು!!

NAMMUR EXPRESS NEWS
ಹೆಬ್ರಿ:ಬಂಟರ ಭವನ, ಅಮೃತ ಭಾರತಿ ವಿದ್ಯಾ ಸಂಸ್ಥೆ ಹೆಬ್ರಿ ಶೋಭಯಾತ್ರೆಯು ಶ್ರೀಕೃಷ್ಣನನ್ನು ವಾಹನದ ಮೂಲಕ ಆರಾಧಿಸಿ ಪ್ರಾರಂಭಿಸಿದರು.ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಕುಚ್ಚೂರು ಗೇರುಬೀಜ ಕಾರ್ಖಾನೆಯಿಂದ ಶೋಭಯಾತ್ರೆಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು,ಹುಲಿವೇಷ, ಯಕ್ಷಗಾನ, ನೃತ್ಯ, ಭರತನಾಟ್ಯ, ಕೋಲಾಟ, ಭಜನೆ, ಮೊಸರು ಕುಡಿಕೆ ಮತ್ತು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶೋಭಯಾತ್ರೆಯಲ್ಲಿ ಮಕ್ಕಳ ರಾಧಾಕೃಷ್ಣಛದ್ಮವೇಷ,ಯಕ್ಷಗಾನ,ನೃತ್ಯ, ಭರತನಾಟ್ಯ, ಕೋಲಾಟ, ಭಜನೆ, ಮೊಸರು ಕುಡಿಕೆ,ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ಕಲಶಗಳ ಜೊತೆಗೆ ಶೋಭಾಯಾತ್ರೆ ಕಾರ್ಯಕ್ರಮ ನಡೆಯಿತು.
ಶ್ರೀ ಕೃಷ್ಣನ ಜನ್ಮದಿನದಂದು ರಸ್ತೆ ಬದಿಗಳಲ್ಲಿ ಜೈ ಕಾರಗಳು ವಿಜೃಂಭಣೆಯಿಂದ ಸದ್ದು ಮಾಡುತಿತ್ತು. ಆಧುನಿಕ ಯುಗದಲ್ಲಿ ಮೈಲ್ ಹಿಡಿದು ಮೂಲೆ ಸೇರುವ ಮಕ್ಕಳ ಮಧ್ಯೆ ಬಂಟರ ಭವನ, ಅಮೃತ ಭಾರತಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ತಾಳ,ಶಂಖಗಳ ಹಿಡಿದು ನಂದಗೋಕುಲನ ಆರಾಧನೆಯಲ್ಲಿ ಭಾಗಿಯಾಗಿದ್ದರು.ಯುವಕರು ಒಬ್ಬರ ಮೇಲೊಬ್ಬರು ನಿಂತು ಮಡಕೆ ಹೊಡೆದು ಸಂಭ್ರಮಿಸುತ್ತಿದ್ದರು.
ಈ ಸಂದರ್ಭದಲ್ಲಿ ಅಮೃತ ಭಾರತಿ ವಿದ್ಯಾ ಸಂಸ್ಥೆ ಟ್ರಸ್ಟ್ ನ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು,ಸಂಸ್ಥೆಯ ಮುಖ್ಯೋಪಾಧ್ಯಾಯರು,ಪ್ರಾಂಶುಪಾಲರು,ಶಿಕ್ಷಕ ವೃಂದದವರು ಪೋಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ಸಾವಿರಾರು ವಿದ್ಯಾರ್ಥಿಗಳು, ಆರಕ್ಷಕರು ಮತ್ತು ಸಾರ್ವಜನಿಕರು ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Categories
ಶಿವಮೊಗ್ಗ

ನಕಲಿ ದಾಖಲಾತಿ ಹಾಗೂ ಸಹಿ ಸೃಷ್ಟಿಸಿ ಆಸ್ತಿಯನ್ನ ವಂಚಿಸಿದ ಪತಿ

ಟಾಪ್ ನ್ಯೂಸ್ ಮಲ್ನಾಡ್

ಶಿವಮೊಗ್ಗ: ನಕಲಿ ದಾಖಲಾತಿ ಹಾಗೂ ಸಹಿ ಸೃಷ್ಟಿಸಿ ಆಸ್ತಿಯನ್ನ ವಂಚಿಸಿದ ಪತಿ
– ಶಿವಮೊಗ್ಗ : ಬೀದಿ ನಾಯಿ ಕಡಿತದಿಂದಾಗಿ ಮಹಿಳೆ ಸಾವು
– ಚಿಕ್ಕಮಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು!
– ಭದ್ರಾವತಿ: ಗಾಂಜಾ ಸೇವಿಸುತ್ತಿದ ಇಬ್ಬರ ಬಂಧನ
– ಸೊರಬ : ಕೆರೆಗೆ ಉರುಳಿದ ಲಾರಿ, ಲಾರಿ ಚಾಲಕ ಅಪಾಯದಿಂದ ಪಾರು
– ತೀರ್ಥಹಳ್ಳಿ : ಜಲಜೀವನ್‌ ಮಿಷನ್‌ ಕಾಮಗಾರಿಯಿಂದಾಗಿ ಮಾಸ್ತಿಕಟ್ಟೆಯಲ್ಲಿ ಲಾರಿ ಡಿಕ್ಕಿ

NAMMUR EXPRESS NEWS
ಶಿವಮೊಗ್ಗ: ಗಂಡ ಹೆಂಡತಿಯಾಗಿ ಚೆನ್ನಾಗಿದ್ದಾಗ ಹೆಂಡತಿ ಹೆಸರಿನಲ್ಲಿ ಕಾರು ಖರೀದಿಸಿದ ಗಂಡ, ಸಂಸಾರದಲ್ಲಿ ಬಿರುಕು ಬಿಟ್ಟಾಗ ನಕಲಿ ಸಹಿ ಬಳಸಿ ಆ ಕಾರನ್ನು ತನ್ನ ಹೆಸರಿಗೆ ವರ್ಗಾಯಿಸಿ ಕೊಂಡಿರುವ ಘಟನೆ ತುಂಗಾ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ದೂರು ದಾಖಲಾಗಿದೆ. 2022 ರಲ್ಲಿ ಟಾಟಾ ನೆಕ್ಸಾನ್ ವಾಹನವನ್ನು ಚಿ್ರದರ್ಗ ಜಿಲ್ಲೆಯ ಮಹೇಶ್ ಎಂಬುವರು ಹೆಂಡತಿಯ ಹೆಸರಿನಲ್ಲಿ ಖರೀದಿಸಿದ್ದರು. ತದ ನಂತರದಲ್ಲಿ ಮಹೇಶ್ ಮತ್ತು ಪತ್ನಿ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಬೇರೆಯಾಗಿದ್ದಾರೆ. ಮಹೇಶನ ಪತ್ನಿ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದಾರೆ. 2023 ರಲ್ಲಿ ಮಹೇಶ್ ಆರ್ ಸಿ ಬುಕ್ ನಲ್ಲಿ ಪತ್ನಿಯ ನಕಲು ಸಹಿ, ದಾಖಲಾತಿ ಸೃಷ್ಟಿಸಿ, ಎರಡನೇ ಪಾರ್ಟಿಯನ್ನಾಗಿ ಮಾಡಿಕೊಂಡು ತಮ್ಮ ಹೆಸರಿಗೆ ಕಾರನ್ನು ವರ್ಗಾಯಿಸಿಕೊಂಡಿದ್ದಾರೆ. ಈ ರೀತಿ ನಕಲಿ ದಾಖಲಾತಿ ಸೃಷ್ಟಿಸಿ ಆಸ್ತಿಗಳನ್ನೂ ಹೀಗೆ ವಂಚಿಸಲು ಪತಿ ಮುಂದಾಗಬಹುದು. ಮತ್ತು ಕಾರನ್ನು ತಮ್ಮ ಗಮನಕ್ಕೆ ತಾರದೆ, ನಕಲು ಸಹಿ ಮಾಡಿ ಬದಲಿಸಿಕೊಂಡು ವಂಚಿಸಿರುವ ಬಗ್ಗೆ ಪತ್ನಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

