Categories
ರಾಜ್ಯ

ಬಾಂಗ್ಲಾದ ಹಿಂದೂಗಳನ್ನು ರಕ್ಷಿಸಲು ದೇಶಾದ್ಯಂತ ಹೋರಾಟ

ಬಾಂಗ್ಲಾದ ಹಿಂದೂಗಳನ್ನು ರಕ್ಷಿಸಲು ದೇಶಾದ್ಯಂತ ಹೋರಾಟ
– ಡಿ.3,4ಕ್ಕೆ ಹಿಂದೂಪರ ಸಂಘಟನೆಗಳಿಂದ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

NAMMUR EXPRESS NEWS
ಬೆಂಗಳೂರು: ಬಾಂಗ್ಲಾದಲ್ಲಿ ಉದ್ಭವಿಸಿರುವ ಅರಾಜಕತೆಯಿಂದ ಅಲ್ಲಿನ ಹಿಂದೂಗಳ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಿಂದೂಪರ ಸಂಘಟನೆಗಳು ದೇಶಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 3 ಮತ್ತು 4 ರಂದು ಎಲ್ಲಾ ರಾಜ್ಯಗಳಲ್ಲೂ ಬೃಹತ್ ಪ್ರತಿಭಟನೆ ನಡೆಯಲಿದ್ದು ಈ ಮೂಲಕ ಬಾಂಗ್ಲಾದಲ್ಲಿ ನೆಲಸಿರುವ ಹಿಂದೂಗಳನ್ನು ರಕ್ಷಿಸಲು ಆಗ್ರಹಿಸಲಾಗುವುದು. ಬಾಂಗ್ಲಾದಲ್ಲಿ ದಿನೇ ದಿನೇ ಹಿಂದೂಗಳ ಮೇಲೆ ಹಲ್ಲೆ,ಹತ್ಯೆ ಘಟನೆಗಳು ಹೆಚ್ಚಾಗುತ್ತಿದ್ದು ಇದನ್ನೆಲ್ಲ ನಿಯಂತ್ರಿಸಬೇಕಾದ ಸರ್ಕಾರವೇ ಕೈಕಟ್ಟಿ ಕುಳಿತಿದ್ದು ಕ್ರಮಕ್ಕಾಗಿ ಹೋರಾಟ ನಡೆಸಲಿವೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಯಲಿದೆ.

 

Categories
ಮಲ್ನಾಡ್

ಅಕಾಲಿಕ ಮಳೆಯಿಂದ ರೈತರಿಗೆ ಸಂಕಷ್ಟ!

ಅಕಾಲಿಕ ಮಳೆಯಿಂದ ರೈತರಿಗೆ ಸಂಕಷ್ಟ!
– ಮಲೆನಾಡಿನಲ್ಲಿ ಭತ್ತ, ಅಡಿಕೆ ರೈತರಿಗೆ ಸಾಕಷ್ಟು ತೊಂದರೆ
– ಭತ್ತದ ಬೆಳೆ ಕಟಾವು ಮಾಡಲು ಮಳೆ ಬಿಡುತ್ತಿಲ್ಲ
– ಅಡಿಕೆ ಕೊಯ್ಲು ತಡ: ಅಡಿಕೆ ಹಣ್ಣಾಗಿ ನಷ್ಟ

NAMMUR EXPRESS NEWS
ಮಲೆನಾಡಿನ ಪ್ರಮುಖ ಬೆಳೆಗಳೆಂದರೆ ಅಡಿಕೆ ಹಾಗೂ ಭತ್ತ. ಹೆಚ್ಚೂ ಕಡಿಮೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಅರ್ಧಕರ್ಧ ಭಾಗದ ಜನರ ಜೀವನ ನಿಂತಿರುವುದೇ ಅಡಿಕೆ ಬೆಳೆ ಮೇಲೆ. ಸದ್ಯ ಮಲೆನಾಡು ಜಿಲ್ಲೆಯಲ್ಲಿ ಅಡಿಕೆ, ಭತ್ತ, ಸೇರಿದಂತೆ ಎಲ್ಲಾ ಬೆಳೆಗಳು ಕಟಾವಿಗೆ ಬಂದಿದ್ದವು. ಆದರೆ ಅನಿರೀಕ್ಷಿತ ಮಳೆಯಿಂದಾಗಿ ಯಾವುದೇ ಬೆಳೆಯನ್ನು ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಮಳೆ ಕಡಿಮೆ ಆಗಬಹುದು ಅನ್ನೋ ಕಾರಣಕ್ಕೆ ಕೊಯ್ಲು ಮಾಡಿದ್ದವರೂ ಸಹ
ಬೆಳೆಗಳನ್ನು ಸಂಸ್ಕರಣೆ ಮಾಡಲಾಗದೇ ಒದ್ದಾಡುತ್ತಿದ್ದಾರೆ. ವರ್ಷವಿಡೀ ಅನಾಕೂಲಕರವಾದ ವಾತಾವರಣ ಸೃಷ್ಟಿಸಿರುವ ಮಳೆಗೆ ಮಲೆನಾಡಿನ ರೈತರು ಸಂಪೂರ್ಣವಾಗಿ ಬೆಳೆ ಕಳೆದುಕೊಳ್ಳುವ ಆಂತಕದಲ್ಲಿದ್ದಾರೆ. ಅಡಿಕೆ ಕೊಯ್ಲು, ಒಣಗಿಸಲು ಪರದಾಟ ನಡೆಸುತ್ತಿದ್ದಾರೆ.

ಅಡಿಕೆ, ಭತ್ತದ ಕೊಯ್ಲು ಒಂದು ತಿಂಗಳು ತಡ!

