Categories
ತೀರ್ಥಹಳ್ಳಿ

ಎಳ್ಳಮಾವ್ಯಾಸೆ ಜಾತ್ರೆಯಲ್ಲಿ ಬಲ್ಬ್, ವೈರ್ ಕದ್ದ ಕಳ್ಳರು!

ಎಳ್ಳಮಾವ್ಯಾಸೆ ಜಾತ್ರೆಯಲ್ಲಿ ಬಲ್ಬ್, ವೈರ್ ಕದ್ದ ಕಳ್ಳರು!
– 30,000ಕ್ಕೂ ಹೆಚ್ಚು ಮೌಲ್ಯದ ಲೈಟಿಂಗ್ಸ್ ಕಳುವು, ಪೊಲೀಸ್ ಠಾಣೆಯಲ್ಲಿ ದೂರು
– ಜನರೇ ಎಚ್ಚರ ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಗಮನಿಸಿ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಪ್ರಸಿದ್ಧ ಎಳ್ಳಮಾವಾಸ್ಯೆ ಜಾತ್ರೆ ಶುರುವಾಗಿದ್ದು ಈಗಾಗಲೇ ಸಾವಿರಾರು ಮಂದಿ ಜಾತ್ರೆಗೆ ಆಗಮಿಸುತ್ತಿದ್ದಾರೆ. ಈ ನಡುವೆ ಕಳೆದ 2 ದಿನಗಳಲ್ಲಿ ವಿದ್ಯುತ್ ಬಲ್ಬ್ ಸೇರಿದಂತೆ ಅಲಂಕಾರ ಮಾಡಿದ ಲೈಟಿಂಗ್ಸ್ ಅನ್ನ ಕಳುವು ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಾಗಿದ್ದು. ಇಬ್ಬರನ್ನು ವಿಚಾರಣೆ ಕೂಡ ನಡೆಸಲಾಗಿದೆ.

ಜಾತ್ರೆಯ ಒಳಗೆ ಕಳ್ಳರಿದ್ದಾರೆ ಹುಷಾರು!

ಜಾತ್ರೆಯ ಒಳಗೆ ಕಳ್ಳರು ಇದ್ದು ಜನರು ಎಚ್ಚರ ವಹಿಸಬೇಕು. ಜೊತೆಗೆ ತಮ್ಮ ಮೊಬೈಲ್, ಚಿನ್ನಾಭರಣಗಳು ಹಾಗೂ ಹಣದ ಬಗ್ಗೆ ಗಮನಹರಿಸಬೇಕು. ಜೊತೆಗೆ ಅಂಗಡಿಗಳಲ್ಲಿ ತಮ್ಮ ಅಮೂಲ್ಯವಾದ ವಸ್ತುಗಳ ಬಗ್ಗೆ ಗಮನಿಸಬೇಕು ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಕಳ್ಳರ ಬಗ್ಗೆ ಮಾಹಿತಿ ಇದ್ದಲ್ಲಿ.. 112 ಸಂಪರ್ಕಿಸಿ.

Categories
ಉಡುಪಿ

ಕುಕ್ಕುಂದೂರು ದೇಗುಲ ಅಭಿವೃದ್ಧಿಗೆ ಕಂಕಣ!

ಕುಕ್ಕುಂದೂರು ದೇಗುಲ ಅಭಿವೃದ್ಧಿಗೆ ಕಂಕಣ!
-ಜೀರ್ಣೋದ್ಧಾರದ ಮನವಿ ಪತ್ರ ಬಿಡುಗಡೆ ಮಾಡಿದ ಖ್ಯಾತ ನಟ ಟೆನ್ನಿಸ್‌ಕೃಷ್ಣ
– ಪರಪು ಗುತ್ತು ಕರೆ ಪಿಲಿಚಂಡಿ, ಬೊಬ್ಬರ್ಯ, ನೀಚ ಹಾಗೂ ಗುಳಿಗ ದೈವಸ್ಥಾನಕ್ಕೆ ಬೇಕು ಭಕ್ತರ ಸಹಾಯ

NAMMUR EXPRESS NEWS
ಕಾರ್ಕಳ : ಐತಿಹಾಸಿಕ ಪರಪು ಗುತ್ತ ಕರೆಯ ಪಿಲಿಚಂಡಿ ಬೊಬ್ಬರ್ಯ, ನೀಚ ಹಾಗೂ ಗುಳಿಗ ದೈವಗಳ ದೇಗುಲ ತೀರಾ ಹಳೆಯದಾಗಿದ್ದು ಶಿಥಿಲಾವಸ್ಥೆಗೆ ಒಳಗಾಗಿದೆ. ಈ ದೈವಸ್ಥಾನವನ್ನು ಜೀರ್ಣೋದ್ದಾರಗೊಳಿಸಲು ಪರಪು ಗುತ್ತು ಕರೆಯ ಹಾಗೂ ಸಂಬಂಧಪಟ್ಟ ಗುತ್ತು ಬರ್ಕೆಯವರೊಂದಿಗೆ ಎಲ್ಲಾ ದೈವ ಭಕ್ತರ ಇಚ್ಛೆಯಂತೆ ನವೀಕರಣಗೊಳಿಸಲು ಊರಿನ ಹತ್ತು ಸಮಸ್ತರ ಸಮ್ಮುಖದಲ್ಲಿ ನಿರ್ಧರಿಸಲಾಗಿದೆ. ಕುಕ್ಕುಂದೂರು ಗ್ರಾಮದ ಪರಪು ಗುತ್ತುಕರೆಯ ದೈವಸ್ಥಾನದ ಜೀರ್ಣೋದ್ಧಾರ ಮಾಡುವ ಸಲುವಾಗಿ ಮನವಿ ಪತ್ರವನ್ನು ಖ್ಯಾತ ಕನ್ನಡ ಚಲನಚಿತ್ರ ಹಾಸ್ಯ ನಟ ಟೆನ್ನಿಸ್‌ ಕೃಷ್ಣ ಅವರು ಡಿಸೆಂಬರ್‌ 29ರಂದು ಗುತ್ತುಕರೆಯ ಸನ್ನಿಧಾನದಲ್ಲಿ ಬಿಡುಗಡೆಗೊಳಿಸಿದರು.
ರಾಜೇಶ್‌ ರಾವ್‌ ಪರಪ್ಪು, ಶಿವರಾಂ ರಾವ್‌, ಬೆಂಗಳೂರು ಉದ್ಯಮಿ ಚಂದ್ರು, ವಸಂತ್‌ ಅತಿಕಾರಿ, ದೇವರಾಜ ಅಧಿಕಾರಿ, ಉದ್ಯಮಿ ಸುಭಾಷ್‌ ಕಾಮತ್‌, ರವೀಂದ್ರ ಶೆಟ್ಟಿ, ಗೀತಾ ಶೆಟ್ಟಿ, ವೆಂಕಪ್ಪ ಶೆಟ್ಟಿ ಹಾಗೂ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿನಯ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Categories
ತೀರ್ಥಹಳ್ಳಿ

ಮೊದಲ ದಿನದ ಅನ್ನದಾಸೋಹದಲ್ಲಿ ಹತ್ತು ಸಾವಿರ ಮಂದಿಗೆ ಊಟ

ಮೊದಲ ದಿನದ ಅನ್ನದಾಸೋಹದಲ್ಲಿ ಹತ್ತು ಸಾವಿರ ಮಂದಿಗೆ ಊಟ
– ಅಚ್ಚು ಕಟ್ಟಿನ ಆಯೋಜನೆ: ಎಲ್ಲರಿಗೂ ಅನ್ನ ಪ್ರಸಾದ
– ಶಾಸಕ ಆರಗ ಜ್ಞಾನೇಂದ್ರ ಅವರಿಂದ ಅನ್ನದಾಸೋಹಕ್ಕೆ ಚಾಲನೆ