– ಶಿವಮೊಗ್ಗ : ಬೀದಿ ನಾಯಿ ಕಡಿತದಿಂದಾಗಿ ಮಹಿಳೆ ಸಾವು

ಶಿವಮೊಗ್ಗ: ನಾಯಿ ಕಡಿತಕ್ಕೊಳಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಯೋರ್ವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ನಡೆದಿದೆ. ಹೊಸನಗರ ಪಟ್ಟಣದ ಎಂ ಗುಡ್ಡಕೊಪ್ಪದ ನಿವಾಸಿ ಸಂಗೀತಾ (38) ಮೃತಪಟ್ಟವರು. ಕೆಲವು ವರ್ಷಗಳ ಹಿಂದೆ ಇವರ ಪತಿ ಮೃತರಾಗಿದ್ದರು. ಇವರಿಗೆ ಓರ್ವ ಪುತ್ರ ಹಾಗೂ ಪುತ್ರಿಯಿದ್ದಾರೆ. 2 ತಿಂಗಳ ಹಿಂದೆ ಇವರು ತೋಟಕ್ಕೆ ಹೋಗಿ ಬರುವಾಗ, ಬೀದಿ ನಾಯಿಯೊಂದು ಕಚ್ಚಿದೆ ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ. ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದಿತ್ತು. ಹೊಸನಗರ ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ನಾಯಿ ಕಡಿತದಿಂದ ರೇಬೀಸ್ ಉಲ್ಬಣಿಸಿರುವುದು ಪತ್ತೆಯಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ.

– ಚಿಕ್ಕಮಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು!

ಚಿಕ್ಕಮಗಳೂರು: ಕಾಡಾನೆಯೊಂದು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಳಗಾಮೆಯ ಆ್ರಯ ಎಸ್ಟೇಟ್ ಬಳಿ ನಡೆದಿದೆ. ಇಲ್ಲಿನ ಭದ್ರಾ ಅಭಯಾರಣ್ಯದಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆ ಬೇಲಿ ದಾಟುವ ವೇಳೆ ಇಲ್ಲಿನ ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತೋಟದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

– ಭದ್ರಾವತಿ: ಗಾಂಜಾ ಸೇವಿಸುತ್ತಿದ ಇಬ್ಬರ ಬಂಧನ

ಭದ್ರಾವತಿ : ತಾಲೂಕಿನ ಅರಹಳ್ಳಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರಲ್ಲಿ ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ಗ್ರಾಮದಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರು ಯುವಕರಲ್ಲಿ ಇಬ್ಬರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅರಹಳ್ಳಿಯಲ್ಲಿ ಮೂವರು ಯುವಕರು ಗಾಂಜಾ ಸೇವಿಸುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು 112 ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಒಬ್ಬರನ್ನು ಹಿಡಿದ್ದಾರೆ. ಇಬ್ಬರು ತಪ್ಪಿಸಿಕೊಂಡಿದ್ದಾರೆ. ಇಬ್ಬರಲ್ಲಿ ಒಬ್ಬರನ್ನು ಗ್ರಾಮಸ್ಥರು ಹಿಡಿದು ಮತ್ತೆ ಪೊಲೀಸರಿಗೆ ನೀಡಿದ್ದಾರೆ. ಇದಲ್ಲಿ ಜಬೀ (19) ಎಂಬ ಯುವಕನಲ್ಲಿ ಗಾಂಜಾ ಪಾಸಿಟಿವ್ ಬಂದಿದೆ. ಅನ್ವರ್‌ ಕಾಲೋನಿಯ ಮೊಹಮದ್ ಜಬೀಗೆ ಗಾಂಜಾ ಪಾಸಿಟಿವ್ ಬಂದಿದೆ. – ಅಣ್ಣಾನಗರದ ಸಂಜಯ್ (19), ಮತ್ತೋರ್ವ ಓಡಿಹೋಗಿದ್ದಾನೆ.

– ಸೊರಬ : ಕೆರೆಗೆ ಉರುಳಿದ ಲಾರಿ,ಲಾರಿ ಚಾಲಕ ಅಪಾಯದಿಂದ ಪಾರು

ಸೊರಬ : ಸೊರಬ ತಾಲ್ಲೂಕು ಹಳೇ ಸೊರಬದ ಶಾಂತಿಕೆರೆ ಸಮೀಪ ಹಾನಗಲ್‌ ಕಡೆಯಿಂದ ಸೊರಬ ಪಟ್ಟಣಕ್ಕೆ ಬರುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. ಎದುರಿಗೆ ಬಂದ ವಾಹನ ಮುಂದಕ್ಕೆ ಸಾಗಲು ಅನುವು ಮಾಡಿಕೊಡುವ ಸಂದರ್ಭದಲ್ಲಿ ಲಾರಿ ಪಲ್ಟಿಯಾಗಿದೆ. ಲಾರಿ ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ

ತೀರ್ಥಹಳ್ಳಿ : ಜಲಜೀವನ್‌ ಮಿಷನ್‌ ಕಾಮಗಾರಿಯಿಂದಾಗಿ ಮಾಸ್ತಿಕಟ್ಟೆಯಲ್ಲಿ ಲಾರಿ ಡಿಕ್ಕಿ

ತೀರ್ಥಹಳ್ಳಿ : ತಾಲ್ಲೂಕು ಮಾಸ್ತಿಕಟ್ಟೆ ಸಮೀಪ ಯಡೂರಿನಲ್ಲಿ ಸಿಲಿಂಡರ್‌ ಲಾರಿಯೊಂದರ ಚಕ್ರ ರಸ್ತೆಬದಿಯಲ್ಲಿ ಹೂತು, ಲಾರಿ ಲೈಟ್‌ ಕಂಬಕ್ಕೆ ಡಿಕ್ಕಿಯಾಗಿದೆ. ಜಲಜೀವನ್‌ ಮಿಷನ್‌ ಕಾಮಗಾರಿಯಿಂದಾಗಿ ಮುಖ್ಯರಸ್ತೆಗಳ ಪಕ್ಕದಲ್ಲಿ ಮಣ್ಣು ತೆಗೆದು ಕಾಲುವೆ ಮಾಡಿ ಪೈಪ್ ಅಳವಡಿಸುತ್ತಿರುವುದರಿಂದ ರಸ್ತೆಗಳು ಕುಿಯುತ್ತಿದೆ. ದರಿಂದ ರಸ್ತೆ ಬಿಟ್ಟು ಕೆಳಗಿಳಿದ ವಾಹನಗಳ ಚಕ್ರಗಳು ಹೊಂಡದಲ್ಲಿ ಹೂತುಹೋಗುತ್ತಿದೆ. ಇಲ್ಲಿಯು ಅದೇ ರೀತಿಯಾಗಿದ್ದು, ಲಾರಿ ಚಕ್ರ ಹುಗಿದು ನಿಯಂತ್ರಣ ತಪ್ಪಿ ಲಾರಿಯು ಕರೆಂಟ್‌ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಲಾರಿ ಜಖಂಗೊಂಡಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಯಾರಿಗೂ ಅಪಾಯವಾಗಿಲ್ಲ.

Categories
ರಾಜ್ಯ

ಚೆಕ್ ಬೌನ್ಸ್‌ ಪ್ರಕರಣ: ನಟಿ ಪದ್ಮಜಾ ರಾವ್ ಅವರಿಗೆ ಜೈಲು!?

ಚೆಕ್ ಬೌನ್ಸ್‌ ಪ್ರಕರಣ: ನಟಿ ಪದ್ಮಜಾ ರಾವ್ ಅವರಿಗೆ ಜೈಲು!?
– ಮೂರು ತಿಂಗಳು ಸಾಮಾನ್ಯ ಜೈಲು ಶಿಕ್ಷೆ, 40 ಲಕ್ಷ ದಂಡ
– ತುಳು ಸಿನಿಮಾ ನಿರ್ದೇಶಕರಿಗೆ ಮೋಸ: ದಂಡ

