Categories
ಬೆಂಗಳೂರು

ಸಿ ಎಂ ಸಿದ್ದರಾಮಯ್ಯ ಹೇಳಿಕೆ ಶಾಸಕ ಆರಗ ಬೃಹತ್ ಖಂಡನೆ

ಸಿ ಎಂ ಸಿದ್ದರಾಮಯ್ಯ ಹೇಳಿಕೆ ಶಾಸಕ ಆರಗ ಬೃಹತ್ ಖಂಡನೆ
– ಯುದ್ಧ ಬೇಡ ಶಾಂತಿ ಬೇಕು ಎಂದು ಹೇಳಿದ್ದಿರಾ,ಒಂದು ದೇಶದ ಮಾನ ಅಪಮಾನದ ಪ್ರಶ್ನೆ
– ಸಿದ್ದರಾಮಯ್ಯ ಮಾತ್ರ ಅಲ್ಪ ಸಂಖ್ಯಾತರ ವೋಟಿಗಾಗಿ ಬೇರೆ ಸಂದೇಶ ತಲುಪಿಸುವ ಪ್ರಯತ್ನ

NAMMUR EXPRESS NEWS
ಪಹಾಲ್ಗಮ್ ಉಗ್ರರ ಧಾಳಿಯಲ್ಲಾದ 26 ಜನರ ಕುಟುಂಬಗಳ ಕಣ್ಣೀರು ಮಾಸುವ ಮುಂಚೆ ಸಿದ್ದರಾಮಯ್ಯ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಹೊರಟಿರುವುದು ತುಷ್ಟಿಕರಣ ರಾಜಕಾರಣದ ಪರಮಾವದಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಕಾಂಗ್ರೆಸ್ ಕೇಂದ್ರ ನಾಯಕತ್ವ ಪಾಕಿಸ್ತಾನ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳೋ ನಿರ್ಧಾರಕ್ಕೆ ಬದ್ದ ಎಂದು ಹೇಳಿದ್ದರೆ, ಸಿದ್ದರಾಮಯ್ಯ ಮಾತ್ರ ಅಲ್ಪ ಸಂಖ್ಯಾತರ ವೋಟಿಗಾಗಿ ಅಲ್ಪಸಂಖ್ಯಾತರಿಗೆ ಬೇರೆ ಸಂದೇಶ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಓಲೈಕೆ ರಾಜಕಾರಣವನ್ನು 26 ಜನರ ಶವದ ಮೇಲೆ ಮಾಡ ಹೊರಟಿರುವ ಸಿದ್ದರಾಮಯ್ಯನವರ ಈ ನಿಲುವಿಗೆ ಧಿಕ್ಕಾರವಿರಲಿ.

ಯುದ್ಧ ಬೇಡ ಶಾಂತಿ ಬೇಕು ಎಂದು ಹೇಳಿದ್ದಿರಾ, ಎಲ್ಲರಿಗೂ ಬೇಕಾಗಿರುವುದು ಶಾಂತಿಯೇ, ಆದರೆ ಪದೇ ಪದೇ ನಾವೇ ಶಾಂತಿ ಸೌಹಾರ್ದತೆ ಬಯಸಬೇಕಾ?ಸಿದ್ದರಾಮಯ್ಯನವರೇ ಇದು ಒಂದು ದೇಶದ ಮಾನ ಅಪಮಾನದ ಪ್ರಶ್ನೆಯಿದೆ ಸ್ವಾಭಿಮಾನದ ಪ್ರಶ್ನೆ ಇದೆ. 26 ಜನ ಮರಣ ಹೊಂದಿದ ಕುಟುಂಬದವರಲ್ಲಿ ನಿಮ್ಮ ಹತ್ತಿರದವರು ಇರುತ್ತಿದ್ದರೆ ನಿಮ್ಮ ಹೇಳಿಕೆ ಹೀಗೆ ಇರುತ್ತಿತಾ? ಒಂದೊಮ್ಮೆ ನೀವು ಮತ್ತು ನಿಮ್ಮ ಮಂತ್ರಿ ಮಂಡಲದ ನಿಮ್ಮ ಜೊತೇನೇ ಇರುವ ಜಮೀರ್ ಪೆಹಲ್ಗಮ್ನಲ್ಲಿ ಇದ್ದಿದ್ದರೆ ಜಮೀರ್ ಮಾತ್ರ ವಾಪಾಸ್ ಬರುತ್ತಿದ್ದರು, ನಾನು ಸೆಕ್ಯುಲರ್ ನಾನು ಅಲ್ಪ ಸಂಖ್ಯಾತರ ಪರ ಎಂದು ನೀವು ಏನೇ ಬಡಾಯಿಸಿಕೊಂಡಿದ್ದರು, ಉಗ್ರಗಾಮಿಗಳು ಜೀವಂತವಾಗಿ ನಿಮ್ಮನ್ನು ವಾಪಾಸ್ ಬರಲು ಬಿಡುತ್ತಿದ್ದರಾ?ಈ ರೀತಿ ಧರ್ಮ ಕೇಳಿ ಸಾಯಿಸುವ ಹೀನ ಕೃತ್ಯ ನಡೆದ ಮೇಲೂ ನಿಮ್ಮ ಓಲೈಕೆ ರಾಜಕಾರಣ ಮುಂದುವರಿಸಿದ್ದೀರಾ. ಸಿದ್ದರಾಮಯ್ಯನವರೇ ಈ ಮನೋಭಾವ ಬದಲಾಯಿಸದೇ ಇದ್ದರೆ, ಇದರ ಮುಂದಿನ ಪರಿಣಾಮಗಳು ಈ ದೇಶಕ್ಕೆ ಸಮಾಜಕ್ಕೆ ಅಪಾಯಕಾರಿ ಆಗಿರುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ.

