Categories
ಮೈಸೂರು ಹಾಸನ

ನಿಷಿಧಿ ಮಂಟಪ ಲೋಕಾರ್ಪಣೆಗೆ ಸಿದ್ಧತೆ

ನಿಷಿಧಿ ಮಂಟಪ ಲೋಕಾರ್ಪಣೆಗೆ ಸಿದ್ಧತೆ
– ಶಾಸಕ ಬಾಲಕೃಷ್ಣರಿಂದ ಸಭೆ-ಪರಿಶೀಲನೆ: ಸರ್ವರಿಗೂ ಸ್ವಾಗತ
– ಐದು ದಶಕಗಳ ಕಾಲ ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾಗಿ ಅಪಾರ ಸೇವೆ

NAMMUR EXPRESS NEWS
ಶ್ರವಣಬೆಳಗೊಳ: ಇಲ್ಲಿನ ದಿಗಂಬರ ಜೈನ ಮಹಾಸಂಸ್ಥಾನ ಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ನಿಷಿಧಿ ಮಂಟಪ ಲೋಕಾರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದ ಶ್ರೀ ಕಾನಜಿ ಭವನದಲ್ಲಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಜತೆ ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಪೂರ್ವಭಾವಿ ಸಭೆ ನಡೆಸಿದರು. ನಂತರ ನಿಷಿಧಿ ಮಂಟಪ ಹಾಗೂ ಕಾರ್ಯಕ್ರಮದ ವೇದಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪೂಜ್ಯ ಚಾರುಶ್ರೀಗಳವರು ಐದು ದಶಕಗಳ ಕಾಲ ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದರು. ಶ್ರವಣಬೆಳಗೊಳ ಎಂಬ ಧಾರ್ಮಿಕ ಕೇಂದ್ರವನ್ನು ಜೈನಕಾಶಿ ಎಂದು ವಿಶ್ವ ಪ್ರಸಿದ್ದಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಭಿನವ ಚಾರುಶ್ರೀಗಳವರು ಹಿಂದಿನ ಸ್ವಾಮೀಜಿ ಅವರ ಸ್ಮರಣೆಯನ್ನು ಶಾಶ್ವತಗೊಳಿಸಲು ಶಿಲಾಮಯ ನಿಷಿಧಿ ಮಂಟಪವನ್ನು ಸ್ಥಾಪಿಸಿ, ಅಲ್ಲಿ ಪೂಜ್ಯರ ಶ್ರೀ ಚರಣ ಪಾದುಕೆ ಹಾಗೂ ಸ್ಮರಣ ಶಿಲಾಶಾಸನವನ್ನು ಪ್ರತಿಷ್ಠಾಪಿಸುತ್ತಿರುವುದು ಗುರುಭಕ್ತಿಯ ದ್ಯೋತಕವಾಗಿದೆ ಎಂದು ಹೇಳಿದರು. ಈ ಗುರುವಂದನೆ ಕಾರ್ಯದಲ್ಲಿ ಸಮರ್ಪಣಾ ಮನೋಭಾವದಿಂದ ಎಲ್ಲರೂ ಕೈಜೋಡಿಸಿ ಸಮಾರಂಭದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಫ್ತಾಬ್ ಪಾಷ, ಮಾಜಿ ಅಧ್ಯಕ್ಷ ಎಸ್.ಆರ್.ಲೋಕೇಶ್, ಸದಸ್ಯರಾದ ಎನ್.ಆರ್.ವಾಸು, ಅನುರಾಧ ಲೋಹಿತ್, ಯಶಸ್ ಜೈನ್, ರಾಧಾ ಬಸವರಾಜ್, ಭಾರತಿ ಚಂದ್ರೇಗೌಡ, ಕೃಷ್ಣಮೂರ್ತಿ, ಚಂದ್ರಶೇಖರ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಬಿ.ಆರ್.ಯುವರಾಜ್, ಪಿಎಸ್‌ಐ ನವೀನ್, ಸೆಸ್ಕ್ ಎಇ ಚಂದ್ರಶೇಖರ್ ಮುಂತಾದವರಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ನೌಕರರ ಸಂಘದ ಪದಗ್ರಹಣ, ಅಭಿನಂದನಾ ಕಾರ್ಯಕ್ರಮ

ತೀರ್ಥಹಳ್ಳಿ ನೌಕರರ ಸಂಘದ ಪದಗ್ರಹಣ, ಅಭಿನಂದನಾ ಕಾರ್ಯಕ್ರಮ
– ನೌಕರರ ಸಂಘದ ನೂತನಅಧ್ಯಕ್ಷರಾಗಿ ರಾಘವೇಂದ್ರ ಎಸ್ ಅಧಿಕಾರ ಸ್ವೀಕಾರ
– ಗಣ್ಯರಿಂದ ಎಲ್ಲಾ ನೂತನ ನಿರ್ದೇಶಕರಿಗೆ ಗೌರವ ಸಮರ್ಪಣೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ನೌಕರರ ಸಂಘದ ಪದಗ್ರಹಣ, ಅಭಿನಂದನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ತೀರ್ಥಹಳ್ಳಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಎಸ್ ಅಧಿಕಾರ ಸ್ವೀಕಾರ ಮಾಡಿದರು. ಗಣ್ಯರಿಂದ ಎಲ್ಲಾ ನೂತನ ನಿರ್ದೇಶಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ತೀರ್ಥಹಳ್ಳಿ ಗ್ರಾಮೀಣಾಭಿವೃದ್ಧಿ ಭವನದಲ್ಲಿ ಡಿಸೆಂಬರ್ 2ರಂದು ಕರ್ನಾಟಕ ರಾಜ್ಯ ಸರಕಾರಿ 2024- 29ರ ಅವಧಿಯ ಆಡಳಿತ ಮಂಡಳಿಯ ಪದಗ್ರಹಣ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ನೌಕರ ಸಂಘದ ನೂತನ ಅಧ್ಯಕ್ಷ ರಾಘವೇಂದ್ರ ಎಸ್ ಅವರು ಮಾತನಾಡಿ, ಸರಕಾರಿ ನೌಕರಿ ಎಂದರೆ ಭದ್ರತೆ ಮತ್ತು ಸೌಲಭ್ಯ ಎಂದು ಎಲ್ಲರೂ ತಿಳಿದುಕೊಳ್ಳುತ್ತಾರೆ. ಆದರೆ ಆ ಭದ್ರತೆ ಮತ್ತು ಸೌಲಭ್ಯ ತನ್ನಿಂದ ತಾನೇ ಬರಲು ಸಾಧ್ಯವಿಲ್ಲ. ಸರಕಾರಿ ನೌಕರರ ಸಂಘದ ಸಂಘಟಿತ ಹೋರಾಟದ ಮೂಲಕ ದೊರಕಿದೆ. 1920ರಲ್ಲಿ ಈ ಸಂಘ ರಚನೆಯಾಗಿದ್ದರೂ ಪೂರ್ಣ ಕಾರ್ಯಚರಣೆಗೆ ಬಂದಿದ್ದು 1962ರಲ್ಲಿ, ಎಲ್ಲರ ಅಧ್ಯಕ್ಷತೆಯಲ್ಲಿ ಸಂಘಟಿತ ಹೋರಾಟದಲ್ಲಿ ನೌಕರರ ಹಿತ ಕಾಪಾಡಲು ರಾಜ್ಯ ಸರಕಾರ ಬಹಳಷ್ಟು ಶ್ರಮಪಟ್ಟಿದ್ದು ಅದರಲ್ಲಿ ತಕ್ಕಮಟ್ಟಿನ ಯಶಸ್ಸನ್ನು ಈಗಾಗಲೇ ಪಡೆದಿದ್ದೇವೆ ಎಂದರು.ತೀರ್ಥಹಳ್ಳಿ ಸರಕಾರಿ ನೌಕರ ಸಂಘದ ಬಗ್ಗೆ 25 ಇಲಾಖೆಗಳಿಂದ 30 ನಿರ್ದೇಶಕರನ್ನು ಒಳಗೊಂಡ ನೌಕರರ ಸಂಘ 1,400 ನೌಕರರನ್ನು ಪ್ರತಿನಿಧಿಸುತ್ತದೆ. 1966 ರಲ್ಲಿ ಕುವೆಂಪುರ ರಸ್ತೆಯಲ್ಲಿ ನೌಕರರ ಭವನವನ್ನು ಪ್ರಾರಂಭಿಸಿ 1973ರಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. 1977ರಲ್ಲಿ ಈ ಕಾರ್ಯ ಪೂರ್ಣಗೊಂಡು ರಥ ಬೀದಿಯ ರಾಮಭಟ್ಟರ ಧರ್ಮಪತ್ನಿಯಾದ ಮೂಕಾಂಬಿಕಾಮ್ಮ ಅವರು ಹಿಂಬದಿಯ ಜಾಗವನ್ನು ದಾನವಾಗಿ ನೀಡಿದ್ದಾರೆ. ಇದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.ಈಗಾಗಲೇ ಅರ್ಧ ಕಾಮಗಾರಿಯನ್ನು ಮುಗಿಸಿದ್ದು, ಕಾಮಗಾರಿಗೆ ಅನುದಾನವನ್ನು ನೀಡಿದ ಪ್ರಮುಖರಿಗೆ ಧನ್ಯವಾದಗಳನ್ನು ಸಮರ್ಪಿಸಿದರು.

ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ ಬೇಕು ನೆರವು

ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘಕ್ಕೆ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಸಂಸದರಾದ ರಾಘವೇಂದ್ರ, ಸಹಕಾರ ನಾಯಕರಾದ ಮಂಜುನಾಥ್ ಗೌಡ ಸೇರಿ ಎಲ್ಲಾ ನಾಯಕರು, ಸರ್ಕಾರಗಳು ಸಹಕಾರ ನೀಡಿದ್ದಾರೆ. ಸಮಸ್ತ ಸರಕಾರಿ ನೌಕರರ ಪರವಾಗಿ ಇನ್ನು ಕಟ್ಟಡದ ಕಾರ್ಯ ಪೂರ್ಣಗೊಳ್ಳಲು 50 ರಿಂದ 60 ಲಕ್ಷ ರೂಪಾಯಿಗಳು ಅವಶ್ಯಕತೆ ಇದ್ದು ಆ ಅನುದಾನವನ್ನು ಗಣ್ಯರಿಂದ ನಿರೀಕ್ಷೆ ಮಾಡಲಾಗುತ್ತದೆ ಎಲ್ಲರೂ ಸೇರಿ ಅನುದಾನವನ್ನು ಕೊಡಿಸುವ ಪ್ರಯತ್ನ ಮಾಡಬೇಕು ಎಂಬುದಾಗಿ ವಿನಂತಿಸಲಾಗುತ್ತದೆ ಎಂದು ವಿನಂತಿಸಿಕೊಂಡರು.  ಅಧ್ಯಕ್ಷರಾಗಿ ಬಹಳಷ್ಟು ಹೊಣೆಗಾರಿಕೆಯಿದ್ದು ಜವಾಬ್ದಾರಿಯು ಹೆಚ್ಚಾಗಿರುತ್ತದೆ ತಾಲೂಕಿನ ಎಲ್ಲಾ ಸರಕಾರಿ ನೌಕರರ ಹಿತ ಕಾಪಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಮುಂದಿನ ದಿನಗಳಲ್ಲಿ ಈ ಕುರಿತು ಶಕ್ತಿಮೀರಿ ಶ್ರಮಿಸುತ್ತೇನೆ ಎಂದು ಪ್ರಾಸ್ತಾವಿಕ ನುಡಿಯನ್ನು ಆಡಿದರು.

* ಸರಕಾರ ಆಳುವ ಪಕ್ಷ ಬದಲಾವಣೆಯಾಗಬಹುದು ಆದರೆ ಸರಕಾರ ಬದಲಾಗುವುದಿಲ್ಲ- ಆರಗ ಜ್ಞಾನೇಂದ್ರ

ಮಾಜಿ ಗೃಹ ಸಚಿವರು ಮತ್ತು ಶಾಸಕರು ಆರಗ ಜ್ಞಾನೇಂದ್ರ ಅವರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಅವರ ತಂಡವನ್ನು ಅಭಿನಂದಿಸಿ ಮಾತನಾಡಿ, ಸರಕಾರಿ ನೌಕರರ ಪದಾಧಿಕಾರಿಗಳು ಎಂದರೆ ಚುನಾವಣೆ ನಡೆದಂತೆ ಇದರಲ್ಲಿಯೂ ಜಾತಿ, ಸ್ವಾರ್ಥ, ಎಲ್ಲವೂ ಒಳಗೊಂಡಿರುತ್ತದೆ. ಸರಕಾರ ಆಳುವ ಪಕ್ಷ ಬದಲಾವಣೆಯಾಗಬಹುದು ಆದರೆ ಸರಕಾರ ಬದಲಾಗುವುದಿಲ್ಲ. ಅದರಲ್ಲಿ ಗೆದ್ದು ಬರುವುದು ಒಂದು ರೀತಿಯ ಪ್ರತಿಷ್ಠೆ. ಎಲ್ಲರಿಗೂ ಶುಭವಾಗಲಿ ಎಂದು ಶುಭ ಹಾರೈಸಿದರು.

* ಹುದ್ದೆಗೆ ಆಯ್ಕೆಯಾದವರಿಗೆ ಅಧ್ಯಕ್ಷರಿಂದ ಗೌರವ ಸಮರ್ಪಣೆ

ಕಾರ್ಯಕ್ರಮದಲ್ಲಿ ಎರಡು ಹುದ್ದೆಗಳನ್ನು ಮಾತ್ರ ಘೋಷಿಸಿ, ಮುಂದೆ ನಡೆಯುವ ಕಾರ್ಯಕಾರಿ ಸಮಿತಿಯಲ್ಲಿ ಆಯ್ಕೆ ಮಾಡಿಕೊಳ್ಳುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಪ್ರಥಮವಾಗಿ ಗೌರವಾಧ್ಯಕ್ಷ ಹುದ್ದೆಗೆ ಆರೋಗ್ಯ ಇಲಾಖೆಯ ಗೀತಾ ಎಲ್ ಆಚಾರ್ ಅವರನ್ನು ಘೋಷಣೆ ಮಾಡಲಾಯಿತು. ಎರಡನೆಯದಾಗಿ ಕಾರ್ಯದರ್ಶಿ ಹುದ್ದೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪವಿತ್ರ ಹೆಚ್ ಸಿ ಅವರನ್ನು ಸೂಚಿಸಿ ಅಧ್ಯಕ್ಷರಿಂದ ಗೌರವ ಸಮರ್ಪಣೆ ಮಾಡಲಾಯಿತು.