NAMMUR EXPRESS NEWS
ಮಂಗಳೂರು: ಚೆಕ್ ಬೌನ್ಸ್ ಪ್ರಕರಣ ಸಾಬೀತಾಗಿರುವ ಹಿನ್ನೆಲೆಯಲ್ಲಿ ನಟಿ ಪದ್ಮಜಾ ರಾವ್ ಅವರಿಗೆ ಮೂರು ತಿಂಗಳು ಸಾಮಾನ್ಯ ಜೈಲು ಶಿಕ್ಷೆ ಹಾಗೂ ರೂ.40,20,000 ದಂಡ ವಿಧಿಸಿ ಮಂಗಳೂರಿನ 8ನೇ ನ್ಯಾಯಾಲಯ ಆದೇಶಿಸಿದೆ.
ತುಳು ಸಿನಿಮಾ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರು ತನ್ನಿಂದ 41ಲಕ್ಷ ರೂ.ಹಣ ಪಡೆದು, ಆ ಬಳಿಕ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ಪದ್ಮಜಾ ರವರು 2023 ರಲ್ಲಿ ಕೇಸು ದಾಖಲಿಸಿದ್ದರು. ನಟ, ನಿರ್ದೇಶಕ ವೀರೇಂದ್ರ ಶೆಟ್ಟಿಯವರಿಗೆ ಪದ್ಮಜಾ ರಾವ್‌ ಅವರು ಚಾಲಿಪೋಲಿಲು ತುಳು ಸಿನಿಮಾದಲ್ಲಿ ನಟಿಸಲು ಬ೦ದ ಸ೦ದರ್ಭ ಪರಿಚಯವಾಗಿದ್ದರು. ಬಳಿಕ ವೀರೇಂದ್ರ ಶೆಟ್ಟಿಯವರ ಒಡೆತನದ ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಟಿ ಪದ್ಮಜಾ 41 ಲಕ್ಷ ರೂ. ಸಾಲ ಪಡೆದಿದ್ದರು.ಸಾಲದ ಭದ್ರತೆಗೆ ಅವರು 40 ಲಕ್ಷ ರೂ. ಚೆಕ್ ನೀಡಿದ್ದರು. ಆದರೆ ಪದ್ಮಜಾ ರಾವ್ ಅವರು ಸಾಲದ ಹಣ ಮರು ನೀಡದ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ ಚೆಕ್ ಹಾಕಲಾಗಿತ್ತು. ಆದರೆ, ಬ್ಯಾಂಕ್ ನಲ್ಲಿ ಹಣವಿಲ್ಲದಿದ್ದರಿಂದ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ವಿ.ಶೆಟ್ಟಿ ಕೇಳಿದಾಗ ಇವರ ಮೇಲೆಯೇ ಪೊಲೀಸ್ ಠಾಣೆಯಲ್ಲಿ ನನ್ನಿಂದ 40 ಲಕ್ಷ ಕೈ ಸಾಲ ತೆಗೆದುಕೊಂಡಿದ್ದರು. ನಾನು ವಾಪಸ್ ಕೇಳಿದಾಗ ಅವರು ಕೊಡಲಿಲ್ಲ. ತಾನು ಸಹಿ ಮಾಡಿದ ಚೆಕ್ ಬುಕ್ ಕಳೆದು ಹೋಗಿದ್ದು ಅದನ್ನು ಇವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಿಸಿ, ನ್ಯಾಯಾಲಯಕ್ಕೆ ದೂರನ್ನು ದಾಖಲಿಸಿದ್ದರು.
ಬಳಿಕ ಪ್ರಕರಣ ಮಂಗಳೂರಿನ ಎಂಟನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೆಟ್ಟಿಲೇರಿತ್ತು. ವಾದ-ವಿವಾದವನ್ನು ಆಲಿಸಿದ ನ್ಯಾಯಾಲಯ ನಟಿ ಪದ್ಮಜಾ ರಾವ್ ಹಣ ನೀಡದೆ ವಂಚಿಸಿದ್ದು ಸಾಬೀತಾಗಿದೆ ಎಂದು ಘೋಷಿಸಿದೆ.
ಆದ್ದರಿಂದ ಪದ್ಮಜಾ ರಾವ್ ಅವರಿಗೆ ಮೂರು ತಿಂಗಳ ಸಾಮಾನ್ಯ ಜೈಲು ಶಿಕ್ಷೆ ಹಾಗೂ 40.20 ಲಕ್ಷ ರೂ. ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ 40.17 ಲಕ್ಷ ದೂರುದಾರ ವೀರೇಂದ್ರ ಶೆಟ್ಟಿಗೆ ಹಾಗೂ ಉಳಿದ ಮೂರು ಸಾವಿರವನ್ನು ರಾಜ್ಯದ ಬೊಕ್ಕಸಕ್ಕೆ ವಿಧಿಸಲು ನ್ಯಾಯಾಲಯ ಸೂಚಿಸಿದೆ.

Categories
ಮಲ್ನಾಡ್

ಮಲೆನಾಡಲ್ಲಿ ಅಡಿಕೆ ದರ ಎಷ್ಟಿದೆ?