Categories
ಡೆಲ್ಲಿ

ಪಾಕಿಸ್ತಾನದ ಹದಿನಾರು ಯೂಟ್ಯೂಬ್ ಚಾನೆಲ್ ಬ್ಯಾನ್!

ಪಾಕಿಸ್ತಾನದ ಹದಿನಾರು ಯೂಟ್ಯೂಬ್ ಚಾನೆಲ್ ಬ್ಯಾನ್!

– ಕೇಂದ್ರ ಗೃಹ ಇಲಾಖೆಯಿಂದ ಮಹತ್ತರ ಆದೇಶ
– ನ್ಯೂಸ್ ಸಂಸ್ಥೆಗಳ ಮೇಲೆ ಕೂಡಾ ನಿಗಾ ಇಟ್ಟಿರುವ ಗೃಹ ಇಲಾಖೆ

NAMMUR EXPRESS NEWS
ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತದ ಅನೇಕರು ಅಸುನೀಗಿದ್ದಾರೆ.
ಇದೀಗ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತದಲ್ಲಿ ಕೋಮು ಸೂಕ್ಷ್ಮತೆಯನ್ನು ಬಿತ್ತರಿಸುತ್ತಿದ್ದ ಪಾಕಿಸ್ತಾನದ ಹದಿನಾರು ಯೂಟ್ಯೂಬ್ ಚಾನೆಲ್ ಗಳನ್ನು ಬಂದ್ ಮಾಡಿ ಕೇಂದ್ರ ಗೃಹ ಇಲಾಖೆ ಮಹತ್ತರ ಆದೇಶ ಹೊರಡಿಸಿದೆ.
ಮುಖ್ಯ ವಿಚಾರವೆಂದರೆ ಪತ್ರಕರ್ತರಾದ ಇರ್ಷಾದ್ ಭಟ್ಟಿ, ಉಮರ್ ಚೀಮಾ, ಅಸ್ಮಾ ಶಿರಾಜಿ ಅವರ ಯೂಟ್ಯೂಬ್ ಚಾನೆಲ್ ಗಳನ್ನು ಕೂಡಾ ಬ್ಯಾನ್ ಮಾಡಲಾಗಿದೆ.
ಈಗಾಗಲೇ ನಿಷೇಧಿಸಿರುವ ಯೂಟ್ಯೂಬ್ ಚಾನೆಲ್ ಗಳ ಪಟ್ಟಿ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಇಲಾಖೆ ನ್ಯೂಸ್ ಸಂಸ್ಥೆಗಳ ಮೇಲೆ ಕೂಡಾ ನಿಗಾ ಇಟ್ಟಿದೆ.

Categories
ತೀರ್ಥಹಳ್ಳಿ

ಗಾಯತ್ರಿ ಜ್ಯುವೆಲರ್ಸ್ ನಲ್ಲಿ ಅದ್ದೂರಿ ಮಾರಾಟ ಮೇಳ!

ಗಾಯತ್ರಿ ಜ್ಯುವೆಲರ್ಸ್ ನಲ್ಲಿ ಅದ್ದೂರಿ ಮಾರಾಟ ಮೇಳ!

ಅಕ್ಷಯ ತೃತೀಯ ಅಂಗವಾಗಿ ವಿಶೇಷ ಆಫರ್

ತೀರ್ಥಹಳ್ಳಿ ಪಟ್ಟಣದ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ , ಸುದೀರ್ಘ 2 ದಶಕಗಳಿಗೂ ಹೆಚ್ಚು ಕಾಲ ಮಲೆನಾಡಲ್ಲಿ ಮನೆ ಮಾತಾಗಿರುವ ಗಾಯತ್ರಿ ‌ಜ್ಯುವೆಲರ್ಸ್ ಅಲ್ಲಿ‌ ಈಗಾಗಲೇ ಅಕ್ಷಯ ತೃತೀಯ ಪ್ರಯುಕ್ತ ಮೆಗಾ ಮಾರಾಟ ಮೇಳ ಶುರುವಾಗಿದೆ.
ಏಪ್ರಿಲ್ 27ರಿಂದ 30ರವರೆಗೆ ಖರೀದಿ ಮಾಡಿದ ಗ್ರಾಹಕರಿಗೆ ಒಂದು‌ ಕೆಜಿ ಬೆಳ್ಳಿ ಖರೀದಿಗೆ ಖಚಿತವಾಗಿ 5000 ಸಾವಿರ ರೂ ವರೆಗೆ ವಿನಾಯಿತಿ ಹಾಗೂ 1 ಕ್ಯಾರೆಟ್ ವಜ್ರ ಖರೀದಿಗೆ ಬರೋಬ್ಬರಿ 10 ಸಾವಿರದವರೆಗೆ ಭಾರೀ ವಿನಾಯಿತಿ ಪಡೆಯುವ ಮುಖಾಂತರ ಗ್ರಾಹಕರು ಹೆಚ್ಚು ಸಂತೃಪ್ತರಾಗಬಹುದು.