NAMMUR EXPRESS NEWS
ತೀರ್ಥಹಳ್ಳಿ :
ತೀರ್ಥಹಳ್ಳಿ ತಾಲೂಕಿನ ಇತಿಹಾಸ ಪ್ರಸಿದ್ಧವಾದ ಜಾತ್ರೆ ಎಳ್ಳಮಾವ್ಯಾಸೆ ಜಾತ್ರೆ. ಈ ಜಾತ್ರೆಗೆ ಹಳ್ಳಿಯಿಂದ ಜನ ಬರುತ್ತಾರೆ ಇನ್ನು ಜಾತ್ರೆಯಲ್ಲಿ ಮೊದಲ ದಿನದಂದು 10,000ಕ್ಕೂ ಹೆಚ್ಚು ಜನರಿಗೆ ಅನ್ನದಾಸೋಹ ನೀಡಲಾಯಿತು. ಅಚ್ಚುಕಟ್ಟಿನ ಊಟದ ವ್ಯವಸ್ಥೆ ಹಾಗೂ ಊಟದಲ್ಲಿ ವಿಶೇಷವಾಗಿ ಸಿಹಿ ಕೂಡ ಇದ್ದು. ಪ್ರತಿ ವರ್ಷದಿಂದ ವರ್ಷಕ್ಕೆ ಈ ಜಾತ್ರೆಯ ಮಹತ್ವ ಹೆಚ್ಚಾಗುತ್ತಲೇದೆ. ಇವತ್ತಿನ ಅನ್ನ ದಾಸೋಹದ ಅಡುಗೆಯ ಜವಾಬ್ದಾರಿಯನ್ನು ಜಂಬುವಳ್ಳಿಯ ಸಂದೀಪ ಎಸ್ ಎಸ್ ಕ್ಯಾಟರಿಂಗ್ ಸಂಸ್ಥೆಯವರು ವಹಿಸಿಕೊಂಡಿದ್ದರು. ಮೂರು ದಿನದ ಪಾತ್ರೆ ವ್ಯವಸ್ಥೆಯನ್ನು ಅವರು ಮಾಡಿ ಕೊಟ್ಟಿದ್ದು, ಸುಮಾರು 8-10 ಸಾವಿರದ ಜನಕ್ಕೆ ಊಟವನ್ನು ಮಾಡಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಸೇರಿ ಸಮಿತಿ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಮೇಶ್ವರ ಅನ್ನದಾನ ಸಮಿತಿ ಈ ಅನ್ನ ದಾಸೋಹ ಕೆಲಸ ಮಾಡುತ್ತಿದೆ. ಹೊರೆ ಕಾಣಿಕೆ ಸಂಗ್ರಹಿಸಿ ಭಕ್ತರು, ದಾನಿಗಳಿಂದ ಈ ಕಾರ್ಯಕ್ರಮ ನಡೆಯುತ್ತಿದೆ.

ಜಾತ್ರೆಯ ಎಲ್ಲಾ ವಿಡಿಯೋ ನಮ್ಮೂರ್ ಎಕ್ಸ್ ಪ್ರೆಸ್ ಯೂಟ್ಯೂಬ್ ಚಾನೆಲ್ ಅಲ್ಲಿ ವೀಕ್ಷಿಸಿ.

Categories
ರಾಜ್ಯ

Happy new year ಮೆಸೇಜ್ ಬಂದೀತು ಹುಷಾರ್..!!

Happy new year ಮೆಸೇಜ್ ಬಂದೀತು ಹುಷಾರ್..!!
– APK ಫೈಲ್ ಬಳಸಿ ಮೊಬೈಲ್ ಹ್ಯಾಕ್ ಮಾಡಬಹುದು
– ಎಚ್ಚರಿಕೆ ನೀಡಿದ ಸೈಬರ್ ಕ್ರೈಮ್ ಪೋಲೀಸರು

NAMMUR EXPRESS NEWS
ಮಂಗಳೂರು:
ಹೊಸ ವರ್ಷ ಆಚರಣೆ ನೆಪ ಬಳಸಿಕೊಂಡು ಸೈಬ‌ರ್ ಕ್ರಿಮಿನಲ್ ಗಳು ಸಾರ್ವಜನಿಕರ ಮೊಬೈಲ್‌ಗಳಿಗೆ ಅಪಾಯಕಾರಿ ಲಿಂಕ್, APK ಫೈಲ್ ಕಳುಹಿಸಿ ಸಾರ್ವಜನಿಕರ ಮೊಬೈಲ್ ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ

ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ‘ಶುಭಾಶಯ’ ಬರಬಹುದು!

ಸಾರ್ವಜನಿಕರು ತಮ್ಮ ಮೊಬೈಲ್‌ಗೆ ಈ ರೀತಿಯ ಹೊಸ ವರ್ಷದ ಶುಭಾಶಯ ಕೋರುವ ಯಾವುದೇ ಹಾನಿಕಾರಕ ಲಿಂಕ್‌ಗಳು, APK ಫೈಲ್‌ಗಳನ್ನು ವಾಟ್ಸ್‌ಆ್ಯಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಿಂದ ಸ್ವೀಕರಿಸಿಕೊಂಡಲ್ಲಿ ಅದನ್ನು ತಕ್ಷಣ ಡಿಲೀಟ್ ಮಾಡಲು ಮಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸರು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಇಂತಹಾ ಹಾನಿಕರ ಲಿಂಕ್ ಮತ್ತು APK ಫೈಲ್ ಗಳನ್ನು ಯಾರಿಗೂ ಶೇರ್ ಮಾಡದಿರಿ. ಹಾನಿಕಾರಕ ಲಿಂಕ್ ಮತ್ತು APK ಫೈಲ್ ವಾಟ್ಸ್ ಆ್ಯಪ್ ಗ್ರೂಪ್‌ಗಳಿಗೆ ನಿಮ್ಮ ಪರಿಚಿತ ವಾಟ್ಸ್‌ಆ್ಯಪ್‌ನಿಂದ ಪೋಸ್ಟ್ ಮಾಡಿದಲ್ಲಿ ಆಯಾ ಗ್ರೂಪ್ ಅಡ್ಮಿನ್ ಗಳು ಅಂತಹ ಲಿಂಕ್, ಫೈಲ್ ಪರಿಶೀಲನೆ ಮಾಡಿ ಡಿಲೀಟ್ ಮಾಡುವಂತೆ ಕೂಡಾ ಪೊಲೀಸರು ತಿಳಿಸಿದ್ದಾರೆ.

ಮಸೇಜ್ ಬಂದ್ರೆ ಏನ್ ಮಾಡ್ತಾರೆ.,?? ಏನಾಗಬಹುದು..??!