ಮಲೆನಾಡಲ್ಲಿ ಅಡಿಕೆ ದರ ಎಷ್ಟಿದೆ?
– ಬೆಟ್ಟೆ ಎಷ್ಟು? ಹಸಕ್ಕೆ ಎಷ್ಟು?
– ಸರಕು ದರ ಭಾರೀ ಕುಸಿತ

NAMMUR EXPRESS NEWS
ಬೆಟ್ಟೆ- 40009-54399
ಗೊರಬಲು- 13000-32099
ರಾಶಿ- 27000-48699
ಸರಕು -56009-74400
ಸಿಪ್ಪೆಗೋಟು – 10500-17600
ಚಾಲಿ – 24854-32819
ಕೋಕಾ – 9099-23989
ಕರೆಗೋಟು -20899-32099
ಬಿಳಿ ಗೋಟು- 10199-25214

Categories
ಜ್ಯೋತಿಷ್ಯ

ಶ್ರಾವಣ ಮಂಗಳವಾರದ ದಿನದ ರಾಶಿ ಭವಿಷ್ಯ ಹೇಗಿದೆ?

ಶ್ರಾವಣ ಮಂಗಳವಾರದ ದಿನದ ರಾಶಿ ಭವಿಷ್ಯ ಹೇಗಿದೆ?
– ಹನುಮಂತನ ದಯೆಯಿಂದ ಯಾವ ರಾಶಿಯವರಿಗೆ ಧನಲಾಭ ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮಗೆ ಮಿಶ್ರ ಫಲಿತಾಂಶಗಳ ದಿನವಾಗಿರುತ್ತದೆ. ಕುಟುಂಬದ ಸದಸ್ಯರಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ಮೇಲೆ ಹೆಚ್ಚಿನ ಕೆಲಸದ ಜವಾಬ್ದಾರಿ ಇರುತ್ತವೆ. ಇಂದು ನಿಮ್ಮ ವಿರೋಧಿಗಳನ್ನು ಸುಲಭವಾಗಿ ಸೋಲಿಸಲು ನಿಮಗೆ ಸಾಧ್ಯವಾಗುತ್ತದೆ. ಇಂದು ನಿಮ್ಮ ಆದಾಯದ ಮೂಲದ ಬಗ್ಗೆ ನೀವು ಗಮನ ಹರಿಸಿ, ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಬಹುದು.

** ವೃಷಭ ರಾಶಿ :
ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಎದುರಾಗಬಹುದು. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ, ಆದರೆ ವೆಚ್ಚಗಳು ಸಹ ಹೆಚ್ಚಗುತ್ತವೆ. ಶೈಕಷಣಿಕ ಕೆಲಸದಲ್ಲಿ ಅಡಚಣೆ ಉಂಟಾಗಬಹುದು. ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಕುಟುಂಬದಲ್ಲಿ ಅನಗತ್ಯ ವಾದ ವಿವಾದಗಳನ್ನು ತಪ್ಪಿಸಿ.

** ಮಿಥುನ ರಾಶಿ
ಇಂದು ಆತ್ಮವಿಶ್ವಾಸ ಹೆಚ್ಚಾಗಲಿದೆ. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ನಿಮ್ಮ ತಾಯಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಸ್ನೇಹಿತರ ಬೆಂಬಲದಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಕಠಿಣ ಪರಿಶ್ರಮದ ನಂತರವೇ ಯಶಸ್ಸು ಸಿಗುತ್ತದೆ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ.

** ಕರ್ಕಾಟಕ ರಾಶಿ :
ಇಂದು ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಲಭವಾಗಲಿದೆ. ನಿಮ್ಮ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಸಂಪತ್ತಿನಲ್ಲಿ ಹೆಚ್ಚಳ ಇರುತ್ತದೆ. ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ. ಅಧಿಕಾರಿಗಳ ಸಹಕಾರದಿಂದ ವೃತ್ತಿ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

** ಸಿಂಹ ರಾಶಿ :
ಉದ್ಯೋಗದ ನಿರೀಕ್ಷೆಯಲ್ಲಿರುವ ಜನರು ಇಂದು ಸಂದರ್ಶನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನಿಮ್ಮ ಜೀವನ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಕೋಪವನ್ನು ನಿಯಂತ್ರಿಸುವುದರಿಂದ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ನೀವು ಪೂರ್ವಜರ ಆಸ್ತಿಯನ್ನು ಪಡೆಯಬಹುದು, ಅದು ನಿಮ್ಮ ಸಂಪತ್ತನ್ನು ಹೆಚ್ಚಿಸುತ್ತದೆ.