ತೀರ್ಥಹಳ್ಳಿ ಗಾಂಧಿ ಚೌಕದಲ್ಲಿರುವ ಗಾಯತ್ರಿ ಜ್ಯುವೆಲರ್ಸ್ ಗೆ ಇಂದೇ ಭೇಟಿಕೊಡಿ

Categories
ಶಿವಮೊಗ್ಗ

ಭದ್ರಾವತಿ: ಪಾಕಿಸ್ತಾನ ಹೆಸರು ಬಳಸಿ ವಿಡಿಯೋ: ಎಫ್‌ಐಆರ್!

ಭದ್ರಾವತಿ: ಪಾಕಿಸ್ತಾನ ಹೆಸರು ಬಳಸಿ ವಿಡಿಯೋ: ಎಫ್‌ಐಆರ್!

– ಧರ್ಮ ಧರ್ಮದ ನಡುವೆ ದ್ವೇಷ ಬರುವಂತೆ ಪ್ರಚೋದನೆ ನೀಡಿದ ವಿಡಿಯೋ
– ಭದ್ರಾವತಿಯ ಇಬ್ಬರ ಮೇಲೆ ಕೇಸ್!

NAMMUR EXPRESS NEWS
ಶಿವಮೊಗ್ಗ: ಪಾಕಿಸ್ತಾನ ಹೆಸರು ಬಳಸಿ ವಿಡಿಯೋ ಮಾಡಿ ಹರಿಬಿಟ್ಟ ಭದ್ರಾವತಿಯ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.
ಹೌದು ಧರ್ಮ ಧರ್ಮದ ನಡುವೆ ದ್ವೇಷ ಬರುವಂತೆ ಪ್ರಚೋದನೆ ನೀಡಿದ ಭದ್ರಾವತಿಯ ಇಬ್ಬರ ಮೇಲೆ ಕೇಸ್ ದಾಖಲಾಗಿದ್ದು, ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮೂಲಕ ಜಾಲತಾಣಗಳ ನಿಗಾ ಇಟ್ಟಿದ್ದ ವೇಳೆ ಪ್ರಚೋದನಕಾರಿ ವಿಡಿಯೋ
ಸಿಕ್ಕಿದ್ದು, ಭದ್ರಾವತಿಯ ಸಾದತ್ ಕಾಲೊನಿ ನಿವಾಸಿ ಸೋಫಿಯಾನ್ ಹಾಗೂ ಆತನೊಂದಿಗೆ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿ ಹಳೆ ನಗರ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Categories
ದೈವಿಕ ಮಾಹಿತಿ ಸುದ್ದಿ

ರಾತ್ರಿ ಮಲಗುವ ಮುನ್ನ ಈ ಒಂದು ಮಂತ್ರ ಹೇಳಿ!

ರಾತ್ರಿ ಮಲಗುವ ಮುನ್ನ ಈ ಒಂದು ಮಂತ್ರ ಹೇಳಿ!

– ನೀವು ಬಿಟ್ಟರೂ ಅವರು ನಿಮ್ಮನ್ನು ಬಿಡೋದಿಲ್ಲ… ನಿಮ್ಮ ಹಿಂದೆ ಬರ್ತಾರೆ
– ನಿಮ್ಮ ಭವಿಷ್ಯಕ್ಕಾಗಿ ಭಾನುವಾರ ಉಚಿತ ಜ್ಯೋತಿಷ್ಯ!

