Categories
ಕರಾವಳಿ

ಧರ್ಮಸ್ಥಳ ನೇತ್ರಾವತಿಯಲ್ಲೇ ಗೋಮಾಂಸ ಪತ್ತೆ!

ಧರ್ಮಸ್ಥಳ ನೇತ್ರಾವತಿಯಲ್ಲೇ ಗೋಮಾಂಸ ಪತ್ತೆ!
– ಹಿಂದೂ ಸಂಘಟನೆಯಿಂದ ಭಾರೀ ಆಕ್ರೋಶ
– ಉಗ್ರ ಹೋರಾಟಕ್ಕೆ ಹಿಂದೂ ಸಂಘಟನೆಗಳ ಕರೆ

NAMMUR EXPRESS NEWS
ಧರ್ಮಸ್ಥಳ: ಹಿಂದೂಗಳ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳದ ನೇತ್ರಾವತಿ ನದಿಯಲ್ಲೇ ಗೋಮಾತೆಯ ಮಾಂಸ ಪತ್ತೆಯಾಗಿದ್ದು ಹಿಂದೂ ಸಂಘಟನೆಯಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಾಹಿತಿ ಪ್ರಕಾರ, ನೇತ್ರಾವತಿಯನ್ನು ಸೇರುವ ಮೃತ್ಯುಂಜಯ ಹೊಳೆಯಲ್ಲಿ ಮೂಟೆಗಟ್ಟಲೆ ದನದ ಎಲುಬು, ರುಂಡ, ಚರ್ಮ ಪತ್ತೆಯಾಗಿದೆ. ಮುಖ್ಯವಾಗಿ ಚಾರ್ಮಾಡಿ ಗ್ರಾಮದ ನೇತ್ರಾವತಿ ನದಿಯ ದಂಡೆಯಲ್ಲಿ ಗೋಣಿ ಚೀಲಗಳಲ್ಲಿ ಗೋಮಾಂಸದ ತ್ಯಾಜ್ಯ ಪತ್ತೆಯಾಗಿದ್ದು, ಗೋ ಹಂತಕರು ಬೇಕಂತಲೇ ಪವಿತ್ರ ನದಿಯಲ್ಲಿ ಗೋಮಾಂಸ ಎಸೆದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಜೊತೆಗೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಗಡುವೂ ನೀಡಿದೆ. ಅದರಲ್ಲೂ ಮಂಜುನಾಥ ಸ್ವಾಮಿಗೆ ಪ್ರತಿನಿತ್ಯ ಅಭಿಷೇಕಕ್ಕಾಗಿ ಇದೇ ನೀರನ್ನು ಬಳಸಲಾಗುತ್ತದೆ. ಹೀಗಾಗಿ ಉದ್ದೇಶಪೂರ್ವಕವಾಗಿಯೇ ಹಿಂದೂಗಳ ನಂಬಿಕೆಗೆ ಧಕ್ಕೆ ತರುವ ಉದ್ದೇಶದಿಂದಲೇ ಗೋ ಹತ್ಯೆ ಮಾಡಿ ತ್ಯಾಜ್ಯವನ್ನು ಇಲ್ಲಿ ಹಾಕಿರಬಹುದು ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ತಪ್ಪಿತಸ್ಥರನ್ನು ಒಂದು ವಾರದೊಳಗಾಗಿ ಬಂಧಿಸದೇ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಬಜರಂಗ ದಳ ಎಚ್ಚರಿಕೆ ನೀಡಿದೆ. ಒಟ್ಟಿನಲ್ಲಿ ಮಂಜುನಾಥ ಸ್ವಾಮಿ ನೀನೇ ಕಾಪಾಡಬೇಕು ಎಂದು ಭಕ್ತರು ಮೊರೆಯಿಡುವಂತಾಗಿದೆ.

Categories
ಕರಾವಳಿ

ಉಡುಪಿ: ವಂಚನೆ ವಂಚನೆ ವಂಚನೆ!

ಉಡುಪಿ: ವಂಚನೆ ವಂಚನೆ ವಂಚನೆ!
– ಕಾರಾವಳಿಯಲ್ಲಿ ತುಂಬಿರುವ ಸ್ಟಾಕ್ ಮಾರ್ಕೆಟ್
– ಸ್ಟಾಕ್ ಮಾರ್ಕೆಟ್‌ ಆಮಿಷ, 49ಲಕ್ಷ ಗುಳುಂ!

NAMMUR EXPRESS NEWS
ಉಡುಪಿ: ಹೆಚ್ಚಿನ ಲಾಭಾಂಶದ ಆಸೆ ತೋರಿಸಿ, ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸುವ ಮೂಲಕ ಯುವಕನೋರ್ವ ಆನ್‌ಲೈನ್‌ನಲ್ಲಿ 49ಲಕ್ಷ ರೂ. ಹಣವನ್ನು ಕಳೆದುಕೊಂಡ ಘಟನೆ ಮೂಡುಬೆಳ್ಳೆಯಲ್ಲಿ ನಡೆದಿದೆ. ಮೂಡುಬೆಳ್ಳೆಯ ಫ್ರಾನ್ಸಿಸ್ ಕಾಸ್ತಲಿನೋ ಇವರ ಮಗನ ಮೊಬೈಲ್ ನಂಬರ್‌ನ್ನು ಯಾರೋ ಅಪರಿಚತರು ಸ್ಟಾಕ್‌ಮಾರ್ಕೆಟ್ ನೇವಿಗೇಷನ್ ಎಂಬ ವಾಟ್ಸಪ್ ಗ್ರೂಪ್‌ಗೆ ಸೇರಿಸಿದ್ದು, ಇದರ ಮೂಲಕ ಶೇರು ಮಾರುಕಟ್ಟೆ ಹಾಗೂ ಅದರಿಂದ ಸಿಗುವ ಲಾಭಾಂಶಗಳ ಬಗ್ಗೆ ಆಸೆ ತೋರಿಸಿ ಹಣವನ್ನು ಹೂಡಿಕೆ ಮಾಡುವಂತೆ ಅಮಿಷ ಒಡ್ಡಿದ್ದರು. ಅವರ ಬಲೆಗೆ ಬಿದ್ದ ಯುವಕ, ಅಪರಿಚಿತರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಕಳೆದ ಡಿ.30ರಿಂದ ತಂದೆಯ 17 ಲಕ್ಷ ರೂ., ತಾಯಿಯ 10.50 ಲಕ್ಷ ರೂ. ತಮ್ಮದೇ ಖಾತೆಯಿಂದ 21.50 ಲಕ್ಷ ರೂ.ಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದು, ಒಟ್ಟಾರೆಯಾಗಿ 49 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದರು. ಆದರೆ ನಂತರ ಹೂಡಿಕೆ ಮಾಡಿದ ಹಣವನ್ನು ವಾಪಾಸು ಪಡೆಯಲು ಪ್ರಯತ್ನಿಸಿದಾಗ ಪುನಹ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಲಾಗಿತ್ತು. ಆಗ ಹೂಡಿಕೆ ಮಾಡಿದ ಹಣ ಹಾಗೂ ಲಾಭಾಂಶಕ್ಕಾಗಿ ಕೇಳಿದಾಗ ಹಣ ನೀಡದೇ ನಂಬಿಸಿ, ವಂಚಿಸಿದ್ದಾಗಿ, ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Categories
ಕರಾವಳಿ

ಪುತ್ತೂರು: ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಎಂಟ್ರಿ!

ಪುತ್ತೂರು: ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಎಂಟ್ರಿ!
– ಸ್ಕೂಲ್‌ ಗೇಮ್ಸ್‌ ಫೆಡರೇಶನ್‌ ಆಫ್‌ ಇಂಡಿಯಾ ಕ್ರೀಡಾಕೂಟಕ್ಕೆ ಸಮೃದ್ಧಿ ಜೆ ಶೆಟ್ಟಿ ಆಯ್ಕೆ!
– ಜಾರ್ಖಂಡ್‌ನ ರಾಂಚಿಯಲ್ಲಿ ಕ್ರೀಡಾಕೂಟ ಆಯೋಜನೆ

NAMMUR EXPRESS NEWS
ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಮೃದ್ಧಿ ಜೆ ಶೆಟ್ಟಿ ಜಾರ್ಖಂಡ್‌ನ ರಾಂಚಿಯಲ್ಲಿ ನಡೆಯುವ ಸ್ಕೂಲ್‌ ಗೇಮ್ಸ್‌ ಫೆಡರೇಶನ್‌ ಆಫ್‌ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಹಾಗೂ ಹರಿಣಾಕ್ಷಿ ಜೆ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು, ಕಾಲೇಜಿನ ದೈಹಿಕಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಮಾರ್ಗದರ್ಶನ ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

Categories
ತೀರ್ಥಹಳ್ಳಿ

ರಾಮೇಶ್ವರ ತೆಪ್ಪೋತ್ಸವ ಸೂಪರ್..!

ರಾಮೇಶ್ವರ ತೆಪ್ಪೋತ್ಸವ ಸೂಪರ್..!
– ತುಂಗೆ ತೀರದ ಪಟಾಕಿ ಚಿತ್ತಾರ ಕಣ್ಣು ತುಂಬಿಕೊಂಡ ಒಂದು ಲಕ್ಷಕ್ಕೂ ಹೆಚ್ಚು ಜನ
– ತೆಪ್ಪದಲ್ಲಿ ಸಂಚಾರ ಮಾಡಿದ ರಾಮೇಶ್ವರ: ಪಟಾಕಿ ಚಿತ್ತಾರ