2025ನೇ ಹೊಸ ವರ್ಷದ ಸಂದರ್ಭವನ್ನು ಬಳಸಿಕೊಂಡು ಸಾರ್ವಜನಿಕರ ಮೊಬೈಲ್ ಗಳಿಗೆ ಸೈಬ‌ರ್ ಕ್ರಿಮಿನಲ್‌ಳು ಹಾನಿಕಾರಕ ಲಿಂಕ್, ಅಪ್ಲಿಕೇಶನ್ ಗಳನ್ನು ಕಳುಹಿಸಿ ಬಳಿಕ ಅವರ ಮೊಬೈಲ್‌ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ. ನಂತರ ಹ್ಯಾಕ್ ಮಾಡಿದ ಮೊಬೈಲಿನಿಂದ ಅವರ ವಾಟ್ಸ್ ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಮತ್ತು APK ಫೈಲ್‌ಗಳನ್ನು ದೊಡ್ಡಮಟ್ಟದಲ್ಲಿ ಶೇರ್ ಮಾಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಎನ್ನುತ್ತಾರೆ ಪೊಲೀಸರು.

ವಂಚನೆಗೊಳಗಾದರೆ 1930ಕ್ಕೆ ಕರೆ ಮಾಡಿ.‌.!??

ಸೈಬರ್ ಕ್ರೈಮ್ ವಂಚನೆಗೆ ಬೆಳಗಾದಲ್ಲಿ ಕೂಡಲೇ 1930ಕ್ಕೆ ಕರೆಮಾಡಿ ಅಥವಾ http://www.cyber- crime.gov.in ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಲು ತಿಳಿಸಿದೆ.

Categories
ತೀರ್ಥಹಳ್ಳಿ

ಜಾತ್ರೆಯ 2 ಗಂಟೆಗಳ ಲಾಭ ಯೋಧರಿಗೆ ಸಮರ್ಪಣೆ!

ಜಾತ್ರೆಯ 2 ಗಂಟೆಗಳ ಲಾಭ ಯೋಧರಿಗೆ ಸಮರ್ಪಣೆ!
– ತೀರ್ಥಹಳ್ಳಿ ಜಾತ್ರೆಯಲ್ಲಿ ಮಾನವೀಯ ಸೇವೆಯ ಕಾರ್ಯಕ್ರಮ ಉದ್ಘಾಟನೆ
– ಸ್ವಪ್ನ ಫ್ಯಾನ್ಸಿ ಸ್ಟೋರ್ ಮಾಲಿಕರಾದ ಶಿವಾನಂದ ಅವರ ದೇಶ ಸೇವೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಆಗುಂಬೆ ಮಾರ್ಗ ಬಸ್ ನಿಲ್ದಾಣದ ಸ್ವಪ್ನ ಫ್ಯಾನ್ಸಿ ಸ್ಟೋರ್ ಮಾಲಿಕರಾದ ಶಿವಾನಂದ ಬಾಳೆಬೈಲು ಇವರು ಎಳ್ಳಮಾವಾಸ್ಯೆ ಜಾತ್ರೆ ಪ್ರಯುಕ್ತ ರಥಬೀದಿಯ ಶ್ರೀರಾಮೇಶ್ವರ ಸೌಹಾರ್ದ ಸೊಸೈಟಿ ಮುಂಭಾಗ ಸಣ್ಣ ಫ್ಯಾನ್ಸಿ ಐಟಮ್ ಅಂಗಡಿ ತೆರೆದಿದ್ದು, ಪ್ರತಿದಿನದ ಎರಡು ಘಂಟೆಗಳ ವ್ಯಾಪಾರದ ಮೊತ್ತವನ್ನು ಇತ್ತೀಚಿಗೆ ಕಾಶ್ಮೀರ ಕಣಿವೆಯಲ್ಲಿ ಅಪಘಾತಕ್ಕೀಡಾಗಿ ವೀರ ಮರಣವನ್ನಪ್ಪಿದ ನಮ್ಮ ದೇಶ ಕಾಯುವ 4 ಜನ ಸೇನಾನಿಗಳ ಕುಟುಂಬಕ್ಕೆ ನೀಡುವ ಮಹಾತ್ಕಾರ್ಯ ಮಾಡಿರುತ್ತಾರೆ.
ನಮಗೆ ಅನ್ನ ನೀಡಿರುವ ರೈತರು , ಯಾವುದೇ ಭಯವಿಲ್ಲದೆ ನಿದ್ದೆ ಮಾಡಲು, ನೆಮ್ಮದಿಯ ಜೀವನವನ್ನು ಗಳಿಸಲು ಕಾರಣಕರ್ತರಾದ ಯೋಧರು ಅವರ ಸೇವೆ ನಮ್ಮ ಕರ್ತವ್ಯ ಎಂದು ಆರ್ ಎಸ್ ಎಸ್ ಮುಖಂಡರಾದ ದಿನೇಶ್ ಭಾರತೀಪುರ ಅವರು ಹೇಳಿದರು. ವೀರ ಯೋಧರಾದ ಮಹೇಶ್, ದಯಾನಂದ, ಧರ್ಮರಾಜ, ಅನೂಪ್ ಅವರು ಇತ್ತೀಚಿಗೆ ಗಡಿ ರಕ್ಷಡೆಗೆ ತೆರಳುತ್ತಿದ್ದಾಗ ವೀರಮರಣವನ್ನು ಹೊಂದಿರುವ ನಾಲ್ವರ ಕುಟುಂಬಕ್ಕೆ ಸಹಾಯಾರ್ಥವಾಗಿ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಯ ಮಳಿಗೆಯಲ್ಲಿ ಪ್ರತಿದಿನದ ಆರಂಭದ 2 ಗಂಟೆಗಳ ವ್ಯಾಪಾರದ ಸಂಪೂರ್ಣ ಮೊತ್ತವನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ಅರ್ಪಿಸಲಾಗುವುದು ಎಂದು ಸ್ವಪ್ನ ಫ್ಯಾನ್ಸಿ ಸ್ಟೋರ್ ಮಾಲಿಕರು ಹೇಳಿದರು. ನಮ್ಮ ದೇಶದಲ್ಲಿ ಬಹಳಷ್ಟು ವರ್ಷಗಳಿಂದ ಯುದ್ಧಗಳು ನಡೆಯುತ್ತಲೇ ಇವೆ ಹುತಾತ್ಮರಾದ ಸೈನಿಕರಿಗೋಸ್ಕರ ಈ ಎರಡು ಗಂಟೆಗಳನ್ನು ಮೀಸಲಿಡುತ್ತಿದ್ದೇವೆ, ವ್ಯಾಪಾರದಲ್ಲಿ ಈ ಎರಡು ಗಂಟೆಗಳನ್ನು ಅವರಿಗೆ ಸಲ್ಲಿಸಬೇಕು ಎಂಬ ಉದ್ದೇಶ ನಮ್ಮದು. ಪ್ರಾರಂಭದ ಎರಡು ಗಂಟೆಗಳ ಕಾಲ ಅದೆಷ್ಟೇ ಲಾಭ ಗಳಿಸಿದರೂ ಅದನ್ನು ಯೋಧರಿಗೆ ಸಲ್ಲಿಸುತ್ತೇವೆ ಎರಡು ಗಂಟೆಯಲ್ಲಿ ನಡೆದ ವ್ಯಾಪಾರದ ಲಾಭವನ್ನು ನಾವು ಪಡೆಯದೆ ಯೋಧರಿಗೆ ಮೀಸಲಿಟ್ಟ ಡಬ್ಬಿಯಲ್ಲಿ ಶೇಖರಿಸಿ ಇಡಲಾಗುವುದು ಅದನ್ನು ಯೋಧರ ಕುಟುಂಬಕ್ಕೆ ತಲುಪಿಸುವ ಜವಾಬ್ದಾರಿ ನಮ್ಮದು ಎಂದು ತಿಳಿಸಿದರು. ದೇಶರಕ್ಷಣೆ ಮಾಡುವ ಯೋಧರ ಕುಟುಂಬಕ್ಕೆ ಧೈರ್ಯ ತುಂಬುವ ಈ ಮಹತ್ಕಾರ್ಯದ ಸರಳ ಉದ್ಟಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖ್ಯ ನಿರ್ವಾಹಕ ಭಾರತೀಪುರ ದಿನೇಶ್ ಭಟ್, ಡಾII ಜೀವಂಧರ್ ಜೈನ್ ರಾಮೇಶ್ವರ ಜಾತ್ರಾ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಡಾ.ಸುಂದರೇಶ್ ಪಟ್ಟಣ ಪಂಚಾಯ್ತಿ ಸದಸ್ಯೆ ಜ್ಯೋತಿ ಮೋಹನ್ ಇನ್ನಿತರರು ಉಪಸ್ತಿತರಿದ್ದರು.