NAMMUR EXPRESS NEWS
ನೀವು ಇಷ್ಟ ಪಟ್ಟ ವ್ಯಕ್ತಿ ಮಹಿಳೆಯಾಗಿರಲಿ ಪುರುಷಾಗಿರಲಿ ಯಾರೇ ಆಗಿದ್ದರೂ ಕೂಡ ಅವರನ್ನು ನಿಮ್ಮ ಜೊತೆಯಲ್ಲೇ ಇರಬೇಕು ಯಾವುದೇ ಕಾರಣಕ್ಕೂ ನಮ್ಮಿಂದ ದೂರ ಆಗಬಾರದು ಅಂದುಕೊಂಡಿದ್ದರೆ ಈ ಶಕ್ತಿಶಾಲಿಯಾದ ತಂತ್ರವನ್ನು ಮಾಡಿ ಖಂಡಿತವಾಗಿಯೂ ನೀವು ಯಾರನ್ನು ಇಷ್ಟಪಟ್ಟಿರುತ್ತೀರೋ ಅಂತಹ ವ್ಯಕ್ತಿಗಳು ಸಂಪೂರ್ಣವಾಗಿ ವಶ ಆಗಲು ಸಾಧ್ಯವಾಗುತ್ತದೆ.
ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರವಾಗಿದೆ. ಈ ತಂತ್ರವನ್ನು ನೀವು ಒಂದು ಬಾರಿ ಪ್ರಯೋಗ ಮಾಡುತ್ತಿದ್ದಂತೆಯೇ ಸಾಕಷ್ಟು ಬದಲಾವಣೆ ಕಾಣುತ್ತೀರಿ. ಒಂದು ಒಳ್ಳೆಯ ಮನಸ್ಸಿನಿಂದ ಈ ತಂತ್ರ ಮಾಡಿದರೆ ಖಂಡಿತ ನೀವು ಬದಲಾವಣೆಯನ್ನು ಕಾಣಬಹುದಾಗಿದೆ
ಈ ವಶೀಕರಣವನ್ನು ಮಾಡಲು ಒಂದು ಬಿಳಿಯ ಕಾಗದ, ಎರಡು ಏಲಕ್ಕಿ ಮತ್ತು ಒಂದು ಲವಂಗವನ್ನು ಬಳಸಿಕೊಂಡು ಮಾಡುವಂತಹ ತಂತ್ರ ಇದ್ದಾಗಿದೆ. ಒಂದು ಏಲಕ್ಕಿಯ ಮೇಲೆ ನೀವು ಇಷ್ಟಪಟ್ಟ ವ್ಯಕ್ತಿಯ ಹೆಸರನ್ನ ಬರೆಯಬೇಕು, ಇನ್ನೊಂದು ಏಲಕ್ಕಿಯ ಮೇಲೆ ನಿಮ್ಮ ಹೆಸರನ್ನು ಬರೆಯಬೇಕು. ಲವಂಗವನ್ನು ಹಿಡಿದುಕೊಂಡು ನಿಮ್ಮ ಹೆಸರನ್ನು ಮನಸ್ಸಿನಲ್ಲಿ ಪಠಣೆ ಮಾಡುತ್ತಾ ಅವರ ಹೆಸರು ಕೂಡ ಹೇಳಬೇಕು.
ಒಂದು ಬಿಳಿಯ ಹಾಳೆಯನ್ನು ತೆಗೆದುಕೊಂಡು ಅದರ ಮೇಲೆ ತ್ರಿಭುಜವನ್ನು ಬರೆಯಬೇಕು. ತ್ರಿಭುಜದ ಮೇಲೆ ನಿಮ್ಮ ಹೆಸರು ಮತ್ತು ತ್ರಿಭುಜದ ಕೆಳಗೆ ನೀವು ಯಾರನ್ನು ವಶ ಮಾಡಬೇಕು ಅಂದುಕೊಂಡಿದ್ದೀರಾ.. ಅವರ ಹೆಸರನ್ನ ಬರೆಯಬೇಕು. ತ್ರಿಕೋನದ ಮಧ್ಯ ಭಾಗದಲ್ಲಿ ಓಂ ಎಂದು ಬರೆಯಿರಿ. (ಲೇಖನ ಬರಹಗಾರರು ಜ್ಞಾನೇಶ್ವರ್ ರಾವ್ ತಂತ್ರಿ)
ನೀವು ಏಲಕ್ಕಿಯ ಮೇಲೆ ಯಾರನ್ನು ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರು ಕೆಳಭಾಗದಲ್ಲಿ ಹಾಗೆಯೇ ನಿಮ್ಮ ಹೆಸರನ್ನು ಮೇಲ್ಭಾಗದಲ್ಲಿ ಲವಂಗವನ್ನು ನೆನೆಸಿಕೊಂಡು ತ್ರಿಭುಜದ ಮೇಲೆ ಇಡಬೇಕು.
ನಂತರ ಎರಡು ಏಲಕ್ಕಿ ಮತ್ತು ಲವಂಗ ಇಟ್ಟಿರುವ ಬಿಳಿಯ ಕಾಗದವನ ಸಂಪೂರ್ಣವಾಗಿ ಮಡಿಚಬೇಕು. ನಂತರ ಈ ವಿಶೇಷ ತಾಳೆಗರಿ ಗ್ರಂಥದಲ್ಲಿನ ತಂತ್ರಸಾರ ತಾಂತ್ರಿಕ ಮಂತ್ರವನ್ನು 108 ಬಾರಿ ಆಹ್ವಾನಿಸಬೇಕು.

ಮಂತ್ರ

“ಓಂ ನಮೋ ಸಿದ್ದಿವಿನಾಯ ಕಾಯ ಸರ್ವ ಕಾರ್ಯಾಣಿ ಸರ್ವ ವಿಘ್ನ ಪ್ರಶಮನಾಯ ಸ್ತ್ರೀ ಹೆಸರು ವಶೀಕರಣಾಯ ಶ್ರೀ ಓಂ ಸ್ವಾಹಾಃ.”
ಓಂ ಹ್ರೀಂ ಶ್ರೀ ಏಂ ಕ್ಲೀಂ ಸೌಂ ವಯನಮಸಿ ‌ಸರ್ವಲೋಕ ವಶೀಕರಾಯ ಸ್ವಾಹಾಃ