NAMMUR EXPRESS NEWS
ತೀರ್ಥಹಳ್ಳಿ: ಪ್ರತಿ ವರ್ಷದಂತೆ ಈ ವರ್ಷವೂ ಇಲ್ಲಿನ ಶ್ರೀ ರಾಮೇಶ್ವರ ದೇವರ ಎಳ್ಳಾಮಾವಾಸ್ಯೆ ತೆಪ್ಪೋತ್ಸವ ಸುಮಾರು ಲಕ್ಷ ಜನರ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಬುಧವಾರ ಸಂಜೆ ಇಡೀ ಪಟ್ಟಣದಲ್ಲಿ ಜನ ಸಾಗರವೇ ಹರಿದು ಬಂದಿತ್ತು. ಎಲ್ಲೆಡೆ ಬೆಳಕಿನ ಅಲಂಕಾರ, ವಿಶೇಷ ಜಾತ್ರಾ ಸೊಬಗು ಮೂಡಿತ್ತು. ತುಂಗಾ ನದಿಯಲ್ಲಿ ದೇವರ ಸುತ್ತು ಹಾಕಿ ಪಟಾಕಿ ಹೊಡೆಯಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಕ್ಷೇತ್ರದ ಶಾಸಕರು ಆದ ಆರಗ ಜ್ಞಾನೇಂದ್ರ, ಸಹಕಾರ ನಾಯಕರಾದ ಮಂಜುನಾಥ ಗೌಡ, ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಮತ್ತು ಡಾ. ಸುಂದರೇಶ್, ಪ್ರಮುಖರಾದ ಲಯನ್ಸ್ ಪಾಂಡುರಂಗಪ್ಪ, ತಹಸೀಲ್ದಾರ್ ರಂಜಿತ್, ಡಿವೈಎಸ್ಪಿ ಗಜಾನನ ವಾಮನ ಸುತಾರ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ವಿವಿಧ ರಂಗಗಳ ಗಣ್ಯರು ಇದ್ದರು. ಪ್ರಧಾನ ತಂತ್ರಿಗಳಾದ ಲಕ್ಷ್ಮೀಶ್ ತಂತ್ರಿ, ಪ್ರಧಾನ ಅರ್ಚಕರಾದ ರಾಜಶೇಖರ್ ಭಟ್ ತಂಡದಿಂದ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರು ರಾಯರ ಆಶೀರ್ವಾದಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರಿಗೆ ಏರಿಳಿತಗಳಿಂದ ಕೂಡಿದ ದಿನವಾಗಿರುತ್ತದೆ. ನೀವು ಕೆಲವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮನಸ್ಸು ವಿಚಲಿತವಾಗಬಹುದು. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಆದಾಯ ಮತ್ತು ಹೆಚ್ಚುವರಿ ವೆಚ್ಚದಲ್ಲಿ ಕಡಿತದ ಪರಿಸ್ಥಿತಿ ಇರಬಹುದು. ಆದರೆ ವೃತ್ತಿಜೀವನದಲ್ಲಿ ಹೊಸ ಅವಕಾಶಗಳೊಂದಿಗೆ ಪ್ರಗತಿಯ ಹಾದಿಗಳು ತೆರೆದುಕೊಳ್ಳಬಹುದು.

** ವೃಷಭ ರಾಶಿ :
ವೃಷಭ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ.
ನಿಮ್ಮಲ್ಲಿ ಪೂರ್ಣ ವಿಶ್ವಾಸ ಇರುತ್ತದೆ. ಆದರೆ ನೀವು ಕೆಲಸದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಕೆಲಸದ ವ್ಯಾಪ್ತಿಯ ಹೆಚ್ಚಳದೊಂದಿಗೆ ಸ್ಥಳ ಬದಲಾವಣೆಯಾಗಬಹುದು. ಕೆಲವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯಬಹುದು. ದಿನವು ಆರ್ಥಿಕವಾಗಿ ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಆತ್ಮೀಯರೊಂದಿಗೆ ಒಳ್ಳೆಯ ಸಮಯ ಕಳೆಯಬಹುದು.

** ಮಿಥುನ ರಾಶಿ :
ಇಂದು ಮಿಥುನ ರಾಶಿಯವರ ಕುಟುಂಬದಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯಬಹುದು. ನೀವು ಕಚೇರಿಗೆ ಸಂಬಂಧಿಸಿದ ಕೆಲಸಗಳಲ್ಲಿ ನಿರತರಾಗಿರಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಆಸ್ತಿಯಲ್ಲಿ ಹೆಚ್ಚಳವಾಗಬಹುದು. ಹಣಕಾಸಿನ ವೆಚ್ಚಗಳು ಹೆಚ್ಚಾಗುತ್ತವೆ. ಮಕ್ಕಳ ಆರೋಗ್ಯದ ಮೇಲೆ ನಿಗಾ ಇರಿಸಿ.

** ಕರ್ಕಾಟಕ ರಾಶಿ :
ಕರ್ಕಾಟಕ ರಾಶಿಯವರಿಗೆ ಇಂದು ಲಾಭದಾಯಕ ದಿನವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ, ಕುಟುಂಬ ಸಮೇತ ಧಾರ್ಮಿಕ ಸ್ಥಳಗಳಿಗೆ ಹೋಗಬಹುದು. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ನೀವು ಮಾಡುವ ಯಾವುದೇ ಯೋಜನೆ ಯಶಸ್ವಿಯಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.

** ಸಿಂಹ ರಾಶಿ :
ಇಂದು ಸಿಂಹ ರಾಶಿಯವರಿಗೆ ವ್ಯಾಪಾರದಲ್ಲಿ ಬೆಳವಣಿಗೆ ಇರುತ್ತದೆ. ವ್ಯಾಪಾರಸ್ಥರು ಇಂದು ತಾಳ್ಮೆಯಿಂದಿರಬೇಕು. ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ. ಚರ್ಚೆಯಿಂದ ಅಂತರ ಕಾಯ್ದುಕೊಳ್ಳಿ. ಸ್ನೇಹಿತರ ಬೆಂಬಲವು ಆರ್ಥಿಕ ಲಾಭವನ್ನು ತರುತ್ತದೆ. ಆರ್ಥಿಕವಾಗಿ ದಿನವು ಸಾಮಾನ್ಯವಾಗಿರುತ್ತದೆ.

** ಕನ್ಯಾ ರಾಶಿ :
ಕನ್ಯಾ ರಾಶಿಯ ಜನರು ಇಂದು ತಮ್ಮ ಮನಸ್ಸಿನಲ್ಲಿ ನಿರಾಶೆ ಮತ್ತು ಅಸಮಾಧಾನವನ್ನು ತಪ್ಪಿಸಬೇಕು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಸ್ನೇಹಿತರ ಸಹಾಯದಿಂದ, ಆದಾಯವನ್ನು ಹೆಚ್ಚಿಸುವ ಸಾಧನವನ್ನು ರಚಿಸಬಹುದು. ವ್ಯವಹಾರದಲ್ಲಿ ವಿಸ್ತರಣೆಯಾಗಬಹುದು. ಇಂದು ಯಾವುದೇ ರೀತಿಯ ಅಪಾಯವನ್ನು ತಪ್ಪಿಸಿ, ಇಲ್ಲದಿದ್ದರೆ ಆರ್ಥಿಕ ನಷ್ಟ ಸಂಭವಿಸಬಹುದು.

** ತುಲಾ ರಾಶಿ :
ತುಲಾ ರಾಶಿಯವರಿಗೆ ಇಂದು ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಯಶಸ್ಸನ್ನು ಪಡೆಯುತ್ತಾರೆ, ಆದರೆ ಶೈಕ್ಷಣಿಕ ಕೆಲಸಕ್ಕಾಗಿ ಕುಟುಂಬದಿಂದ ದೂರ ಹೋಗಬೇಕಾಗಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆರ್ಥಿಕವಾಗಿ ನೀವು ಮೊದಲಿಗಿಂತ ಉತ್ತಮ ಸ್ಥಿತಿಯಲ್ಲಿರುತ್ತೀರಿ.

** ವೃಶ್ಚಿಕ ರಾಶಿ :
ಇಂದು ನೀವು ಸರ್ಕಾರಿ ವ್ಯವಸ್ಥೆಯಿಂದ ಲಾಭವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಬೌದ್ಧಿಕ ಕೆಲಸದಿಂದ ಆದಾಯವೂ ಹೆಚ್ಚಾಗಬಹುದು. ಗೌರವದಲ್ಲಿ ಹೆಚ್ಚಳವಾಗಲಿದೆ. ಆತ್ಮೀಯರೊಂದಿಗೆ ಇರುತ್ತದೆ. ಕುಟುಂಬದಲ್ಲಿ ಹೊಸ ಸದಸ್ಯರು ಆಗಮಿಸಬಹುದು.

** ಧನಸ್ಸು ರಾಶಿ :
ಇಂದು ಧನು ರಾಶಿಯವರಿಗೆ ಏರಿಳಿತಗಳಿಂದ ಕೂಡಿದ ದಿನವಾಗಿರುತ್ತದೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ನೀವು ಉನ್ನತ ಸ್ಥಾನವನ್ನು ಪಡೆಯುತ್ತೀರಿ, ಆದರೆ ನಿಮ್ಮ ಕೆಲಸದ ಪ್ರದೇಶದಲ್ಲಿ ಬದಲಾವಣೆ ಇರಬಹುದು. ಉದ್ಯೋಗದಲ್ಲಿ ಪ್ರಗತಿಗಾಗಿ ಕಾಯುತ್ತಿರುವವರು ಹೆಚ್ಚು ಸಮಯ ಕಾಯಬೇಕಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಜನರು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು.

** ಮಕರ ರಾಶಿ :
ಇಂದು ಮಕರ ರಾಶಿಯವರಿಗೆ ಸಾಧನೆಗಳ ಪೂರ್ಣ ದಿನವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ಪೂರ್ಣ ವಿಶ್ವಾಸವೂ ಇರುತ್ತದೆ. ಉದ್ಯೋಗದಲ್ಲಿ ಬದಲಾವಣೆಯೊಂದಿಗೆ ಪ್ರಗತಿಯ ಅವಕಾಶಗಳು ಇರಬಹುದು. ಹಣದ ಒಳಹರಿವು ಹೆಚ್ಚಾಗುತ್ತದೆ.

** ಕುಂಭ ರಾಶಿ :
ಕುಂಭ ರಾಶಿಯವರಿಗೆ ಇಂದು ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ಉದ್ಯೋಗಕ್ಕಾಗಿ ಸಂದರ್ಶನವನ್ನು ನಿಗದಿಪಡಿಸಿದ ಜನರು ಯಶಸ್ಸನ್ನು ಪಡೆಯಬಹುದು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಹಣಕಾಸಿನ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಆದಾಯ ಹೆಚ್ಚಲಿದೆ. ಮಾತಿನ ಪ್ರಭಾವದಿಂದ ಬಾಕಿ ಕೆಲಸಗಳು ಪೂರ್ಣಗೊಳ್ಳುವವು. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.

** ಮೀನ ರಾಶಿ :
ಮೀನ ರಾಶಿಯವರಿಗೆ ಇಂದು ಶುಭ ದಿನವಾಗಿರುತ್ತದೆ. ಓದು ಬರಹದಲ್ಲಿ ಆಸಕ್ತಿ ಹೆಚ್ಚುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ವಿಯಾಗುವಿರಿ. ಆದಾಯವೂ ಸಂಪತ್ತನ್ನು ಹೆಚ್ಚಿಸಬಹುದು. ಸಂಪತ್ತು ವೃದ್ಧಿಯಾಗಲಿದೆ. ಸಂಪತ್ತು ವೃದ್ಧಿಯಾಗಲಿದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಧನಾತ್ಮಕ ಶಕ್ತಿ ತುಂಬಲಿದೆ. ಕಠಿಣ ಪರಿಶ್ರಮದಿಂದ ನೀವು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಸಾಧಿಸುವಿರಿ.

Categories
ತೀರ್ಥಹಳ್ಳಿ

ತೆಪ್ಪೋತ್ಸವ ಸಂಭ್ರಮಕ್ಕೆ 1 ಲಕ್ಷ ಸೇರುವ ನಿರೀಕ್ಷೆ!

ತೆಪ್ಪೋತ್ಸವ ಸಂಭ್ರಮಕ್ಕೆ 1 ಲಕ್ಷ ಜನ ಸೇರುವ ನಿರೀಕ್ಷೆ!
– ತೆಪ್ಪೋತ್ಸವ ಸಂಭ್ರಮ ವೀಕ್ಷಿಸಲು ರಾಜ್ಯದ ವಿವಿಧ ಮೂಲೆಯಿಂದ ಜನ
– ತೀರ್ಥಹಳ್ಳಿಯಲ್ಲಿ ಜನರೇ ಹುಷಾರ್
– ಕಂಡ ಕಂಡಲ್ಲಿ ಪಾರ್ಕಿಂಗ್ ಮಾಡುವ ಹಾಗೆ ಇಲ್ಲ, ಕಳ್ಳರ ಬಗ್ಗೆ ಎಚ್ಚರ

NAMMUR EXPRESS NEWS
ತೀರ್ಥಹಳ್ಳಿ :- ತೀರ್ಥಹಳ್ಳಿ ಪ್ರಸಿದ್ಧ ಶ್ರೀರಾಮೇಶ್ವರ ದೇವರ ಎಳ್ಳಮಾವಾಸೆ ಜಾತ್ರೆಯ ಕೊನೆಯ ದಿನದ ತೆಪ್ಪೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸೇರಿ ಮಲೆನಾಡಿನ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಈಗಾಗಲೇ 50,000ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು. ಸಂಜೆಯ ವೇಳೆಗೆ 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈಗಾಗಲೇ ಪೊಲೀಸ್ ಇಲಾಖೆ ಭದ್ರತೆ ವಹಿಸಲಾಗಿದ್ದು, ಪಾರ್ಕಿಂಗ್ ವ್ಯವಸ್ಥೆಗಳನ್ನು ಕೂಡ ರಸ್ತೆಯ ಪಕ್ಕದಲ್ಲಿ ಮಾಡಲಾಗಿದೆ. ತೀರ್ಥಹಳ್ಳಿ ಪಟ್ಟಣದ ವಿವಿಧ ಮೈದಾನಗಳಲ್ಲಿ ವಾಹನಗಳನ್ನ ನಿಲ್ಲಿಸಿದರೆ ಸೂಕ್ತ ಎಂದು ಪೋಲೀಸ್ ಇಲಾಖೆ ತಿಳಿಸಿದೆ. ಅದಲ್ಲದೆ ಲಕ್ಷಾಂತರ ಜನ ಸೇರುವ ಈ ತೆಪ್ಪೋತ್ಸವದಲ್ಲಿ ಜನ ಜಾಗ್ರತೆ ವಹಿಸಲು ಕೋರಲಾಗಿದೆ. ಇನ್ನು ಜಾತ್ರೆಯಲ್ಲಿ ಕಳ್ಳರು, ಸರಗಳ್ಳರೂ ಇರುವುದರಿಂದ ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಜಾಗೃತಿ ವಹಿಸಲು ಪೊಲೀಸ್ ಇಲಾಖೆ ಮನವಿ ಮಾಡಿದೆ. ಈಗಾಗಲೇ ತೆಪ್ಪೋತ್ಸವಕ್ಕೆ ಸಿದ್ಧತೆ ನಡೆದಿದ್ದು, ಎಲ್ಲಾ ರೀತಿಯ ಪಟಾಕಿಗಳನ್ನು ಹಾಗೂ ತೆಪ್ಪವನ್ನು ಸಿದ್ದ ಮಾಡಲಾಗಿದೆ. ನದಿಯ ಪಕ್ಕದಲ್ಲಿ ಜನ ಜಾಗೃತಿಯಿಂದ ಸಂಚರಿಸಲು ಮನವಿ ಮಾಡಲಾಗಿದೆ.

Categories
ಚಿಕ್ಕಮಗಳೂರು

ಶೃಂಗೇರಿಯಲ್ಲಿ ಅಬ್ಬರಿಸಿದ ಶಿವದೂತ ಗುಳಿಗ..!!?

ಶೃಂಗೇರಿಯಲ್ಲಿ ಅಬ್ಬರಿಸಿದ ಶಿವದೂತ ಗುಳಿಗ..!!?
* ರಂಗ ಸಿಂಗಾರ, ಶೃಂಗೇರಿ ಸಮಿತಿಯಿಂದ ನಾಟಕ ಪ್ರದರ್ಶನ ಆಯೋಜನೆ
* ನಾಟಕ ನೋಡಿ ಖುಷಿ ಪಟ್ಟ ಜನ,ಕಲಾವಿದರ ಅಭಿನಯಕ್ಕೆ ಫುಲ್ ಫಿಧಾ

NAMMUR EXPRESS NEWS
ಶೃಂಗೇರಿ: ತಾಲೂಕಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಮಹಾವೇದಿಕೆಯಲ್ಲಿ ರಂಗ ಸಿಂಗಾರ ತಂಡದಿಂದ ಆಯೋಜನೆಗೊಂಡಿದ್ದ ವಿನಯ್ ಕುಮಾರ್ ಕೋಡಿಯಾಲ್‌ಬೈಲ್‌ರವರ ನಿರ್ದೇಶನದ ” ಶಿವದೂತ ಗುಳಿಗ” ನಾಟಕವು ಯಶಸ್ವಿ ಪ್ರದರ್ಶನ ಕಂಡಿದೆ. ನಾಟಕ ನೋಡಲು ಸ್ಥಳೀಯರು ಸೇರಿದಂತೆ ದೂರ ದೂರುಗಳಿಂದ ಸಾವಿರಾರು ಜನ ಸೇರಿದ್ದರು. ಸುಮಾರು ಎಡೂವರೆ ಗಂಟೆಗಳ ಕಾಲ ಪ್ರದರ್ಶನಗೊಂಡ ನಾಟಕದಲ್ಲಿ ಕಾಂತಾರ ಸಿನಿಮಾದಲ್ಲಿ ನಟಿಸಿರುವ ಸ್ವರಾಜ್ ಶೆಟ್ಟಿಯವರ ಅದ್ಭುತ ನಟನೆ ಹಾಗೂ ಸಹಕಲಾವಿದರ ನಟನೆ ಹಾಗೂ ತಾಂತ್ರಿಕತೆಗೆ ನೆರೆದಿದ್ದ ಪ್ರೇಕ್ಷಕರ ಮನಗೆದ್ದಿದೆ. ಕಾರ್ಯಕ್ರಮವನ್ನು ಆದಿಚುಂಚನಗಿರಿ ಶಾಖಾಮಠದ ಶ್ರೀಶ್ರೀಗುಣನಾಥ ಸ್ವಾಮೀಜಿಯವರು ಉದ್ಘಾಟಿಸಿ, ಉಪಸ್ಥಿತರಿದ್ದು ಸಂಪೂರ್ಣ ನಾಟಕವನ್ನು ವೀಕ್ಷಿಸಿದರು.

ದೇವರನ್ನು ಪ್ರೀತಿಸಲು ನಿಜವಾದ ಭಕ್ತಿ,ನಂಬಿಕೆಯ ಅಗತ್ಯವಿದೆ..!!
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಶ್ರೀಗುಣನಾಥ ಸ್ವಾಮೀಜಿಯವರು ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶಗಳು ಮನುಷ್ಯನ ಅಸ್ತಿತ್ವದ ಅಡಿಪಾಯವನ್ನು ರೂಪಿಸುವ ಐದು ಅಂಶಗಳಾಗಿವೆ. ಇವುಗಳನ್ನು ಪೂಜಿಸಿ, ಪ್ರೀತಿಸಿ ಮತ್ತು ಮುಂದಿನ ಪೀಳಿಗೆಗೆ ಉಳಿಸಿವುದರಿಂದ ಪ್ರಕೃತಿ ಮತ್ತು ವಿಶ್ವಕ್ಕೆ ನಾವು ಮಾದರಿಯಾಗುತ್ತೇವೆ. ಇದು ನಮಗೆ ಪರಿಸರದೊಂದಿಗೆ ಸಾಮರಸ್ಯದ ಸಂಬಂಧವನ್ನು ಬೆಳೆಸುತ್ತದೆ. ಆದ್ದರಿಂದ ನಮ್ಮ ಗುರುಗಳಾದ ಬಾಲಗಂಗಾಧರನಾಥ ಸ್ವಾಮೀಜಿಯವರು 5 ಕೋಟಿ ಗಿಡಗಳನ್ನು ನೆಡುವ ಮೂಲಕ ಪ್ರಕೃತಿ ಎಷ್ಟು ಅಗತ್ಯ ಎಂಬುದು ತಿಳಿಸಿದ್ದಾರೆ ಎಂದರು.
ದೇವರನ್ನು ಪ್ರೀತಿಸಲು ಮೂಢನಂಬಿಕೆಯಿಂದ ಮುಕ್ತನಾಗಲು ನಿಜವಾದ ನಂಬಿಕೆ ಮತ್ತು ಭಕ್ತಿಯ ಅಗತ್ಯವಿದೆ. ಆಧ್ಯಾತ್ಮಿಕ ಸ್ಪಷ್ಟತೆಯನ್ನು ಉತ್ತೇಜಿಸುವ ಧರ್ಮ ಗ್ರಂಥಗಳು, ಉಪನಿಷತ್ ಮತ್ತು ಬೋಧನೆಗಳ ಮೂಲಕ ದೈವಿಕ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕು. ಭಯ ಆಧಾರಿತ ಆಚರಣೆಗಳನ್ನು ಪ್ರೀತಿ, ದಯೆ ಮತ್ತು ನಿಸ್ವಾರ್ಥತೆಯ ಕ್ರಿಯೆಗಳೊಂದಿಗೆ ಬದಲಾಯಿಸಬೇಕು. ಇದು ದೇವರ ಸಾರವನ್ನು ಪ್ರತಿಬಿಂಬಿಸುತ್ತದೆ. ಮೂಡನಂಬಿಕೆ ಅಜ್ಞಾನದಿಂದ ಉಂಟಾಗುತ್ತದೆ, ಜ್ಞಾನ ಮತ್ತು ವಿಮರ್ಶಾತ್ಮಕ ಚಿಂತನೆಯೊಂದಿಗೆ ಅದನ್ನು ಎದುರಿಸಿ. ದೈವಿಕತ್ವದ ಜೊತೆ ಆಳವಾದ ಸಂಪರ್ಕವನ್ನು ಬೆಳೆಸುವ ಪ್ರಾರ್ಥನೆ, ಧ್ಯಾನ ಮತ್ತು ನೈತಿಕ ಜೀವನಗಳಂತಹ ಅರ್ಥಪೂರ್ಣ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಬೋಟಿಂಗ್ ಜೋರು!

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಬೋಟಿಂಗ್ ಜೋರು!
– ಡಿ.29ರಿಂದ ಜ.2 ವರೆಗೆ ಬೋಟಿಂಗ್ ಉತ್ಸವ
– ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವದಲ್ಲಿ ತುಂಗಾ ನದಿಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದು ಜಾತ್ರೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ. ಕಳೆದ ವರ್ಷ ಕೂಡ ಈ ಬೋಟಿಂಗ್ ಉತ್ತಮ ಸ್ಪಂದನೆ ಸಿಕ್ಕಿತು. ಈ ವರ್ಷ ವಿಶೇಷವಾಗಿ ಜನಸಾಗರವೇ ಸೇರುತ್ತಿದ್ದಾರೆ. ತುಂಗಾ ನದಿಯ ಸಂಪೂರ್ಣ ವೀಕ್ಷಣೆಯನ್ನು ಬೋಟಿಂಗ್ ಅಲ್ಲಿ ಮಾಡಬಹುದು. ಇದು ಒಂದು ರೋಮಾಂಚನಕಾರಿ ಆಟವಾಗಿದೆ. ಈ ಬೋಟಿಂಗ್ ನಲ್ಲಿ ಅತಿ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ. ತುಂಗಾ ನದಿಯಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ದಿ. 29ನೇ ಭಾನುವಾರದಿಂದ ಜ.2 ಗುರುವಾರದವರೆಗೆ ಮಾಡಲಾಗಿದೆ.
ತೀರ್ಥಹಳ್ಳಿಯ ತುಂಗಾ ತೀರದಲ್ಲಿ ಬೋಟಿಂಗ್ ‘ ಅಡ್ವೆಂಚರ್ಸ್’ ಮತ್ತು ತುಂಗಾ ವಾಟರ್ ಸ್ಪೋರ್ಟ್ಸ್ ತೀರ್ಥಹಳ್ಳಿ ಮುಂದಾಗಿದ್ದು ತೀರ್ಥಹಳ್ಳಿಯಲ್ಲಿ ಬೋಟಿಂಗ್ ಉತ್ಸವವನ್ನು ಪ್ರಸ್ತುತ ಪಡಿಸುತ್ತಿದೆ. ಎಲ್ಲ ವಯಸ್ಸಿನವರೂ ಬೋಟಿಂಗ್ ಥ್ರಿಲ್ ಅನುಭವಿಸಬಹುದಾಗಿದೆ. ಮಕ್ಕಳು ಮತ್ತು ಫ್ಯಾಮಿಲಿಗೆ ಇದೊಂದ್ ಎಂಟರ್ಟೈನ್ಮೆಂಟ್ ಆಗಿದೆ. ತುಂಗಾ ನದಿ ನೀರಿನಲ್ಲಿ ಬೋಟಿಂಗ್ ಮಾಡುತ್ತಾ ಸುತ್ತಲಿನ ಪ್ರಕೃತಿ ಸೌಂದರ್ಯ ಸವಿಯುವುದರೊಂದಿಗೆ ಒಂದು ಅಡ್ವೆಂಚರಸ್ ಅನುಭವ ಹೊಂದಲು ಹಾಗೂ ಇದರೊಂದಿಗೆ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯ್ತಿ (ಶಾಲಾ-ಕಾಲೇಜು ಗುರುತಿನ ಪತ್ರ ಕಡ್ಡಾಯ).

Categories
ಕರಾವಳಿ

ಹೊಸ ವರ್ಷಾಚರಣೆ ಹಿನ್ನೆಲೆ: ಧರ್ಮಸ್ಥಳದಲ್ಲಿ ಭಕ್ತ ಸಾಗರ!

ಹೊಸ ವರ್ಷಾಚರಣೆ ಹಿನ್ನೆಲೆ: ಧರ್ಮಸ್ಥಳದಲ್ಲಿ ಭಕ್ತ ಸಾಗರ!
– ಕರ್ನಾಟಕ ಕರಾವಳಿ ದೇವಸ್ಥಾನಗಳಿಗೆ ಹರಿದು ಭಕ್ತರ
ದಂಡು
– ದೇವಸ್ಥಾನ ಮುಂಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ

NAMMUR EXPRESS NEWS
ಮಂಗಳೂರು: ಹೊಸ ವರ್ಷಾರಂಭ ಸಂದರ್ಭದಲ್ಲಿ ಕರ್ನಾಟಕ ಕರಾವಳಿಯ ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದು ಬಂದಿದೆ. ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಭಕ್ತರು ದೇಗುಲಗಳಿಗೆ ಆಗಮಿಸಿ ದೇವರ ದರ್ಶನ ಪಡೆದು ಹೊಸ ವರ್ಷದ ದಿನಾರಂಭ ಮಾಡುತ್ತಿದ್ದಾರೆ. ಕದ್ರಿ ಮಂಜುನಾಥ ದೇಗುಲಕ್ಕೆ ಬೆಳಗ್ಗಿನಿಂದಲೂ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ದೇವಳದ ಕೆರೆಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ದೇವಳದ ಮುಂದೆ ಕಲಶ ಸ್ನಾನ ಮಾಡುತ್ತಿದ್ದಾರೆ. ಕದ್ರಿ ದೇವಳದಲ್ಲಿ ಕಲಶ ಸ್ನಾನ ಸೇವೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಹೊಸ ವರ್ಷಾರಂಭದ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಭಕ್ತ ಸಾಗರವೇ ನೆರೆದಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರ ದಂಡು ಮಂಜುನಾಥ ಸ್ವಾಮಿಯ ದರ್ಶನಕ್ಕೆ ಮುಗಿಬಿದ್ದಿದೆ. ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗದಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸದ್ಯ ದೇವಸ್ಥಾನದ ಕ್ಯೂ ಸೆಂಟರ್ನಲ್ಲಿ ಭಾರೀ ಜನಜಂಗುಳಿ ಏರ್ಪಟ್ಟಿದೆ.
ದೇವಸ್ಥಾನದ ಮುಂಭಾಗದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿದ್ದು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.

Categories
ತೀರ್ಥಹಳ್ಳಿ

ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಗಮನಸೆಳೆದ ಆಲೆಮನೆ ಕೋಣ..!!

ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಗಮನಸೆಳೆದ ಆಲೆಮನೆ ಕೋಣ..!!
– ಸ್ಥಳದಲ್ಲೇ ಆಲೆಮನೆ ಮಾಡಿ,ಕಬ್ಬಿನ ಹಾಲು ವಿತರಣತೆ
– ಆಲೆಮನೆ ಕಬ್ಬಿನಹಾಲು ಕುಡಿಯಲು ಮುಗಿಬಿದ್ದ ಜನರು,ಎಲ್ಲರಿಂದ ಮೆಚ್ಚುಗೆ

NAMMUR EXPRESS NEWS
ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ತೀರ್ಥಹಳ್ಳಿ ಶ್ರೀರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಆಲೆಮನೆ ಕಬ್ಬಿನಹಾಲು,ಹಾಗೂ ಆಲೆಮನೆ ಕೋಣ ಎಲ್ಲರ ಗಮನ ಸೆಳೆದಿದೆ.
ಆರಗ ಮೂಲದ ವ್ಯಕ್ತಿಯೊಬ್ಬರು ಜಾತ್ರೆಯಲ್ಲಿ ಆಲೆಮನೆ ನಿರ್ಮಿಸಿ,ಕೋಣ ಕಟ್ಟಿ ಗಾಣ ತಿರುಗಿಸಿ ಕಬ್ಬಿನ ಹಾಲನ್ನು ಸಾಂಪ್ರದಾಯಿಕವಾಗಿ ತೆಗೆದು ಕೊಡುತ್ತಿದ್ದು. ಈ ಸಾಂಪ್ರದಾಯಿಕವಾಗಿ ತೆಗೆದ ರುಚಿಯಾದ ಕಬ್ಬಿನ ಹಾಲನ್ನು ಕುಡಿಯಲು ಜನರು ಮುಗಿಬೀಳುತ್ತಿದ್ದು, ಕಳೆದ ಮೂರು ದಿನಗಳಿಂದ ಸಾವಿರಾರು ಜನರು ಬಂದು ರುಚಿಯಾದ ಕಬ್ಬಿನ ಹಾಲು ಕುಡಿದಿದ್ದಾರೆ. ಯಾಂತ್ರೀಕೃತ ಕಬ್ಬಿನ ಹಾಲು ತೆಗಿಯುತ್ತಿರೋ ಈ ಸಮಯದಲ್ಲಿ ಇಲ್ಲೊಬ್ಬ ರೈತನ ಈ ವಿಶೇಷ ಪ್ರಯತ್ನ ಎಲ್ಲರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗಿದೆ.