Categories
ರಾಜ್ಯ

ಬಿಗ್ ಬಾಸ್ ಆದ ಹನುಮಂತ!

ಬಿಗ್ ಬಾಸ್ ಆದ ಹನುಮಂತ!
– ಜವಾರಿ ಹುಡುಗನಿಗೆ ಒಲಿದ ಕಪ್: ಬಡವರ ಮಕ್ಕಳು ಬೆಳೆಸಿದ ಅಭಿಮಾನಿಗಳು
– 50 ಲಕ್ಷ ಬಹುಮಾನ: ಎಷ್ಟು ಕೈಗೆ ಸಿಗುತ್ತೆ..?

NAMMUR EXPRESS NEWS
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹನುಮಂತ ಅವರು 5 ಕೋಟಿ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಗೆದ್ದ ಮೊದಲ ಸ್ಪರ್ಧಿ ಎಂಬ ದಾಖಲೆಯನ್ನು ಅವರು ಸೃಷ್ಟಿಸಿದ್ದಾರೆ. ತಮ್ಮ ಸರಳತೆ ಮತ್ತು ಬುದ್ಧಿವಂತಿಕೆಯಿಂದ ಜನರ ಮನ ಗೆದ್ದ ಹನುಮಂತ ಅವರ ಗೆಲುವು ಉತ್ತರ ಕರ್ನಾಟಕದ ಜನರ ಹರ್ಷಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬರೋಬ್ಬರಿ 5 ಕೋಟಿ ವೋಟ್ ಪಡೆದು ಹನುಮಂತ ಅವರು ಗೆದ್ದು ಬೀಗಿದ್ದಾರೆ. ಈ ಮೂಲಕ ಕರ್ನಾಟಕ ಜನರ ಫೇವರೇಟ್ ಎನಿಸಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗೆದ್ದ ಮೊದಲ ಸ್ಪರ್ಧಿ ಹನುಮಂತ ಆಗಿದ್ದಾರೆ. ಈ ಮೂಲಕ ಅವರು ದಾಖಲೆ ಬರೆದಿದ್ದಾರೆ. ಬಿಗ್ ಬಾಸ್​ನಲ್ಲಿ ಒಟ್ಟೂ 20 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅವರಲ್ಲಿ 19 ಜನರನ್ನು ಹಿಂದಿಕ್ಕಿ ಹನುಮಂತ ಅವರು ಕಪ್​ನ ಒಲಿಸಿಕೊಂಡಿದ್ದಾರೆ. ಜವಾರಿ ಹುಡುಗನಾಗಿ, ಜವಾರಿ ಹಾಡುಗಳನ್ನು ಹಾಡುತ್ತಾ ಗಮನ ಸೆಳೆದರು. ಯಾರೇ ನಾಮಿನೇಟ್ ಮಾಡಲಿ, ಯಾರು ಏನೇ ಕಾರಣ ಕೊಡಲಿ, ಅವರನ್ನು ಕಳಪೆಗೆ ಹಾಕಲಿ ಇದಕ್ಕೆಲ್ಲ ಅವರು ತಲೆಕೆಡಿಸಿಕೊಳ್ಳದೆ ಆಡಿದ್ದಾರೆ. ಅದಕ್ಕೆ ಕೊನೆಗೂ ಜಯ ಸಿಕ್ಕಂತೆ ಆಗಿದೆ. ‘ಒಳ್ಳೆಯತನಕ್ಕೆ ಜಯ ಇದೆ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಹನುಮಂತನ ಪರವಾಗಿ ಅನಕೇರು ವೋಟ್ ಮಾಡುವಂತೆ ಕೋರಿದ್ದರು. ಉತ್ತರ ಕರ್ನಾಟಕ ಮಂದಿ ಹನುಮಂತಗೆ ಭರ್ಜರಿ ವೋಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕ ಮಂದಿ ಮಾತ್ರ ಅಲ್ಲದೆ, ಎಲ್ಲಾ ಭಾಗದ ಜನರಿಗೂ ಅವರು ಇಷ್ಟ ಆಗಿದ್ದರು. ಈ ಕಾರಣಕ್ಕೆ ಅವರಿಗೆ 5 ಕೋಟಿ ವೋಟ್ ಬಿದ್ದಿದೆ. ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಜನರಿಗೆ ಇಷ್ಟವಾದ ಹನುಮಂತಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.
ಹನುಮಂತ ಅವರಿಗೆ 50 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. 50 ಲಕ್ಷ ರೂ. ಬಹುಮಾನ ಸಿಕ್ಕಿದರೂ ಅವರಿಗೆ ಪೂರ್ಣ ಪ್ರಮಾಣದ ಹಣ ಕೈ ಸೇರುವುದಿಲ್ಲ. ನಗದು ಬಹುಮಾನ ಮೊತ್ತಕ್ಕೆ 30% ಗಿಫ್ಟ್‌ ಟ್ಯಾಕ್ಸ್‌ ವಿಧಿಸಲಾಗುತ್ತದೆ. ಹೀಗಾಗಿ ಸಿಗುವ ಬಹುಮಾನದಲ್ಲಿ 30% ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ.

ರನ್ನರ್‌ ಅಪ್‌ ಆದ ಟಾಸ್ಕ್ ಕಿಂಗ್!

ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ರೆ, ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಳ್ಳುತ್ತಿದ್ದರು. ಆದರೆ ಫಿನಾಲೆಯಲ್ಲಿ ತ್ರಿವಿಕ್ರಮ್ ಮುಗ್ಗರಿಸಿರೋದು ಫ್ಯಾನ್ಸ್‌ಗೆ ನಿರಾಸೆಯುಂಟು ಮಾಡಿದೆ. ಆದರೂ ಹನುಮಂತ ಅವರಿಗೆ ಗೆಲುವು ಸಿಕ್ಕಿರುವುದು ನನಗೆ ಖುಷಿ ಇದೆ ಅವರು ಅರ್ಹ ವ್ಯಕ್ತಿ ಹನುಮಂತ್ ಅವರಿಂದ ಕಲಿಯುವುದು ತುಂಬಾ ಇದೆ ಎಂದು ತ್ರಿವಿಕ್ರಮ್ ಅವರು ತಮ್ಮ ಮಾತಿನಲ್ಲಿ ತಿಳಿಸಿದ್ದಾರೆ.

ಸುದೀಪ್​ ನಿರೂಪಣೆ ಮಾಡುತ್ತಿರುವ ಕೊನೆ ‘ಬಿಗ್​ ಬಾಸ್ ಶೋ?

ಸುದೀಪ್​​​ ನಿರೂಪಣೆಯಲ್ಲಿ ಬರುವ ಈ ಕಾರ್ಯಕ್ರಮ ತನ್ನದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದೆ. ಶನಿವಾರ ಮತ್ತು ಭಾನುವಾದ ಎಪಿಸೋಡ್​ ನೋಡಲೆಂದೇ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಅಷ್ಟರ ಮಟ್ಟಿಗೆ ಇವರ ನಿರೂಪಣಾ ಶೈಲಿ ಫೇಮಸ್​ ಆಗಿದೆ. ವಾರದಲ್ಲಿ ನಡೆದಿರೋ ಸರಿ ತಪ್ಪುಗಳನ್ನು ಚರ್ಚಿಸಿ, ಸ್ಪರ್ಧಿಗಳನ್ನು ತಿದ್ದಿ ತೀಡೋ ಕೆಲಸವನ್ನು ಸುದೀಪ್​ ಮಾಡ್ತಾ ಇದ್ರು, ಸೀಸನ್​ 11 ಸುದೀಪ್​ ಅವರ ಕೊನೆ ಸೀಸನ್​ ಅನ್ನೋದು ಮಾತ್ರ ಅಭಿಮಾನಿಗಳಿಗೆ ಬೇಸರ ತರಿಸಿದೆ.