* ನೂತನ ಆಡಳಿತ ಮಂಡಳಿಗೆ ಡಾ.ಮಂಜುನಾಥ ಗೌಡ, ಕಿಮ್ಮನೆ ಶುಭಾಶಯ

ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಂಜುನಾಥ ಗೌಡ ಮಾತನಾಡಿ ಸರ್ಕಾರಿ ಕೆಲಸ ದೇವರ ಕೆಲಸ ಹಾಗೇನೆ ಜನರು ನಿಮ್ಮ ಬಳಿ ಬಂದಾಗ ಅವರ ಕೆಲಸವನ್ನು ಅತ್ಯಂತ ಕಳಕಳೆಯಿಂದ ಮಾಡಿ ಅವರ ಕಷ್ಟಗಳಿಗೆ ಸ್ಪಂದಿಸಿ ಎಂದು ಹೇಳಿದರು.
ನಿಮಗೇನಾದರೂ ತೊಂದರೆಯಾದಲ್ಲಿ ನಿಮ್ಮ ಜೊತೆ ನಾನು ಸದಾ ಇರುತ್ತೇನೆ ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದರು. ನೌಕರರ ಸಂಘಕ್ಕೆ 10 ಲಕ್ಷ ಕೊಡುವುದಾಗಿ ಭರವಸೆಯನ್ನು ನೀಡಿ ನೌಕರ ಸಂಘದ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಶುಭ ಕೋರಿದರು. ಕುಟುಂಬ ನಿರ್ವಹಣೆಯ ರೀತಿ ರಾಜ್ಯದ ನಿರ್ವಹಣೆಯಾದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಸಿರಿಬೈಲ್ ಧರ್ಮೇಶ್, ಶಿಕ್ಷಣ ಅಧಿಕಾರಿ ಗಣೇಶ್ ವೈ , ನಿಕಟಪೂರ್ವ ಕಾರ್ಯದರ್ಶಿಗಳು ರಾಮ ಬಿ, ನಿಕಟಪೂರ್ವ ರಾಜ್ಯ ಪರಿಷತ್ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ, ಸರಕಾರಿ ನೌಕರಿ ಶಾಖೆಯ ಖಜಾಂಚಿ ಎಂಸಿ ಮಂಜುನಾಥ್ , ನೂತನ ರಾಜ್ಯ ಪರಿಷತ್ ಸದಸ್ಯ ಎಲ್ಲಪ್ಪ, ಜಿಲ್ಲಾ ಖಜಾಂಚಿ ಸತ್ಯನಾರಾಯಣ, ಕಾರ್ಯಕ್ರಮದ ಮುಖ್ಯ ರೂವಾರಿ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೈಲಾ, ಹಾಗೂ ತಾಲೂಕಿನ ಎಲ್ಲ ಇಲಾಖೆಯ ನೌಕರರ ಸಂಘದ ಅಧ್ಯಕ್ಷರು ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಸಹ್ಯಾದ್ರಿ ಸಂಭ್ರಮ!

ತೀರ್ಥಹಳ್ಳಿಯಲ್ಲಿ ಸಹ್ಯಾದ್ರಿ ಸಂಭ್ರಮ!
– 2 ದಿನಗಳ ಕಾಲ ಸಹ್ಯಾದ್ರಿ ಸಂಸ್ಥೆಯ ಮಕ್ಕಳ ಹಬ್ಬ
– ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮನಸೋತ ಜನ
– 2 ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಳೆ ಅಡ್ಡಿ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಶಾಲಾ ವಾರ್ಷಿ ಕೋತ್ಸವ ಸಹ್ಯಾದ್ರಿ ಸಂಭ್ರಮ ಅದ್ದೂರಿಯಾಗಿ ಮೊದಲ ದಿನ ನಡೆದಿದ್ದು, ಕಾರ್ಯಕ್ರಮದ ವೇದಿಕೆ, ಮಕ್ಕಳ ಸಾಂಸ್ಕೃತಿಕ ಝಲಕ್ ಗಮನ ಸೆಳೆಯಿತು. ತೀರ್ಥಹಳ್ಳಿ ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್‌.ಇ ಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆದಿದ್ದು, ಮೊದಲ ದಿನ ಸಾವಿರಾರು ಜನರ ಆಕರ್ಷಣೆಗೆ ಕಾರಣವಾಯಿತು. ಅದ್ದೂರಿಯಾಗಿ ವೇದಿಕೆಯನ್ನು ಶ್ರೀ ಚಾಮುಂಡೇಶ್ವರಿ ಸೌಂಡ್ಸ್ ಅವರು ನಿರ್ಮಾಣ ಮಾಡಿದ್ದು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸಿತು. ಸಂಸ್ಥೆಯ ಅಧ್ಯಕ್ಷರಾದ ಬಾಳೆಹಳ್ಳಿ ಪ್ರಭಾಕರ್ ಮಾತನಾಡಿ, ಮಲೆನಾಡಲ್ಲಿ ನಮ್ಮ ಸಂಸ್ಥೆ ಅತ್ಯಂತ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಅತ್ಯಂತ ಮುತುವರ್ಜಿಯಿಂದ ನಿಮ್ಮ ಮಕ್ಕಳ ಭವಿಷ್ಯ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡುತ್ತೇವೆ. ಪ್ರತಿ ವರ್ಷ ಶೇ. 100ರ ಫಲಿತಾಂಶ ನೀಡಿದ್ದೇವೆ. ರಾಜ್ಯ ಮಟ್ಟದಲ್ಲಿ ರಾಂಕ್ ಪಡೆದಿದ್ದೇವೆ. ಸಹ್ಯಾದ್ರಿ ಶಾಲೆ, ಕಾಲೇಜು ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದೆ. ಮಕ್ಕಳು ಮೊಬೈಲ್ ದೂರ ಇಟ್ಟು, ಶಿಕ್ಷಣ, ಸಂಸ್ಕಾರ ಕಲಿಸಬೇಕಿದೆ ಎಂದರು. ಅತಿಥಿಗಳಾಗಿ ಶಾಸಕ ಆರಗಜ್ಞಾನೇಂದ್ರ, ತಹಶೀಲ್ದಾರ್ ರಂಜಿತ್ ಎಸ್, ಹೊದಲ-ಅರಳಾಪುರ ಗ್ರಾ.ಪಂ.ಅಧ್ಯಕ್ಷೆ ಅನಿತಾ ಶ್ರೀಧರ್,, ಆಡಳಿತ ಅಧಿಕಾರಿ ಪ್ರಕಾಶ್, ಎಲ್ಲಾ ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.

2ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಳೆ ಅಡ್ಡಿ!

ಕುಶಾವತಿ ಸಹ್ಯಾದ್ರಿ ಶಾಲೆ ಮತ್ತು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಹ್ಯಾದ್ರಿ ಸಂಭ್ರಮ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದ್ದು, ಅಧ್ಯಕ್ಷತೆಯನ್ನು ಬಾಳೇಹಳ್ಳಿ ಪ್ರಭಾಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರ ನಾಯಕ ಮಂಜುನಾಥ ಗೌಡ, ಪ.ಪಂ.ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಬಿಇಓ ಗಣೇಶ್ ವೈ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿರಿಬೈಲ್ ಧರ್ಮೇಶ್, ಪ್ರಿನ್ಸಿಪಾಲರಾದ ಗುರುರಾಜ್, ಅಗ್ನಿಸ್ ಮೆಂಡೋನ್ಸಾ ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಳೆ ಅಡ್ಡಿ ಮಾಡಿತು. ಮುಂದೆ ಈ ಕಾರ್ಯಕ್ರಮ ನಡೆಸಲು ಆಡಳಿತ ಮಂಡಳಿ ತೀರ್ಮಾನ ಮಾಡಿದೆ ಎಂದು ತಿಳಿದು ಬಂದಿದೆ.

Categories
ಬೆಂಗಳೂರು

ಬಿಗ್ ಬಾಸ್ ಮನೆಯಿಂದ ದಿಢೀರ್ ಹೊರಬಂದ ಚೈತ್ರ ಕುಂದಾಪುರ..!!??

ಬಿಗ್ ಬಾಸ್ ಮನೆಯಿಂದ ದಿಢೀರ್ ಹೊರಬಂದ ಚೈತ್ರ ಕುಂದಾಪುರ..!!??
– ಚೈತ್ರ ಹೊರಬರಲು ಕಾರಣವೇನು..??
– ಬಿಗ್‌ಬಾಸ್ ಮನೆಯ ಪ್ರಬಲ ಸ್ಪರ್ಧಿ ಚೈತ್ರ ಕುಂದಾಪುರ

NAMMUR EXPRESS NEWS
ಬೆಂಗಳೂರು : ಕನ್ನಡ ಕಿರುತೆರೆ ಪ್ರಸಿದ್ಧ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ – 11 ರ ಸ್ಪರ್ಧಿ ಚೈತ್ರ ಕುಂದಾಪುರ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದಾರೆ..!!
ಹೌದು..ಬಿಗ್​​ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದು, ಇದೀಗ ಬಿಗ್‌ಬಾಸ್ ಸೀಸನ್ 11ರ ಮನೆಯಿಂದ ಹೊರ ಬಂದಿದ್ದಾರೆ.

ಚೈತ್ರ ಹೊರಬರಲು ಕಾರಣವೇನು.?
ಚೈತ್ರಾ ಕುಂದಾಪುರ & ಗ್ಯಾಂಗ್ ಮೇಲೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದಬಾಬು ಎಂಬುವವರಿಗೆ ಕೋಟಿ – ಕೋಟಿ ವಂಚಿಸಿದ ಆರೋಪದಲ್ಲಿ ಅವರ ಮೇಲೆ ದೂರು ದಾಖಲಾಗಿತ್ತು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕೋರ್ಟ್‌ಗೆ ಹಾಜರಾಗಬೇಕಿತ್ತು.
ಈ ಹಿನ್ನಲೆಯಲ್ಲಿ ಇಂದು ದಿಢೀರನೇ ಬಿಗ್ ಬಾಸ್ ಮನೆಯಿಂದ ಗುಟ್ಟಾಗಿ ಹೊರ ಬಂದಿದ್ದು, 1ನೇ ಎಸಿಎಂಎಂ ಕೋರ್ಟ್​​​ಗೆ ಹಾಜರಾಗಿದ್ದರು. ಈ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಚೈತ್ರಾ ಕುಂದಾಪುರ ಅವರ ಕೇಸ್‌ನ ವಿಚಾರಣೆಯನ್ನು ಬರುವ ಜನವರಿ 13ರಂದು ನಡೆಸುವುದಾಗಿ ಹೇಳಿ ಮುಂದೂಡಿದ್ದಾರೆ. ಕೇಸ್‌ ಮುಂದುವರೆದ ಕಾರಣ ಚೈತ್ರಾ ಕುಂದಾಪುರ ಅವರನ್ನು ಮತ್ತೆ ಬಿಗ್‌ ಬಾಸ್ ಮನೆಯೊಳಗೆ ಕಳುಹಿಸಲಾಗಿದೆ.
ಕೇಸ್‌ ಮುಂದೂಡಿದ ಪರಿಣಾಮ ಚೈತ್ರಾ ಕುಂದಾಪುರ ಅವರಿಗೆ ಸದ್ಯ ಜನವರಿ ವರೆಗೆ ರಿಲೀಫ್ ಸಿಕ್ಕಿದೆ

Categories
ಬೆಂಗಳೂರು

ಕನ್ನಡದಲ್ಲಿ ಟ್ರೆಂಡ್ ಆಗುತ್ತಿದೆ ಯುಐ ಟ್ರೈಲರ್!

ಕನ್ನಡದಲ್ಲಿ ಟ್ರೆಂಡ್ ಆಗುತ್ತಿದೆ ಯುಐ ಟ್ರೈಲರ್!
– ಬಿಡುಗಡೆ ಆಗಿ ಒಂದೇ ದಿನಕ್ಕೆ 2 ಮಿಲಿಯನ್ ವೀಕ್ಷಣೆ
– ರಿಷಭ್ ಶೆಟ್ಟಿ `ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
– ರಿಯಲ್‌ ಸ್ಟಾರ್‌ ಉಪೇಂದ್ರ ಕಟೀಲು ದೇವಾಲಯಕ್ಕೆ ಭೇಟಿ

NAMMUR EXPRESS NEWS
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿರುವ ಉಪೇಂದ್ರ ನಿರ್ದೇಶಕರಾಗಿ ನಟನೆ ಮಾಡಿರುವ ಯು. ಐ ಸಿನಿಮಾದ ಟ್ರೈಲರ್ ಸೋಮವಾರ ಬಿಡುಗಡೆಗೊಂಡಿದ್ದು ಒಂದೇ ದಿನಕ್ಕೆ 20 ಲಕ್ಷ ವೀಕ್ಷಣೆ ಪಡೆದಿದೆ
ಕನ್ನಡ ಚಿತ್ರರಂಗದ ಭರವಸೆಯ ಸಿನಿಮಾ ಇದಾಗಿದ್ದು ಹೊಸ ವರ್ಷಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ರಿಷಭ್ ಶೆಟ್ಟಿ `ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಕಾಂತಾರ ಸಿನಿಮಾದ ಮೂಲಕ ಸ್ಟಾರ್ ಆಗಿರುವ ರಿಷಭ್ ಶೆಟ್ಟಿ ಅವರು ಇದೀಗ ಛತ್ರಪತಿ ಮಹಾರಾಜ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಅವರು ಕಾಂತಾರ 2 2025ರಂದು, ಜೈ ಹನುಮಾನ್ 2026, ಮತ್ತು ದ ಪ್ರೈಡ್ ಆಫ್ ಭಾರತ್‌: ಛತ್ರಪತಿ ಶಿವಾಜಿ ಮಹಾರಾಜ್ 2027ರಂದು ಬಿಡುಗಡೆ ಆಗಲಿದೆ.
ಮೇರಿ ಕೋಮ್, ಸರಬ್ಬಿತ್, ವೀರ್ ಸಾವರ್ಕರ್, ರಾಮಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಕಿರುಚಿತ್ರ ಸಫೇದ್ ಮುಂತಾದ ಚಿತ್ರಗಳನ್ನು ನಿರ್ದೇಶಿಸುತ್ತಿರುವ ಸಂದೀಪ್ ಸಿಂಗ್ ಈ ಐತಿಹಾಸಿಕ ಮಹಾಕಾವ್ಯವನ್ನು ನಿರ್ದೇಶಿಸುತ್ತಿದ್ದಾರೆ.

 ರಿಯಲ್‌ ಸ್ಟಾರ್‌ ಉಪೇಂದ್ರ ಕಟೀಲು ದೇವಾಲಯಕ್ಕೆ ಭೇಟಿ

ಕಟೀಲು : ಖ್ಯಾತ ಕನ್ನಡದ ಚಲನಚಿತ್ರ ನಟ ರಿಯಲ್‌ ಸ್ಟಾರ್‌ ಉಪೇಂದ್ರ ಕಟೀಲು ದೇವಾಲಯಕ್ಕೆ ಭೇಟಿ ನೀಡಿದ್ದು, ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕಟೀಲು ದೇವಾಲಯದ ಅನುವಂಶಿಕ ಅರ್ಚಕರಾದ ಕಮಲಾದೇವಿ ಅಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಮತ್ತಿತರರು ಉಪಸ್ಥಿತರಿದ್ದರು

Categories
ಕರಾವಳಿ

ಕಾಲು ಜಾರಿ ನೇತ್ರಾವತಿ ನದಿಗೆ ಬಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ಸಾವು..!!

ಕಾಲು ಜಾರಿ ನೇತ್ರಾವತಿ ನದಿಗೆ ಬಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ಸಾವು..!!
* ಸೋಮವಾರ ಕಾಲುಜಾರಿ ನದಿಗೆ ಬಿದ್ದಿದ್ದ ಪ್ರಸಾದ್
* ಅಗ್ನಿಶಾಮಕದಳ,ಮುಳುಗು ತಜ್ಞರಿಂದ ಹುಡುಕಾಟ ಮೃತ ದೇಹ ಪತ್ತೆ
* ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ನಿಷ್ಠಾವಂತ ಕಾರ್ಯಕರ್ತ

NAMMUR EXPRESS NEWS
ಬೆಳ್ತಂಗಡಿ: ಸೋಮವಾರ ಕಾಲು ಜಾರಿ ನೇತ್ರಾವತಿ ನದಿಗೆ ಬಿದ್ದಿದ್ದ ಆರ್ ಎಸ್ ಎಸ್ ಕಾರ್ಯಕರ್ತ ಪ್ರಸಾದ್ ಸಾವನ್ನಪ್ಪಿರುವ ಘಟನೆ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ನಡೆದಿದೆ.
ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್‌ (38) ಮೃತ ವ್ಯಕ್ತಿ. ಸೋಮವಾರ ಸಂಜೆ ಪ್ರಸಾದ್ ಮೂವರೊಂದಿಗೆ ನೀರಿಗೆ ಇಳಿದಿದ್ದು ಈ ವೇಳೆ ಪ್ರಸಾದ್‌ ನೀರಿನಲ್ಲಿ ಮುಳುಗಿದ್ದಾರೆ, ಪ್ರಸಾದ್‌ರನ್ನು ಜತೆಗಿದ್ದವರು ರಕ್ಷಿಸಲು ಯತ್ನಿಸಿದ್ದು, ಈ ವೇಳೆ ಪ್ರಸಾದ್ ಮುಳುಗಿ ನಾಪತ್ತೆಯಾಗಿದ್ದರು.
ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಶೋಧ ಕಾರ್ಯಾಚರಣೆ ನಡೆಸಿದ್ದರು. ಮುಳುಗು ತಜ್ಞ ಈಶ್ವ‌ರ್ ಮಲ್ಪೆ ಅವರು ಕೂಡ ಆಗಮಿಸಿದ್ದರು. ಮುಳುಗು ತಜ್ಞ ಬೆಳ್ತಂಗಡಿಯ ಸಂಜಯ ನಗರದ ಇಸ್ಮಾಯಿಲ್ ಹಾಗೂ ಅಗ್ನಿಶಾಮಕದಳದವರು ರಾತ್ರಿ 11 ರ ಹೊತ್ತಿಗೆ ಪ್ರಸಾದ್ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಪ್ರಸಾದ್ ಅವರು ವಿವಾಹಿತರಾಗಿದ್ದು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಪ್ರಸಾದ್ ಆರ್ ಎಸ್ ಎಸ್ ನಿಷ್ಟಾವಂತ ಕಾರ್ಯಕರ್ತರಾಗಿದ್ದರು.

ಸಂಘದ ವಿವಿಧ ಜವಾಬ್ದಾರಿ ನಿರ್ವಹಿಸಿದ್ದ ನಿಷ್ಠಾವಂತ ಕಾರ್ಯಕರ್ತ..
ಪ್ರಸಾದ್‌ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಸಂಘದ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಸಂಘದ ಪ್ರಚಾರಕರಾಗಿ 5 ವರ್ಷ ಕಾರ್ಯನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮ ಜಾಗರಣ ಜಿಲ್ಲಾ ಸಂಯೋಜಕರಾಗಿದ್ದರು. ಇಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆ ತನಕ ಪ್ರಸಾದ್ ಅವರ ಅಂತಿಮ ದರ್ಶನಕ್ಕೆ ಸ್ವಗ್ರಾಮ ಬೆಳಾಲ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು ನಂತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Categories
ಚಿಕ್ಕಮಗಳೂರು

ಚಿಕ್ಕಮಗಳೂರು ಟಾಪ್ ನ್ಯೂಸ್

ಚಿಕ್ಕಮಗಳೂರು ಟಾಪ್ ನ್ಯೂಸ್

– ಸರ್ಕಾರಿ ನೌಕರರಿಗೆ ಬೆದರಿಕೆ ಆರೋಪ: ಭೋಜೇಗೌಡ ವಿರುದ್ಧ ದೂರು
– ಕೊಪ್ಪ: 60 ಅಡಿ ಆಳದ ಬಾವಿಗೆ ಬಿದ್ದ 90 ವರ್ಷದ ವೃದ್ಧೆ!
– ಕಳಸ: ಶಿರಸ್ತೇದಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

NAMMUR EXPRESS NEWS
ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡರ ವಿರುದ್ಧ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ನಿರ್ದೇಶಕರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚುನಾವಣಾಧಿಕಾರಿಗೆ ಭಾನುವಾರ ದೂರು ಸಲ್ಲಿಸಲಾಗಿದೆ.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ರಾಜಕೀಯ ಹಸ್ತಕ್ಷೇಪ ಮಾಡಿ ನೌಕರರಿಗೆ ಬೆದರಿಸುತ್ತಿದ್ದಾರೆ ಎಂದು ಜಿಲ್ಲಾಧ್ಯಕ್ಷ ಅಭ್ಯರ್ಥಿ ದೇವೇಂದ್ರ ಆರೋಪಿಸಿದ್ದಾರೆ.
ಆಯ್ಕೆಯಾದ ನಿರ್ದೇಶಕರಿಗೆ ಸರ್ಕಾರಿ ಕೆಲಸ ನಿರ್ವಹಿಸಲು ಬಿಡದೇ ಕರ್ತವ್ಯದ ಅವಧಿಯಲ್ಲಿ ಪದೇ ಪದೇ ಮನೆಗೆ ಕರೆದು ಬೆದರಿಕೆ ಹಾಕುತ್ತಿದ್ದು, ಆಣೆ ಪ್ರಮಾಣ ಮಾಡಿಸಿ ಬಲವಂತಪಡಿಸಲಾಗುತ್ತಿದೆ. ರೆಸಾರ್ಟ್‌ನಲ್ಲಿ ಕಡ್ಡಾಯವಾಗಿ ವಾಸ್ತವ್ಯ ಹೂಡುವ ಬೆದರಿಕೆ ಹಾಕಿದ್ದು, ಇದರಿಂದ ನೌಕರರು ನಿರ್ಭಯವಾಗಿ ಮತದಾನ ಮಾಡಲು ಮುಜುಗರಪಡುವಂತಾಗಿದ್ದು,
ಚುನಾವಣೆಗೆ ಅಡ್ಡಿಪಡಿಸುತ್ತಿರುವ ವಿಧಾನ ಪರಿಷತ್ ಸದಸ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಯಾವುದೇ ಒತ್ತಡವಿಲ್ಲದೇ ಚುನಾವಣೆ ನಡೆಸಲು ಅವಕಾಶ ಮಾಡಿಕೊಡುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

60 ಅಡಿ ಆಳದ ಬಾವಿಗೆ ಬಿದ್ದ ವೃದ್ಧೆ!

ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಮರಕಟ್ಟೆ ಗ್ರಾಮದಲ್ಲಿ 60 ಅಡಿ ಬಾವಿಗೆ ಬಿದ್ದ ವೃದ್ದೆಯನ್ನು ಅಗ್ನಿಶಾಮಕದಳ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಕಮಲ ಎಂಬ 90 ವರ್ಷದ ವೃದ್ಧೆ ಕಾಲು ಜಾರಿ 60 ಅಡಿ ಆಳದ ಬಾವಿಗೆ ಬಿದ್ದಿದ್ದರು. ಬಾವಿಗೆ ಬಿದ್ದ ವೃದ್ಧೆ ಬಾವಿಯೊಳಗಿದ್ದ ಪೈಪ್ ಹಿಡಿದು ಮುಳುಗದಂತೆ ಒಂದು ಗಂಟೆಗೂ ಹೆಚ್ಚು ಕಾಲ ಸಾವು ಬದುಕಿನ ನಡುವೆ ಹೋರಾಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿಗಳು ಬಾವಿಯಲ್ಲಿದ್ದ ವೃದ್ದೆಯ ರಕ್ಷಣೆ ಮಾಡಿದ್ದಾರೆ. ಅಗ್ನಿ ಶಾಮಕದಳ ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು

ಅಕ್ರಮವಾಗಿ ಸಾಗುವಳಿ ಚೀಟಿ ವಿತರಣೆ: ಶಿರಸ್ತೇದಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು..!!

ಕಳಸ: ನಿಯಮಬಾಹಿರವಾಗಿ ಅಕ್ರಮ ಸಾಗುವಳಿ ಚೀಟಿ ವಿತರಣೆ ಮಾಡಿದ ಆರೋಪದ ಮೇಲೆ ಶಿರಸ್ತೇದಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಹೇಮಂತ್‌ ಕುಮಾರ್‌ ಕಳಸ ತಾಲ್ಲೂಕಿನ ತಾಲ್ಲೂಕು ಕಛೇರಿಯಲ್ಲಿ ಪ್ರಭಾರಿ ಶಿರಸ್ತೆದಾರರಾಗಿ ಕಾರ್ಯನಿರ್ವಹಿಸುವಾಗ 50 ಕ್ಕೂ ಹೆಚ್ಚು ಸಾಗುವಳಿ ಚೀಟಿ ಅಕ್ರಮವಾಗಿ ನೀಡಿದ್ದಾರೆಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. 2022 ರ ಫೆಬ್ರವರಿ ತಿಂಗಳಲ್ಲಿ ಕಳಸ ತಾಲೂಕು ಪ್ರಭಾರ ತಹಶೀಲ್ದಾರ್ ಆಗಿ 1 ತಿಂಗಳು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಈ ಅಕ್ರಮ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆಡಳಿತಾತ್ಮಕ ಹಿತ ದೃಷ್ಠಿಯಿಂದ ಕಚೇರಿ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದರೂ ಹೇಮಂತ್ ಕುಮಾರ್ ಕಾನೂನುಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಸಾಗುವಳಿ ಚೀಟಿ ಮಂಜೂರು ಮಾಡಿದ್ದಾರೆ. ಅಕ್ರಮವಾಗಿ 50 ಕ್ಕೂ ಹೆಚ್ಚು ಸಾಗುವಳಿ ಪತ್ರ ನೀಡಿದ್ದು, ಇದು ಕಾನೂನು ರೀತಿ ಅಕ್ಷಮ್ಯ ಅಪರಾಧವಾಗಿದೆ. ಹೀಗಾಗಿ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಎಂ. ಎ. ಸಲಾವುದ್ದೀನ್ ಒತ್ತಾಯಿಸಿದ್ದಾರೆ.

Categories
ಕರಾವಳಿ

ಫೆಂಗಲ್ ಗೆ ಕರಾವಳಿ ಕಂಗಾಲು!

ಫೆಂಗಲ್ ಗೆ ಕರಾವಳಿ ಕಂಗಾಲು!
– ನಾಗರಿಕರ ಪರದಾಟ!
– ಆಸ್ಪತ್ರೆ ಪ್ರವೇಶಿಸಿದ ಮಳೆ ನೀರು!!

NAMMUR EXPRESS NEWS
ಕರಾವಳಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.02ರಂದು ಫೆಂಗಲ್ ಚಂಡಮಾರುತ ಪರಿಣಾಮದಿಂದ ಭಾರಿ ಮಳೆ ಸುರಿದಿದ್ದು, ಕರಾವಳಿ ಅಕ್ಷರಶಃ ಕಂಗಾಲಾಯಿತು. ಸಂಜೆ 5 ಗಂಟೆ ಹೊತ್ತಿಗೆ ಮಂಗಳೂರು ನಗರದಲ್ಲಿ ಕರ್ಗತ್ತಲು ಆವರಿಸಿ, ಬಿರುಸಿನ ಮಳೆ ಸುರಿಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ವಿಟ್ಲ, ಮಾಣಿ, ಬಂಟ್ವಾಳದಲ್ಲಿ ಮಳೆ ಬಿರುಸಾಗಿತ್ತು. ಒಮ್ಮಿಂದೊಮ್ಮೆಲೆ ಸುರಿದ ಮಳೆಗೆ ವಾಹನ ಸವಾರರು ಪೇಚಿಗೆ ಪ್ರದೇಶಗಳಲ್ಲಿ ಸಿಲುಕಿ, ಮಳೆಯ ಬಿರುಸಿಗೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿತು. ರಾಜಕಾಲುವೆಯಲ್ಲಿ ಎಕಾಏಕಿ ನೆರೆ ನೀರು ಏರಿಕೆಯಾಗಿ ತಗ್ಗು ಪ್ರದೇಶಗಳ ಕಟ್ಟಡ ಪಾರ್ಕಿಂಗ್ ಜಾಗ, ಕಚೇರಿಗಳಿಗೆ ನೀರು ನುಗ್ಗಿದೆ.

* ನಾಗರಿಕರ ಪರದಾಟ

ಸಂಜೆ ವೇಳೆ ಸುರಿದ ಭಾರಿ ಮಳೆಯಿಂದಾಗಿ ಕಚೇರಿಯಿಂದ ಮನೆಗೆ ತೆರಸುವ ಸಿಬ್ಬಂದಿ, ಶಾಲಾ-ಕಾಲೇಜು, ಟ್ಯೂಷನ್ ನಿಂದ ತೆರಳುವ ವಿದ್ಯಾರ್ಥಿಗಳು, ಕೆಲಸ ಮುಗಿಸಿ ಮನೆಗೆ ಹೋಗುವ. ಕಾರ್ಮಿಕರು ಅಕ್ಷರಶಃ ಕಂಗಾಲಾದರು. ಟ್ರಾಫಿಕ್ ಬ್ಲಾಕ್ ನಿಂದಾಗಿ ಬಸ್ ಗಳು 20 30 ನಿಮಿಷ ವಿಳಂಬವಾಗಿ ಸಂಚರಿಸಿ ಪ್ರಯಾಣಿಕರು ಪರದಾಡುವಂತಾಯಿತು.

* ವಿದ್ಯುತ್ ಕಣ್ಣಾ ಮುಚ್ಚಾಲೆ!

ಏಕಾಏಕಿ ಸುರಿದ ಮಳೆ, ಸಿಡಿಲು – ಗುಡುಗಿನಿಂದಾಗಿ ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಯಿತು. ಜಿಲ್ಲೆಯ ನಾನಾ ಕಡೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.

* ನಾನಾ ಕಡೆ ಟ್ರಾಫಿಕ್ ಬ್ಲಾಕ್!

ಮಂಗಳೂರು ನಗರದ ನಂತೂರು, ಪಿವಿಎಸ್, ಎಂಜಿ ರಸ್ತೆ, ಕೆಪಿಟಿ, ಬೆಜೆಂಟ್, ಕಂಕನಾಡಿ ಕಡೆಗಳಲ್ಲಿ ಬ್ಲಾಕ್ ಉಂಟಾಗಿ ಜನರು ಪರದಾಡುವಂತಾಯಿತು. ಅದರಲ್ಲೂ ಎಂಜಿ ರಸ್ತೆ ನಂತೂರಿನಲ್ಲಿ ವಾಹನಗಳ ಸರತಿ ಸಾಲು ನೂರಾರು ಮೀಟರ್ ನಷ್ಟು ದೂರ ವ್ಯಾಪಿಸಿತು. ದ್ವಿಚಕ್ರ ವಾಹನ ಸವಾರರು ರೈನ್ ಕೋಟ್ ತರದ ಪರಿಣಾಮ ಬಸ್ ತಂಗುದಾಣ ಮರದಡಿ ಬಳಿ ಬೈಕ್ ನಿಲ್ಲಿಸಿ ಆಶ್ರಯ ಪಡೆದುಕೊಂಡರು.

* ಸುರತ್ಕಲ್ ಆಸ್ಪತ್ರೆ ಪ್ರವೇಶಿಸಿದ ಮಳೆ ನೀರು!!

ಸುರತ್ಕಲ್ : ಚಂಡಮಾರುತ ಪರಿಣಾಮ ಸುರಿದ ಭಾರಿ ಮಳೆಯಿಂದ ಸುರತ್ಕಲ್ ಪಾಲಿಕೆ ಮಾರುಕಟ್ಟೆ ಬಳಿಯ ಖಾಸಗಿ ಆಸ್ಪತ್ರೆಗೆ ಕೃತಕ ನೆರೆ ನೀರು ಪ್ರವೇಶಿಸಿ ರೋಗಿಗಳು ಪರದಾಟ ನಡೆಸಬೇಕಾಯಿತು.
ಮಳೆಗಾಲದ ರೀತಿ ಸುಮಾರು 2 ಗಂಟೆ ಸುರಿದ ಬಾರಿ ಮಳೆಯಿಂದಾಗಿ ಸುರತ್ಕಲ್ ಭಾಗದಲ್ಲಿ ರಾತ್ರಿ 8 ಗಂಟೆ ಬಳಿಕ ಒಮ್ಮೆಗೆ ಕಡಿಮೆಯಾಗಿದೆ.

* ರಕ್ಷಣಾ ಕ್ರಮಕ್ಕೆ ಸ್ಪೀಕರ್ ಯುಟಿ ಖಾದರ್ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಫೆಂಗಲ್ ಚಂಡಮಾರುತ ಪರಿಣಾಮ ವಿಪರೀತ ಮಳೆ, ಮುಂಜಾಗ್ರತಾ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಸೂಚನೆ ನೀಡಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆ ನೀಡಿದಂತೆ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮ ಹಾಗೂ ಅಗತ್ಯ ರಕ್ಷಣಾ ಕ್ರಮ ಕುರಿತು ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಮುಂತಾದ ರಕ್ಷಣಾ ತಂಡಗಳನ್ನು ಸನ್ನದ್ಧಗೊಳಿಸಲು ಯುಟಿ ಖಾದರ್ ಸೂಚನೆ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಎಲ್ಲಾ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಂಪರ್ಕದಲ್ಲಿದ್ದು ಸಹಕರಿಸಬೇಕು. ಜನಸಾಮಾನ್ಯರು ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.

Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಡಿ.8ಕ್ಕೆ ” ಅರ್ಜುನ” ಕಿರು ಚಿತ್ರ ಪ್ರದರ್ಶನ!

ತೀರ್ಥಹಳ್ಳಿಯಲ್ಲಿ ಡಿ.8ಕ್ಕೆ ” ಅರ್ಜುನ” ಕಿರು ಚಿತ್ರ ಪ್ರದರ್ಶನ!
– ಇದೀಗ 40ನೇ ಪ್ರದರ್ಶನಕ್ಕೆ ಸಜ್ಜು: ಸರ್ವರಿಗೂ ಸ್ವಾಗತ
– ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವ ಭಾವನಾತ್ಮಕ ಕಥೆ
– ಸಿನಿಮಾ ವೀಕ್ಷಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ

NAMMUR EXPRESS NEWS
ತೀರ್ಥಹಳ್ಳಿ: ಆದರ್ಶ್ ರಾವ್ ಮತ್ತು ಶಶಿ ಶೆಟ್ಟಿ ಅವರ ನಿರ್ಮಾಪಕದಲ್ಲಿ, ಶ್ರೀಧರ್ ರಂಗಾಯಣ ಅವರ ನಿರ್ದೇಶನದಲ್ಲಿ, ಪ್ರಿನ್ಸ್ ಜೋಸೆಫ್ ಅವರ ಸಂಗೀತದಲ್ಲಿ ನಿರ್ಮಾಣಗೊಂಡಿರುವ ಅರ್ಜುನ ಕಿರು ಚಿತ್ರ ಇದೀಗ 40ನೇ ಪ್ರದರ್ಶನಕ್ಕೆ ಸಿದ್ಧವಾಗುತ್ತಿದೆ. ರಾಜ್ಯದ ಅನೇಕ ಕಡೆ 39 ಪ್ರದರ್ಶನ ಮುಗಿಸಿ ಇದೀಗ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಡಿಸೆಂಬರ್ 8ರ ಭಾನುವಾರ 4 ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಂಡಿದೆ. ಮಲೆನಾಡ ಹುಡುಗ ಶ್ರೀಧರ್ ರಂಗಾಯಣ ನಿರ್ದೇಶಕರಾಗಿರುವ ಈ 1 ಗಂಟೆ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಭಾನುವಾರ 3.00 – 4.30, 5.00-6:30, 7:00-8:30 ಸಮಯಕ್ಕೆ ಪ್ರದರ್ಶನಗೊಳ್ಳಲಿದೆ.

ಅರ್ಜುನ ಎಂದರೆ ಮಹಾಭಾರತದ ಅರ್ಜುನವಲ್ಲ ಹಾಗಿದ್ದರೆ ಈ ಅರ್ಜುನ ಯಾರು?

“ಇದು ಬರೀ ನನ್ನ ಕಥೆಯಲ್ಲ ನನ್ನ ಅಪ್ಪನ ಕಥೆ, ಅಮ್ಮನ ಕಥೆ ಫ್ರೆಂಡ್ಸ್ ಕಥೆ ಹೆಚ್ಚು ಕಮ್ಮಿ ಎಲ್ಲರ ಕಥೆ” ಎಂದು ವಿಭಿನ್ನವಾಗಿ ಟ್ರೈಲರ್ ಮೂಲಕ ರಚನೆಗೊಂಡ ಅರ್ಜುನ ಕಿರುಚಿತ್ರ ಸತತ 39 ಬಾರಿ ಭರ್ಜರಿ ಪ್ರದರ್ಶನಗೊಂಡು ಇದೀಗ 40ನೇ ಪ್ರದರ್ಶನಕ್ಕೆ ಸಜ್ಜಾಗಿದೆ. ಟ್ರೈಲರ್ ಮೂಲಕವೇ ಸಾಕಷ್ಟು ಜನರ ಮನಸ್ಸನ್ನು ಗೆದ್ದ ಈ ಕಥೆ ಭಾವನಾತ್ಮಕವಾಗಿ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವ ವಿಭಿನ್ನ ಕಥೆ ಎಂದು ನಮ್ಮೂರ್ ಎಕ್ಸ್ ಪ್ರೆಸ್ ಸ್ಟುಡಿಯೋದಲ್ಲಿ ನಿರ್ದೇಶಕ ಶ್ರೀಧರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹದಿಹರೆಯದ ವಯಸ್ಸಿನಲ್ಲಿ ಮಾಡುವ ತಪ್ಪು, ಆ ತಪ್ಪಿನಿಂದ ನರಳಾಟ ಈ ವಿಚಾರ ಪೋಷಕರ ಮೇಲೆ ಹೇಗೆ ಪರಿಣಾಮ ಬೀರಬಹುದು ಈ ಎಲ್ಲಾ ವಿಷಯಗಳನ್ನು ಒಳಗೊಂಡ ಅದ್ಭುತ ಸಿನಿಮಾ ಎಂದೇ ಹೇಳಬಹುದು. ಇದೊಂದು ಪ್ರತಿಯೊಬ್ಬ ತಂದೆ ತಾಯಿ ಮಕ್ಕಳ ಜೊತೆಗೆ ಕೂತು ನೋಡಲೇಬೇಕಾದ ವಿಶೇಷ ಸಿನಿಮಾ.ನೀವು ಹಾಗೂ ನಿಮ್ಮ ಕುಟುಂಬಸ್ಥರು ಸಿನಿಮಾ ವೀಕ್ಷಿಸುವ ಮೂಲಕ ಹೊಸ ಪ್ರತಿಭೆ ಹಾಗೂ ಯುವಕರನ್ನು ಪ್ರೋತ್ಸಾಹಿಸಿ, ಕನ್ನಡ ಕಿರು ಚಿತ್ರಗಳನ್ನು ಉಳಿಸಿ ಬೆಳೆಸಬೇಕಾಗಿ ಅವರು ಮನವಿ ಮಾಡಿದ್ದಾರೆ. ಚಿತ್ರದ ಎಡಿಟರ್ ಗಣೇಶ್ ತೀರ್ಥಹಳ್ಳಿ ಕೂಡ ಜತೆಗಿದ್ದು ಚಿತ್ರವನ್ನು ಎಲ್ಲರೂ ವೀಕ್ಷಿಸಿ ಬೆಂಬಲಿಸಲು ಕೋರಿದ್ದಾರೆ.

Categories
ಚಿಕ್ಕಮಗಳೂರು

ಕೊಪ್ಪ ಪಟ್ಟಣದ ರಸ್ತೆಯಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ!

ಕೊಪ್ಪ ಪಟ್ಟಣದ ರಸ್ತೆಯಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ!
– ಪ್ರತಿ ನಿತ್ಯ ವಾಹನ ಸವಾರರ ಪರದಾಟ: ದಿನವೂ ಅಪಘಾತ
– ಕಣ್ಮುಚ್ಚಿ ಕುಳಿತ ಅಧಿಕಾರಿಗಳು,ಜನಪ್ರತಿನಿಧಿಗಳು: ಪ್ರತಿಭಟನೆ ಎಚ್ಚರಿಕೆ

NAMMUR EXPRESS NEWS
ಕೊಪ್ಪ: ಕೊಪ್ಪ ಪಟ್ಟಣದ ಮುಖ್ಯರಸ್ತೆಯಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ ನಿರ್ಮಾಣಗೊಂಡಿದೆ. ಇದರಿಂದ ದಿನವು ಅಪಘಾತಗಳು ನಡೆಯುತ್ತಿದ್ದು ಜನರು ಹೈರಾಣಾಗಿದ್ದಾರೆ. ಗುಂಡಿಗಳನ್ನು ಮಣ್ಣಿನಿಂದ ಮುಚ್ಚುವ ಕೆಲಸವಾಯಿತಾದರೂ ಅದು ಎರಡೇ ದಿನದಲ್ಲಿ ಮತ್ತೆ ಗುಂಡಿ ಬೀಳುತ್ತಿದೆ. ದಿನನಿತ್ಯ ಶಾಲಾಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ,ಸಾರ್ವಜನಿಕರಿಗೆ ತೀವ್ರತೊಂದರೆಯಾಗುತ್ತಿದೆ. ಈ ಬಗ್ಗೆ ಶಾಸಕರು, ಅಧಿಕಾರಿಗಳು ಗಮನ ಹರಿಸಬೇಕು ಎಂದು ಜನತೆ ಅಗ್ರಹಿಸಿದ್ದಾರೆ.

ಶಾಶ್ವತ ಪರಿಹಾರ ಯಾಕಿಲ್ಲ…?

ಕೊಪ್ಪದ ಮೇಲಿನ ಪೇಟೆಯಲ್ಲಿ ರಸ್ತೆ ಗುಂಡಿಗಳಿಂದ ಬೈಕ್ ಸವಾರರು,ಪ್ರಯಾಣಿಕರು ಬಿದ್ದು ತೊಂದರೆಗಳಾಗಿವೆ. ಸೋಮವಾರ ಕೂಡ ಸ್ಥಳೀಯ ವಿದ್ಯಾರ್ಥಿಯೊಬ್ಬ ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು ಗಾಯಗೊಂಡು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನ ನಿತ್ಯ ಬೆಳಿಗ್ಗೆ ತಾಯಂದಿರು ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕರೆತಂದು ಶಾಲೆಗೆ ಬಿಡುತ್ತಾರೆ ಹೀಗಿರುವಾಗ ರಸ್ತೆಯ ಈ ಅವ್ಯವಸ್ಥೆಯಿಂದ ತೀರಾ ತೊಂದರೆ ಉಂಟಾಗಿದ್ದು ಈ ಸಮಸ್ಯೆಗೆ ಶಾಶ್ವತ ಪರಿಹಾರಬೇಕಿದೆ.

ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಹಲವು ದಿನಗಳಿಂದ ಉಂಟಾಗಿರುವ ಈ ಸಮಸ್ಯೆಗೆ ಅಧಿಕಾರಿಗಳು,ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕಲ್ಪಿಸದೇ ಇದ್ದಲ್ಲಿ ಮೇಲಿನಪೇಟೆಯಲ್ಲಿ ಪ್ರತಿಭಟನೆ ನಡೆಸೋದಾಗಿ ಸ್ಥಳೀಯರು “ನಮ್ಮೂರ್ ಎಕ್ಸ್‌ಪ್ರೆಸ್‌”ಗೆ ತಿಳಿಸಿದ್ದಾರೆ.