ನವೆಂಬರ್ ತಿಂಗಳ ಆರಂಭದಿಂದಲೇ ಮಲೆನಾಡಿನಲ್ಲಿ ಅಡಿಕೆ ಹಾಗೂ ಭತ್ತದ ಕೊಯ್ಲು ಆರಂಭವಾಗುತ್ತಿತ್ತು, ಆದರೆ ನವೆಂಬರ್ ತಿಂಗಳ ಆರಂಭದಿಂದಲೂ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಯಾವುದೇ ಬೆಳೆಗಳನ್ನು ಕೊಯ್ಲು ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಡಿಸೆಂಬರ್ ತಿಂಗಳು ಬಂದರೂ ಕೂಡ ಭತ್ತದ ಬೆಳೆ ಕಟಾವು ಮಾಡದಿದ್ದರೆ ಭತ್ತ ಉದುರಿ ಹೋಗುತ್ತದೆ. ಭತ್ತದ ಪೈರನ್ನು ಕಟಾವು ಮಾಡಲು ಮಳೆ ಬಿಡುತ್ತಿಲ್ಲ. ಮಳೆಯ ಮಧ್ಯೆಯೂ ಹೇಗೋ ಭತ್ತದ ಬೆಳೆಯನ್ನ ಕಟಾವು ಮಾಡಿದ ರೈತರ ಸ್ಥಿತಿಯಂತೂ ಹೇಳತೀರದಾಗಿದೆ. ಭತ್ತ ಬೆಳೆ ಕಟಾವು ಮಾಡಿ ಗದ್ದೆಯಲ್ಲೇ ಇದೆ. ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಕೊಯ್ದು ಹಾಕಿರುವ ಭತ್ತದ ಫಸಲು ಗದ್ದೆಯಲ್ಲೇ ಮೊಳಕೆಯೊಡೆಯುತ್ತಿದೆ. ಇದರಿಂದಾಗಿ ರೈತರಿಗೆ ಒಂದಾದ ಮೇಲೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಾ ಇದೆ ಅಕಾಲಿಕವಾದ ಮಳೆಯಿಂದ ಇದಕ್ಕೆ ಏನು ಪರಿಹಾರ ಎಂಬುದು ದಿಕ್ಕು ತೋಚದಂತಹ ಪರಿಸ್ಥಿತಿಗೆ ರೈತರು ಬಂದಿದ್ದಾರೆ.

Categories
ರಾಜ್ಯ

ರಾಜ್ಯದಲ್ಲಿ ಹೆಚ್ಚಾಯ್ತು ರಸ್ತೆ ಗುಂಡಿ: ನೂರಾರು ಸಾವು!

ರಾಜ್ಯದಲ್ಲಿ ಹೆಚ್ಚಾಯ್ತು ರಸ್ತೆ ಗುಂಡಿ: ನೂರಾರು ಸಾವು!
– ಗುಂಡಿಬಿದ್ದ ರಸ್ತೆ ಸರಿ ಮಾಡಿಸಲು ಹಣದ ಸಂಕಟ
– ಮೃತ್ಯು ಕೂಪದಂತಾಗಿವೆ ಪಟ್ಟಣ, ಹಳ್ಳಿಯ ರಸ್ತೆಗಳು!

ವಿಶೇಷ ವರದಿ: ರಂಜಿತ್ ಬೆಂಗಳೂರು

NAMMUR EXPRESS NEWS
ಬೆಂಗಳೂರು: ರಸ್ತೆಗಳು ಜನರ ಸುಗಮ ಜೀವನಕ್ಕೆ ಬಹಳ ಪ್ರಮುಖ ಸೌಲಭ್ಯಗಳಲ್ಲಿ ಒಂದು. ಉತ್ತಮ ರಸ್ತೆ ಸಂಪರ್ಕವು ವ್ಯಾಪಾರ ವಾಣಿಜ್ಯ ಮತ್ತು ಪ್ರವಾಸೋದ್ಯ ಅಭಿವೃದ್ಧಿಗೆ ಕಾರಣವಾಗುತ್ತದೆ. ಜತೆಗೆ ಜನರ ಆರೋಗ್ಯಕ್ಕೂ ಪೂರಕವಾಗಿದೆ. ಆದರೆ ಇತ್ತೀಚಿಗೆ ರಸ್ತೆ ವ್ಯವಸ್ಥೆಯು ಕಳಪೆ ಗುಣಮಟ್ಟದ ಕಾಮಗಾರಿಗಳಿಂದ ವರ್ಷದೊಳಗೆ ಹಾಳಾಗುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ವಹಿಸದಿರುವುದು ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯು ಗ್ರಾಮೀಣ ಸಮುದಾಯವನ್ನು ನಗರಕ್ಕೆ ಸಂಪರ್ಕಿಸುವ ಕೊಂಡಿಯಾಗಿದ್ದು ಅಗತ್ಯ ಸೇವೆಗಗಳಿಗೆ ಕೃಷಿ ಉತ್ಪನ್ನ ಗಳನ್ನು ಮಾರುಕಟ್ಟೆಗೆ ಸಾಗಿಸಲು, ವ್ಯಾಪಾರ ವಹಿವಾಟಿಗೆ,ಸರುಕು- ಸೇವೆಗಳ ಸಾಗಾಣಿಕೆಗೆ ಸಾರ್ವಜನಿಕ ಸಾರಿಗೆ ಸಂಪರ್ಕಕ್ಕೆ ಅಗತ್ಯವಾಗಿದೆ.

ರಸ್ತೆ ಅಪಘಾತಕ್ಕೆ ಪ್ರತಿ ದಿನ ನೂರಾರು ಮಂದಿ ಸಾವು!

ರಸ್ತೆ ಅವ್ಯವಸ್ಥೆಯಿಂದ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಅತಿ ಹೆಚ್ಚಾಗಿ ಸಂಭವಿಸುತ್ತಿದ್ದು ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಉತ್ತಮ ರಸ್ತೆ ದೇಶದ ಪ್ರಗತಿಯ ಸಂಕೇತ. ಆದರೆ ರಾಜ್ಯದ ಬಹುತೇಕ ಕಡೆ ರಸ್ತೆಯು ಗುಂಡಿಗಳಿಂದಲೇ ತುಂಬಿದ್ದು ಜನಸಾಮಾನ್ಯರು ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸುತ್ತಿದ್ದು ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ.