Categories
ರಾಷ್ಟ್ರೀಯ ವಾರ್ತೆ

ಹೊಸ ವರ್ಷಕ್ಕೆ ಹೊಸ ನಿಯಮ: ಜನರೇ ಸಿದ್ಧರಾಗಿ…!

ಹೊಸ ವರ್ಷಕ್ಕೆ ಹೊಸ ನಿಯಮ: ಜನರೇ ಸಿದ್ಧರಾಗಿ…!
– ಕಾರು, ಎಲ್ಪಿಜಿ ಗ್ಯಾಸ್, ಇಂಟರ್ನೆಟ್ ಡೇಟಾ ದರ ಹೆಚ್ಚಳ
– ಪಡಿತರ ವಿತರಣೆ ನಿಯಮ ಬದಲು, ಹಳೆ ಮೊಬೈಲ್ ಅಲ್ಲಿ ವಾಟ್ಸಪ್ ಬರಲ್ಲ
– ಹೊಸ ನಿಯಮಗಳು ಜ.1 ರಿಂದಲೇ ಜಾರಿ: ಏನೇನಿದೆ ನೋಡಿ!

NAMMUR EXPRESS NEWS
ನವದೆಹಲಿ: 2024 ವರ್ಷವು ಕಳೆದು ಹೊಸ ವರ್ಷ ಬರಲು ಕ್ಷಣಗಣನೆ ಆರಂಭವಾಗಿದೆ. ಒಂದು ಕಡೆ ಹೊಸ ವರ್ಷದ ಖುಷಿಯಾದರೆ ಇನ್ನೊಂದು ಕಡೆ ಹಲವು ನಿಯಮಗಳು ಜನರ ಜೇಬಿಗೆ ಕತ್ತರಿ ಹಾಕಲಿವೆ. ಹಲವು ಕಾರು ಕಂಪನಿಗಳು ತಮ್ಮ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಇದಲ್ಲದೇ ಜಿಎಸ್‌ಟಿ ಪೋರ್ಟಲ್‌’ನಲ್ಲಿ ಮೂರು ಪ್ರಮುಖ ಬದಲಾವಣೆಗಳಾಗಲಿವೆ. ಭಾರತೀಯ ರಿಸರ್ವ್ ಬ್ಯಾಂಕ್, ಸ್ಥಿರ ಠೇವಣಿಗಳಿಗೆ ಸಂಬಂಧಿಸಿದ ನೀತಿಗಳಲ್ಲಿ ಬದಲಾವಣೆಗಳನ್ನ ಮಾಡಿದೆ.
– ಜಿಎಸ್‌ಟಿ ನಿಯಮ ಕಟ್ಟುನಿಟ್ಟು ತೆರಿಗೆದಾರರು ಜ.1ರಿಂದ ಕಟ್ಟುನಿಟ್ಟಾದ ಜಿಎಸ್‌ಟಿ ನಿಯಮ ಪಾಲಿಸಬೇಕು. ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಷನ್ (ಎಂಎಫ್‌ಎ) ಜಿಎಸ್‌ಟಿ ಪೋರ್ಟಲ್ ಪ್ರವೇಶಿಸುವ 20 ಕೋಟಿ ರೂ.ಗಿಂತ ಹೆಚ್ಚು ವಾರ್ಷಿಕ ವಹಿವಾಟು ನಡೆಸುವ ಗ್ರಾಹಕರಿಗೆ ಈ ನಿಯಮ ಅನ್ವಯಿಸಲಿದೆ. ಹಾಗೆಯೇ 180 ದಿನಗಳಿಗಿಂತ ಹಳೆಯದಾದ ಮೂಲ ದಾಖಲೆಗಳಿಗೆ ಮಾತ್ರ ಇನ್ಮುಂದೆ ಇ-ವೇ ಬಿಲ್ ರಚಿಸಲು ಅವಕಾಶ ಸಿಗಲಿದೆ.

– ಎಲ್ ಪಿ ಜಿ ತುಟ್ಟಿ ಸಾಧ್ಯತೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ 73.58 ಡಾಲರ್ ತಲುಪಿದೆ. ಹೀಗಾಗಿ ಜ.1ರಿಂದಲೇ ಎಲ್ಪಿಜಿ ಸಿಲಿಂಡ‌ರ್ ದರ ಏರಿಕೆ ಆಗುವುದು ಬಹುತೇಕ ನಿಶ್ಚಿತ ಆಗಿದೆ. ಇನ್ನು ಎಲ್‌ಪಿಜಿ ಸಿಲಿಂಡ‌ರ್ ದರವನ್ನು ಯುಪಿಐನಲ್ಲೇ ಪಾವತಿಸುವ ಅವಕಾಶವೂ ಗ್ರಾಹಕರಿಗೆ ಲಭಿಸಲಿದೆ.

– ಪಡಿತರ ವಿತರಣೆ ನಿಯಮ ಬದಲು

ಪಡಿತರ ವಿತರಣಾ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆ ಆಗಲಿದೆ. ಹಿಂದುಳಿದ ಕುಟುಂಬಗಳಿಗೆ ಆಹಾರ ಭದ್ರತೆ ಖಚಿತಪಡಿಸಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಜ.1 ರಿಂದ ಪಡಿತರದ ಜತೆಗೆ 1 ಸಾವಿರ ರೂ. ಹೆಚ್ಚುವರಿ ಆರ್ಥಿಕ ನೆರವು ನೀಡುವ ನಿಯಮ ಜಾರಿಯಾಗಲಿದೆ. ಸರಿ ಸುಮಾರು 80 ಕೋಟಿ ಜನರು ಈ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಇದೇ ವೇಳೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದವರ ಕಾರ್ಡ್‌ ಗಳು ರದ್ದಾಗಲಿವೆ. ಇದಿಷ್ಟೇ ಅಲ್ಲ ನಗರ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 3 ಲಕ್ಷ ರೂ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 2 ಲಕ್ಷ ರೂ.ಗೆ ನಿಗದಿಯಾಗಲಿದೆ.

– ಡೇಟಾ ಶುಲ್ಕ ಹೆಚ್ಚಳ

ಮೊಬೈಲ್ ಡೇಟಾ ಶುಲ್ಕ ಹೆಚ್ಚಳವಾಗುವ ಸಾಧ್ಯತೆ ಇದೆ. ಜತೆಗೆ ಹಳೆಯ ಆಂಡ್ರಾಯ್ಡ್ ಸ್ಮಾಟ್ ೯ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಣೆ ಸ್ಥಗಿತವಾಗಲಿದೆ.

– ಪಿಎಫ್ ವಿತ್‌ ಡ್ರಾ ಇನ್ನಷ್ಟು ಸುಲಭ

ಜ.1ರಿಂದ ಪಿಂಚಣಿದಾರರ ಭವಿಷ್ಯ ನಿಧಿ ಸಂಸ್ಥೆ ಹೊಸ ನಿಯಮ ಜಾರಿಗೊಳಿಸಲಿದೆ. ಇದರನ್ವಯ ಪಿಂಚಣಿದಾರರು ದೇಶದ ಯಾವುದೇ ಮೂಲೆಯಿಂದಾದರೂ ಪಿಎಫ್ ವಿತ್ ಡ್ರಾ ಮಾಡಿಕೊಳ್ಳಬಹುದು. ಯಾವುದೇ ಬ್ಯಾಂಕ್‌ನಿಂದಾದರೂ ಈ ಸೌಲಭ್ಯ ಪಡೆದುಕೊಳ್ಳುವ ಅವಕಾಶ ನೌಕರರಿಗೆ ಸಿಗಲಿದೆ.

– RBI FD ನಿಯಮಗಳಲ್ಲಿ ಬದಲಾವಣೆಗಳು.!

ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 1, 2025 ರಿಂದ NBFC ಗಳು ಮತ್ತು HFC ಗಳ ಸ್ಥಿರ ಠೇವಣಿಗಳ (FD) ನೀತಿಗಳನ್ನು ಬದಲಾಯಿಸಿದೆ. ಇವುಗಳಲ್ಲಿ ಸಾರ್ವಜನಿಕರಿಂದ ಠೇವಣಿಗಳನ್ನು ತೆಗೆದುಕೊಳ್ಳುವ ನಿಯಮಗಳಲ್ಲಿನ ಬದಲಾವಣೆಗಳು, ದ್ರವ ಆಸ್ತಿಯನ್ನು ಹೊಂದಿರುವ ಶೇಕಡಾವಾರು ಮತ್ತು ಠೇವಣಿಗಳನ್ನ ವಿಮೆ ಮಾಡುತ್ತವೆ.

– ಕಾರುಗಳ ಬೆಲೆ ಹೆಚ್ಚಳ .!
ಹೊಸ ವರ್ಷ ಬಂತೆಂದರೆ ಕಾರುಗಳ ಬೆಲೆ ಹೆಚ್ಚಾಗಲಿದೆ. ಹಲವಾರು ಪ್ರಮುಖ ಕಾರು ಕಂಪನಿಗಳು ಬೆಲೆ ಏರಿಕೆಯನ್ನು ಘೋಷಿಸಿವೆ. ಇವುಗಳಲ್ಲಿ ಮಾರುತಿ ಸುಜುಕಿ, ಹುಂಡೈ, ಮಹೀಂದ್ರಾ, ಮರ್ಸಿಡಿಸ್ ಬೆಂಜ್, BMW ಮತ್ತು ಆಡಿ ಸೇರಿವೆ. ಈ ಕಂಪನಿಗಳು ಬೆಲೆಯನ್ನು ಸುಮಾರು 3% ಹೆಚ್ಚಿಸುತ್ತವೆ. ಹೊಸ ವರ್ಷಕ್ಕೆ ಸಜ್ಜಾಗುತ್ತಿರುವ ಭಾರತ ಹೊಸ ಹೊಸ ಬದಲಾವಣೆಗೂ ಸಜ್ಜಾಗುತ್ತಿದೆ. ಮಧ್ಯಮ ವರ್ಗದ ಮೇಲೆ ಪರಿಣಾಮ ಬೀರುವಂತಹ ಹಲವು ಹೊಸ ನಿಯಮಗಳು ಜ.1ರಿಂದಲೇ ಜಾರಿಯಾಗಲಿವೆ.

Categories
ತೀರ್ಥಹಳ್ಳಿ

ಸಾವಿರಾರು ಭಕ್ತರಿಂದ ತೀರ್ಥಸ್ನಾನ..!

ಸಾವಿರಾರು ಭಕ್ತರಿಂದ ತೀರ್ಥಸ್ನಾನ..!
– ಮುಂಜಾನೆಯಿಂದಲೇ ಸರದಿಯಲ್ಲಿ ನಿಂತು ತೀರ್ಥ ಸ್ನಾನ
– ಹೊರ ಊರುಗಳಿಂದಲೂ ಭಕ್ತಾದಿಗಳ ಆಗಮನ
– ಗಮನ ಸೆಳೆಯುತ್ತಿದೆ ತುಂಗಾ ತೀರದ ಆದಿ ಯೋಗಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯ ಮೊದಲ ದಿನದ ಆರಂಭವಾಗಿದೆ. ಎಳ್ಳಮಾ ವಾಸ್ಯೆಯಂದು ಸಾವಿರಾರು ಭಕ್ತರು ತುಂಗಾ ನದಿಯ ರಾಮಕುಂಡದಲ್ಲಿ ತೀರ್ಥಸ್ನಾನ ಮಾಡಿ ಪುನೀತರಾದರು. ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ನಡೆದಿದ್ದು ತೀರ್ಥಹಳ್ಳಿ ಮಾತ್ರವಲ್ಲದೆ ಹೊರ ಊರುಗಳಿಂದ ಕೂಡ ಭಕ್ತರು ಆಗಮಿಸಿ ದರ್ಶನ ಪಡೆದರು. ತುಂಗಾನದಿಯಲ್ಲಿ ಬೆಳಗಿನ ಜಾವ 5 ಗಂಟೆಗೆ ಶ್ರೀರಾಮೇಶ್ವರ ದೇವರಿಗೆ ಸಂಪ್ರೊಕ್ಷಣೆ, ಪೂಜಾ ಕಾರ್ಯದ ನಂತರ ಸಾವಿರಾರು ಭಕ್ತರು ರಾಮಕೊಂಡದಲ್ಲಿ ತೀರ್ಥಸ್ನಾನ ಮಾಡಿದರು. ತುಂಗಾನದಿಯ ಸುತ್ತಮುತ್ತ ಬಿಗಿ ಪೊಲೀಸ್‌ ಹಾಗೂ ಗೃಹರಕ್ಷಕ ದಳದ ಭದ್ರತೆ ಆಯೋಜನೆ ಮಾಡಲಾಗಿದೆ.
ತೀರ್ಥಸ್ನಾನದ ಶ್ರೀರಾಮ ಕುಂಡಕ್ಕೆ ತಹಶೀಲ್ದಾರ್ ರಂಜಿತ್‌ ಎಸ್‌,, ಸಮಿತಿ ಪ್ರಮುಖರಾದ ಸೊಪ್ಪುಗುಡ್ಡೆ ರಾಘವೇಂದ್ರ, ಸುಂದರೇಶ್, ಲಯನ್ಸ್ ಪಾಂಡುರಂಗಪ್ಪ ಸೇರಿ ಎಲ್ಲಾ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಪ್ರಮುಖರು ಇದ್ದರು. ಶ್ರೀರಾಮೇಶ್ವರ ದೇವಾಲಯದ ಪಕ್ಕದಲ್ಲಿ ಎಲ್ಲಾ ಭಕ್ತಾದಿಗಳಿಗೂ ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ

ಗಮನ ಸೆಳೆಯುತ್ತಿದೆ ತುಂಗಾ ತೀರದ ಆದಿ ಯೋಗಿ!