ಮಿತ್ರರೇ ನಮಸ್ಕಾರ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564. ಜ್ಯೋತಿಷ್ಯ ಹಾಗು ಅಷ್ಟಮಂಗಳಾ ಪ್ರಶ್ನೆ ಹೇಳುವುದು ನಮ್ಮ ವಂಶಪಾರಂಪರ್ಯವಾದ ವೃತ್ತಿ, ಇದಕ್ಕಾಗಿ ಕೇರಳದಲ್ಲಿ 13 ವರ್ಷ ಅಧ್ಯಾಯನ ಮಾಡಿದ್ದೇವೆ. ಈ ನಡುವೆ ಸಮಸ್ಯೆಗಳಿಂದ ಒದ್ದಾಡುತ್ತಾ ಹಲವಾರು ಜನ ಕೆಲವು ಡೋಂಗೀ ಜ್ಯೋತಿಷ್ಯರ ಬಳಿ ಹೋಗಿ ಹಣ, ಸಮಯವನ್ನು ವ್ಯರ್ಧ ಮಾಡುತಿರುವುದನ್ನು ಗಮನಿಸಿದ್ದೇನೆ, ಹಾಗೂ ಕೇವಲ 1 ದಿನದಲ್ಲಿ ಪರಿಹಾರ, 1ಗಂಟೆಯಲ್ಲಿ ಪರಿಹಾರವೆಂದು ಹೇಳಿ ಜನರನ್ನು ಯಾಮರಿಸುವ ಜಾಹಿರಾತುಗಳನ್ನೂ ನೋಡಿದ್ದೇನೆ, ಜ್ಯೋತಿಷ್ಯಾಸ್ತ್ರ ಒಂದು ಪವಿತ್ರವಾದ ಶಾಸ್ತ್ರ ಇದರ ದುರ್ಬಳಕೆಯಾಗುತ್ತಿರುವುದು ಹಾಗು ಅಮಾಯಕರ ಹಣ, ಸಮಯ, ನಂಬಿಕೆಗಳ ಜೊತೆ ಆಟವಾಡುತ್ತಿರುವ ಕೆಲವರನ್ನು ನೋಡಿದರೇ ಪಾಪವೆನ್ನಿಸುತ್ತದೆ. ಇದೇ ಉದ್ದೇಶಕ್ಕೆ ಪ್ರತೀ ಭಾನುವಾರ ಅವಶ್ಯಕತೆ ಇದ್ದವರಿಗೆ ಉಚಿತವಾಗಿ ಜ್ಯೋತಿಷ್ಯ ಸಲಹೆ ಹಾಗು ಜಾತಕ ವಿಮರ್ಷೆ ಮಾಡಲು ನಿರ್ಧರಿಸಿದ್ದೇನೆ, ನನ್ನಲ್ಲಿ ಒಂದೇ ದಿನದಲ್ಲಿ ಪರಿಹಾರ ಅಥವಾ ಒಂದು ಘಂಟೆಯಲ್ಲಿ ಪರಿಹಾರವಾಗುವ ಯಾವ ಮಾರ್ಗವೂ ಇಲ್ಲ, ನನ್ನ ಬಳಿ ಇರುವುದು ಧರ್ಮ ಮಾರ್ಗ ಮಾತ್ರ, ಪುರಾಣಗಳಲ್ಲಿ, ವೇದಗಳಲ್ಲಿ ಸೂಚಿಸಿರುವ ಸುಲುಭವಾದ ಮನೆಯಲ್ಲಿ ನೀವೆ ಮಾಡಿಕೊಳ್ಳಬಹುದಾದ ವೈದಿಕ ಮಾರ್ಗ ಮಾತ್ರ. ಹಾಗಾಗಿ ನಿಜವಾಗಿಯೂ ಅವಶ್ಯಕತೆ ಇರುವವರು ಕರೆ ಮಾಡಿ ನಿಮ್ಮ ಹೆಸರನ್ನು ನಮೂದಿಸಿಕೊಳ್ಳಿ… ಭಾನುವಾದ ದಿನ ಯಾರೇ ಬಂದರೂ, ಎಷ್ಟು ಜನ ಬಂದರೂ ಉಚಿತವಾಗಿ ಜ್ಯೋತಿಷ್ಯ ಹೇಳುತ್ತೇನೆ. ಗಮನಿಸಿ ಯಾರು ಒಂದು ರೂಪಾಯನ್ನು ಕೊಡುವ ಅವಶ್ಯಕತೆ ಇಲ್ಲ ಹಾಗು ಏನ್ನನೂ ತರುವ ಅವಷ್ಯಕತೆ ಇಲ್ಲ…ಕಟೀಲು ಶ್ರೀದುರ್ಗಾಪರಮೇಶ್ವರಿ ಅನುಗ್ರಹದಿಂದ ನಿಮ್ಮ ಸಮಸ್ಯೆಗಳು ಪರಿಹಾರವಾದರೇ ಅಷ್ಟೇ ಸಾಕು.
ಆದರೆ ಭಾನುವಾರ ಬಿಟ್ಟು ಮಿಕ್ಕ ದಿನಗಳಲ್ಲಿ ನನ್ನನ್ನು ಭೇಟಿ ಮಾಡಬೇಕಾದರೆ ಮೊತ್ತದ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಧನ್ಯವಾದಗಳು..
ದೈವಜ್ಞ ಪ್ರಧಾನ ತಾಂತ್ರಿ ಜ್ಞಾನೇಶ್ವರ್ ರಾವ್.
ಖಾಯಂ ಮನೆ ವಿಳಾಸ:- ಜ್ಞಾನೇಶ್ವರ್ ರಾವ್ ತಾಂತ್ರಿ ಮನೆ, ಕೊಂಡಿಮುಲೆ ಹಳ್ಳಿ, ಕಟೀಲ್ ಪೋಸ್ಟ್ , ಮೂಲ್ಕಿ ತಾಲ್ಲೂಕು, ಮಂಗಳೂರು ತಪ್ಪದೆ ಕರೆ ಮಾಡಿ
8548998564

ಕೆಂಪು ಬಟ್ಟೆಯಲ್ಲಿ ಅದನ್ನು ಸಂಪೂರ್ಣವಾಗಿ ಕಟ್ಟಬೇಕು. ಈ ಕೆಂಪು ಬಟ್ಟೆಯಲ್ಲಿ ಕಟ್ಟಿರುವುದನ್ನ ನೀವು ಯಾರನ್ನು ವಶ ಮಾಡಬೇಕು ಅದು ಯಾರನ್ನು ಇಷ್ಟಪಟ್ಟಿರುತ್ತೀರೋ ಅವರ ಮನೆಯ ಹತ್ತಿರ ಹಾಕಿ ಬರಬೇಕು, ಇಲ್ಲವೇ ಇಟ್ಟು ಬರಬೇಕು ಈ ರೀತಿಯಾಗಿ ನೀವು ಮಾಡುವುದರಿಂದ ನೀವು ಯಾರನ್ನು ಇಷ್ಟಪಟ್ಟಿರುತ್ತೀರೋ ಆ ವ್ಯಕ್ತಿಯನ್ನು ವಶ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಲೇಖನ ಬರಹಗಾರರು ಜ್ಞಾನೇಶ್ವರ್ ರಾವ್ ತಂತ್ರಿ