** ಕನ್ಯಾ ರಾಶಿ :
ಇಂದು ಕೆಲಸಕ್ಕಾಗಿ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ವ್ಯವಹಾರದಲ್ಲಿ ವಿಸ್ತರಣೆಯ ಹಾದಿಗಳು ಕಂಡುಬರುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಕುಟುಂಬ ಮತ್ತು ಸ್ನೇಹಿತರ ಬೆಂಬಲದಿಂದ, ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.

** ತುಲಾ ರಾಶಿ :
ಇಂದು ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಉದ್ಯೋಗದಲ್ಲಿರುವ ಜನರು ಮೌಲ್ಯಮಾಪ ಅಥವಾ ಬಡತಿಯನ್ನು ಪಡೆಯಬಹುದು, ಆದರೆ ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸಬಹುದು. ವಿಪರೀತ ಖರ್ಚು ಇರುತ್ತದೆ.

** ವೃಶ್ಚಿಕ ರಾಶಿ :
ಇಂದು ಸಂಪತ್ತು ವೃದ್ಧಿಯಾಗಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ನಿಮ್ಮ ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ಸ್ನೇಹಿತರ ನೆರವಿನಿಂದ ವ್ಯಾಪಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿದ್ದು, ಹಣದ ಒಳಹರಿವು ಹೆಚ್ಚಾಗಲಿದೆ. ಮಾತಿನಲ್ಲಿ ಮಾಧುರ್ಯ ಇರುತ್ತದೆ. ಇಂದು ಹೆಚ್ಚುವರಿ ಖರ್ಚುಗಳು ಇರುತ್ತವೆ, ಆದ್ದರಿಂದ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿ.

** ಧನಸ್ಸು ರಾಶಿ :
ಇಂದು ಮನಸ್ಸು ಶಾಂತವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ನಿಮ್ಮ ಮಾತಿನಲ್ಲಿ ಮಾಧುರ್ಯವಿರುತ್ತದೆ, ಆದರೆ ನಿಮ್ಮ ಭಾವನೆಗಳನ್ನು ನಿಯಂತ್ರಿಸಿ ಮತ್ತು ಭಾವನಾತ್ಮಕವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ ಮತ್ತು ನೀವು ಕುಟುಂಬದೊಂದಿಗೆ ಕೆಲವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲು ಯೋಜಿಸಬಹುದು.

** ಮಕರ ರಾಶಿ :
ಉದ್ಯೋಗ ಮತ್ತು ವ್ಯಾಪಾರದಲ್ಲಿ ವಾತಾವರಣವು ಅನುಕೂಲಕರವಾಗಿರುತ್ತದೆ. ವ್ಯಾಪಾರ ವಿಸ್ತರಣೆಗೆ ಹೊಸ ಅವಕಾಶಗಳು ದೊರೆಯಲಿವೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆದಾಗ್ಯೂ, ಶೈಕ್ಷಣಿಕ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು.

** ಕುಂಭ ರಾಶಿ :
ಇಂದು ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಮಾತಿನಲ್ಲಿ ಮಾಧುರ್ಯ ಇರುತ್ತದೆ. ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಆದಾಯವನ್ನು ಹೆಚ್ಚಿಸಲು ಹೊಸ ಅವಕಾಶಗಳಿವೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಆತ್ಮವಿಶ್ವಾಸ ಹೆಚ್ಚಲಿದೆ. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ, ಆದರೆ ಜೀವನಶೈಲಿ ಅಸ್ತವ್ಯಸ್ತವಾಗಬಹುದು.

** ಮೀನ ರಾಶಿ :
ಇಂದು ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಿ. ನಿಮ್ಮ ಕೋಪವನ್ನು ನಿಯಂತ್ರಿಸಿ. ಸ್ನೇಹಿತರ ಸಹಾಯದಿಂದ ಉದ್ಯೋಗದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಪೂರ್ವಿಕರ ಆಸ್ತಿಯಿಂದ ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ.