Categories
ತೀರ್ಥಹಳ್ಳಿ

ತೆಪ್ಪೋತ್ಸವಕ್ಕೆ ಕ್ಷಣಗಣನೆ ಆರಂಭ!

ತೆಪ್ಪೋತ್ಸವಕ್ಕೆ ಕ್ಷಣಗಣನೆ ಆರಂಭ!
– ಲಕ್ಷ ಲಕ್ಷ ಜನ ಸೇರುವ ಸಾಧ್ಯತೆ
– ತುಂಗಾತೀರದ್ಲಲಿ ತೆಪ್ಪೋತ್ಸವಕ್ಕೆ ಸಜ್ಜು
– ರಥ ಬೀದಿಯಲ್ಲಿ ಜನ ಸಾಗರ
– ನದಿ ತೀರದಲ್ಲಿ ಪಟಾಕಿ/ಸಿಡಿಮದ್ದುಗಳನ್ನು ಅಚ್ಚುಕಟ್ಟಾಗಿ ಜೋಡಣೆ

NAMMUR EXPRESS NEWS:
ತೀರ್ಥಹಳ್ಳಿ: ಜಾತ್ರೆಯಲ್ಲಿ ತೆಪ್ಪೋತ್ಸವಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದ್ದು ತುಂಗಾ ತೀರ, ರಥಬೀದಿಯಾದ್ಯಂತ ಜಾತ್ರೆಯಲ್ಲಿ ಜನಸಾಗರವೇ ತುಂಬಿದೆ.
ತೀರ್ಥಹಳ್ಳಿ ತಾಲೂಕು ಮಾತ್ರವಲ್ಲದೆ ಬೇರೆ – ಬೇರೆ ಊರುಗಳಿಂದಲೂ ಜನ, ತೆಪ್ಪೋತ್ಸವ ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ನದಿ ತೀರದಲ್ಲಿ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದು ಅದನ್ನು ನೋಡುವುದೇ ಒಂದು ಸಂಭ್ರಮ. ಎಲ್ಲಾ ಶಾಸಕರು, ತಹಶೀಲ್ದಾರರು, ಡಿ ವೈ ಎಸ್ ಪಿ ಗಜಾನನ ವಾಮನ ಸುತಾರ ಹಾಗೂ ಪೋಲಿಸ್ ಇಲಾಖೆಯವರು ಹಾಗೂ ಮುಖ್ಯ ಅತಿಥಿಗಳು ತೆಪ್ಪೋತ್ಸವಕ್ಕೆ ಚಾಲನೆಯನ್ನು ನೀಡುತ್ತಾರೆ. ತೆಪ್ಪವನ್ನು ವಿವಿಧ ಹೂವುಗಳಿಂದ, ಹಾರ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುತ್ತದೆ. ವಿಶೇಷವಾದ ಆಕರ್ಷಣೆಯ 6 ಲಕ್ಷಕ್ಕೂ ಹೆಚ್ಚು ಪಟಾಕಿ ಹಾಗೂ ಸಿಡಿಮದ್ದುಗಳನ್ನು ಸಿಡಿಸಲಾಗುತ್ತದೆ. ಈ ಪಟಾಕಿಗಳನ್ನ ಸಿಡಿಸುವುದು ತುಂಬಾ ಆಕರ್ಷಣೀಯವಾಗಿರುತ್ತದೆ ಆದ್ದರಿಂದ ಪಟಾಕಿ ಸಿಡಿಸುವುದನ್ನು ನೋಡಲು ಜನ ಬೇರೆ ಬೇರೆ ಊರುಗಳಿಂದಲೂ ಕೂಡ ಈ ತೆಪ್ಪೋತ್ಸವವನ್ನು ವೀಕ್ಷಣೆ ಮಾಡಲು ಬರುತ್ತಾರೆ.

ಎಳ್ಳಮಾವ್ಯಾಸೆ ಜಾತ್ರೆಯ ಎಲ್ಲಾ ವಿಡಿಯೋ ಹಾಗೂ ಸುದ್ದಿಗಳಿಗಾಗಿ ನಮ್ಮೂರ ಎಕ್ಸಪ್ರೆಸ್ ಯೂಟ್ಯೂಬ್ ಚಾನಲ್ ಅನ್ನ ವೀಕ್ಷಿಸಿ subscribe ಮಾಡಿ ಮಲೆನಾಡಿನ ಎಲ್ಲರಿಗೂ ಶೇರ್ ಮಾಡಿ…

Categories
ತೀರ್ಥಹಳ್ಳಿ

ಮಾಳ ಗುರುಕುಲದಲ್ಲಿ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ

ಮಾಳ ಗುರುಕುಲದಲ್ಲಿ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ

ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇದರ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ
ದಿನಾಂಕ 29.12.2024ನೇ ರವಿವಾರದಂದು ಜರುಗಿತು. ಶೈಕ್ಷಣಿಕ ಕ್ಷೇತ್ರದಲ್ಲಿ 2025 ನೇ ಇಸವಿಯಲ್ಲಿ 75 ವಸಂತಗಳನ್ನು ಪೂರೈಸುತ್ತಿರುವ ಗುರುಕುಲ ಶಾಲೆಯ ಅಮೃತ ಮಹೋತ್ಸವವನ್ನು 2025ನೇ ಇಸವಿಯಲ್ಲಿ ಡಿಸೆಂಬರ್ 26 ಮತ್ತು 27ನೇ ದಿನಾಂಕದಂದು ನಡೆಸುವುದೆಂದು ನಿರ್ಧರಿಸಲಾಯಿತು ವಿದೇಶಗಳಲ್ಲಿ ನೆಲೆಸಿರುವ ಶಾಲಾ ಹಳೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಭಾಗವಹಿಸಿದ ಈ ಸಭೆಯಲ್ಲಿ ವಿವಿಧ ಸಮಿತಿಗಳ ರಚನೆ, ಹಳೆ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹ, ಅಮೃತ ಮಹೋತ್ಸವದ ಸ್ಮಾರಕ ಕಟ್ಟಡ ನಿರ್ಮಾಣ, ವರ್ಷಪೂರ್ತಿ ಆಚರಿಸುವ ಕಾರ್ಯಕ್ರಮಗಳ ಬಗ್ಗೆ ರೂಪುರೇಷೆಗಳನ್ನು ಚರ್ಚಿಸಲಾಯಿತು. ಶ್ರೀ ಗುರುಕುಲ ವಿದ್ಯಾವರ್ಧಕ ಸಂಘದ ಗೌರವ ಸಲಹೆಗಾರರಾದ ನಾಗಭೂಷಣ ಜೋಶಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು ಸಂಘದ ಅಧ್ಯಕ್ಷ ಗಜಾನನ ಮರಾಠೆ ಕಾರ್ಯದರ್ಶಿ ಗೀತಾ ಸೇರಿಗಾರ್, ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ, ನೆಕ್ಸ್ಟ್ ಜನರೇಷನ್ ಸಂಸ್ಥೆಯ ಅಧ್ಯಕ್ಷ ಗುರುರಾಜ್ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶಾಲಾ ಮಕ್ಕಳಿಗೆ ಕಳೆದ ಎರಡು ವರ್ಷಗಳಿಂದ ಉಚಿತವಾಗಿ ವೇದಗಣಿತ ಮತ್ತು ಅಬಾಕಸ್ ತರಗತಿಗಳನ್ನು ನಡೆಸಿಕೊಡುತ್ತಿರುವ ಶ್ರೀ ಗುರುರಾಜ ಹೆಗಡೆ ಮತ್ತು ಶ್ರೀಮತಿ ಲಕ್ಷ್ಮೀ ಗುರುರಾಜ ಹೆಗಡೆ ಇವರನ್ನು ಸಭೆಯಲ್ಲಿ ಗೌರವಿಸಲಾಯಿತು ಅಂತೆಯೇ ಇತ್ತೀಚೆಗೆ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಿಜೇತರಾದ ನಮ್ಮ ಶಾಲಾ ಮಕ್ಕಳಾದ ಅಪೇಕ್ಷಾ ಕಾಮತ್ ಸಮೃದ್ಧಿ ಬರ್ವೆ ಮನ್ವಿತ್ ಜೋಶಿ ಇವರನ್ನು ಸಭೆಯಲ್ಲಿ ಪುರಸ್ಕರಿಸಲಾಯಿತು. ಇತ್ತೀಚಿಗೆ ಅನುದಾನ ರಹಿತ ಶಾಲೆಗಳ ಸಂಘದಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗುರುಕುಲ ಶಾಲಾ ಅಧ್ಯಕ್ಷ ಗಜಾನನ ಮರಾಠೆ ದಂಪತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ರಘುಪತಿ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು. ರಾಮ ಸೇರಿಗಾರ್ ವಂದನಾರ್ಪಣೆಗೈದರು. ಸಭೆಯ ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಶಾಲೆಯ ಮಹಾ ಪೋಷಕರಾದ ಮರಾಠೆ ಮಿಲ್ಕ್ ಪ್ರಾಡಕ್ಟ್ಸ್ ನ ಮಾಲಕರಾದ ಗೋವಿಂದ ಮರಾಠೆ ಇವರಿಗೆ ಒಂದು ನಿಮಿಷ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Categories
ತೀರ್ಥಹಳ್ಳಿ

ರಾಮೇಶ್ವರ ಜಾತ್ರೆಯ ರಥೋತ್ಸವ ಸಂಭ್ರಮ!

ರಾಮೇಶ್ವರ ಜಾತ್ರೆಯ ರಥೋತ್ಸವ ಸಂಭ್ರಮ!
– ರಥೋತ್ಸವಕ್ಕೆ ಸಾವಿರಾರು ಜನ ಭಕ್ತಾದಿಗಳ ಆಗಮನ
– ರಥೋತ್ಸವ, ಮೆರವಣಿಗೆಯ ಸುಂದರ ಫೋಟೋ ಇಲ್ಲಿದೆ

ರಾಮೇಶ್ವರನಿಗೆ ಉಘೇ ಉಘೇ..!

ಎಳ್ಳಮಾವ್ಯಾಸೆ ಜಾತ್ರೆಯ ಎಲ್ಲಾ ವಿಡಿಯೋ ಹಾಗೂ ಸುದ್ದಿಗಳಿಗಾಗಿ ನಮ್ಮೂರ ಎಕ್ಸಪ್ರೆಸ್ ಯೂಟ್ಯೂಬ್ ಚಾನಲ್ ಅನ್ನ ವೀಕ್ಷಿಸಿ subscribe ಮಾಡಿ ಮಲೆನಾಡಿನ ಎಲ್ಲರಿಗೂ ಶೇರ್ ಮಾಡಿ…

Categories
ರಾಜ್ಯ

ಟಾಪ್ ನ್ಯೂಸ್ ಕರ್ನಾಟಕ

ಟಾಪ್ ನ್ಯೂಸ್ ಕರ್ನಾಟಕ
– ಮಂಗಳೂರು: ಅಪಘಾತದಲ್ಲಿ ಯುವ ಕಲಾವಿದ ಸಾವು..!
– ದಾವಣಗೆರೆಯಲ್ಲಿ ಬೈಕ್ ಅಪಘಾತದಲ್ಲಿ ಯುವಕ ಸಾವು..!
– ರಾಮನಗರ : ಮಾಗಡಿ ಸಮೀಪ ಕಾರ್‌ ಅಪಘಾತದಲ್ಲಿ ಟೀ ಕುಡಿಯಲು ಹೊರಟಿದ್ದ ಇಬ್ಬರು ಸಾವು!
– ಹೊನ್ನಾವರ : ಬಸ್‌ ಬೈಕ್‌ ಡಿಕ್ಕಿಯಿಂದ ಮೂವರು ಸಾವು
– ರಾಮನಗರ : ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲಿ ಸಾವು

NAMMUR EXPRESS NEWS
ಮಂಗಳೂರು:
ಅರ್ಕುಳ ಬಳಿ ರಸ್ತೆ ಅಪಘಾತದಲ್ಲಿ ಯುವ ಕಲಾವಿದ, ಬಿಎಸ್‌ಡಬ್ಲ್ಯೂ ವಿದ್ಯಾರ್ಥಿ ಸ್ಥಳದಲ್ಲೇ ಅಸುನೀಗಿದ್ದಾರೆ. 2024 ರ ಕೊನೆಯ ದಿನ ಘಟನೆ ನಡೆದಿದೆ‌.
ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರವೀತ್ ಕುಮಾ‌ರ್ (22) ಮೃತಪಟ್ಟ ವಿದ್ಯಾರ್ಥಿ. ಬೆಳ್ತಂಗಡಿ ದೇಲಂತಬೆಟ್ಟು ನಿವಾಸಿ, ಪ್ರವೀತ್ ಯಕ್ಷಗಾನ ಕಲಾವಿದನೂ ಹೌದು. ಅರ್ಕುಳ ಸಮೀಪ ಬೈಕ್‌ ರಸ್ತೆಗೆ ಬಿದ್ದಿದ್ದು ಈ ವೇಳೆ ಐಸ್ ಕ್ರೀಮ್ ಸಾಗಿಸುತ್ತಿದ್ದ ವಾಹನ ಯುವಕನ ಮೇಲೆ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ವರ್ಷಾಂತ್ಯದಲ್ಲಿ ದಾರುಣ ಘಟನೆ ನಡೆದಿದೆ. ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

– ದಾವಣಗೆರೆಯಲ್ಲಿ ಬೈಕ್ ಅಪಘಾತದಲ್ಲಿ ಯುವಕ ಸಾವು

ದಾವಣಗೆರೆ: ಹೊಸ ವರ್ಷ ಸಂಭ್ರಮದ ದಿನವೇ ಬೈಕ್ ಅಪಘಾತಕ್ಕೆ ಯುವಕನೊಬ್ಬ ಸಾವಿಗೀಡಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಿಟ್ಟುವಳ್ಳಿ ಹೊಸ ಬಡಾವಣೆಯ ಕಾರ್ತಿಕ್ (19) ಮೃತ ಯುವಕ. ಕಳೆದ ರಾತ್ರಿ 1 ಗಂಟೆ ಸುಮಾರಿಗೆ ದಾವಣಗೆರೆ ನಗರದ ನೂತನ್ ಕಾಲೇಜು ಮುಂಭಾಗ ಬೈಕ್ ಅಪಘಾತ ಸಂಭವಿಸಿತು. ಅಪಘಾತದಲ್ಲಿ ಕಾರ್ತಿಕ್ ಮೃತಪಟ್ಟಿದ್ದು, ಮತ್ತೊಬ್ಬ ಯುವಕ ಗಂಭೀರ ಗಾಯಗೊಂಡಿದ್ದಾನೆ. ಹೊಸ ವರ್ಷ ಸಂಭ್ರಮಾಚರಣೆಗೆ ಸ್ನೇಹಿತರ ಜೊತೆ ಯುವಕ ಆಗಮಿಸುತ್ತಿದ್ದ. ಬೈಕ್‌ನಲ್ಲಿ ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

– ರಾಮನಗರ : ಮಾಗಡಿ ಸಮೀಪ ಕಾರ್‌ ಅಪಘಾತದಲ್ಲಿ ಟೀ ಕುಡಿಯಲು ಹೊರಟಿದ್ದ ಇಬ್ಬರು ಸಾವು!

ರಾಮನಗರ : ಹೊಸ ವರ್ಷದ ಮೊದಲ ದಿನದಂದೇ ರಾಮನಗರ ಜಿಲ್ಲೆಯ ಮಾಗಡಿ ಸಮೀಪ ಅಪಘಾತವಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಸ್ನೇಹಿತರೆಲ್ಲಾ ಟೀ ಕುಡಿಯಲು ಹೊರಟಿದ್ದ ಯುವಕರ ಕಾರು ಪಲ್ಟಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಐವರಿಗೆ ಗಾಯವಾಗಿವೆ. ಮಾಗಡಿ ತಾಲೂಕಿನ ಹೊಸಪಾಳ್ಯದ ಜನತಾ ಕಾಲೋನಿ ಬಳಿ ಬೆಳಗಿನ‌ ಜಾವ 3 ಗಂಟೆಗೆ ಘಟನೆ ನಡೆದಿದೆ. ಮಂಜು (31), ಕಿರಣ್ (30) ಮೃತರು ಎಂದು ಗುರುತಿಸಲಾಗಿದೆ. ಮೂಲತಃ ಮಾಗಡಿ ತಾಲೂಕಿನ ಚೋಳನಾಯಕನಹಳ್ಳಿ ಗ್ರಾಮದವರು. ಇನ್ನು ಗಾಯಾಳುಗಳಿಗೆ ಮಾಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

– ಹೊನ್ನಾವರ : ಬಸ್‌ ಬೈಕ್‌ ಡಿಕ್ಕಿಯಿಂದ ಮೂವರು ಸಾವು

ಹೊನ್ನಾವರ : ಹೊನ್ನಾವರ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಶರಾವತಿ ನದಿ ಸೇತುವೆಯಲ್ಲಿ ಮಂಗಳವಾರ ಕೆ ಎಸ್‌ ಆರ್‌ ಟಿ ಸಿ ಬಸ್‌ ಮತ್ತು ಬೈಕ್‌ ನಡುವೆ ಡಿಕ್ಕಿಯಾಗಿ ಮೂವರು ಬೈಕ್‌ ಸವಾರರು ಮೃತಪಟ್ಟಿದ್ದಾರೆ. ಮಾವಿನಕುರ್ವಾದ ರಾಘವೇಂದ್ರ ಸೋಮಯ್ಯ ಗೌಡ ( 34 ), ಖರ್ವಾ ನಾಥಗೇರಿಯ ರಮೇಶ ರಾಮಚಂದ್ರ ನಾಯ್ಕ ( 22 ) ಹಾಗೂ ಸಂಶಿ – ಕುದ್ರಿಗಿಯ ಗೌರೀಶ ( ಗಣಪತಿ ) ಮಂಜುನಾಥ ನಾಯ್ಕ ( 22 ) ಮೃತರು. ವಿಜಯಪುರದಿಂದ ಮಂಗಳೂರಿಗೆ ಹೋಗುತ್ತಿರುವ ಬಸ್‌ ಸೇತುವೆಯಲ್ಲಿಸಾಗುತ್ತಿರುವಾಗ ಮಂಕಿ ಕಡೆಯಿಂದ ಹೊನ್ನಾವರ ಕಡೆಗೆ ಎದುರಿನಿಂದ ಬಂದ ಬೈಕ್‌ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಬೈಕ್‌ ಸವಾರರಾದ ರಾಘವೇಂದ್ರ ಗೌಡ ಮತ್ತು ರಮೇಶ ನಾಯ್ಕ ಸ್ಥಳದಲ್ಲೇ ಮೃತಪಟ್ಟರೆ, ಗೌರೀಶ ( ಗಣಪತಿ) ನಾಯ್ಕ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಮಾವಿನಕುರ್ವಾದ ಮಹೇಶ ಸೋಮಯ್ಯ ಗೌಡ ದೂರು ನೀಡಿದ್ದಾರೆ. ಬಸ್‌ ಚಾಲಕ ಬಸವನಬಾಗೇವಾಡಿ ತಾಲೂಕಿನ ಕರಬಂಟವಾಳದ ವಸಂತ ಭೀಮಪ್ಪ ಚೌವಾಣ ವಿರುದ್ದ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಮಮತಾ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

– ರಾಮನಗರ : ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲಿ ಸಾವು

ರಾಮನಗರ : ಅಪಘಾತದಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸಿದ್ದಪ್ಪ (45) ಮೃತ ವ್ಯಕ್ತಿ. ಮಾಗಡಿ ಹೊಸ ಪೇಟೆ ಸರ್ಕಲ್ ಬಳಿ ಘಟನೆ ನಡೆದಿದೆ. ಮಧ್ಯರಾತ್ರಿ 12.30 ರ ಸಮಯದಲ್ಲಿ ಘಟನೆ ನಡೆದಿದೆ. ದ್ವಿಚಕ್ರ ಸವಾರ ಮೋಹನ್ ಎಂಬಾತನಿಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ತೀರ್ಥಹಳ್ಳಿ

ಜಾತ್ರೆಯಲ್ಲಿ ಅನಘ ಸೊಸೈಟಿ ಮಹಿಳೆಯರ ಹೊಸ ಹೆಜ್ಜೆ..!!

ಜಾತ್ರೆಯಲ್ಲಿ ಅನಘ ಸೊಸೈಟಿ ಮಹಿಳೆಯರ ಹೊಸ ಹೆಜ್ಜೆ..!!
– ವಸ್ತ್ರೋದ್ಯಮದಲ್ಲಿ ವಿಶೇಷ ಸೇವೆ
– ಹೋಟೆಲ್,ಅಂಗಡಿ ತೆರೆದು ಗಮನ ಸೆಳೆದ ಮಹಿಳೆಯರು

NAMMUR EXPRESS NEWS
ತೀರ್ಥಹಳ್ಳಿ: ಈ ಬಾರಿಯ ತೀರ್ಥಹಳ್ಳಿ ಶ್ರೀರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಅನೇಕ ನವೀನ ಉದ್ಯಮಗಳು ಕೂಡ ಗ್ರಾಹಕರ ಗಮನಸೆಳೆಯುತ್ತಿದ್ದು,ಜಾತ್ರೆಯಲ್ಲಿ ಲಕ್ಷಾಂತರ ಜನರನ್ನು ಕೈಬೀಸಿ ಕರೆಯುತ್ತಿದೆ. ಜಾತ್ರೆಯಲ್ಲಿ ತೀರ್ಥಹಳ್ಳಿಯ ಪ್ರಸಿದ್ಧ ಮಹಿಳಾ ಸಹಕಾರಿ ಸಂಸ್ಥೆಯಾದ ಅನಘ ಸೊಸೈಟಿಯ ಸದಸ್ಯರುಗಳು ಬಟ್ಟೆ ಹಾಗೂ ಇತರ ಅಲಂಕಾರಿಕ ವಸ್ತುಗಳು ಸೇರಿದಂತೆ ರುಚಿಯಾದ ಅಡುಗೆ ಮಾಡಿ ಜನರಿಗೆ ಅಚ್ಚುಕಟ್ಟಾದ ಸೇವೆ ನೀಡಿ ಸೈ ಎನಿಸಿಕೊಂಡು ಸಾರ್ವಜನಿಕರಿಂದ ಸೈ ಎನಿಸಿಕೊಂಡಿದ್ದಾರೆ.
ಅನಘ ಸೊಸೈಟಿ ಕಳೆದ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದು, ಮಹಿಳಾ ಸಂಘಟನೆ ಮತ್ತು ಸಮಾಜ ಸೇವೆಯಲ್ಲಿಯೂ ಕೂಡ ತೊಡಗಿಕೊಂಡಿದೆ. ಈ ಮೂಲಕ ಹೊಸ ಹೆಜ್ಜೆಯೊಂದನ್ನು ಇಟ್ಟಿದೆ. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಮತಾ ಸಾಯಿನಾಥ್ ಸೇರಿದಂತೆ ಎಲ್ಲಾ ಸದಸ್ಯರು,ಪದಾಧಿಕಾರಿಗಳು ಹಾಜರಿದ್ದರು.

Categories
ಚಿಕ್ಕಮಗಳೂರು

ಶೃಂಗೇರಿ ನಾಗೇಶ್ ಕಾಮತ್‌ಗೆ ಸೇವಾ ಸಾಧಕ ಸನ್ಮಾನ..

ಶೃಂಗೇರಿ ನಾಗೇಶ್ ಕಾಮತ್‌ಗೆ ಸೇವಾ ಸಾಧಕ ಸನ್ಮಾನ..
– ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ಗೌರವ
– ಸಂಸ್ಥಾಪಕ ದಿ.ಅಜಿತ್ ಕುಮಾರ್ ಪುಣ್ಯಸ್ಮರಣೆ ಪ್ರಯುಕ್ತ ನೀಡುವ ಗೌರವ ಸನ್ಮಾನ
– ತಾಲೂಕಿನಾದ್ಯಂತ ಸೇವಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನಾಗೇಶ್ ಕಾಮತ್ ಸೇವೆ

NAMMUR EXPRESS NEWS
ಶೃಂಗೇರಿ: ಹಿಂದು ಸೇವಾ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದ ಸಂಸ್ಥಾಪಕರಾದ ದಿವಂಗತ ಅಜಿತ್ ಕುಮಾರ್ ಅವರ ಪುಣ್ಯಸ್ಮರಣೆ ನಿಮಿತ್ತ ಸೇವಾ ದಿನವನ್ನು ತಾಲೂಕಿನ ಮಾನುಗಾರಿನ ಜ್ಞಾನ ಭಾರತೀ ವಿದ್ಯಾಕೇಂದ್ರದ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ದಿ.ಅಜಿತ್ ಕುಮಾರ್ ಸ್ಮರಣಾರ್ಥ ಸೇವಾ ವಿಭಾಗದಲ್ಲಿ ಹಲವು ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ಸೇವಾ ಸಾಧಕ ಸನ್ಮಾನ ನೀಡಿ ಗೌರವಿಸಿದ್ದು, ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಕಳೆದ ಹತ್ತಾರು ವರ್ಷಗಳಿಂದ ಪ್ರಚಾರ ಬಯಸದೆ ಶ್ರಮಿಸುತ್ತಿರುವ ಶೃಂಗೇರಿಯ ನಾಗೇಶ್ ಕಾಮತ್ ಅವರಿಗೆ ಸೇವಾ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಕ್ತಾರರಾಗಿ ಆಗಮಿಸಿದ ಹರಿಹರಪುರದ ಪ್ರಭೋದಿನಿ ಗುರುಕುಲದ ಉಮೇಶ್ ಅವರು ಮಾತನಾಡಿ ಸಂಘದ ಪ್ರಚಾರಕರಾಗಿದ್ದ ಅಜಿತ್ ಕುಮಾರ್ ಅವರು ಸಾಮಾನ್ಯರು ಕೂಡ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು, ಸೇವೆಯ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಹಿಂದು ಸೇವಾ ಪ್ರತಿಷ್ಠಾನ ಪ್ರಾರಂಭ ಮಾಡಿದರು, ವಿಶೇಷ ಕಲ್ಪನೆಯೊಂದಿಗೆ ಸದಾ ಸಮಾಜಕ್ಕಾಗಿ ಕೆಲಸ ಮಾಡಿದ ಅಜಿತ್ ಕುಮಾರ್ ಅವರು ಕಡಿಮೆ ವಯಸ್ಸಿನಲ್ಲಿಯೇ ಅಪಘಾತದಲ್ಲಿ ಮರಣಹೊಂದಬೇಕಾಯಿತು, ಅವರನ್ನು ಒಮ್ಮೆ ಪೇಜಾವರ ಶ್ರೀಗಳು ಧಾವಂತದ ಸಂತ ಎಂದು ಬಣ್ಣಿಸಿದ್ದರು ಎಂದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಹಿಂದು ಸೇವಾ ಪ್ರತಿಷ್ಠಾನ ಸೇವಾ, ಸಂಸ್ಕಾರ ಪರಿಸರ, ಹೀಗೆ ಎಲ್ಲಾ ವಿಭಾಗದಲ್ಲಿ ಕೂಡ ಕಾರ್ಯ ಮಾಡುತ್ತಿದೆ, ಇದೇ ದಾರಿಯಲ್ಲಿ ನಾಗೇಶ್ ಕಾಮತ್ ಅಂತವರು ಕೂಡ ಪ್ರಚಾರ ಬಯಸದೆ ಸ್ವಚ್ಛ ಸುಂದರ ಪರಿಸರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಈ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಸಂಘಚಾಲಕರಾದ ವಿಶ್ವನಾಥ ಮಾನಗಾರು, ಹಿಂದು ಸೇವಾ ಪ್ರತಿಷ್ಠಾನದ ತಾಲೂಕು ಸಂಯೋಜಕರಾದ ಶ್ರೀ ನೂತನ ಸೂರ್ಯ ಮತ್ತು ಸುಮಂಗಲ ಆನಂದಸ್ವಾಮಿ, ಸುವರ್ಣ ಕೃಷ್ಣಮೂರ್ತಿ ಅವರು ಉಪಸ್ಥಿತರಿದ್ದರು.

Categories
ರಾಜ್ಯ

2025 ಹೊಸ ವರ್ಷಕ್ಕೆ ಸ್ವಾಗತ!

2025 ಹೊಸ ವರ್ಷಕ್ಕೆ ಸ್ವಾಗತ!
– ಹೊಸ ವರ್ಷದ ಸಂಭ್ರಮದಲ್ಲಿ ಮಿಂದೆದ್ದ ಜನ
– ಹಳೆ ವರ್ಷದ ಕಹಿ ಮರೆಯಾಗಿ ಹೊಸ ವರ್ಷತರಲಿ ಹೊಸತನ

NAMMUR EXPRESS NEWS
ಬೆಂಗಳೂರು: ಹಳೆ ವರ್ಷ ಮರೆಯಾಗಿ ಹೊಸ ವರ್ಷ ಬಂದಿದೆ. ಹೊಸ ವರ್ಷ ತಮ್ಮೆಲ್ಲರಿಗೂ ಹೊಸ ಹರುಷವನ್ನು ತರಲಿ. 2025 ರ ಹೊಸ ವರ್ಷವನ್ನು ರಾಜ್ಯದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲೂ ಹೊಸ ವರ್ಷದ ಸಂಭ್ರಮವನ್ನು ಆಚರಣೆ ಮಾಡಲಾಯಿತು. ಬೆಂಗಳೂರಿನ ಬ್ರಿಗೇಡ್ ರೋಡ್, ಕೋರಮಂಗಲ, ಜಯನಗರ ಸೇರಿದಂತೆ ಎಲ್ಲೆಡೆ ಜನರಿಂದ ತುಂಬಿ ಹೋದವು. ಸಾವಿರಾರು ಜನರು ಹೊಸ ವರ್ಷವನ್ನು ತುಂಬಾ ಸಂಭ್ರಮದಿಂದ ಸ್ವಾಗತವನ್ನು ಮಾಡಿದರು.
ಹೋಟೆಲ್ ಗಳು, ರೆಸ್ಟೋರೆಂಟ್ಗಳು, ಪಬ್ ಗಳು ಯುವ ಜನರಿಂದ ತುಂಬಿ ಹೋಗಿದ್ದವು. ಹೊಸ ವರ್ಷದ ಸಂಭ್ರಮದಲ್ಲಿ ಪಾರ್ಟಿ, ಡಾನ್ಸ್, ಪಟಾಕಿ ಸಂಭ್ರಮದ ಮೂಲಕ ಅದ್ದೂರಿಯಾಗಿ ನಡೆಯಿತು. ಪ್ರತಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲೂ ಹೊಸ ವರ್ಷವನ್ನು ಹಬ್ಬದಂತೆ ಜನತೆ ಸಂಭ್ರಮಿಸಿದರು. ಎಲ್ಲೆಡೆ ಡಿಜೆ ಸೌಂಡ್, ಊಟದ ವ್ಯವಸ್ಥೆ ಮಾಡಲಾಗಿತ್ತು. ತೀರ್ಥಹಳ್ಳಿ ಪಟ್ಟಣ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲೂ ಕೂಡ ಹೊಸ ವರ್ಷದ ಸಂಭ್ರಮ ಕಳೆಕಟ್ಟಿದೆ.

ದೇಗುಲಗಳಲ್ಲಿ ವಿಶೇಷ ಪೂಜೆ

ಹೊಸ ವರ್ಷದ ಅಂಗವಾಗಿ ವಿಶೇಷವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಹೊಸ ವರ್ಷ ಸರ್ವರಿಗೂ ಹೊಸತನವನ್ನು ತರುವ ಭರವಸೆಯನ್ನು ನೀಡಿದೆ. ಹೊಸ ವರ್ಷದ ಶುಭಾಶಯಗಳು, ಹೊಸ ಕೆಲಸವನ್ನ ಹೊಸತಾಗಿ ಆರಂಭ ಮಾಡಿ. ತಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

Categories
ಜಾತಕ

ಹೊಸ ವರ್ಷದ ಮೊದಲ ದಿನದ ರಾಶಿ ಫಲ ಹೇಗಿದೆ?

ಹೊಸ ವರ್ಷದ ಮೊದಲ ದಿನದ ರಾಶಿ ಫಲ ಹೇಗಿದೆ?
– ಯಾವ ರಾಶಿಯವರಿಗೆ ಈ ದಿನ ಶುಭ? ಯಾವ ರಾಶಿಯವರಿಗೆ ಈ ದಿನ ಅಶುಭ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಮೇಷ ರಾಶಿಯವರಿಗೆ ಇಂದು ಪ್ರಗತಿ ಮತ್ತು ಯಶಸ್ಸನ್ನು ತರುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು ಮತ್ತು ವ್ಯಾಪಾರಸ್ಥರಿಗೆ ಆರ್ಥಿಕ ಲಾಭದ ಸಮಯ. ಇಂದು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಹೊಸ ಬದಲಾವಣೆಗಳಿಗೆ ಸಿದ್ಧರಾಗಿರಿ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ನಿಮ್ಮ ಕೋಪವನ್ನು ನಿಯಂತ್ರಿಸಿ.

** ವೃಷಭ ರಾಶಿ :
ಇಂದು ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಇದು ಅತ್ಯುತ್ತಮ ಸಮಯ. ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ ಮತ್ತು ಜೀವನದಲ್ಲಿ ಸಮತೋಲನ ಇರುತ್ತದೆ. ಆದರೆ ಇಂದು ಯಾರಾದರೂ ನಿಮ್ಮ ಇಮೇಜ್ ಅನ್ನು ಹಾಳು ಮಾಡಲು ಪ್ರಯತ್ನಿಸಬಹುದು. ಅನುಪಯುಕ್ತ ಚರ್ಚೆಗಳನ್ನು ತಪ್ಪಿಸಿ. ಇಂದು ನಿಮ್ಮ ಬಾಕಿ ಕೆಲಸಗಳು ಯಶಸ್ವಿಯಾಗುತ್ತವೆ. ಉದ್ಯೋಗಿಗಳು ಹೆಚ್ಚುವರಿ ಕೆಲಸದ ಜವಾಬ್ದಾರಿಯನ್ನು ಪಡೆಯಬಹುದು.

** ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಇಂದು ಮಿಶ್ರ ಫಲಿತಾಂಶಗಳ ದಿನವಾಗಿರುತ್ತದೆ. ವಿದೇಶದಿಂದ ವ್ಯಾಪಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಶೈಕ್ಷಣಿಕ ಕೆಲಸದಲ್ಲಿ ಯಶಸ್ವಿಯಾಗುವಿರಿ. ಆದಾಯ ಹೆಚ್ಚಲಿದೆ. ನೀವು ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ಅಪರಿಚಿತ ವ್ಯಕ್ತಿಗಳನ್ನು ನಂಬುವುದನ್ನು ತಪ್ಪಿಸಿ. ನೀವು ವಾಣಿಜ್ಯಿಕವಾಗಿ ಬಲಶಾಲಿಯಾಗುತ್ತೀರಿ.

** ಕರ್ಕಾಟಕ ರಾಶಿ :
ಇಂದು ಬಹಳ ಶುಭ ದಿನವಾಗಿರುತ್ತದೆ. ಧರ್ಮಕಾರ್ಯಗಳಲ್ಲಿ ಹಣ ವ್ಯಯ ಮಾಡುವಿರಿ. ಕೌಟುಂಬಿಕ ಜೀವನದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಿ. ಅಪರಿಚಿತರನ್ನು ಕುರುಡಾಗಿ ನಂಬಬೇಡಿ. ಅಜಾಗರೂಕತೆಯನ್ನು ತಪ್ಪಿಸಿ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳು ಒಳ್ಳೆಯ ಸುದ್ದಿ ಪಡೆಯಬಹುದು. ಈ ದಿನ ಪ್ರೀತಿ ಮತ್ತು ಸಂಬಂಧಗಳಲ್ಲಿ ಬಲವನ್ನು ತರುತ್ತದೆ.

** ಸಿಂಹ ರಾಶಿ :
ಸಿಂಹ ರಾಶಿಯ ಜನರು ಇಂದು ಸ್ವಲ್ಪ ಜಾಗರೂಕರಾಗಿರಬೇಕು. ವ್ಯಾಪಾರದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು. ನಿಮ್ಮ ಸಹೋದರನಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಸಂಗಾತಿಯ ವೃತ್ತಿಯಲ್ಲಿ ಪ್ರಗತಿ ಕಾಣಲಿದೆ. ಹಣಕ್ಕೆ ಸಂಬಂಧಿಸಿದ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ. ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ನೋಡಿ.

** ಕನ್ಯಾ ರಾಶಿ :
ಇಂದು ಕನ್ಯಾ ರಾಶಿಯವರಿಗೆ ಹೊಸ ಅವಕಾಶಗಳು ಮತ್ತು ಯಶಸ್ಸಿನ ಸಮಯ. ವೃತ್ತಿಜೀವನದಲ್ಲಿ ಪ್ರಗತಿ ಇರುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಆರ್ಥಿಕ ಲಾಭದ ಸಾಧ್ಯತೆಯಿದೆ, ಇದು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ಆದರೆ ಅಧಿಕ ಖರ್ಚುಗಳಿಂದ ನಿಮ್ಮ ಮನಸ್ಸು ತೊಂದರೆಗೊಳಗಾಗಬಹುದು, ಆದರೆ ನಿಮ್ಮ ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ.

** ತುಲಾ ರಾಶಿ :
ಹೊಸ ವರ್ಷದ ಮೊದಲ ದಿನ ತುಲಾ ರಾಶಿಯವರು ಪ್ರಗತಿಯತ್ತ ಸಾಗುತ್ತಾರೆ. ನೈತಿಕತೆ ಬಲವಾಗಿ ಉಳಿಯುತ್ತದೆ. ವಿದ್ಯಾರ್ಥಿಗಳು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕೌಟುಂಬಿಕ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಒಂಟಿಯಾಗಿರುವವರ ಜೀವನದಲ್ಲಿ ಯಾರಾದರೂ ಬಡಿದಾಡಬಹುದು. ವರ್ಷದ ಮೊದಲ ದಿನದಂದು ಕೆಲಸದ ಸ್ಥಳದಲ್ಲಿ ಹೆಚ್ಚಿನ ಕೆಲಸ ಇರುತ್ತದೆ. ಅನಗತ್ಯ ಕೋಪವನ್ನು ತಪ್ಪಿಸಿ. ದೀರ್ಘಕಾಲದ ಸಮಸ್ಯೆಗಳು ದೂರವಾಗುತ್ತವೆ.

** ವೃಶ್ಚಿಕ ರಾಶಿ :
ಇಂದು ಶುಭ ದಿನವಾಗಲಿದೆ. ನೀವು ಆರ್ಥಿಕ ಯಶಸ್ಸನ್ನು ಪಡೆಯುತ್ತೀರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವಿರಿ. ಒಂಟಿ ಜನರ ಜೀವನದಲ್ಲಿ ವಿಶೇಷ ವ್ಯಕ್ತಿ ಪ್ರವೇಶಿಸಬಹುದು. ನಿಮ್ಮ ಹಿಂದಿನಿಂದ ನೀವು ಏನನ್ನಾದರೂ ಕಲಿಯಬೇಕು ಮತ್ತು ನಿಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಬೇಕು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ಕೆಲವು ಕಾರ್ಯಕ್ರಮಗಳಿಗೆ ಹೋಗಬಹುದು.

** ಧನಸ್ಸು ರಾಶಿ :
ನೀವು ಇಂದು ತುಂಬಾ ಬಿಡುವಿಲ್ಲದ ಕೆಲಸ ಹೊಂದಿರುತ್ತೀರಿ. ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಇಂದು ಯಾರಿಂದಲೂ ಹಣವನ್ನು ಸಾಲ ಪಡೆಯುವುದನ್ನು ತಪ್ಪಿಸಿ. ವೃತ್ತಿ ಸಂಬಂಧಿತ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ನೀವು ಪ್ರೀತಿಪಾತ್ರರ ಜೊತೆ ಕುಟುಂಬ ಸಮಾರಂಭದಲ್ಲಿ ಭಾಗವಹಿಸಬಹುದು. ಪ್ರಯಾಣದ ಅವಕಾಶವಿರುತ್ತದೆ.

** ಮಕರ ರಾಶಿ :
ಮಕರ ರಾಶಿಯವರಿಗೆ, ಈ ದಿನ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತದೆ. ಹೊಸ ಆಸ್ತಿಯನ್ನು ಖರೀದಿಸುವ ಅವಕಾಶವಿರುತ್ತದೆ ಮತ್ತು ಕೌಟುಂಬಿಕ ಜೀವನವು ಆಹ್ಲಾದಕರವಾಗಿರುತ್ತದೆ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಆಸ್ತಿ ಸಂಬಂಧಿತ ವಿವಾದಗಳು ಬಗೆಹರಿಯಲಿವೆ. ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಜೀವನ ಸಂಗಾತಿಯೊಂದಿಗೆ ನಿಮ್ಮ ಸಂಬಂಧವನ್ನು ಬಲಪಡಿಸಲು ನೀವು ಪ್ರಯತ್ನಿಸಬೇಕು.

** ಕುಂಭ ರಾಶಿ :
ಕುಂಭ ರಾಶಿಯವರಿಗೆ ಹೊಸ ವರ್ಷದ ಮೊದಲ ದಿನ ಸಾಮಾನ್ಯವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ವಿರೋಧಿಗಳು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಬುದ್ಧಿವಂತಿಕೆಯಿಂದ ವರ್ತಿಸಿ. ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ. ಕೆಲಸದಲ್ಲಿ ನಷ್ಟವಾಗುವ ಸಂಭವವಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಮಸ್ಯೆಗಳಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಮಗುವಿನ ಹಿರಿಯರೊಂದಿಗೆ ಮಾತನಾಡಿ ಸಮಸ್ಯೆಯನ್ನು ಪರಿಹರಿಸಿ.

** ಮೀನ ರಾಶಿ :
ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಯಶಸ್ಸನ್ನು ಪಡೆಯುತ್ತೀರಿ. ಆಸ್ತಿ ಸಂಬಂಧಿತ ವಿವಾದಗಳು ಬಗೆಹರಿಯಲಿವೆ. ಹೊಸ ಮನೆ ಅಥವಾ ಜಮೀನು ಖರೀದಿಸುವ ಸಾಧ್ಯತೆ ಇದೆ. ಕೆಲವರು ಕೆಲಸ ಬದಲಾಯಿಸಬಹುದು. ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗಬಹುದು. ಸಂಗಾತಿಯೊಂದಿಗಿನ ಸಂಬಂಧವು ಮಧುರವಾಗಿರುತ್ತದೆ.