ಶಾಲಾ ಮಕ್ಕಳಿಗೂ ತೊಂದರೆ: ಕೇಳೋರು ಯಾರು?

ಶಾಲಾ ವಾಹನಗಳು ಇದೇ ರಸ್ತೆಯಲ್ಲಿ ಚಲಿಸುತ್ತಿದ್ದು ಮಕ್ಕಳಿಗೆ, ಕೆಲಸಕ್ಕೆ ಹೋಗುವವರಿಗೆ, ವಸ್ತುಗಳನ್ನು ಸಾಗಿಸಲು ಸಮಸ್ಯೆಯಾಗುತ್ತಿದೆ ರಸ್ತೆಗಳು ಅತ್ಯಂತ ಅಪಾಯಕಾರಿಯಾಗಿದ್ದು ರಸ್ತೆ ಅಪಘಾತಕ್ಕೆ ಕಾರಣವಾಗಿದೆ. ರಾತ್ರಿ ಸಮಯದಲ್ಲಿ ಪ್ರಯಾಣಿಕರಿಗೆ ಗುಂಡಿಗಳು ಕಾಣದೆ ಅಪಾಯ ಉಂಟಾಗುತ್ತಿದೆ. ವಿಕೋಪದಿಂದ, ಕಳಪೆ ಗುಣಮಟ್ಟದ ಕಾಮಗಾರಿಗಳಿಂದ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ.
ಗುಂಡಿ ಮುಚ್ಚಿ ಮರು ಡಾಂಬರೀಕರಣ ಮಾಡಲು ಜನರ ಒತ್ತಾಯ ಕೇಳಿ ಬಂದಿದೆ. ಅಚ್ಚರಿ ಎಂದರೆ ರಾಜಧಾನಿಯ ಅನೇಕ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿದ್ದು ಜನ ತೊಂದರೆ ಅನುಭವಿಸುತ್ತಿದ್ದಾರೆ.

Categories
ತೀರ್ಥಹಳ್ಳಿ

18ನೇ ವರ್ಷದ ಶ್ರೀ ಸುಬ್ರಮಣ್ಯ ಷಷ್ಠಿ ದೀಪೋತ್ಸವ ಹಾಗೂ ಜಾತ್ರಾ ಮಹೋತ್ಸವ!!

18ನೇ ವರ್ಷದ ಶ್ರೀ ಸುಬ್ರಮಣ್ಯ ಷಷ್ಠಿ ದೀಪೋತ್ಸವ ಹಾಗೂ ಜಾತ್ರಾ ಮಹೋತ್ಸವ!!
– ವಿದ್ಯುತ್ ದೀಪಾಲಂಕಾರ ಹಾಗೂ ವಿಶೇಷ ಹೂವಿನ ಅಲಂಕಾರ!!
– 5 ಮೇಳಗಳ ಕೂಡಾಟ ಯಕ್ಷಗಾನ, 150 ಜನರಿಂದ ಸಾಂಸ್ಕೃತಿಕ ಕಾರ್ಯಕ್ರಮ!!

NAMMUR EXPRESS NEWS
ಶ್ರೀ ಕ್ಷೇತ್ರ ನಾಗದೇವತೆ ರಾಮನಸರ-ಹುಂಚದಕಟ್ಟೆ-ತೀರ್ಥಹಳ್ಳಿ ತಾಲ್ಲೂಕಿನಲ್ಲಿ
ಡಿ.07 ರ ಶನಿವಾರದಂದು18ನೇ ವರ್ಷದ ಸುಬ್ರಮಣ್ಯ ಷಷ್ಠಿ ದೀಪೋತ್ಸವ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಡಿ.07 ರ ಶನಿವಾರ ಬೆಳಿಗ್ಗೆ 5 ಗಣಪತಿಗಳಿಗೆ ಗಣಹೋಮ ಕಲಾತತ್ವ, ಅಧಿವಾಸ ಹೋಮ, ಪಂಚ ವಿಂಶಶಿ ಕಲಶತತ್ವ 108 ಕಲವಾಭಿಷೇಕ ಹಾಗೂ ಪೂರ್ಣಾಹುತಿ, ಮಹಾಮಂಗಳಾರತಿ ನಾಗರವಾದ್ಯ, ಚಂಡೆ ಇತರೆ ವಾದ್ಯದೊಂದಿಗೆ ನಾಗದೇವತೆಯ ದರ್ಶನ ಹಾಗೂ ಪ್ರಸಾದ ವಿನಿಯೋಗ, ದೇವತಾ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾ ಮಂಗಳಾರತಿ, ಜೊತೆಗೆ ಶ್ರೀಕ್ಷೇತ್ರ ಮಂದಾರ್ತಿ ಇವರಿಂದ 5 ಮೇಳಗಳ ಕೂಡಾಟ ಯಕ್ಷಗಾನ 2 ಗಂಟೆಯಿಂದ ನಡೆಯಲಿದ್ದು, 150 ಜನರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅನ್ನಸಂತರ್ಪಣೆ ಮಧ್ಯಾಹ್ನ 1:30 ರಿಂದ ರಾತ್ರಿ 1:30ರವರೆಗೆ 70 ಕಲಾ ತಂಡದಿಂದ ಕಲಾ ಪ್ರದರ್ಶನ ಹಾಗೂ 3:00 ಗಂಟೆಯಿಂದ ರಾಜಬೀದಿ ಉತ್ಸವ ಮತ್ತು ವಿವಿಧ ಕಾರ್ಯಕ್ರಮಗಳು ಜರುಗಲಿದೆ. ಸಂಜೆ 06:00ರಿಂದ ಆಶ್ಲೇಷ ಬಲಿ ಹಾಗೂ ಮಹಾಮಂಗಳಾರತಿ ಮತ್ತು ದೀಪಹಚ್ಚುವ ಕಾರ್ಯಕ್ರಮ ಕರ್ಪೂರ ಬೆಳಕಿನೊಂದಿಗೆ ನಾಗರವಾದ್ಯ, ಚಂಡೆ ಇತರೆ ವಾದ್ಯದೊಂದಿಗೆ ನಾಗದೇವತೆಯ ದರ್ಶನ, ಪ್ರಸಾದವಿನಿಯೋಗ ಹಾಗೂ ಅನ್ನಸಂತರ್ಪಣೆ ಜೊತೆಗೆ ರಾತ್ರಿ 08:00ಕ್ಕೆ ಆಕರ್ಷಕ ಹಸಿರು ಸಿಡಿಮದ್ದಿನ ಭರ್ಜರಿ ಪ್ರದರ್ಶನ, ಇತರೆ ಧಾರ್ಮಿಕ ಕಾರ್ಯಕ್ರಮಗಳು, ಭಕ್ತಾಧಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೇವೆ ಮಾಡುವುದರೊಂದಿಗೆ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ನಾಗದೇವತೆಯ “ಸಿರಿಮುಡಿಗಂಧ” ಪ್ರಸಾದ ಸ್ವೀಕರಿಸಿ, ಕೃತಾರ್ಥರಾಗಬೇಕಾಗಿ ಈ ಮೂಲಕ ಕೋರಲಾಗಿದೆ. ಭಕ್ತಾಧಿಗಳಿಂದಲೇ ನಡೆಯುವಂತಹ ಸ್ಥಳವೇ ರಾಮನಸರ.

ಕಾರ್ಯಕ್ರಮದ ಯಾವುದೇ ರೀತಿಯ ಮಾಹಿತಿಗಾಗಿ ವ್ಯವಸ್ಥಾಪಕರು : ಶ್ರೀಮತಿ ಸುನಂದಮ್ಮ ಮತ್ತು ಮಕ್ಕಳು.
ರಾಮನಸರ-ಹುಂಚದಕಟ್ಟೆ-ತೀರ್ಥಹಳ್ಳಿ ತಾಲ್ಲೂಕು
7204237965, 9902190615 ಸಂಪರ್ಕಿಸಬಹುದಾಗಿದೆ.

Categories
ರಾಜ್ಯ

ಅಯ್ಯೋ ದೇವ್ರೇ ಫೆಂಗಲ್ ಅಬ್ಬರ ಶುರು!

ಅಯ್ಯೋ ದೇವ್ರೇ ಫೆಂಗಲ್ ಅಬ್ಬರ ಶುರು!
– ರಾಜ್ಯದ 10 ಜಿಲ್ಲೆಗಳ ಜಿಲ್ಲಾಡಳಿತಗಳ ಸಿದ್ಧತೆ
– ಎಲ್ಲೆಲ್ಲಿ ಭಾರೀ ತೊಂದರೆ?: ಜನರಿಗೆ ಎಚ್ಚರಿಕೆ
– 10 ಜಿಲ್ಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

NAMMUR EXPRESS NEWS
ಬೆಂಗಳೂರು: ಫೆಂಗಲ್ ಚಂಡಮಾರುತ ಕರಾವಳಿಗೆ ಅಪ್ಪಳಿಸಿದ್ದು, ಡಿಸೆಂಬರ್ 2ರ ಸಂಜೆಯಿಂದ ಧಾರಾಕಾರ ಮಳೆ ಸುರಿಯಲು ಆರಂಭವಾಗಿದೆ. ಗುಡುಗು ಮಿಂಚು ಸಹಿತವಾಗಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ, ಡಿಸೆಂಬರ್ 3 ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಡಿಸೆಂಬರ್ 3 ರಂದು ಆರಂಜೆ ಅಲರ್ಟ್ ಘೋಷಣೆ ಮಾಡಲಾಗಿದ್ದು, ಡಿಸೆಂಬರ್ 4ರ ಬಳಿಕ ಚಂಡಮಾರುತದ ಎಫೆಕ್ಟ್ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಯಾವ ಯಾವ ಜಿಲ್ಲೆಯಲ್ಲಿ ತೊಂದರೆ?

ಕರ್ನಾಟಕದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ರಾಮನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಪರಿಣಾಮ ಆಗಲಿದೆ ಎಂಬ ಮುನ್ಸೂಚನೆ ಇದೆ. ಇನ್ನು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉತ್ತರಕನ್ನಡ, ತುಮಕೂರು, ಹಾವೇರಿ ಜಿಲ್ಲೆಗಳ ಮೇಲೂ ನಿಗಾ ಇಡುವಂತೆ ಕೇಂದ್ರ ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ, ಫೆಂಗಲ್‌ನಿಂದ ಹೆಚ್ಚು ಮಳೆಯಾಗಬಹುದು ಎಂಬ ಮುನ್ಸೂಚನೆ ಇರುವ 10 ಜಿಲ್ಲೆಗಳ ಜಿಲ್ಲಾಡಳಿತಗಳು ಮುಂಜಾಗ್ರತಾ ಕ್ರಮವಾಗಿ ಶಾಲೆ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಇಂದು ಶಾಲೆಗಳಿಗೆ ರಜೆ ನೀಡಲಾಗಿದೆ.

Categories
ಶಿವಮೊಗ್ಗ

ಫೆಂಗಲ್ ಚಂಡಮಾರುತದಿಂದ ಶಿವಮೊಗ್ಗ ಜಿಲ್ಲಾದ್ಯಂತ ಡಿ.3 ರಂದು ರಜೆ

ಫೆಂಗಲ್ ಚಂಡಮಾರುತದಿಂದ ಶಿವಮೊಗ್ಗ ಜಿಲ್ಲಾದ್ಯಂತ ಡಿ.3 ರಂದು ರಜೆ
– ಶಾಲಾ , ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ
– ಶಿವಮೊಗ್ಗ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್

NAMMUR EXPRESS NEWS
ಶಿವಮೊಗ್ಗ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಹಿನ್ನಲೆಯಲ್ಲಿ ಅಧಿಕ ಮಳೆ ಸಂಭವವಾಗುವ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ಪದವಿ, ಪದವಿ ಪೂರ್ವ ಕಾಲೇಜುಗಳು, 1-10 ನೇ ತರಗತಿ ಮತ್ತು ಅಂಗನವಾಡಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಈ ಕುರಿತು ಪ್ರಭಾರ ಜಿಲ್ಲಾ ಪಂಚಾಯತ್ ಸಿಇಒ ಹೇಮತ್ ಕುಮಾರ್ ಅಧಿಕ ಮಳೆ ಹಿನ್ನಲೆಯಲ್ಲಿ ರಜೆ ಘೋಷಿಸಿದ್ದಾರೆ. ಮುಂದಿನ ಎರಡು ದಿನಗಳು ಅಧಿಕ ಮಳೆಯಾಗುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಹವಮಾನ‌ ಇಲಾಖೆ ಹೈ ಅಲರ್ಟ್ ಘೋಷಿಸಿದೆ.ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮಕ್ಕಳಿಗೆ ತೊಂದರೆಯಾಗದಂತೆ ಡಿ.3 ರಂದು ಇಂದು ಮಾತ್ರ ರಜೆ ಘೋಷಿಸಿದೆ. ಇಂದು ನೀಡಿದ ರಜೆಯನ್ನ ಮುಂದೆ ಬರುವ ಸಾರ್ವತ್ರಿಕ ರಜೆಗಳಲ್ಲಿ ಸರಿ ದೂಗಿಸಿಕೊಳ್ಳಲು ಸೂಚಿಸಲಾಗಿದೆ. ವಿಪತ್ತು ನಿರ್ವಹಣ ತುರ್ತು ಅಧಿಕೃತ ವಿಜ್ಞಾಪನೆಯಲ್ಲಿ ಡಿಸಿಯವರು ಸೂಚಿಸಿದ್ದಾರೆ.‌ ಫೆಂಗಲ್ ಚಂಡಮಾರುತವು ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಭಾಗದಲ್ಲಿ ಅಬ್ಬರಿಸಿದ್ದ ಮಳೆ ಕಳೆದ ಎರಡು ದಿನದಿಂದ ರಾಜ್ಯದಲ್ಲಿ ಅಬ್ಬರಿಸುತ್ತಿದೆ. ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ವಿಫರೀತ ಮಳೆ ಆರ್ಭಟ ಜೋರಾಗಿದೆ. ಹೀಗಾಗಿ ರಾಜ್ಯದ ಕೆಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಡಿಸೆಂಬರ್ 2, 4 ಹಾಗೂ 4 ರಂದು ವ್ಯಾಪಕ ಹಾಗೂ ಭಾರೀ ಮಳೆಯಾಗಲಿರುವ ಕಾರಣ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಬುಧಾದಿತ್ಯ ಯೋಗ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಕೆಲಸ ಮಾಡುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಕುಟುಂಬದಿಂದ ಬೆಂಬಲ ಸಿಗಲಿದೆ. ಇಂದು ಕೌಟುಂಬಿಕ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ. ನಿಮ್ಮ ಪ್ರೀತಿಪಾತ್ರರಿಗೆ ನೀವು ಅಚ್ಚರಿಯ ಪಾರ್ಟಿಯನ್ನು ಆಯೋಜಿಸಬಹುದು. ಅನುಪಯುಕ್ತ ವಸ್ತುಗಳ ಬಗ್ಗೆ ಚಿಂತಿಸಬೇಡಿ. ನಿಮ್ಮ ಆಹಾರಕ್ರಮಕ್ಕೆ ಗಮನ ಕೊಡಿ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿಡುತ್ತದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ.

** ವೃಷಭ ರಾಶಿ :
ನಿಮಗೆ ಒಳ್ಳೆಯ ದಿನವಾಗಲಿದೆ. ಆರೋಗ್ಯ ಸುಧಾರಿಸುತ್ತದೆ. ಉದ್ಯಮಿ ವ್ಯಾಪಾರದಲ್ಲಿ ಲಾಭ ಗಳಿಸುವರು. ಪ್ರಯಾಣದ ಅವಕಾಶವಿರುತ್ತದೆ. ಕೌಟುಂಬಿಕ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಸಮಯವನ್ನು ಕಳೆಯಲಾಗುತ್ತದೆ. ನಿಮ್ಮ ಪ್ರೀತಿಯ ಜೀವನವನ್ನು ಸಮಸ್ಯೆಗಳಿಂದ ರಕ್ಷಿಸಲು ಪ್ರಯತ್ನಿಸಿ. ಇಂದು ಹೆಚ್ಚಿನ ಕುಟುಂಬದ ಜವಾಬ್ದಾರಿಗಳನ್ನು ನಿಮಗೆ ನಿಯೋಜಿಸಲಾಗುವುದು, ಅದನ್ನು ನೀವು ಪೂರೈಸುತ್ತೀರಿ. ನೀವು ಮಾಡಿದ ಕೆಲಸದಿಂದ ಎಲ್ಲರೂ ತುಂಬಾ ಸಂತೋಷವಾಗಿರುತ್ತಾರೆ. ಕುಟುಂಬದ ಕಲ್ಯಾಣಕ್ಕಾಗಿ ನಿಮ್ಮ ಸಂಗಾತಿಯೊಂದಿಗೆ ಕೆಲಸ ಮಾಡುವುದನ್ನು ನೀವು ಕಾಣಬಹುದು.