ತುಂಗಾ ತೀರದಲ್ಲಿ ಬೆಳಕಿನ ನಡುವೆ ಸುಂದರ ದೃಶ್ಯಗಳು ಗಮನ ಸೆಳೆಯುತ್ತಿದೆ. ಈ ವರ್ಷ ಆದಿ ಯೋಗಿ ಬೆಳಕಿನ ಅಲಂಕಾರ, ಸೇತುವೆ ಎಲ್ಲರ ಮೆಚ್ಚುಗೆ ಗಳಿಸಿದೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಸೋಮೇಶ್ವರನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ಮನೆಗೆ ಅತಿಥಿಗಳ ಆಗಮನ ಸಾಧ್ಯ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ನೀವು ಕುಟುಂಬದೊಂದಿಗೆ ಎಲ್ಲೋ ಪ್ರಯಾಣಿಸಲು ಯೋಜಿಸಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಒಂಟಿ ಜನರ ಜೀವನದಲ್ಲಿ ವಿಶೇಷ ವ್ಯಕ್ತಿ ಪ್ರವೇಶಿಸಬಹುದು. ಇಂದು ಕೆಲವು ಅಪರಿಚಿತ ಭಯದಿಂದ ತೊಂದರೆಗೊಳಗಾಗಬಹುದು. ತಾಳ್ಮೆಯಿಂದಿರಿ.

** ವೃಷಭ ರಾಶಿ :
ಇಂದು ನಿಮ್ಮ ಸೌಕರ್ಯಗಳಲ್ಲಿ ಹೆಚ್ಚಳ ಕಂಡುಬರಲಿದೆ. ನೀವು ಕೌಟುಂಬಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಬೇಕಾಗುತ್ತದೆ. ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಗಮನ ಕೊಡಿ ಮತ್ತು ಕುಟುಂಬ ಸದಸ್ಯರೊಂದಿಗೆ ಅನಗತ್ಯ ವಾದಗಳನ್ನು ತಪ್ಪಿಸಿ. ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಇಂದು ಆಪ್ತ ಸ್ನೇಹಿತರು ನಿಮ್ಮಿಂದ ಹಣವನ್ನು ಕೇಳಬಹುದು. ಕಲೆ ಮತ್ತು ಸಂಗೀತದ ಕಡೆಗೆ ಆಸಕ್ತಿ ಹೆಚ್ಚಾಗಬಹುದು. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ನಿಮಗೆ ಸರ್ಕಾರದಿಂದ ಬೆಂಬಲವೂ ಸಿಗುತ್ತದೆ.

** ಮಿಥುನ ರಾಶಿ :
ಇಂದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಸಿಕ್ಕಿಬಿದ್ದ ಹಣವನ್ನು ಹಿಂತಿರುಗಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು. ಹಣ ಮತ್ತು ಆಸ್ತಿಗೆ ಸಂಬಂಧಿಸಿದಂತೆ ವಿವಾದಗಳಿರಬಹುದು. ಕಾನೂನು ವಿಷಯಗಳಿಂದ ದೂರವಿರಿ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಬರಬಹುದು.

** ಕರ್ಕಾಟಕ ರಾಶಿ :
ಇಂದು ಉತ್ತಮ ದಿನವಾಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣವಿರುತ್ತದೆ. ಸಿಕ್ಕಿಬಿದ್ದ ಹಣವನ್ನು ಮರಳಿ ಪಡೆಯಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಸಮಸ್ಯೆಗಳಿರಬಹುದು. ಮಾತಿನಲ್ಲಿ ಮಾಧುರ್ಯ ಇರುತ್ತದೆ, ಆದರೆ ಸ್ವಯಂ ನಿಯಂತ್ರಣದಲ್ಲಿರಿ. ತಾಳ್ಮೆಯ ಕೊರತೆ ಇರುತ್ತದೆ. ಸ್ನೇಹಿತರೊಬ್ಬರು ಬರಬಹುದು.

** ಸಿಂಹ ರಾಶಿ :
ಇಂದು ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಲಿವೆ. ಕೆಲವು ವಿಷಯಗಳಲ್ಲಿ ಕುಟುಂಬ ಸದಸ್ಯರೊಂದಿಗೆ ವಿವಾದಗಳು ಉಂಟಾಗಬಹುದು, ಆದರೆ ಕೌಟುಂಬಿಕ ಜೀವನದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಿ. ಕೆಲಸದ ಸ್ಥಳದಲ್ಲಿ ಯಾವುದೇ ನಿರ್ಧಾರವನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ.

** ಕನ್ಯಾ ರಾಶಿ :
ಇಂದು ಕುಟುಂಬದ ಸದಸ್ಯರ ವಿವಾಹದಲ್ಲಿ ನೀವು ಅಡೆತಡೆಗಳನ್ನು ಎದುರಿಸಬಹುದು. ಹಣದ ವ್ಯವಹಾರ ಮಾಡುವಾಗ ಜಾಗರೂಕರಾಗಿರಿ. ಕೆಲವು ಜನರು ತಮ್ಮ ಅತ್ತೆಯ ಕಡೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಚರ್ಚೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಅನಗತ್ಯ ಕೋಪವನ್ನು ತಪ್ಪಿಸಿ. ಹೆಚ್ಚು ಸೋಮಾರಿತನ ಇರಬಹುದು. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ.

** ತುಲಾ ರಾಶಿ :
ಇಂದು ನೀವು ನಿಮ್ಮ ಕೆಲಸದ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ಆದರೆ ನಿಮ್ಮ ವ್ಯಾಪಾರ ಪಾಲುದಾರರಿಂದ ನೀವು ಮೋಸ ಹೋಗಬಹುದು. ಆಸ್ತಿ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಳ ಎಚ್ಚರಿಕೆಯಿಂದ ಇರಿಸಿ. ಹಣಕಾಸಿನ ವಿಷಯಗಳಲ್ಲಿ ಅನುಭವಿ ವ್ಯಕ್ತಿಯಿಂದ ಸಲಹೆ ಪಡೆಯಿರಿ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

** ವೃಶ್ಚಿಕ ರಾಶಿ :
ಇಂದು ಶುಭ ದಿನವಾಗಲಿದೆ. ಹೊಸ ಯೋಜನೆಯನ್ನು ಪ್ರಾರಂಭಿಸುವುದು ಒಳ್ಳೆಯದು. ನಿಮ್ಮ ಕೆಲಸವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕುಟುಂಬದವರ ಆಶೀರ್ವಾದದೊಂದಿಗೆ, ನಿಮ್ಮ ವೃತ್ತಿಜೀವನದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ.

** ಧನಸ್ಸು ರಾಶಿ :
ಇಂದು ವಿಶೇಷ ದಿನವಾಗಲಿದೆ. ಪ್ರಮುಖ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ದೀರ್ಘಾವಧಿಯ ಯೋಜನೆಗಳತ್ತ ಗಮನ ಹರಿಸಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುವರು. ಪ್ರಮುಖ ಕಾರ್ಯಗಳಲ್ಲಿ ಸ್ನೇಹಿತರು ನಿಮಗೆ ಸಹಾಯ ಮಾಡಬಹುದು. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಬಾಕಿ ಉಳಿದಿರುವ ಕೆಲಸವನ್ನು ಬುದ್ಧಿವಂತಿಕೆಯಿಂದ ಪೂರ್ಣಗೊಳಿಸುತ್ತೀರಿ.

** ಮಕರ ರಾಶಿ :
ಇಂದು ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಉದ್ಯಮಿಗಳು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕು. ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಲಿ. ಸಂವಾದದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ. ಇಂದು ಕುಟುಂಬದ ಸದಸ್ಯರಿಗೆ ಹಣಕಾಸಿನ ನೆರವು ಬೇಕಾಗಬಹುದು.

** ಕುಂಭ ರಾಶಿ :
ಇಂದು ಹೊಸ ಅವಕಾಶಗಳು ತುಂಬಿರುತ್ತವೆ. ಅಗತ್ಯ ವಸ್ತುಗಳು ದೊರೆಯಲಿವೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ನೀವು ಆಸ್ತಿಯನ್ನು ಆನುವಂಶಿಕವಾಗಿ ಪಡೆಯಬಹುದು. ಆದರೆ, ಕೆಲವು ಕಚೇರಿ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಮಾನಸಿಕ ಶಾಂತಿ ಇರುತ್ತದೆ, ಆದರೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳ ಪ್ರಭಾವವೂ ಇರಬಹುದು.

** ಮೀನ ರಾಶಿ :
ಇಂದು ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಭವಿಷ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ವ್ಯಾಪಾರ ಪರಿಸ್ಥಿತಿಯಲ್ಲಿ ಏರಿಳಿತಗಳು ಸಾಧ್ಯ. ಪೋಷಕರ ಆರೋಗ್ಯದ ಕಡೆ ಗಮನ ಕೊಡಿ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಇಂದು ಕೆಲವು ಜನರು ಉತ್ತಮ ಪ್ಯಾಕೇಜ್‌ನೊಂದಿಗೆ ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಹಳೆಯ ಸ್ನೇಹಿತರ ಭೇಟಿ ನಿಮ್ಮ ಮುಖದಲ್ಲಿ ನಗು ತರಿಸುತ್ತದೆ.

Categories
ರಾಜ್ಯ

ಟಾಪ್ 3 ನ್ಯೂಸ್

ಟಾಪ್ 3 ನ್ಯೂಸ್
– ಹುಬ್ಬಳ್ಳಿ: ಸಿಲಿಂಡರ್​ ಸ್ಫೋಟದಿಂದ 6 ಮಂದಿ ಅಯ್ಯಪ್ಪ ಮಾಲಾಧಾರಿಗಳ ಸಾವು..!
– ಕಾಸರಗೋಡು: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತ್ಯು!
– ಮಂಡ್ಯ: ಪ್ರೇಯಸಿ ಮನೆ ಮುಂದೆಯೇ ಜಿಲೆಟಿನ್ ಸ್ಫೋಟಿಸಿಕೊಂಡು ಪ್ರಿಯಕರ ಆತ್ಮಹತ್ಯೆ.

NAMMUR EXPRESS NEWS
ಹುಬ್ಬಳ್ಳಿ:
ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಸಂಭವಿಸಿದ್ದ ಸಿಲಿಂಡರ್​ ಸ್ಫೋಟದಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳುಗಾಯಗೊಂಡು ಕಿಮ್ಸ್ ​ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ 6 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24), ಶಂಕರ್ ಚವ್ಹಾಣ್ (29) ಮತ್ತು ಮಂಜು ವಾಗ್ಮೋಡೆ (22) ಮೃತ ದುರ್ದೈವಿಗಳು. ಮೂವರಿಗೆ ಚಿಕಿತ್ಸೆ ಮುಂದುವರೆದಿದೆ. ಮೃತರಾದ ನಿಜಲಿಂಗಪ್ಪ ಬೇಪುರಿಯ ದೇಹ ಶೇ.86 ರಷ್ಟು, ಸಂಜಯ್ ಸವದತ್ತಿಯ ದೇಹ ಶೇ.80 ರಷ್ಟು, ರಾಜು ಮೂಗೇರಿಯ ದೇಹ ಶೇ.74 ರಷ್ಟು, ಲಿಂಗಾರಾಜು ಬೀರನೂರ ದೇಹ ಶೇ.86 ರಷ್ಟು, ಶಂಕರ್ ಚವ್ಹಾಣ್ ದೇಹ ಶೇ.99 ರಷ್ಟು ಮತ್ತು ಮಂಜು ವಾಗ್ಮೋಡೆ ದೇಹ ಶೇ.70 ರಷ್ಟು ಸುಟ್ಟಿತ್ತು. ಇನ್ನೂ ಚಿಂತಾಜನಕ ಸ್ಥಿತಿಯಲ್ಲಿರುವ ಪ್ರಕಾಶ್ ಬಾರಕೇರ್​ ದೇಹ ಶೇ91 ರಷ್ಟು, ತೇಜಸ್ವರ್ ಸಾತರೆಯ ದೇಹ ಶೇ74 ರಷ್ಟು ಸುಟ್ಟಿದೆ. ವಿನಾಯಕ್ ಭಾರಕೇರ್ ದೇಹ ಶೇ25 ರಷ್ಟು ಸುಟ್ಟಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಹುಬ್ಬಳ್ಳಿಯ ಉಣಕಲ್ ಸಮೀಪ ಇರುವ ಅಚ್ಚವ್ಚನ ಕಾಲೋನಿಯಲ್ಲಿ ಡಿಸೆಂಬರ್​ 22 ರಂದು ಬೆಳಗಿನ ಜಾವ ಸಿಲಿಂಡರ್ ಸ್ಪೋಟಗೊಂಡು 9 ಜನ ಮಾಲಾಧಾರಿಗಳು ಗಾಯಗೊಂಡಿದ್ದರು. 9 ಜನರಿಗೆ ಹುಬ್ಬಳ್ಳಿಯ‌ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗತಿತ್ತು. ಇವರಲ್ಲಿ 6 ಜನರು ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಿಸದೆ ಗುರುವಾರ ರಂದು ನಿಜಲಿಂಗಪ್ಪ ಬೇಪುರಿ, ಸಂಜಯ್​​ ಸವದತ್ತಿ ಮೃತಪಟ್ಟಿದ್ದರು. ಶುಕ್ರವಾರ (ಡಿ.27) ರಂದು ರಾಜು ಮೂಗೇರಿ ಮತ್ತು ಲಿಂಗರಾಜ ಬೀರನೂರ ಸಾವಿಗೀಡಾಗಿದ್ದರು.ಡಿ.29 ಶಂಕರ್ ಚವ್ಹಾಣ್ ಮತ್ತು ಮಂಜು ವಾಗ್ಮೋಡೆ ಮೃತಪಟ್ಟಿದ್ದಾರೆ. ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿದೆ. ಬೆಂಗಳೂರಿನಿಂದ ತಜ್ಞ ವೈದ್ಯರನ್ನು ಕರೆಸಿ ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದಲ್ಲದೇ, ಕಿಮ್ಸ್ ವೈದ್ಯರು ರಾಜ್ಯ ಮತ್ತು ದೇಶದ ವಿವಿಧ ಭಾಗದ ತಜ್ಞ ವೈದ್ಯರಿಂದ ಮಾಹಿತಿ ಪಡೆದುಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಮಾಲಾಧಾರಿಗಳಿಗೆ ಶೇ70 ಕ್ಕಿಂತ ಹೆಚ್ಚು ಸುಟ್ಟ ಗಾಯವಾದ ಕಾರಣ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. 9 ಜನ ಮೂಲಾಧಾರಿಗಳ ಪೈಕಿ 12 ವರ್ಷದ ವಿನಾಯಕ್ ಬಾರಕೇರ ಮಾತ್ರ ಚಿಕಿತ್ಸೆಗೆ ಸ್ಪಂದಿಸಿದ್ದಾನೆ. ಹೀಗಾಗಿ, ಬಾಲಕನನ್ನು ಐಸೋಲೇಶನ್ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

– ಕಾಸರಗೋಡು: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತ್ಯು!