Categories
ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್

ಟಾಪ್ 5 ನ್ಯೂಸ್ ಮಲ್ನಾಡ್
– ಶಿವಮೊಗ್ಗ : ಕುಡಿದ ಅಮಲಿನಲ್ಲಿ ಎಟಿಎಂ ಕಳ್ಳತನಕ್ಕೆ ಯತ್ನ ..!
– ರಿಪ್ಪನ್‌ಪೇಟೆ: ಸಾರ್ವಜನಿಕ ರಸ್ತೆಗೆ ಖಾಸಗಿ ವ್ಯಕ್ತಿಗಳಿಂದ ಅಡ್ಡಿ, ಪ್ರಶ್ನಿಸಿದವರ ಮೇಲೆ ಹಲ್ಲೆ
– ಶಿವಮೊಗ್ಗ : ಸಿರಿಗೆರೆ ವ್ಯಾಪ್ತಿಯಲ್ಲಿ ಐದು ಕಾಡಾನೆ ಪ್ರತ್ಯಕ್ಷ ಗ್ರಾಮಸ್ಥರಿಗೆ ಆತಂಕ
– ಕಳಸ: ಅಡಿಕೆ ಹಾಗೂ ಚಿನ್ನ ಕಳ್ಳತನ ಆರೋಪಿಗಳ ಬಂಧನ…!
– ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ‌ ಡಿಕ್ಕಿ

NAMMUR EXPRESS NEWS
ಶಿವಮೊಗ್ಗ: ರಾಜ್ಯದ್ಯಂತ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಎಟಿಎಂ ಗಳಲ್ಲಿ ದರೋಡೆ ಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು ಈಗಲೂ ಕೂಡ ಹಲವು ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗಿಲ್ಲ. ಭಾನುವಾರ ತಡರಾತ್ರಿ ಸುಮಾರು ಹತ್ತರಿಂದ ಹನ್ನೊಂದು ಗಂಟೆ ಸುಮಾರಿಗೆ ನಗರದ ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನ ಎಟಿಎಂ ಗೆ ಒಬ್ಬ ವ್ಯಕ್ತಿ ಬಂದು ಕಳ್ಳತನ ಮಾಡಲು ಪ್ರಯತ್ನ ಮಾಡಿ ಎಟಿಎಂನ ಸೈರನ್ ಹೊಡೆದುಕೊಂಡ ನಂತರ ಆತ ಓಡಿ ಹೋಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಪೊಲೀಸ್ ಇಲಾಖೆ ಕೂಡ ಆತನನ್ನು ತೀವ್ರ ಹುಡುಕಾಟ ನಡೆಸಿ ಕೊನೆಗೂ ಬಂಧಿಸಿದ್ದಾರೆ ಎನ್ನುವ ಮಾಹಿತಿ ಇದೆ. ಶಿವಮೊಗ್ಗದ ಸ್ಮಾರ್ಟ್ ಸಿಟಿ ಕಾರ್ಯನಿರ್ವಹಿಸಲು ಬಂದ ಬಿಹಾರ ಮೂಲದ ವ್ಯಕ್ತಿ ರಾತ್ರಿ ಕುಡಿದ ಅಮಲಿನಲ್ಲಿ ಹಣ ಬಿಡಿಸಲು ಎಟಿಎಂಗೆ ತೆರಳಿದ್ದಾನೆ ಆಗ ಹಣ ಬರದೇ ಇದ್ದಾಗ ಎಟಿಎಂ ನನ್ನು ಓಪನ್ ಮಾಡಲು ಪ್ರಯತ್ನಿಸಿದ್ದಾನೆ, ಆ ಪ್ರಯತ್ನದಲ್ಲಿದ್ದಾಗ ಎಟಿಎಂನ ಸೈರನ್ ಹೊಡೆದುಕೊಂಡಿದೆ ಆಗ ಆತ ಅಲ್ಲಿಂದ ಹೊರಟು ಹೋಗಿದ್ದಾನೆ. ಈತನ ಬೆನ್ನು ಹತ್ತಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಕೊನೆಗೂ ಆತ ಸಿಕ್ಕಿಬಿದ್ದಿದ್ದಾನೆ.ಈತ ನಿಜವಾಗಲೂ ಹಣ ಬಿಡಿಸಲು ಹೋಗಿ ಕುಡಿದ ಮತ್ತಿನಲ್ಲಿ ಬ್ಯಾಂಕ್ ನ ಎಟಿಎಂ ಕೀಳಲು ಪ್ರಯತ್ನ ನಡೆಸಿದನಾ ಅಥವಾ ಇದು ಮೊದಲ ಪ್ರಯತ್ನ ಮಾಡಿ ಮುಂದೆ ದೊಡ್ಡ ಯತ್ನಕ್ಕೆ ಕೈಹಾಕಲು ಪ್ರಯತ್ನಪಟ್ಟಿರಬಹುದಾ, ಬಿಹಾರ ಮೂಲದ ವ್ಯಕ್ತಿಯಾಗಿರುವುದರಿಂದ ಅನುಮಾನಗಳು ಹೆಚ್ಚಾಗಿವೆ ಪೊಲೀಸರ ತನಿಖೆಯಿಂದ ಎಲ್ಲವೂ ಹೊರಬರಬೇಕಾಗಿದೆ.

– ರಿಪ್ಪನ್‌ಪೇಟೆ: ಸಾರ್ವಜನಿಕ ರಸ್ತೆಗೆ ಖಾಸಗಿ ವ್ಯಕ್ತಿಗಳಿಂದ ಅಡ್ಡಿ ಪ್ರಶ್ನಿಸಿದವರ ಮೇಲೆ ಹಲ್ಲೆ

ರಿಪ್ಪನ್‌ಪೇಟೆ : ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕ ಉದ್ದೇಶಕ್ಕಾಗಿ ನಿರ್ಮಿಸಿದ ರಸ್ತೆಯನ್ನು ಅಕ್ರಮಿಸಿ ಮಣ್ಣಿನ ತಡೆಗೋಡೆ ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆ ನೀಡುವುದರ ಜೊತೆಗೆ ಪ್ರಶ್ನಿಸಲು ತೆರಳಿದ ಗ್ರಾಮಸ್ಥರ ಮೇಲೆ ಹಲ್ಲೆಗೆ ಯತ್ನಿಸಿರುವವರ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳುವಂತೆ ಗ್ರಾಮಸ್ಥರು ಪಟ್ಟಣದ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಳೂರು ಗ್ರಾಮ ಪಂಚಾಯತ್‍ನ ಕಾಳೇಶ್ವರ ಗ್ರಾಮದಲ್ಲಿ ನಡೆದಿದೆ. ಕಾಳೇಶ್ವರ ಗ್ರಾಮದಲ್ಲಿ ಸುಮಾರು 9 ಕ್ಕೂ ಅಧಿಕ ಕುಟುಂಬಗಳು ಜೀವನ ನಡೆಸುತ್ತಿದೆ. ಇಲ್ಲಿನ ನಿವಾಸಿಗಳಿಗೆ ತಮ್ಮ ಮನೆಗಳಿಗೆ ತೆರಳಲು ಗ್ರಾಮ ಪಂಚಾಯತ್ ನ ಮಣ್ಣು ರಸ್ತೆ ಸಂಪರ್ಕವಿದ್ದು, ಈ ರಸ್ತೆಯನ್ನೇ ಅನೇಕ ವರ್ಷಗಳಿಂದ ಸಂಪರ್ಕ ರಸ್ತೆಯಾಗಿ ನಿವಾಸಿಗಳು ಉಪಯೋಗಿಸುತ್ತಿದ್ದಾರೆ. ಅಲ್ಲದೆ ಈ ರಸ್ತೆಯ ಕಾಮಗಾರಿ ಯೋಜನೆಯಡಿ 2018ನೇ ಸಾಲಿನಲ್ಲಿ ಸುಮಾರು 97000 ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಲಾಗಿತ್ತು. ಪ್ರಸ್ತುತ ಈ ರಸ್ತೆಯನ್ನು ಜ25 ರಂದು ಕಾಳೇಶ್ವರ ಗ್ರಾಮದ ವ್ಯಕ್ತಿಗಳಾದ ಮೀನಾಕ್ಷಪ್ಪ ಹಾಗೂ ಕುಟುಂಬಸ್ಥರು ಏಕಾಏಕಿ ಅಕ್ರಮವಾಗಿ ಸರ್ಕಾರಿ ಸ್ಥಳದಲ್ಲಿ ಹಾದು ಹೋಗಿರುವ ಗ್ರಾಮಪಂಚಾಯತ್ ನ ಅನುದಾನಿತ ರಸ್ತೆಯಲ್ಲಿ ಟಿಪ್ಪರ್ ಮೂಲಕ ಅಲ್ಲಲ್ಲಿ ಅಕ್ರಮವಾಗಿ ತಂದ ಮಣ್ಣನ್ನು ಗುಡ್ಡೆ ಹಾಕುವ ಮೂಲಕ ರಸ್ತೆಯನ್ನು ಸಂಪೂರ್ಣ ಮುಚ್ಚಿದ್ದು. ಅಲ್ಲದೆ ಸರ್ಕಾರಿ ಸ್ಥಳವನ್ನು ಅಕ್ರಮವಾಗಿ ಭೂ ಸ್ವಾಧೀನ ಮಾಡಿಕೊಂಡು ಈ ರಸ್ತೆಯಲ್ಲಿ ತಿರುಗಾಡದಂತೆ ಮಾಡಿದ್ದಾರೆ ಈ ಬಗ್ಗೆ ವಿಚಾರಿಸಲು ಹೋದ ನಮ್ಮ‌ ಮೇಲೆ ದೊಣ್ಣೆ ಹಾಗೂ ರಾಡ್ ನಿಂದ ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.

– ಶಿವಮೊಗ್ಗ : ಸಿರಿಗೆರೆ ವ್ಯಾಪ್ತಿಯಲ್ಲಿ ಐದು ಕಾಡಾನೆ ಪ್ರತ್ಯಕ್ಷ ಗ್ರಾಮಸ್ಥರಿಗೆ ಆತಂಕ

ಶಿವಮೊಗ್ಗ : ಶಿವಮೊಗ್ಗದ ಸಿರಿಗೆರೆ ಭಾಗದಲ್ಲಿ ಐದು ಕಾಡಾನೆಗಳು ಕಾಣಿಸಿಕೊಂಡಿವೆ. ಇವುಗಳನ್ನ ಹಾಯ್ ಹೊಳೆ ಭಾಗಕ್ಕೆ ಡ್ರೈವ್ ಮಾಡಲು ಇಲಾಖೆ ಕಾರ್ಯಾಚರಣೆಗೆ ಇಳಿದಿದೆ. ಸಿರಿಗೆರೆ ವ್ಯಾಪ್ತಿಯ ಬಿಲ್ಗುಣಿಯ ಬಳಸಕೆರೆಯ ಬಳಿ ಐದು ಕಾಡಾನೆ ಕಾಣಿಸಿಕೊಂಡು ಹಳ್ಳಿಗರಿಗೆ ಭಯ ಉಂಟು ಮಾಡಿದೆ. ಇಂದು ಬೆಳಿಗ್ಗೆ ಕೆರೆಯ ಬಳಿ ಕಾಡಾನೆಗಳ ಲದ್ದಿಕಂಡಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಮಾಹಿತಿ ಲಭ್ಯವಾದ ಬೆನ್ನಲ್ಲೇ ಕಾಡಾನೆಗಳನ್ನ ಓಡಿಸಲು ಇಲಾಖೆ ತಂಡ ರಚಿಸಿಕೊಂಡು ಕಾರ್ಯಾಚರಣೆಗೆ ಇಳಿದಿದೆ. ಪಟಾಕಿ ಮತ್ತು ತಮಟೆಗಳನ್ನ ಬಾರಿಸುವ ಮೂಲಕ ಆನೆಗಳನ್ನ ಓಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಾಡಾನೆಗಳನ್ನ ಸ್ಥಳಾಂತರಿಸಿ ಎಂದು ಆಗ್ರಹಿಸಿ ಎರಡು ದಿನಗಳ ಹಿಂದೆ ಬಿಜೆಪಿ ಸಿಸಿಎಫ್ ಕಚೇರಿ ಎದುರು ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯ ವೇಳೆ ಸಿಸಿಎಫ್ ಹನುಮಂತಪ್ಪನವರು 10 ಆನೆಗಳಿವೆ ಇಲಾಖೆ ಓಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಭರವಸೆಯ ಬೆನ್ನಲ್ಲೇ ಐದು ಕಾಡಾನೆ ಕಾಣಿಸಿಕೊಂಡು ಗ್ರಾಮಸ್ಥರನ್ನ ಆತಂಕಕ್ಕೊಳಪಡಿಸಿವೆ.

– ಕಳಸ: ಅಡಿಕೆ ಹಾಗೂ ಚಿನ್ನ ಕಳ್ಳತನ ಆರೋಪಿಗಳ ಬಂಧನ…!

ಕಳಸ: ಅಡಿಕೆ ಹಾಗೂ ಚಿನ್ನ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ. ಕಿರಣ್ (27), ರವಿ (50), ನಿತೇಶ್ ಯು (33) ಬಂಧಿತ ಆರೋಪಿಗಳು. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ಚೀಲ ಅಡಿಕೆ ಹಾಗೂ 10 ಗ್ರಾಂ ಚಿನ್ನ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಜಿಲ್ಲಾ ಎಸ್ಪಿ ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ.ಜಿ ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿ ಚಿನ್ನದ ಜುಮಕಿ ಹಾಗೂ ಮಾಟಿ, ಬೆಳ್ಳಿಯ ಕಾಲುಗೆಜ್ಜೆ, 9 ಮೂಟೆ ಗೋಟು ಅಡಿಕೆ ಒಟ್ಟು 62500/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಕಾರ್ಯಾಚಾರಣೆಯಲ್ಲಿ ಕೊಪ್ಪ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು ಬಾಲಾಜಿ ಸಿಂಗ್, ಆಲ್ದೂರು ಪೊಲೀಸ್ ವೃತ್ತ ನಿರೀಕ್ಷಕರು ಸೊಮೇಗೌಡ ರವರ ನೇತೃತ್ವದಲ್ಲಿ ಕಳಸ ಪೊಲೀಸ್ ಠಾಣೆಯ ಪಿ.ಎಸ್.ಐ ಬಾಬು.ಎಸ್.ಅಗೇರ, ಆದರ್ಶ ಕುಮಾರ್ ಜಿ.ಆರ್, ಸಿಬ್ಬಂಧಿಗಳಾದ ಪ್ರಮೋದ್, ಗಿರೀಶ್, ವಿಶ್ವನಾಥ್ ಪಾಳೆಗಾರ್, ಸಿದ್ದಪ್ಪ ಕರಂಡಿ, ಶಿವಕುಮಾರ್, ಸುನಿಲ್ .ವೈ, ಚಾಲಕ ಕಾಶಿನಾಥ್ ಇದ್ದರು.

– ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ‌ ಡಿಕ್ಕಿ

ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರಿದ್ದ ಬಸ್ ಮರಕ್ಕೆ‌ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ ಮೈಸೂರು ಜಯದೇವ ಆಸ್ಪತ್ರೆ ಸಿಬ್ಬಂದಿಗಳು ಧರ್ಮಸ್ಥಳಕ್ಕೆ‌ ತೆರಳುವಾಗ ಬಿದರಹಳ್ಳಿ ಗ್ರಾಮದ ಬಳಿ ಬಿದರಹಳ್ಳಿ ಗ್ರಾಮದ ಬಳಿ ಮರಕ್ಕೆ‌ ಡಿಕ್ಕಿಯಾಗಿದೆ. ಪರಿಣಾಮ ನಾಲ್ವರು ಪ್ರವಾಸಿಗರಿಗೆ ಗಂಭೀರ ಗಾಯವಾಗಿದ್ದು, ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. 11 ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Categories
ಉತ್ತರ ಕನ್ನಡ

ಉತ್ತರ ಕನ್ನಡದ ಸಿದ್ದಾಪುರದ ಉತ್ಸವಕ್ಕೆ ಸಜ್ಜು!

ಉತ್ತರ ಕನ್ನಡದ ಸಿದ್ದಾಪುರದ ಉತ್ಸವಕ್ಕೆ ಸಜ್ಜು!
– ಫೆ. 8 ಹಾಗೂ 9 ಸಿದ್ದಾಪುರ ಉತ್ಸವ: ಉತ್ಸವಕ್ಕೆ ಈಗಾಗಲೇ ಸಿದ್ಧತೆ
– ಸ್ಥಳೀಯ ಕಲಾವಿದರಿಗೆ ಅವಕಾಶ: 2 ದಿನಗಳ ಉತ್ಸವಕ್ಕೆ ಸ್ವಾಗತ

NAMMUR EXPRESS NEWS
ಸಿದ್ದಾಪುರ : ಪ್ರತಿ ವರ್ಷದಂತೆ ಈ ವರ್ಷದ ಸಿದ್ದಾಪುರ ಉತ್ಸವ ಫೆಬ್ರವರಿ 8 ಹಾಗೂ 9 ರಂದು 2 ದಿನಗಳ ಕಾಲ ಜರುಗಲಿದೆ. ಉತ್ತರ ಕನ್ನಡದ ಸಿದ್ದಾಪುರದ ಉತ್ಸವಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಮಳಿಗೆಗಳು ಹಾಗೂ ಕಲಾವಿದರಿಗೆ 2 ದಿನಗಳ ಉತ್ಸವಕ್ಕೆ ಸ್ವಾಗತ ಕೋರಲಾಗಿದೆ. ಸಾವಿರಾರು ಜನ ಈ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಸಿದ್ದಾಪುರ ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ ನಾಯ್ಕ ಹಣಜಿಬೈಲ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಸ್ಥಳೀಯ ಕಲಾವಿದರಿಗೆ ಕೂಡ ಅವಕಾಶ ಕಲ್ಪಿಸೋ ನಿಟ್ಟಿನಲ್ಲಿ 2 ದಿನಗಳ ಕಾಲ ಈ ವರ್ಷದ ಸಿದ್ದಾಪುರ ಉತ್ಸವ ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಜಾತ್ರೆ, ಉತ್ಸವಗಳು ಬರುತ್ತಿರೋ ಹಿನ್ನೆಲೆಯಲ್ಲಿ 3 ದಿನ ಇರೋ ಉತ್ಸವವನ್ನ 2 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಪಟ್ಟಣದ ನೆಹರೂ ಮೈದಾನದಲ್ಲಿ ಉತ್ಸವ ಜರುಗಲಿದೆ. ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಿಗೆ ಸ್ವಾಮೀಜಿಗಳು, ಜಿಲ್ಲೆಯ ಸಂಸದರು, ಶಾಸಕರು ಸೇರಿದಂತೆ ಅನೇಕ ಗಣ್ಯರನ್ನು ಆಹ್ವಾನಿಸಲಾಗುವುದು. ತಾಲೂಕಿನ ಜನತೆ ಉತ್ಸವದಲ್ಲಿ ಪಾಲ್ಗೊಂಡು ಉತ್ಸವವನ್ನ ಯಶಸ್ವಿಗೊಳಿಸಬೇಕು ಎಂದರು. ಕಾರ್ಯಾಧ್ಯಕ್ಷ ಸತೀಶ್ ಹೆಗಡೆ ಬೈಲಲ್ಲಿ, ಉಪಾಧ್ಯಕ್ಷ ಅನಿಲ್ ದೇವನಳ್ಳಿ, ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡರ್, ಸುರೇಶ್ ಮೆಸ್ತಾ, ರವಿಕುಮಾರ್ ನಾಯ್ಕ, ವಿನಯ್ ಹೊನ್ನೆಗುಂಡಿ ಮತ್ತು ಪದಾಧಿಕಾರಿಗಳು ಹಾಜರಿದ್ದರು.

Categories
ದಕ್ಷಿಣ ಕನ್ನಡ

ಸುಳ್ಯದಲ್ಲಿ ಆನೆಗಳ ಕಾದಾಟ

ಸುಳ್ಯದಲ್ಲಿ ಆನೆಗಳ ಕಾದಾಟ
– ಕಾದಾಟದಲ್ಲಿ ಸಾವು ಶಂಕೆ, ಗಂಡಾನೆಯ ಮೃತದೇಹ ಪತ್ತೆ
– ಆನೆಯ ದೇಹದಲ್ಲಿ ತಿವಿದು, ಗಾಯಗೊಂಡು ರಕ್ತಸ್ರಾವವಾಗಿರುವ ಗುರುತು

NAMMUR EXPRESS NEWS
ಸುಳ್ಯ:
ಗಂಡಾನೆಯ ಮೃತದೇಹವೊಂದು ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಮತ್ತು ಕೇರಳ ಗಡಿ ಭಾಗದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಎರ್ಕಲ್ಪಾಡಿಯಲ್ಲಿ ನಡೆದಿದೆ. ಮಂಡೆಕೋಲು ರಿಸರ್ವ್ ಫಾರೆಸ್ಟ್‌ನಲ್ಲಿ ಸ್ಥಳೀಯರಿಗೆ ಕಾಡಾನೆ ಮೃತದೇಹ ಕಂಡುಬಂದಿದ್ದು, ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕಾದಾಟದಲ್ಲಿ ಸಾವು ಶಂಕೆ

ಮೃತ ಆನೆ ಹಾಗೂ ಬೇರೆ ಗಂಡು ಕಾಡಾನೆಗಳ ನಡುವೆ ಕಾದಾಟ ನಡೆದು ಇದರಿಂದ ತೀವ್ರ ರಕ್ತಸ್ರಾವಗೊಂಡು ಆನೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.  ಆನೆಯ ದೇಹದಲ್ಲಿ ತಿವಿದು, ಗಾಯಗೊಂಡು ರಕ್ತಸ್ರಾವವಾಗಿರುವ ಗುರುತು ಕಂಡುಬಂದಿದೆ. ಅರಣ್ಯ ಭಾಗದ ಬೇರೆ ಕಡೆಯಲ್ಲಿ ಕಾದಾಟ ನಡೆದಿದ್ದು, ಇಲ್ಲಿ ಬಂದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಮಂಜುನಾಥ್ ಎನ್‌. ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ ಭೇಟಿ ನೀಡಿದ್ದಾರೆ. ಸುಳ್ಯ ಪಶುವೈದ್ಯಾಧಿಕಾರಿ  ಡಾ| ನಿತಿನ್ ಪ್ರಭು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ರಾತ್ರಿಯಾಗಿರುವ ಹಿನ್ನೆಲೆಯಲ್ಲಿ ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ, ಇನ್ನಿತರ ಕಾರ್ಯಗಳನ್ನು ಜ.27ರಂದು ನಡೆಸಲಾಗುವುದು ಎಂದು ಅರಣ್ಯಾಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.

Categories
ತೀರ್ಥಹಳ್ಳಿ

ಮಾದರಿಯಾಯ್ತು ಶ್ರೀ ರಾಮ ವರ್ತಕರ ಸೌಹಾರ್ದ ಸಂಘ!

ಮಾದರಿಯಾಯ್ತು ಶ್ರೀ ರಾಮ ವರ್ತಕರ ಸೌಹಾರ್ದ ಸಂಘ!
– ಫೆ.2ಕ್ಕೆ ಬಿದರಗೋಡಲ್ಲಿ 1ನೇ ಸರ್ವ ಸದಸ್ಯರ ಮಹಾಸಭೆ
– ಟಿ.ಎಸ್.ಕೇಶವಮೂರ್ತಿ ಘನ ಅಧ್ಯಕ್ಷತೆಯಲ್ಲಿ ಆಯೋಜನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಮಾದರಿ ಸಹಕಾರ ಸಂಘದಲ್ಲಿ ಒಂದಾದ ಶ್ರೀ ರಾಮ ವರ್ತಕರ ಸೌಹಾರ್ದ ಸಹಕಾರ ಸಂಘದ 2023-24 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಫೆ.2ನೇ ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಬಿದರಗೋಡು. ಶ್ರೀ ರಾಮಮಂದಿರ ಆವರಣದಲ್ಲಿ ಸಹಕಾರಿಯ 1ನೇ ಸರ್ವ ಸದಸ್ಯರ ಮಹಾಸಭೆ ಸಹಕಾರಿಯ ಅಧ್ಯಕ್ಷರಾದ ಟಿ.ಎಸ್. ಕೇಶವಮೂರ್ತಿ ಇವರ ಘನ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಈ ಸರ್ವಸದಸ್ಯರ ಸಭೆಗೆ ಮುಖ್ಯ ಅತಿಥಿಗಳಾಗಿ ಅಧ್ಯಕ್ಷರು ಡಿ. ಸಿ. ಸಿ. ಬ್ಯಾಂಕ್ ಶಿವಮೊಗ್ಗ ಆರ್.ಎಂ. ಮಂಜುನಾಥಗೌಡ, ಮಾಜಿ ಗೃಹ ಸಚಿವರು ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವರು ಕಿಮ್ಮನೆ ರತ್ನಾಕರ, ನಿರ್ದೇಶಕರು, ಡಿ. ಸಿ. ಸಿ. ಬ್ಯಾಂಕ್ ಶಿವಮೊಗ್ಗ ವಿಜಯ್‌ದೇವ್, ಉಪಾಧ್ಯಕ್ಷರು, ಕ. ರಾ. ಸೌ. ಸಂ. ಸ. ಸಂಘ ನಿಗಮ, ಬೆಂಗಳೂರು ಪ್ರಸನ್ನಕುಮಾ‌ರ್, ಉಪಾಧ್ಯಕ್ಷರು , ಡಿ. ಸಿ. ಸಿ. ಬ್ಯಾಂಕ್ ಚಿಕ್ಕಮಗಳೂರು ಡಿ.ಸಿ. ಶಂಕರಪ್ಪ, ಸರಸ್ವತಿ ಸೌಹಾರ್ದ ಸಹಕಾರ ಸಂಘ, ತೀರ್ಥಹಳ್ಳಿಯ ಅಧ್ಯಕ್ಷರಾದ ರಾಘವೇಂದ್ರ ನಾಯಕ್, ಸಹಕಾರ ಸಂಘಗಳ ಉಪನಿಬಂಧಕರು, ಶಿವಮೊಗ್ಗ ನಾಗಭೂಷಣ ಕಲ್ಮನೆ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಶಿವಮೊಗ್ಗ ವಿಭಾಗ ಟಿ.ವಿ. ಶ್ರೀನಿವಾಸ್, ಪ್ರಭಾರ ಸಹಕಾರ ಅಭಿವೃದ್ಧಿ ಅಧಿಕಾರಿ, ತೀರ್ಥಹಳ್ಳಿ ವೆಂಕಟಚಲಪತಿ ಜೆ.ಸಿ.,ವ್ಯವಸ್ಥಾಪಕರು, ಡಿ. ಸಿ. ಸಿ. ಬ್ಯಾಂಕ್ ಕೈಮರ ಶಾಖೆ ರಾಮಚಂದ್ರ ಟಿ.ವಿ.ಇತರ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಸದಸ್ಯರು ಈ ಸಭೆಗೆ ಸಕಾಲದಲ್ಲಿ ಆಗಮಿಸಿ, ತಮ್ಮ ಅಮೂಲ್ಯ ಸಲಹೆ ಸಹಕಾರಗಳನ್ನಿತ್ತು ಸಹಕರಿಸಲು ಆಡಳಿತ ಮಂಡಳಿ ಪರವಾಗಿ ನೂತನ್ ಕುಮಾರ್ ಎಂ.ಕೆ.,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈ ಮೂಲಕ ಕೋರಿದ್ದಾರೆ.

ಆಡಳಿತ ಮಂಡಳಿ ಯಾರು ಯಾರು?

ಅಧ್ಯಕ್ಷರು: ಆಡಳಿತ ಮಂಡಳಿ ಟಿ.ಎಸ್. ಕೇಶವಮೂರ್ತಿ, ಉಪಾಧ್ಯಕ್ಷರು: ರಾಘವೇಂದ್ರ ಕಾಮತ್, ನಿರ್ದೇಶಕರು: ಪ್ರವೀಣ್ ಬಿ. ಎಸ್ , ನಿರ್ದೇಶಕರು: ಪ್ರಕಾಶ್ ಕೆ.ಆರ್., ನಿರ್ದೇಶಕರು: ವಿಶ್ವನಾಥ ನಾಯಕ್, ನಿರ್ದೇಶಕರು: ವೆಂಕಟೇಶ ಎಂ.ಬಿ , ನಿರ್ದೇಶಕರು: ಸುನಿಲ್ ಕಾಮತ್ , ನಿರ್ದೇಶಕರು: ವಿಶ್ವನಾಥ ಕೆ.ಎಸ್., ನಿರ್ದೇಶಕರು: ಮಂಜುನಾಥ ಕೆ.ಜಿ , ನಿರ್ದೇಶಕರು: ಲಕ್ಷ್ಮೀ , ನಿರ್ದೇಶಕರು ಸುರೇಖಾ ಎಂ.ಎಂ , ನಿರ್ದೇಶಕರು: ಸರಸ್ವತಿ

– ಮಲೆನಾಡಿನ ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆ!

2ನೇ ವರ್ಷದ ಸಂಭ್ರಮದಲ್ಲಿರುವ ಸಹಕಾರಿಗೆ ಮೊದಲ ವರ್ಷದ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಲಿದೆ. ಸುಮಾರು 250 ಶೇರುದಾರರನ್ನು ಹೊಂದಿರುವ ಸಂಸ್ಥೆ ಆಗುಂಬೆ ಹೋಬಲಿಯಲ್ಲಿ ಮೊದಲ ವರ್ತಕರ ಸೊಸೈಟಿಯಾಗಿದೆ. ವರ್ತಕರರ ಸಹಕಾರ ಹಾಗೂ ಜನಪ್ರತಿನಿಧಿಗಳು, ಗ್ರಾಮಸ್ಥರ ನೆರವಿನಿಂದ ಸಂಸ್ಥೆ ಸಾಧನೆಯತ್ತ ಹೆಜ್ಜೆ ಇಟ್ಟಿದೆ. ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಸಾಲ ನೀಡುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತಿಸಲಾಗಿದೆ

Categories
ತೀರ್ಥಹಳ್ಳಿ

ಮ್ಯಾಮ್ಕೋಸ್ ಚುನಾವಣೆ ಅಖಾಡ ಸಜ್ಜು!

ಮ್ಯಾಮ್ಕೋಸ್ ಚುನಾವಣೆ ಅಖಾಡ ಸಜ್ಜು!
– ಸಹಕಾರ ಭಾರತಿ ಅಭ್ಯರ್ಥಿಗಳ ಘೋಷಣೆ
– ತೀರ್ಥಹಳ್ಳಿಯಿಂದ ಹುಲ್ಕುಳಿ ಮಹೇಶ್, ರತ್ನಾಕರ್ ಬಿಳಿಗಿನಮನೆ ಹಸಿರುಮನೆ ನಂದನ್, ಜಯಶ್ರೀ ಅವರಿಗೆ ಅವಕಾಶ
– ಕಾಂಗ್ರೆಸ್ ಬೆಂಬಲಿತ ‘ಸಹಕಾರ ವೇದಿಕೆ’ ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿಲ್ಲ

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ-ಚಿಕ್ಕಮಗಳೂರು ದಾವಣಗೆರೆ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಮಲೆನಾಡು ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ನಿ.. (ಮ್ಯಾಮ್ ಕೋಸ್)ನ ಮುಂದಿನ 5 ವರ್ಷದ ಅವಧಿಯ ಆಡಳಿತ ಮಂಡಳಿಗೆ ಫೆಬ್ರವರಿ 4ರಂದು ಚುನಾವಣೆ ನಡೆಯುತ್ತಿದೆ. ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಮ್ಯಾಮ್ ಕೋಸ್ಒಟ್ಟು 19 ನಿರ್ದೇಶಕ ಸ್ಥಾನಗಳಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತಿ 19ಕ್ಕೆ 19 ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಬೆಂಬಲಿತ ‘ಸಹಕಾರ ವೇದಿಕೆ’ ಇನ್ನೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿಲ್ಲ.

ಯಾರು ಯಾರಿಗೆ ಅವಕಾಶ?

2000-2025ನೇ ಅವಧಿಯಲ್ಲಿ ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ ಹುಲ್ಕುಳಿ ಮಹೇಶ್, ಸಿ.ಬಿ.ಈಶ್ವರ್, ಬಿಳಿಗಿನಮನೆ ರತ್ನಾಕರ್, ಜಯಶ್ರೀ ಗೆಲುವು ಸಾಧಿಸಿದ್ದರು. ಈ ಬಾರಿ ಸಿ.ಬಿ.ಈಶ್ವರ್ ಒಬ್ಬರನ್ನು ಕೈ ಬಿಟ್ಟು ಮಿಕ್ಕ ಮೂವರಿಗೆ ಅವಕಾಶ ಕಲ್ಪಿಸಿದೆ. ಈಶ್ವರ್ ಬದಲು ಹಸಿರುಮನೆ ನಂದನ್‌ ಗೆ ಅವಕಾಶ ಮಾಡಲಾಗಿದೆ.

19ಸಾವಿರ ಷೇರುದಾರರ ಪೈಕಿ 11,600 ಮಂದಿಗೆ ಮಾತ್ರ ಮತದ ಹಕ್ಕು!

ಮ್ಯಾಮ್ ಕೋಸ್ ನಲ್ಲಿ 19 ಸಾವಿರ ಷೇರುದಾರರಿದ್ದಾರೆ. ಈ ಪೈಕಿ ಸಹಕಾರ ಕಾಯ್ದೆಗಳ ನಿಯಮ ಪಾಲಿಸದ 7,400 ಸದಸ್ಯರು ಮತದಾನದ ಹಕ್ಕು ಕಳೆದುಕೊಂಡಿದ್ದು, ಸದ್ಯಕ್ಕೆ 11,600 ಮಂದಿ ಅರ್ಹ ಮತದಾರರಿದ್ದಾರೆ. ತೀರ್ಥಹಳ್ಳಿ ತಾಲ್ಲೂಕೊಂದರಲ್ಲೇ 2800 ಮತಗಳಿವೆ. ಮತದ ಹಕ್ಕು ಕಳೆದುಕೊಂಡವರು ಸಂಘಟಿತರಾಗಿ ನ್ಯಾಯಾಲದ ಮೊರೆ ಹೋಗಿ ಮತದ ಹಕ್ಕು ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

Categories
ಜಾತಕ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಹಾಶಿವನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ನೀವು ಉತ್ಸಾಹಭರಿತರಾಗಿರುತ್ತೀರಿ. ಜೀವನದಲ್ಲಿ ಹೊಸ ವಿಷಯಗಳನ್ನು ಅನ್ವೇಷಿಸಿ. ಹಣಕಾಸಿನ ವಿಷಯಗಳಲ್ಲಿ ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಅಗತ್ಯವಿದ್ದರೆ, ತಜ್ಞರ ಸಲಹೆ ಪಡೆಯಿರಿ. ವೃತ್ತಿಪರ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ನಿಮ್ಮ ಗುರಿಗಳ ಕಡೆಗೆ ನೀವು ಪ್ರೇರೇಪಿತರಾಗಿರುತ್ತೀರಿ.

** ವೃಷಭ ರಾಶಿ :
ಇಂದು ನಿಮಗೆ ತುಂಬಾ ಒಳ್ಳೆಯ ದಿನವಾಗಿರುತ್ತದೆ. ಜೀವನದಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಇರುತ್ತದೆ. ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ. ಹೊಸ ನವೀನ ವಿಚಾರಗಳೊಂದಿಗೆ ಎಲ್ಲರೂ ಕೆಲಸ ಮಾಡಿ. ಪ್ರಯಾಣ ಮಾಡುವ ಸಾಧ್ಯತೆ ಇರಬಹುದು. ನಿಮ್ಮ ಕುಟುಂಬದೊಂದಿಗೆ ನೀವು ಕೆಲವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ.

** ಮಿಥುನ ರಾಶಿ :
ಇಂದು ಹೂಡಿಕೆಗಳು ಭರವಸೆಯ ಲಾಭವನ್ನು ನೀಡದಿರಬಹುದು. ಯಶಸ್ಸನ್ನು ಸಾಧಿಸಲು, ವೃತ್ತಿಪರ ಜೀವನದಲ್ಲಿ ನಿರಂತರ ಪ್ರಯತ್ನಗಳು ಅಗತ್ಯವಾಗಿರುತ್ತದೆ. ನಿಮ್ಮ ಕುಟುಂಬದೊಂದಿಗೆ ನೀವು ಮೋಜಿನ ಕ್ಷಣಗಳನ್ನು ಆನಂದಿಸುವಿರಿ. ನೀವು ಸಾಹಸ ಪ್ರವಾಸಕ್ಕೆ ಹೋಗಬಹುದು. ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿ.

** ಕರ್ಕಾಟಕ ರಾಶಿ :
ಇಂದು ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ನಿಮ್ಮ ಆಹಾರಕ್ರಮದ ಬಗ್ಗೆ ಗಮನ ಕೊಡಿ. ವೃತ್ತಿಪರ ಜೀವನದಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ ಮತ್ತು ಯಶಸ್ಸನ್ನು ಸಾಧಿಸಲು ಶ್ರಮಿಸಿ. ನಿಮ್ಮ ಕುಟುಂಬ ಜೀವನದಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು. ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ಮಾತನಾಡುವ ಮೂಲಕ ಸಂಬಂಧವನ್ನು ಬಲಪಡಿಸಬಹುದು.

** ಸಿಂಹ ರಾಶಿ :
ಇಂದು ಆರ್ಥಿಕ ಸ್ಥಿರತೆಯನ್ನು ತರಲು, ಖರ್ಚುಗಳನ್ನು ಕಡಿಮೆ ಮಾಡಿ. ಶಿಸ್ತುಬದ್ಧವಾಗಿರುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ವೃತ್ತಿಪರ ಜೀವನದಲ್ಲಿ ನಿಮ್ಮ ಕೆಲಸದ ಅಪೇಕ್ಷಿತ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಮನೆಯಲ್ಲಿ ಮೋಜಿನ ವಾತಾವರಣ ಇರುತ್ತದೆ. ಅತಿಥಿಗಳ ಆಗಮನದಿಂದ ನೀವು ಸಂತೋಷಪಡುತ್ತೀರಿ. ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡಿ.

** ಕನ್ಯಾ ರಾಶಿ :
ಇಂದು ನಿಮ್ಮ ದಿನಚರಿಯಲ್ಲಿ ಉತ್ತಮ ಬದಲಾವಣೆಗಳನ್ನು ಮಾಡಿ. ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ನಿಮ್ಮ ಆರೋಗ್ಯಕ್ಕೆ ಪ್ರಯೋಜನವಾಗುತ್ತದೆ. ಬಜೆಟ್ ಬಗ್ಗೆ ಗಮನ ಕೊಡಿ ಮತ್ತು ವೆಚ್ಚಗಳನ್ನು ನಿಯಂತ್ರಿಸಿ. ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಶ್ರಮಿಸುತ್ತಿರಿ. ಒತ್ತಡವನ್ನು ತಪ್ಪಿಸಲು, ಕುಟುಂಬದೊಂದಿಗೆ ಸಮಯ ಕಳೆಯಿರಿ.

** ತುಲಾ ರಾಶಿ :
ಇಂದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಆಹ್ಲಾದಕರ ಪ್ರಯಾಣಕ್ಕೆ ಅವಕಾಶಗಳು ದೊರೆಯುತ್ತವೆ. ನಿಮ್ಮ ಪ್ರೇಮ ಜೀವನವನ್ನು ಸುಧಾರಿಸಲು ಪ್ರಯತ್ನಿಸಿ. ನಿಮ್ಮ ಸಂಗಾತಿಯನ್ನು ನೋಡಿಕೊಳ್ಳಿ ಮತ್ತು ನಿಮ್ಮ ಸ್ವಂತ ಆರೋಗ್ಯದ ಬಗ್ಗೆಯೂ ಗಮನ ಕೊಡಿ.

** ವೃಶ್ಚಿಕ ರಾಶಿ :
ಇಂದು ನಿಮ್ಮ ಆರೋಗ್ಯ ಸಾಮಾನ್ಯವಾಗಿರುತ್ತದೆ. ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ನಿಮ್ಮ ಸಂಗಾತಿಯೊಂದಿಗೆ ಹೃದಯದಿಂದ ಹೃದಯದ ಸಂಭಾಷಣೆ ನಡೆಸಲು ಸಮಯ ತೆಗೆದುಕೊಳ್ಳಿ. ನೀವು ಬಹಳ ಸಮಯದ ನಂತರ ಸಂಬಂಧಿಕರನ್ನು ಭೇಟಿಯಾಗಬಹುದು. ಮನಸ್ಸು ಭಾವನಾತ್ಮಕವಾಗಿರುತ್ತದೆ. ನಿಮ್ಮ ಮನೆಯನ್ನು ನವೀಕರಿಸಲು ಅಥವಾ ಹೊಸ ಆಸ್ತಿಯನ್ನು ಖರೀದಿಸಲು ನೀವು ಯೋಜಿಸಬಹುದು.

** ಧನಸ್ಸು ರಾಶಿ :
ಇಂದು ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹೂಡಿಕೆಗಳು ಉತ್ತಮ ಲಾಭವನ್ನು ನೀಡುತ್ತವೆ. ವೃತ್ತಿಪರ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ನಿಮಗೆ ಸಿಗುತ್ತವೆ. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಎಚ್ಚರಿಕೆಯಿಂದ ಪ್ರಯಾಣ ಮಾಡಿ. ಪ್ರೇಮ ಜೀವನ ಚೆನ್ನಾಗಿರುತ್ತದೆ.

** ಮಕರ ರಾಶಿ :
ಇಂದು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಮೊದಲಿಗಿಂತ ಉತ್ತಮವಾಗಿರುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ತಾಳ್ಮೆಯಿಂದಿರಿ. ಕೋಪವನ್ನು ತಪ್ಪಿಸಿ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಮತ್ತು ಸಂಭಾಷಣೆಯ ಮೂಲಕ ಸಂಬಂಧದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ.

** ಕುಂಭ ರಾಶಿ :
ಇಂದು ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಗಮನ ಕೊಡಿ. ಹಣಕಾಸಿನ ವಿಷಯಗಳಲ್ಲಿ ಹೊಸ ತಂತ್ರಗಳನ್ನು ರೂಪಿಸಿ. ಆದಾಯ ಹೆಚ್ಚಿಸಲು ಹೊಸ ಮೂಲಗಳನ್ನು ಹುಡುಕಿ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ನಿಮಗೆ ಬೆಂಬಲ ಸಿಗುತ್ತದೆ. ಕೆಲವು ಕೆಲಸದ ಕಾರಣ ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯಬೇಕಾಗಬಹುದು. ಕಾರ್ಯಕ್ಷಮತೆ ಸುಧಾರಿಸುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ.

** ಮೀನ ರಾಶಿ :
ಇಂದು ಸವಾಲುಗಳ ಹೊರತಾಗಿಯೂ, ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸಿಗೆ ಹೊಸ ಅವಕಾಶಗಳು ಸಿಗುತ್ತವೆ. ಹಣ ಉಳಿಸಲು ಹೊಸ ಯೋಜನೆಗಳನ್ನು ರೂಪಿಸಿ. ತಂಡದ ಕೆಲಸವು ವೃತ್ತಿಪರ ಜೀವನದ ಸವಾಲುಗಳನ್ನು ನಿವಾರಿಸುತ್ತದೆ. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ. ಪ್ರಯಾಣ ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಪ್ರೇಮ ಜೀವನವನ್ನು ಸುಧಾರಿಸಲು, ನಿಮ್ಮ ಸಂಗಾತಿಯೊಂದಿಗೆ ಪ್ರಣಯ ಭೋಜನವನ್ನು ಯೋಜಿಸಬಹುದು.

Categories
ತೀರ್ಥಹಳ್ಳಿ

ಕುಪ್ಪಳಿಯಲ್ಲಿ ವೈಭವದ ಮಂತ್ರಮಾಂಗಲ್ಯ: ಎಲ್ಲೆಡೆ ಜನಾಕ್ರೋಶ!

ಕುಪ್ಪಳಿಯಲ್ಲಿ ವೈಭವದ ಮಂತ್ರಮಾಂಗಲ್ಯ: ಎಲ್ಲೆಡೆ ಜನಾಕ್ರೋಶ!
– ಕುವೆಂಪು ಹೇಳಿದ್ದೇನು…ಇಲ್ಲಿ ಆಗ್ತಿರೋದು ಏನು…?
– ಶ್ರೀಮಂತ ಕುಟುಂಬಗಳಿಗೆ ಮಾತ್ರ ಮದುವೆ ಅವಕಾಶ?!
– ಹೈಟೆಕ್ ಮದುವೆ: ಮಂತ್ರ ಮಾಂಗಲ್ಯ ನಿಯಮ ಲೆಕ್ಕಕ್ಕಿಲ್ಲ

NAMMUR EXPRESS NEWS
ತೀರ್ಥಹಳ್ಳಿ: ಕುವೆಂಪು ಹುಟ್ಟೂರು ಕುಪ್ಪಳಿಯಲ್ಲಿ ಮಂತ್ರ ಮಾಂಗಲ್ಯ ಆಗಬೇಕು. ಸರಳ ಮದುವೆ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಡಬೇಕು ಎಂಬುದು ಅದೆಷ್ಟೋ ಜನರ ಕನಸು. ಆದರೆ ಇದೀಗ ಕಳೆದ 2 ದಿನಗಳ ಹಿಂದೆ ನಡೆದ ಮದುವೆ ಇದೀಗ ರಾಜ್ಯದ ಕುವೆಂಪು ಅಭಿಮಾನಿಗಳು ಮತ್ತು ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ.
ವಿಚಾರಗಳನ್ನು ಪಸರಿಸುತ್ತ ಉತ್ತಮ ಹೆಸರು ಗಳಿಸಿದ್ದ ಕುಪ್ಪಳಿ ಪರಿಸರದಲ್ಲಿ ವೈಭವದ ಮದುವೆ ಆಯೋಜನೆಗೆ ಅವಕಾಶ ನೀಡುವ ಮೂಲಕ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ವಿವಾದವನ್ನು ಎಳೆದುಕೊಂಡಿದೆ. ಅಲ್ಲದೆ ಪ್ರತಿಷ್ಠಾನಕ್ಕೆ ಸಂಬಂಧಪಟ್ಟವರ ಮದುವೆ ಆಗಿದ್ದು ಎಲ್ಲಿಯೂ ಮಂತ್ರ ಮಾಂಗಲ್ಯದ ನಿಯಮ ಪಾಲನೆ ಮಾಡದಿರುವುದು ಇದೀಗ ದೊಡ್ಡ ಸಂಕಷ್ಟಕ್ಕೆ ಕಾರಣವಾಗಿದೆ. ಆಡಂಬರದ ಅಲಂಕಾರ, ಊಟ, ಹೈಟೆಕ್ ಸೌಲಭ್ಯ ಹೆಸರಿಗೆ ಮಾತ್ರ ಮಂತ್ರ ಮಾಂಗಲ್ಯ. ಇಂತಹ ವಿಡಿಯೋ ಆ ದಿನವೇ ವೈರಲ್ ಆಗಿದ್ದವು. ಇದೀಗ ರಾಜ್ಯ ಮಟ್ಟದಲ್ಲಿ ಕುವೆಂಪು ಅವರ ಮನೆ ಸಮೀಪದಲ್ಲಿ ನಡೆದ ಮದುವೆ ಸುದ್ದಿ ಮಾಡಿದೆ.

ಆಗಿದ್ದೇನು?

ಕುವೆಂಪು ಪ್ರತಿಷ್ಠಾನದ ಸಮ ಕಾವ್ಯದರ್ಶಿ ಕಡಿದಾಳ್ ಪ್ರಕಾಶ್ ಅವರ ಸಂಬಂಧಿಯ ಮದುವೆ ಜ.24ರಂದು ಸಂಜೆ ಕುಪ್ಪಳಿಯ ಹೇಮಾಂಗಣದಲ್ಲಿ ‘ಮಂತ್ರ ಮಾಂಗಲ್ಯ’ ಹೆಸರಿನಲ್ಲಿ ನಡೆದಿದೆ. ಆದರೆ, ಇಡೀ ಹೇಮಾಂಗಣ, ಕುಪ್ಪಳಿ ಪರಿಸರವನ್ನು ರೆಸಾರ್ಟ್‌ನಂತೆ ಪರಿವರ್ತಿಸಿ ಅಲಂಕರಿಸಿದ್ದು, 500ಕ್ಕೂ ಹೆಚ್ಚು ಜನ, ನೂರಾರು ಕಾರುಗಳು, ಭರ್ಜರಿ ಭೋಜನದ ಮೂಲಕ ಕುವೆಂಪು ಪ್ರತಿಪಾದಿಸಿದ ಮಂತ್ರ ಮಾಂಗಲ್ಯದ ಬುಡಮೇಲು ಪರಿಕಲ್ಪನೆಯನ್ನೇ ಮಾಡಲಾಗಿದೆ. ಪ್ರತಿಷ್ಠಾನದ ಸಮ ಕಾರ್ಯದರ್ಶಿಯಂತಹ ಜವಾಬ್ದಾರಿ ಸ್ಥಾನದಲ್ಲಿರುವವರ ಸಂಬಂಧಿಕರೇ ಕುವೆಂಪು ಆಶಯಕ್ಕೆ ವಿರುದ್ದವಾಗಿ ಮಂತ್ರಮಾಂಗಲ್ಯದ ಹೆಸರಲ್ಲಿ ಅದ್ದೂರಿ ಮದುವೆ ಮಾಡಿರುವುದು ಇದೀಗ ವ್ಯಾಪಕ ಟೀಕೆಗೂ ಕಾರಣವಾಗಿದೆ.

ಬಡವರ ಮದುವೆಗೆ ಅವಕಾಶ ಇಲ್ಲ?!

ಕುಪ್ಪಳಿಯ ಕವಿಮನೆ, ಕವಿಶೈಲದ ಅಚ್ಚುಕಟ್ಟಾದ ನಿರ್ವಹಣೆ ಬಗ್ಗೆ ಇಲ್ಲಿಗೆ ಭೇಟಿ ನೀಡುವ ಕುವೆಂಪು ಅಭಿಮಾನಿಗಳು ಹೆಮ್ಮೆಪಡುತ್ತಿದ್ದರು. ಆದರೆ, ಇತ್ತೀಚೆಗೆ ಈ ಪರಿಸರದಲ್ಲಿ ಕುವೆಂಪು ಆದರ್ಶ, ವಿಶ್ವಮಾನವ ಸಂದೇಶಕ್ಕೆ ಅಪಚಾರವೆಸಗುವ ಘಟನೆಗಳು ನಡೆಯುತ್ತಿರುವ ಬಗ್ಗೆ ಆರೋಪಗಳಿದ್ದವು. ಇದಕ್ಕೆಲ್ಲ ಸಾಕ್ಷಿಯೆಂಬಂತೆ ಕುವೆಂಪು ಪ್ರತಿಷ್ಠಾನದ ಸಮ ಕಾವ್ಯದರ್ಶಿಯ ಸಂಬಂಧಿಕರ ಮದುವೆಗೆ ಕುಪ್ಪಳಿಯ ಹೇಮಾಂಗಣ ವನ್ನು ರೆಸಾರ್ಟ್ ಆಗಿ ಪರಿವರ್ತಿಸಿದ್ದು ಕುವೆಂಪು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಇನ್ನು ಶ್ರೀಮಂತ ಕುಟುಂಬಗಳಿಗೆ ಮಾತ್ರ ಮಂತ್ರ ಮಾಂಗಲ್ಯಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಬಡ ಕುಟುಂಬಗಳಿಗೆ ದಿನಾಂಕ ಬುಕ್ ಆಗಿದೆ ಎಂದು ಸುಳ್ಳು ಹೇಳಿ ಕಳಿಸಲಾಗುತ್ತಿದೆ ಎಂಬ ದೊಡ್ಡ ಆರೋಪ ಕೂಡ ಕೇಳಿ ಬಂದಿದೆ. ಕುವೆಂಪು ವಿಶ್ವ ಮಾನವ ಸಂದೇಶ ಕೂಡ ಇಲ್ಲಿ ಕೆಲವರ ಹಿತಾಸಕ್ತಿಗೆ ಬಲಿ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕವಿನೆಲದಲ್ಲಿ ಮೋಜು ಮಸ್ತಿ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ವಧು ಮತ್ತು ಬೆಂಗಳೂರಿನಲ್ಲಿ ವಾಸವಿರುವ ಕೇರಳ ಮೂಲದ ವರನ ಮಂತ್ರಮಾಂಗಲ್ಯಕ್ಕೆ ಕುಪ್ಪಳಿಯ ಹೇಮಾಂಗಣ ಮತ್ತು ಸುತ್ತಲಿನ ಪರಿಸರವನ್ನು ಕಾರ್ಪೊರೇಟ್ ಶೈಲಿಯಲ್ಲಿ ಅಲಂಕರಿಸಲಾಗಿತ್ತು. ಮದುವೆ ಹೆಸರಿನಲ್ಲಿ ನಡೆಯುವ ದುಂದುವೆಚ್ಚ, ಕಂದಾಚಾರ ತಡೆಯುವ ಉದ್ದೇಶದಿಂದ ಮಂತ್ರಮಾಂಗಲ್ಯ ಎಂಬ ಸರಳ ವಿಧಾನವನ್ನು ಕುವೆಂಪು ಪರಿಚಯಿಸಿದ್ದು, ನಾಡಿನಾದ್ಯಂತ ಸಹಸ್ರಾರು ಜನ ಈ ಮಾದರಿಯನ್ನು ಅನುಸರಿಸಿದ್ದರು. ಕಳೆದೆರಡು ದಿನಗಳಿಂದ ಈ ಹೋಮ್ ಸ್ಟೇಗಳಲ್ಲಿ ಮದುವೆಗೆ ಬಂದಿದ್ದ ಅತಿಥಿಗಳಿಗೆ ಗುಂಡು ತುಂಡಿನ ಸಮಾರಾಧನೆಯೂ ನಡೆದಿದೆ. ಹೀಗೆ ಪಾನಮತ್ತರಾದ ಕೆಲವರು ಜ.24 ರಂದು ಹೇಮಾಂಗಣದಲ್ಲಿ ಆಯೋಜಿಸಿದ್ದ ಸಂಗೀತ ರಸಸಂಜೆಯಲ್ಲಿ ಕುಣಿದು ಕುಪ್ಪಳಿಸಿದ್ದು, ವಿಡಿಯೊ ಲಭ್ಯ ವಾಗಿದೆ. ಕುಪ್ಪಳಿಯನ್ನು ಮೋಜು ಮಸ್ತಿಯ ತಾಣವನ್ನಾಗಿ ಪರಿವರ್ತಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಪ್ರತಿಷ್ಠಾನದ ಸಮ ಕಾರ್ಯದರ್ಶಿ ಹೇಳಿದ್ದೇನು?

ಕುಪ್ಪಳಿಯಲ್ಲಿ ಜ.24ರಂದು ಸಂಜೆ ನಡೆದ ಮಂತ್ರ ಮಾಂಗಲ್ಯ ವಿವಾಹ ಸ್ವಲ್ಪ ಅದ್ದೂರಿಯಾಗಿತ್ತು. ಸುಮಾರು 200 ಜನ ಭಾಗವಹಿಸಿದ್ದರು. ಮದುವೆ ನನ್ನ ಸಂಬಂಧಿಕರದ್ದೇ. ಆದರೆ, ಅದ್ದೂರಿ ಮದುವೆಯ ಸಂಗತಿ ಗೊತ್ತಿರಲಿಲ್ಲ. ಅಲ್ಲಿಗೆ ತೆರಳಿದಾಗ ಇದು ತಿಳಿಯಿತು. ಇನ್ನು ಇಂತಹ ಮದುವೆಗೆ ಪ್ರತಿಷ್ಠಾನ ಅವಕಾಶ ನೀಡುವುದಿಲ್ಲ ಎಂದು ಕಡಿದಾಳ್ ಪ್ರಕಾಶ್, ಸಮ ಕಾದರ್ಶಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಹೇಳಿದ್ದಾರೆ.

Categories
ತೀರ್ಥಹಳ್ಳಿ

ಆಗುಂಬೆ ಘಾಟಿಯಲ್ಲಿ ಬಸ್ಸಲ್ಲೇ ಹೃದಯಾಘಾತ: ಸಾವು

ಆಗುಂಬೆ ಘಾಟಿಯಲ್ಲಿ ಬಸ್ಸಲ್ಲೇ ಹೃದಯಾಘಾತ: ಸಾವು
– ಕೊಪ್ಪದ ವ್ಯಕ್ತಿ ಮೃತ: ಆಗುಂಬೆ ಲಯನ್ಸ್ ಸೇವೆ
– ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲು

NAMMUR EXPRESS NEWS
ತೀರ್ಥಹಳ್ಳಿ/ಕೊಪ್ಪ: ಆಗುಂಬೆ ಘಾಟಿಯಲ್ಲಿ ಬಿಎಂಎಸ್ ಬಸ್ಸಿನಲ್ಲಿ ಪರ್ಕಳದಿಂದ ಕೊಪ್ಪಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬರು ಹೃದಯ ಅಘಾತದಿಂದ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಬಸ್ ಅಲ್ಲೇ ಕೊಪ್ಪದ ಹರೀಶ್ ಬಳ್ಳಾಲ್ ಎನ್ನುವವರಿಗೆ ತೀವ್ರ ಹೃದಯಘಾತ ಆಗಿದ್ದು ಡ್ರೈವರ್ ಆದ ಪ್ರಹ್ಲಾದವರು ಆಗುಂಬೆಯ ಯಶಸ್ವಿ ಬಸ್ಸಿನ ಡ್ರೈವರ್ ಆದ ದಿನೇಶ್ ಅವರ ಗಮನಕ್ಕೆ ತಂದು ಪ್ರಾಥಮಿಕ ಕೇಂದ್ರಕ್ಕೆ ಬರುವಷ್ಟರಲ್ಲಿ ಹರೀಶ್ ಪ್ರಾಣ ಬಿಟ್ಟಿದ್ದಾರೆ. ಆಗುಂಬೆ ವೈದ್ಯಾಧಿಕಾರಿಯಾದ ಅನಿಕೇತನ್ ಪರೀಕ್ಷಿಸಿ ಮೃತರೆಂದು ತೀರ್ಮಾನಿಸಿದ ನಂತರ ಆಗುಂಬೆಯ ಲಯನ್ಸ್ ಕ್ಲಬ್ ಆಂಬುಲೆನ್ಸ್ ಗೆ ಬಳ್ಳಾಳ್ ಅವರ ಮೃತದೇಹವನ್ನು ಶಿಫ್ಟ್ ಮಾಡಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್ಸನ್ನು ಕಳಿಸಿ ಕೊಟ್ಟಿರುತ್ತಾರೆ. ಕುಟುಂಬದವರಿಗೆ ಮಾಹಿತಿಯನ್ನು ನೀಡಿ ಮುಂದಿನ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.

Categories
ತೀರ್ಥಹಳ್ಳಿ

ವಾಗ್ದೇವಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ!

ವಾಗ್ದೇವಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ!
– ಮಲೆನಾಡಿನ ಹೆಮ್ಮೆಯ ಶಿಕ್ಷಣ ಸಂಸ್ಥೆ: ಅತ್ಯುತ್ತಮ ಶಿಕ್ಷಣಗೆ ಸೇರಲು ಅವಕಾಶ

ಮಲೆನಾಡಿನ ಶಿಕ್ಷಣ ಕ್ರಾಂತಿಗೆ ಕಾರಣವಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಸತ್ವಥ ಎಜುಕೇಶನ್ ಟ್ರಸ್ಟ್ ಅಂಗವಾದ ವಾಗ್ದೇವಿ ಪದವಿ ಪೂರ್ವ ಕಾಲೇಜಿನಲ್ಲಿ ಓದಲು ಈಗ ಸುವರ್ಣ ಅವಕಾಶ. ಎಸ್.ಎಸ್ ಎಲ್.ಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತಮ ಕಾಲೇಜನ್ನು ಸೇರಿ,ಅದ್ಭುತ ಜೀವನವನ್ನು ಕಟ್ಟಿಕೊಳ್ಳಬೇಕು ಎನ್ನುವುದು ಪ್ರತಿಯೊಂದು ವಿದ್ಯಾರ್ಥಿಗಳ ಕನಸಾಗಿರುತ್ತದೆ. ಇದನ್ನು ನನಸಾಗಿಸುವ ಉದ್ದೇಶದಿಂದ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಪ್ರೋತ್ಸಾಹಿಸುವ ಕಾರಣದಿಂದ 2025-26ನೆಯ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ದಾಖಲಾತಿಯನ್ನು ಪಡೆಯುವ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು
ನೀಡಲಿದೆ.

ವಿಶೇಷ ಶಿಷ್ಯ ವೇತನ

ಶೇಕಡ 97ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ ಪೂರ್ಣ ಶುಲ್ಕ ವಿನಾಯಿತಿ, ಶೇಕಡ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ ಶುಲ್ಕ ರಿಯಾಯಿತಿ  ಇರುತ್ತದೆ.

ಕಾಲೇಜಿನಲ್ಲಿ ಸಿ.ಇ.ಟಿ, ನೀಟ್, ಜೆಇಇ, ಸಿ.ಎ, ಸಿ.ಪಿ.ಟಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನುರಿತ ಉಪನ್ಯಾಸಕರಿಂದ ವಿಶೇಷ ತರಗತಿಗಳನ್ನು ನೀಡುತ್ತಾರೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವ, ವಿದ್ಯಾರ್ಥಿಗಳನ್ನು ವಾಗ್ದೇವಿ ಶಿಕ್ಷಣ ಸಂಸ್ಥೆ ಸ್ವಾಗತಿಸುತ್ತಿದೆ.

ಮಲೆನಾಡಿನ ಪ್ರಸಿದ್ಧ ಶಿಕ್ಷಣ ಸಂಸ್ಥೆ

ಸತ್ಪಥ ಎಜುಕೇಷನ್‌ ಟ್ರಸ್ಟ್ (ರಿ)
ವಾಗ್ದೇವಿ ಶಿಕ್ಷಣ ಸಂಸ್ಥೆಗಳು, ತೀರ್ಥಹಳ್ಳಿ

ವಾಗ್ದೇವಿ ಪ್ರಾಥಮಿಕ ಶಿಕ್ಷಣ ಸಂಸ್ಥೆ
(ಎಲ್. ಕೆ. ಜಿ, ಯುಕೆಜಿ, 1ತರಗತಿ -7 ತರಗತಿ )
ವಾಗ್ದೇವಿ ಪ್ರೌಢ ಶಿಕ್ಷಣ ಸಂಸ್ಥೆ
ವಾಗ್ದೇವಿ ಪಿಯು ಕಾಲೇಜು ( ಸೈನ್ಸ್, ಕಾಮರ್ಸ್)


PU College – 08181-229030
High School – 08181-227898
Primary-08181-229898

vagdevigroupofinstitutions.com

ಕುವೆಂಪು ರಸ್ತೆ ತೀರ್ಥಹಳ್ಳಿ / ಮಾನಿ, ಮೇಲಿನ ಕುರುವಳ್ಳಿ ತೀರ್ಥಹಳ್ಳಿ