ಎಚ್ಚರಿಕೆ:- ಈ ತಂತ್ರ ತಾಳೆಗರಿ ಗ್ರಂಥದಲ್ಲಿನ ಉಲ್ಲೇಖಿಸಿದ ತಂತ್ರಸಾರವು ಗಂಡ ಹೆಂಡತಿ ಸಂಸಾರದ ಸುಖ, ಸಂತೋಷ ,ಶಾಂತಿ, ನೆಮ್ಮದಿ ಪಡೆಯುವ ಒಳ್ಳೆಯ ಉದ್ದೇಶಕ್ಕಾಗಿ ಇದನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಒಂದು ವೇಳೆ ಕೆಟ್ಟ ಕೆಲಸ ನೀವು ಮಾಡಿದಲ್ಲಿ ಅದರ ಕೆಟ್ಟ ಪರಿಣಾಮಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ
ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದ ತಂತ್ರವಾಗಿದೆ. ಈ ತಂತ್ರವನ್ನು ನೀವು ಮಾಡುವುದರಿಂದ ಯಾರನ್ನು ಬೇಕಾದರೂ ಮಾಡಿಕೊಳ್ಳಬಹುದು ನೀವು ಯಾರನ್ನು ಇಷ್ಟಪಟ್ಟಿರುತ್ತೀರೋ ಆ ವ್ಯಕ್ತಿಯು ಎಲ್ಲೇ ಇರಲಿ ಹೇಗೆ ಇರಲಿ ಸಂಪೂರ್ಣವಾಗಿ ವಶ ಆಗುತ್ತಾರೆ.

Categories
ಉಡುಪಿ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಅ.30ರಂದು ಶ್ರೀಕೃಷ್ಣನಿಗೆ ವಿಶೇಷ ತುಲಾಭಾರ ಸೇವೆ!

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಅ.30ರಂದು ಶ್ರೀಕೃಷ್ಣನಿಗೆ ವಿಶೇಷ ತುಲಾಭಾರ ಸೇವೆ!

– ಕೃಷ್ಣ ಮಠದ ಶ್ರೀ ಮಧ್ವ ಮಂಟಪದ ವಸಂತ ಮಹಲ್‌ನಲ್ಲಿ ಆಯೋಜನೆ!
– ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಪತ್ರಿಕಾಗೋಷ್ಠಿ

NAMMUR EXPRESS NEWS
ಉಡುಪಿ: ಅಕ್ಷಯ ತೃತೀಯ ಶುಭ ಸಂದರ್ಭದಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀ ಪುತ್ತಿಗೆ ಮಠವು ಏಪ್ರಿಲ್ 30 ರಂದು ಶ್ರೀ. ಕೃಷ್ಣನಿಗೆ ವಿಶೇಷ ತುಲಾಭಾರ ಸೇವೆಯು ಜಾರಿಯಲ್ಲಿದೆ. ಶ್ರೀ ಕೃಷ್ಣ ಮಠದ ಶ್ರೀ ಮಧ್ವ ಮಂಟಪದ ವಸಂತ ಮಹಲ್‌ನಲ್ಲಿ ಈ ಸಮಾರಂಭವು ಸಂಜೆ 4 ಗಂಟೆಗೆ ನಡೆಯಲಿದೆ.
ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಏಪ್ರಿಲ್ 27ರಂದು ಗೀತಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಆಚರಣೆಯ ಮಹತ್ವದ ಕುರಿತು ಮಾತನಾಡುತ್ತಾ, “ಅಕ್ಷಯ ತೃತೀಯವನ್ನು ಪರಶುರಾಮನ ದಿನವೆಂದು ಆಚರಿಸುವುದಿಲ್ಲ. ಧರ್ಮಗ್ರಂಥಗಳಲ್ಲಿ, ಪರಶುರಾಮನ ಚಿನ್ನದ ದೇವರು ಮತ್ತು ಚಿನ್ನದ ದೇವರು ಪ್ರಿಯ ಎಂದು ವಿವರಿಸಲಾಗಿದೆ. ಆದ್ದರಿಂದ, ಅಕ್ಷಯ ತೃತೀಯದಂದು ಚಿನ್ನವನ್ನು ಅರ್ಪಿಸುವುದು ಮತ್ತು ಚಿನ್ನವನ್ನು ಸ್ವೀಕರಿಸುವುದು ವಿಶೇಷ ಮಹತ್ವವನ್ನು ನೀಡುತ್ತದೆ ಹೊಂದಿದೆ.”
ತುಲಾಭಾರ ಆಚರಣೆಯ ಸಂಗ್ರಹಿಸಿದ ಚಿನ್ನವನ್ನು ಪಾರ್ಥಸಾರಥಿ ಚಿನ್ನದ ರಥದ ಸಮಯದಲ್ಲಿ ತಯಾರಿಕೆಯಲ್ಲಿ ಇರಿಸಲಾಗಿದೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾಹಿತಿ. ಪವಿತ್ರ ತುಲಾಭಾರ ಸೇವೆಯಲ್ಲಿ ಭಾಗವಹಿಸುವ ಭಕ್ತರು ಶ್ರೀಕೃಷ್ಣನಿಗೆ ಚಿನ್ನವನ್ನು ಅರ್ಪಿಸಬಹುದು ಮತ್ತು ದೇವರ ಪಾದ ಕಮಲಗಳನ್ನು ಸ್ಪರ್ಶಿಸುವ ಮೂಲಕ ಪವಿತ್ರಗೊಳಿಸಲಾದ ದೈವಿಕ ಸುವರ್ಣ ಪ್ರಸಾದವನ್ನು ಪಡೆಯಬಹುದು.
ಭಕ್ತರು ಸ್ಥಳದಲ್ಲಿಯೇ ಚಿನ್ನವನ್ನು ಖರೀದಿಸಬಹುದು ಅಥವಾ ಸಮಾರಂಭದ ಸಮಯದಲ್ಲಿ ಅರ್ಪಿಸಲು ತಮ್ಮ ಹಳೆಯ ಮತ್ತು ಬಳಸಿದ ಚಿನ್ನವನ್ನು ತರಬಹುದು. ಹಿಂದಿನ ಉಪಕ್ರಮಗಳನ್ನು ನೆನಪಿಸಿಕೊಳ್ಳುತ್ತಾ, ಸ್ವಾಮೀಜಿ ಹೇಳಿದರು, “ನಮ್ಮ ಹಿಂದಿನ ಪರ್ಯಾಯದಲ್ಲಿ, ನಾವು ನವರತ್ನ ರಥವನ್ನು ಅರ್ಪಿಸಿದ್ದೇವೆ. ಪರ್ಯಾಯದಲ್ಲಿ, ನಾವು ಪಾರ್ಥಸಾರಥಿ ರಥವನ್ನು ಅರ್ಪಿಸುತ್ತೇವೆ.” ಎಂದು ಹೇಳಿದರು.