** ಮಿಥುನ ರಾಶಿ :
ಇಂದು ನಿಮಗೆ ಮಿಶ್ರ ದಿನವಾಗಿರುತ್ತದೆ. ಹಣ ಬರುವ ಲಕ್ಷಣಗಳಿವೆ. ಸ್ನೇಹಿತರ ಜೊತೆ ಸ್ವಲ್ಪ ಸಮಯ ಕಳೆಯಲಿದ್ದೀರಿ. ಉದ್ಯೋಗದಲ್ಲಿ ಕೆಲಸ ಮಾಡುವ ಜನರು ತಮ್ಮ ಕೆಲಸದಲ್ಲಿ ನೀಡಿದ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಬೇಕಾಗುತ್ತದೆ. ಹೆಚ್ಚು ಕಠಿಣ ಪರಿಶ್ರಮ ಇರುತ್ತದೆ, ಆದರೆ ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು. ಹಣಕಾಸಿನ ವಿಷಯಗಳ ಮೇಲೆ ನಿಗಾ ಇರಿಸಿ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಲು ಯೋಜನೆಗಳನ್ನು ಮಾಡಬಹುದು. ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ.

** ಕರ್ಕಾಟಕ ರಾಶಿ :
ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಧಾರ್ಮಿಕ ಪ್ರಯಾಣದ ಅವಕಾಶವಿರುತ್ತದೆ. ಕೌಟುಂಬಿಕ ಜೀವನದಲ್ಲಿ ವಾದ ವಿವಾದಗಳಿಂದ ದೂರವಿರಿ. ವೃತ್ತಿಜೀವನದ ಪ್ರಗತಿಗೆ ಹೊಸ ಅವಕಾಶಗಳ ಮೇಲೆ ಕಣ್ಣಿಡಿ ಮತ್ತು ಯಶಸ್ಸನ್ನು ಸಾಧಿಸಲು ಶ್ರಮಿಸಿ. ನೀವು ಸಹೋದರ ಸಹೋದರಿಯರಿಂದ ಬೆಂಬಲವನ್ನು ಪಡೆಯುತ್ತೀರಿ. ಸಹೋದರನ ವಿವಾಹಕ್ಕೆ ಎದುರಾಗಿದ್ದ ಅಡೆತಡೆಗಳು ಕೊನೆಗೊಳ್ಳುತ್ತವೆ.

** ಸಿಂಹ ರಾಶಿ :
ಈ ದಿನವು ಸಂತೋಷದಿಂದ ತುಂಬಿರುತ್ತದೆ. ವ್ಯಾಪಾರದಲ್ಲಿ ಹೊಸ ಅವಕಾಶಗಳು ಬರಲಿವೆ. ನಿಮ್ಮ ಖ್ಯಾತಿಯನ್ನು ಎಲ್ಲೆಡೆ ಹರಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ವ್ಯಾಪಾರ ಸಂಬಂಧಿತ ಪ್ರವಾಸಕ್ಕೆ ಹೋಗುವ ಸಾಧ್ಯತೆಗಳೂ ಇವೆ, ಇದು ಪ್ರವಾಸಕ್ಕೆ ಅನುಕೂಲಕರವಾಗಿರುತ್ತದೆ. ಹೊಸ ಜನರೊಂದಿಗೆ ಸಂಪರ್ಕ ಸಾಧಿಸಲಾಗುವುದು. ಕಟ್ಟಡ ಸೌಕರ್ಯದಲ್ಲಿ ಹೆಚ್ಚಳವಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ಲಾಭದ ಅವಕಾಶವಿರುತ್ತದೆ. ಐಷಾರಾಮಿ ವಸ್ತುಗಳಿಗೆ ಹಣವನ್ನು ಖರ್ಚು ಮಾಡಬೇಡಿ.

** ಕನ್ಯಾ ರಾಶಿ :
ಇಂದು ಹಣಕಾಸಿನ ವಿಚಾರದಲ್ಲಿ ಏರುಪೇರು ಉಂಟಾಗುವುದು. ನೀವು ಖರ್ಚುಗಳನ್ನು ನಿಯಂತ್ರಿಸಬೇಕು. ಕೆಲವರಿಗೆ ಮನೆಯಲ್ಲಿ ಅತಿಥಿಗಳಾಗುವ ಸಾಧ್ಯತೆ ಇದ್ದು, ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗುತ್ತದೆ. ಪ್ರೇಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗುತ್ತವೆ. ನಿಯಮಿತ ಫಿಟ್ನೆಸ್ ದಿನಚರಿಯೊಂದಿಗೆ ಆರೋಗ್ಯವಾಗಿ ಉಳಿಯುತ್ತದೆ. ನಿಮ್ಮ ಪ್ರೀತಿಯ ಜೀವನವು ಉತ್ತಮವಾಗಿರುತ್ತದೆ.

** ತುಲಾ ರಾಶಿ :
ಇಂದು ನಿಮ್ಮ ಖರ್ಚುಗಳ ಬಗ್ಗೆ ಬಹಳ ಜಾಗರೂಕರಾಗಿರಿ. ಬಜೆಟ್‌ಗೆ ಮೀರಿದ ಅನಗತ್ಯ ವೆಚ್ಚಗಳನ್ನು ತಪ್ಪಿಸಿ. ಕೆಲವರು ಕುಟುಂಬ ಅಥವಾ ಸ್ನೇಹಿತರೊಂದಿಗೆ ವಿಹಾರಕ್ಕೆ ಹೋಗಬಹುದು. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ನೀವು ನಿಮ್ಮ ಕನಸುಗಳನ್ನು ನನಸಾಗಿಸುವಿರಿ ಮತ್ತು ನಿಮ್ಮ ವೃತ್ತಿಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸುವಿರಿ.

** ವೃಶ್ಚಿಕ ರಾಶಿ :
ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ನಾಳೆ ನೀವು ಉದ್ಯೋಗದಲ್ಲಿ ಹೊಸ ಸ್ಥಾನದಿಂದ ಯಶಸ್ಸನ್ನು ಪಡೆಯುತ್ತೀರಿ. ವೈವಾಹಿಕ ಜೀವನದಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳಿ. ಬೇರೊಬ್ಬರ ಮಾತುಗಳಿಂದ ಪ್ರಭಾವಿತರಾಗಿ ನಿಮ್ಮ ಸಂಬಂಧದಲ್ಲಿ ವೈಷಮ್ಯವನ್ನು ಸೃಷ್ಟಿಸಬೇಡಿ. ವಾಹನ ಖರೀದಿಸುವ ಸೂಚನೆಗಳಿವೆ. ನೀವು ಕೆಲಸದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಇತರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವು ನಿಮಗೆ ಅನೇಕ ಸಕಾರಾತ್ಮಕ ವಿಷಯಗಳನ್ನು ತರುತ್ತದೆ.

** ಧನಸ್ಸು ರಾಶಿ :
ಇಂದು ನಿಮಗೆ ಇತರ ದಿನಗಳಿಗಿಂತ ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿನ ಯಾವುದೇ ಬದಲಾವಣೆಯ ಬಗ್ಗೆ ನೀವು ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತೀರಿ. ಪ್ರೇಮ ಜೀವನದ ಬಗ್ಗೆ ಸಂತೋಷಪಡುತ್ತಾರೆ. ಉದ್ಯೋಗದಲ್ಲಿ ಕೆಲಸದ ವ್ಯಾಪ್ತಿ ವಿಸ್ತರಿಸಬಹುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ಸ್ನೇಹಿತರೊಂದಿಗೆ ಹ್ಯಾಂಗ್ ಔಟ್ ಮಾಡಲು ಯೋಜಿಸಬಹುದು. ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿ. ಇದು ಕುಟುಂಬದೊಂದಿಗೆ ನಿಮ್ಮ ಬಾಂಧವ್ಯವನ್ನು ಬಲಪಡಿಸುತ್ತದೆ.

** ಮಕರ ರಾಶಿ :
ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ವ್ಯಾಪಾರ ಮಾಡುವವರು ಉತ್ತಮ ಲಾಭವನ್ನು ಪಡೆಯುತ್ತಾರೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಕೆಲವು ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಸಹ ಯೋಜಿಸುವಿರಿ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಖರ್ಚು ಹೆಚ್ಚಾಗಲಿದೆ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಇಂದು ಹಣವನ್ನು ಉಳಿಸುವ ನಿಮ್ಮ ಪ್ರಯತ್ನಗಳನ್ನು ಪ್ರಶಂಸಿಸಲಾಗುತ್ತದೆ. ಮನೆಯಲ್ಲಿ ನಿಮ್ಮ ಕೆಲಸದಲ್ಲಿನ ನಿರ್ಬಂಧಗಳಿಂದಾಗಿ ನೀವು ಕಿರಿಕಿರಿಯನ್ನು ಅನುಭವಿಸಬಹುದು.

** ಕುಂಭ ರಾಶಿ :
ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಆರೋಗ್ಯ ಸುಧಾರಿಸುತ್ತದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಖರ್ಚಿನ ಮೇಲೆ ನಿಯಂತ್ರಣವಿರಲಿ. ಹಠಾತ್ ಪ್ರವಾಸದ ಸಾಧ್ಯತೆಗಳಿವೆ. ಮನೆಯಲ್ಲಿ ಜಗಳವಾಡುವುದನ್ನು ತಪ್ಪಿಸಿ. ನಿಮ್ಮ ಜೀವನದಲ್ಲಿ ಸಂತೋಷವನ್ನು ಮರಳಿ ತರಲು ಇದು ಸಮಯ. ರೋಮ್ಯಾಂಟಿಕ್ ಜೀವನ ಅದ್ಭುತವಾಗಿರುತ್ತದೆ. ಹೊಸ ವಾಹನದ ಖುಷಿ ಸಿಗಲಿದೆ. ನಿಮ್ಮ ಮನಸ್ಸಿನ ಯಾವುದೇ ಆಸೆ ಈಡೇರುತ್ತದೆ. ನೀವು ಸಹೋದರ ಸಹೋದರಿಯರಿಂದ ಬೆಂಬಲವನ್ನು ಪಡೆಯುತ್ತೀರಿ.

** ಮೀನ ರಾಶಿ :
ಇಂದು ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ, ಆದರೆ ಖರ್ಚುಗಳನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ಇತರರನ್ನು ಹೆಚ್ಚು ಮೆಚ್ಚಿಸಲು ಪ್ರಯತ್ನಿಸಬೇಡಿ. ಬದಲಿಗೆ ನಿಮ್ಮ ಮೇಲೆ ಕೇಂದ್ರೀಕರಿಸಿ. ನಿಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಿ. ಪ್ರೀತಿಯ ವಿಷಯ ಬಂದಾಗ ಯಾವುದಕ್ಕೂ ಆತುರಪಡಬೇಡಿ. ನೀವು ಕನಿಷ್ಟ ನಿರೀಕ್ಷಿಸಿದಾಗ ಪ್ರೀತಿ ನಿಮ್ಮ ಜೀವನವನ್ನು ಪ್ರವೇಶಿಸುತ್ತದೆ. ನಿಮ್ಮ ಪ್ರೀತಿಯ ಹಾದಿಯು ಸುಂದರ ತಿರುವು ಪಡೆದುಕೊಳ್ಳಬಹುದು. ನಿಮ್ಮ ಮಾತನ್ನು ನಿಯಂತ್ರಿಸಿ.

Categories
ಕರಾವಳಿ

ಉಡುಪಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!

ಉಡುಪಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!
– ಫೆಂಗಲ್ ಚಂಡ ಮಾರುತ ಉಂಟಾಗಿರುವ ಪರಿಣಾಮ
– ಡಿ.3ರಂದು ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ

NAMMUR EXPRESS NEWS
ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು,
02.12.2024ರ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 03.12.2024 ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು(1-12ನೇ ತರಗತಿವರೆಗೆ) ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿರುತ್ತದೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್, ಐ.ಟಿ.ಐ ಗಳಿಗೆ ರಜೆ ಘೋಷಿಸಿರುವುದಿಲ್ಲ.

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರಜೆ ಘೋಷಣೆ

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ರಜೆ ಘೋಷಣೆ
– ಪೆಂಗಲ್‌ ಚಂಡಮಾರುತ ಹಿನ್ನೆಲೆ: ಜಿಲ್ಲಾಧಿಕಾರಿಗಳ ಘೋಷಣೆ
– ಎಲ್ಲಾ ತಾಲೂಕಿನ ಶಾಲೆ, ಕಾಲೇಜಿಗೆ ರಜೆ

NAMMUR EXPRESS NEWS
ಚಿಕ್ಕಮಗಳೂರು: ಪೆಂಗಲ್‌ ಚಂಡಮಾರುತ ಹಿನ್ನೆಲೆ ಕಾಫಿನಾಡಲ್ಲಿ ಭಾರೀ ಮಳೆಯ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ದಿನಾಂಕ 03:12:2024 ರ ಮಂಗಳವಾರ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

Categories
ಮಲ್ನಾಡ್

ಚಂಡ ಮಾರುತ ಎಫೆಕ್ಟ್: ದಕ್ಷಿಣ ಕನ್ನಡ ಶಾಲಾ ಕಾಲೇಜುಗಳಿಗೆ ರಜೆ

ಚಂಡ ಮಾರುತ ಎಫೆಕ್ಟ್: ದಕ್ಷಿಣ ಕನ್ನಡ ಶಾಲಾ ಕಾಲೇಜುಗಳಿಗೆ ರಜೆ
– ಡಿ. 3ಕ್ಕೆದ.ಕ. ಮತ್ತು ಕಾಸರಗೋಡು ಶಾಲಾ ಕಾಲೇಜುಗಳಿಗೆ ರಜೆ!
– ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

NAMMUR EXPRESS NEWS
ಮಂಗಳೂರು: ಭಾರತೀಯ ಹವಾಮಾನ ಇಲಾಖೆಯು ನೀಡಿದ ಹವಾಮಾನದ ಮುನ್ಸೂಚನೆಯಂತೆ ಬಂಗಾಲ ಕೊಲ್ಲಿ ಸಮುದ್ರದಲ್ಲಿ ಫೆಂಗಲ್ ಚಂಡ ಮಾರುತ ಉಂಟಾಗಿರುವ ಪರಿಣಾಮದಿಂದ ಕರಾವಳಿ ಜಿಲ್ಲೆಯಾದ್ಯಂತ 3-12-2024 ಗುಡುಗು ಸಹಿತ ಭಾರೀ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ ಸರ್ಕಾರಿ ಅನುದಾನಿತ ಮತ್ತು ಪ್ರಾಥಮಿಕ ಪ್ರೌಢಶಾಲೆ ಪದವಿ ಪೂರ್ವ ಕಾಲೇಜು ಪಿಯು ಸಿ ವರೆಗೆ ರಜೆಯನ್ನು ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ರಜೆ ಘೋಷಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಹಲವು ಪ್ರದೇಶದ ತಗ್ಗು ಪ್ರದೇಶಗಳು ಮುಳುಗಿದ್ದು ಕೃತಕ ನೆರೆ ಸಂಭವಿಸಿದೆ. ನಾಳೆ ಅಂದ್ರೆ ಡಿಸೆಂಬ‌ರ್ 3ರಂದು ಮಳೆ ಇನ್ನಷ್ಟು ತೀವ್ರತೆ ಪಡೆಯಲಿದ್ದು ಜಿಲ್ಲಾಡಳಿತ ಎಚ್ಚರಿಕೆಯ ಸೂಚನೆ ನೀಡಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಕಡಲ ತೀರ, ತಗ್ಗು ಪ್ರದೇಶಗಳಿಗೆ ತೆರಳದಂತೆ ಹಾಗೂ ಮೀನುಗಾರರು ನದಿ ಸಮುದ್ರಗಳಿಗೆ ತೆರಳದಂತೆ ಸೂಚನೆ ನೀಡಿದ್ದಾರೆ. ಯಾವುದೇ ವಿಪತ್ತು ಸಂಭವಿಸಿದ್ರೂ ಜಿಲ್ಲಾಡಳಿತದ ಸಹಾಯವಾಣಿಗೆ ಕರೆ ಮಾಡಿ ತಿಳಿಸುವಂತೆ ಸಲಹೆ ನೀಡಿದ್ದಾರೆ. ಕೇಂದ್ರ ಹವಾಮಾನ ಕೇಂದ್ರ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ವೃತ್ತಿಪರ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ಡಿಸೆಂಬರ್ 3 ಜಿಲ್ಲಾಧಿಕಾರಿ ಕೆ.ಇಂಬುಶೇಖ‌ರ್ ರಜೆ ಘೋಷಿಸಿದ್ದಾರೆ. ಟ್ಯೂಷನ್ ಕೇಂದ್ರಗಳು, ಅಂಗನವಾಡಿಗಳು ಮತ್ತು ಮದರಸಾಗಳಿಗೂ ರಜೆ ಅನ್ವಯಿಸುತ್ತದೆ ಮಾದರಿ ವಸತಿ ಶಾಲೆಗಳಿಗೆ ರಜೆ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.