ಕಾಸರಗೋಡು: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಎರಿಂಜಿಪುಳ ಪಯಸ್ವಿನಿ ನದಿಯಲ್ಲಿ ನಡೆದಿದೆ. ಮೃತರನ್ನು ಸಿದ್ದೀಕ್ ಅವರ ಪುತ್ರ ರಿಯಾಜ್ (17), ಅಶ್ರಫ್ ಅವರ ಪುತ್ರ ಯಾಸೀನ್ (13) ಮತ್ತು ಮಜೀದ್ ಅವರ ಪುತ್ರ ಸಮದ್ (13) ಎಂದು ಗುರುತಿಸಲಾಗಿದೆ. ಮೃತ ಮೂವರೂ ಅವರ ಸಹೋದರರ ಮಕ್ಕಳಾಗಿದ್ದಾರೆ. ಮಂಜೇಶ್ವರದಲ್ಲಿ ಪ್ಲಸ್ ಒನ್ ಓದುತ್ತಿರುವ ರಿಯಾಝ್ ಶುಕ್ರವಾರ ಎರಿಂಜಿಪುಳ ಬಳಿಯ ತನ್ನ ಪೂರ್ವಜರ ಮನೆಗೆ ಬಂದಿದ್ದು. ಮೂವರು ಮಕ್ಕಳು ಮಧ್ಯಾಹ್ನ ತಮ್ಮ ಮನೆಯ ಸಮೀಪ ಇರುವ ಪಯಸ್ವಿನಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಸಂದರ್ಭ ಈ ದುರಂತ ಸಂಭವಿಸಿದೆ. ಕಾಸರಗೋಡು ಮತ್ತು ಕುಟ್ಟಿಕೋಲ್ ನ ಅಗ್ನಿಶಾಮಕ ಮತ್ತು ಸ್ಕೂಬಾ ತಂಡಗಳ ಶೋಧಕಾರ್ಯದಿಂದ ಮೂವರ ಬಾಲಕರ ಮೃತ ದೇಹ ಪತ್ತೆಯಾಗಿದೆ. ಮೃತದೇಹವನ್ನು ಚೆರ್ಕಳ ಕೆ.ಕೆ.ಪುರಂ ಹೊರವಲಯದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

– ಮಂಡ್ಯ: ಪ್ರೇಯಸಿ ಮನೆ ಮುಂದೆಯೇ ಜಿಲೆಟಿನ್ ಸ್ಫೋಟಿಸಿಕೊಂಡು ಪ್ರಿಯಕರ ಆತ್ಮಹತ್ಯೆ

ಮಂಡ್ಯ : ಪ್ರೀತಿಸುತ್ತಿದ್ದ ಅಪ್ರಾಪ್ತೆ ಮನೆ ಮುಂದೆಯೇ ಜಿಲೆಟಿನ್ ಸ್ಫೋಟಿಸಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಗ್ರಾಮವೊಂದರಲ್ಲಿ‌ ಶನಿವಾರ ನಡೆದಿದೆ. ರಾಮಚಂದ್ರು (21) ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ. ಕಲ್ಲು ಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಫೋಟಿಸಿಕೊಂಡು ರಾಮಚಂದ್ರು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಿಲೆಟಿನ್ ಸ್ಫೋಟಕ್ಕೆ ಯುವಕನ ಹೊಟ್ಟೆಯ ಭಾಗ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಒಂದು ವರ್ಷದ ಹಿಂದೆ ಅಪ್ರಾಪ್ತೆ ಕರೆದೊಯ್ದ ಹಿನ್ನೆಲೆಯಲ್ಲಿ ರಾಮಚಂದ್ರು ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿತ್ತು. ಫೋಕ್ಸೋ ಕೇಸ್‌ನಲ್ಲಿ 6 ತಿಂಗಳು ಜೈಲುವಾಸ ಅನುಭವಿಸಿದ್ದ. ಬಳಿಕ 2 ಕುಟುಂಬಗಳ ರಾಜಿ ಸಂಧಾನ ಬಳಿಕ ಕೇಸ್ ವಾಪಾಸ್ ಪಡೆಯಲಾಗಿತ್ತು. ನಂತರ ಅಪ್ರಾಪ್ತ ಪ್ರಿಯತಮೆ ರಾಮಚಂದ್ರನ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಮನನೊಂದ ರಾಮಚಂದ್ರ ನಿನ್ನೆ ಆಕೆಯ ಮುನೆಯ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಲ್ಲುಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಪೋಟಿಸಿಕೊಂಡು ಸೂಸೈಡ್‌ ಮಾಡಿಕೊಂಡಿದ್ದು, ಸ್ಪೋಟಕದ ಬಗ್ಗೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳಕ್ಕೆ ಬಾಂಬ್ ಪತ್ತೆ ಹಾಗೂ ‌ನಿಷ್ಕ್ರಿಯ ದಳ‌ ದೌಡಾಯಿಸಿ ಸ್ಫೋಟಕ್ಕೆ ಬಳಸಿರುವ ವಸ್ತು ಹಾಗೂ ತೀವ್ರತೆ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.

Categories
ಕರಾವಳಿ

8 ನೇ ವರ್ಷದ ಅದ್ದೂರಿ ಮಂಗಳೂರು ಕಂಬಳ..

8 ನೇ ವರ್ಷದ ಅದ್ದೂರಿ ಮಂಗಳೂರು ಕಂಬಳ..
– ರಾಮ ಲಕ್ಷ್ಮಣ ಜೋಡುಕೆರೆಯಲ್ಲಿ ಪಂದ್ಯಾಟ ಆಯೋಜನೆ
– ಸಂಸದ ಬ್ರಿಜೇಶ್ ಚೌಟಾ ಸಾರಥ್ಯದಲ್ಲಿ ನಡೆವ ಕಂಬಳ

NAMMUR EXPRESS NEWS
ಮಂಗಳೂರು:
ದಕ್ಷಿಣ ಕನ್ನಡ ಸಂಸದ ಹಾಗೂ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ.ಬ್ರಿಜೇಶ್ ಚೌಟ ಸಾರಥ್ಯದ ಬಂಗ್ರಕೂಳೂರಿನ ಗೋಲ್ಡಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡು ಕರೆಯಲ್ಲಿ 8ನೇ ವರ್ಷದ ಮಂಗಳೂರು ಕಂಬಳಕ್ಕೆ ಶನಿವಾರ ಚಾಲನೆ ದೊರೆತಿದೆ. ಕಂಬಳಕ್ಕೆ ಕಾಶ್ಮೀರದ ರಚೌರಿಯಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ಕ್ಯಾ.ಎಂ.ವಿ. ಪ್ರಾಂಜಲ್ ಅವರ ತಂದೆ ಎಂಆರ್ ಪಿಎಲ್ ನ ನಿವೃತ್ತ ಆಡಳಿತ ನಿರ್ದೇಶಕ ಎಂ. ವೆಂಕಟೇಶ್ ಅವರು ಚಾಲನೆ ನೀಡಿದ್ದಾರೆ.