Categories
ಬೆಂಗಳೂರು

ಪಾಕ್ ಜೊತೆಗೆ ಯುದ್ಧ ಬೇಡ ಅಂತ ನಾನು ಹೇಳಿಲ್ಲ: ಸಿ.ಎಂ ಸಿದ್ದರಾಮಯ್ಯ!

ಪಾಕ್ ಜೊತೆಗೆ ಯುದ್ಧ ಬೇಡ ಅಂತ ನಾನು ಹೇಳಿಲ್ಲ: ಸಿ.ಎಂ ಸಿದ್ದರಾಮಯ್ಯ!

– ಪಾಕಿಸ್ತಾನ ಮಾಧ್ಯಮಗಳಲ್ಲಿಯೂ ಸುದ್ದಿಯಾಗಿದ್ದ ಸಿದ್ದರಾಮಯ್ಯನ ಹೇಳಿಕೆ
– ಯುದ್ಧ ಅನಿವಾರ್ಯ ಆದ್ರೆ ಮಾಡಬೇಕು : ಸಿ.ಎಂ ಸ್ಪಷ್ಟನೆ

NAMMUR EXPRESS NEWS
ಬೆಂಗಳೂರು: ಪಾಕಿಸ್ತಾನದ ಜೊತೆಗೆ ಯುದ್ಧ ಬೇಡ ಅಂತ ನಾನು ಹೇಳಿಲ್ಲ. ಅನಿವಾರ್ಯ ಆದ್ರೆ ಮಾಡಬೇಕು. ಯುದ್ಧದಿಂದಲೇ ಪರಿಹಾರ ಅಲ್ಲ, ಯುದ್ಧವೇ ಬೇಡವೇ ಬೇಡ ಎಂದು ನಾನು ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧ ಅನಿವಾರ್ಯವಾದರೆ ಮಾತ್ರ ಯುದ್ಧ ಮಾಡಬೇಕು, ಯುದ್ಧದಿಂದಲೇ ಪರಿಹಾರ ಅಲ್ಲ, ಯುದ್ಧವೇ ಬೇಡವೇ ಬೇಡ ಎಂದು ನಾನು ಹೇಳಿಲ್ಲ. ಯುದ್ಧವೇ ಪರಿಹಾರವಲ್ಲ, ಕೇಂದ್ರ ಸರ್ಕಾರ ಭದ್ರತೆ ಕೊಡಬೇಕು ಅಲ್ಲವೇ? ಹಿಂದೆ 40 ಸೈನಿಕರು ಮೃತಪಟ್ಟಿದ್ದರು. ಈಗ 27 ಜನ ಸಾವನ್ನಪ್ಪಿದ್ದಾರೆ. ಯುದ್ಧ ಅನಿವಾರ್ಯವಾದರೆ ಮಾತ್ರ ಮಾಡಬೇಕು. ತಕ್ಷಣಕ್ಕೆ ಯುದ್ಧ ಬೇಡ ಎಂದು ಹೇಳಿದ್ದೇನೆ ಎಂದರು.
ಜಮ್ಮು-ಕಾಶ್ಮೀರದ ಪಹಲ್ಗಂನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕನ್ನಡಿಗರು ಸೇರಿದಂತೆ 26 ಪ್ರವಾಸಿಗರು ಬಲಿಯಾಗಿದ್ದು, ಈ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಯೊಂದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪಾಕಿಸ್ತಾನ ಮಾಧ್ಯಮಗಳಲ್ಲಿಯೂ ಸಿದ್ದರಾಮಯ್ಯ ಸುದ್ದಿಯಾಗಿದ್ದರು. ಪಾಕಿಸ್ತಾನದ ಮೇಲೆ ಭಾರತ ಯುದ್ಧ ಅನಿವಾರ್ಯವಲ್ಲ ಎಂದು ಹೇಳಿಕೆ ನೀಡಿದ್ದು, ಇದೀಗ ಈ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

Categories
ಕ್ರಿಕೆಟ್ ಕ್ರೀಡಾ ಸುದ್ದಿ

ಜಯದ ಯಾತ್ರೆಯಲ್ಲಿ ಮುಂಬೈಗೆ 5 ನೇ ಜಯ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

ಐಪಿಎಲ್ – 2025
* ಜಯದ ಯಾತ್ರೆಯಲ್ಲಿ ಮುಂಬೈಗೆ 5 ನೇ ಜಯ
* ಸೇಡಿನ ಚಾಲೆಂಜ್‌ನಲ್ಲಿ ರಾಯಲ್ ಜಯಗಳಿಸಿದ ಬೆಂಗಳೂರು

NAMMMUR EXPRESS SPORTS NEWS
* ಜಯದ ಯಾತ್ರೆಯಲ್ಲಿ ಮುಂಬೈಗೆ 5 ನೇ ಜಯ
ಮುಂಬೈ : ವೇಗಿ ಜಸ್‌ಪ್ರಿತ್‌ ಬುಮ್ರಾ ಅವರ ಮಾರಕ ದಾಳಿಗೆ ನಲುಗಿದ ಲಖನೌ ಸೂಪರ್‌ ಜೈಂಟ್ಸ್‌ ತಂಡ, ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ 54 ರನ್‌ಗಳ ಅಂತರದಿಂದ ಸೋಲು ಕಂಡಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಮುಂಬೈ ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 215 ರನ್‌ ಗಳಿಸಿ ಎದುರಾಳಿ ತಂಡಕ್ಕೆ 216 ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತುವಲ್ಲಿ ವಿಫಲವಾದ ಲಖನೌ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 161 ರನ್‌ ಗಳಿಸಿ 54 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಅತಿಥೇಯ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಬೃಹತ್‌ ಮೊತ್ತ ಪೇರಿಸಲು ರಿಕೆಲ್ಟನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಸಹಕರಿಸಿದರು.
ರಿಕೆಲ್ಟನ್‌ 32 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ ಸಹಿತ 58 ರನ್‌ ಬಾರಿಸಿದರೇ, ಸೂರ್ಯಕುಮಾರ್‌ ಯಾದವ್‌ 28 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ ಸಹಿತ 54 ರನ್‌ ಚಚ್ಚಿದರು.
ಉಳಿದಂತೆ ರೋಹಿತ್‌ ಶರ್ಮಾ 12(5), ವಿಲ್‌ ಜಾಕ್‌ 29(21), ತಿಲಕ್‌ ವರ್ಮಾ 6(5), ನಾಯಕ ಹಾರ್ದಿಕ್‌ ಪಾಂಡ್ಯ 5(7), ಕಾರ್ಬಿನ್‌ 20(10) ರನ್‌ ಗಳಿಸಿದರೇ, ನಮನ್‌ ಧಿರ್‌ ಔಟಾಗದೇ 25(11) ಹಾಗೂ ದೀಪಕ್‌ ಚಾಹರ್‌ ಒಂದು ರನ್‌ ಗಳಿಸಿ ಸ್ಕ್ರೀಜ್‌ನಲ್ಲಿಯೇ ಉಳಿದರು.
ಲಖನೌ ಪರ ಮಯಾಂಕ್‌ ಯಾದವ್‌ ಹಾಗೂ ಆವೇಶ್‌ ಖಾನ್‌ ತಲಾ ಎರಡು ವಿಕೆಟ್‌, ಪ್ರಿನ್ಸ್‌ ಯಾದವ್‌, ಬಿಷ್ಣೋಯ್‌ ಹಾಗೂ ದಿಗ್ವೇಶ್‌ ತಲಾ ಒಂದೊಂದು ವಿಕೆಟ್‌ ಪಡೆದರು.
ಮುಂಬೈ ನೀಡಿದ ಬೃಹತ್‌ ಮೊತ್ತದ ಟಾರ್ಗೆಟ್‌ ಬೆನ್ನತ್ತಿದ ಲಖನೌಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಐಡೆನ್‌ ಮಾರ್ಕ್ರಂ 9(11) ವಿಕೆಟ್‌ ಬೇಗನೇ ಕಳೆದುಕೊಂಡಿತು. ಅಬ್ಬರದ ಬ್ಯಾಟಿಂಗ್‌ ಮಾಡುತ್ತಿದ ಮಿಚೆಲ್‌ ಮಾರ್ಷ್‌ 34(24), ನಿಕೋಲಸ್‌ ಪೂರನ್‌ 27(15) ರನ್‌ ಕಲೆಹಾಕಿದರು.
ಬಳಿಕ ಬಂದ ನಾಯಕ ರಿಷಬ್‌ ಪಂತ್‌ ಕೇವಲ ನಾಲ್ಕು ರನ್‌ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಒಂದಾದ ಆಯೋಷ್‌ ಬದೋನಿ 35(22) ಹಾಗೂ ಡೇವಿಡ್‌ ಮಿಲ್ಲರ್‌ 24(16) ಕೊಂಚ ಅಬ್ಬರಿಸಿ ಮರೆಯಾದರು. ಈ ಜೋಡಿಯ ವಿಕೆಟ್‌ ಪತನದೊಂದಿಗೆ ಲಖನೌಗೆ ಸೋಲು ಕಂಡಿತು.
ಉಳಿದಂತೆ ಅಬ್ದುಲ್ ಸಮದ್‌ 2(4), ಬಿಷ್ಟೋಯ್‌ 13(14), ಆವೇಶ್‌ ಖಾನ್‌ ಡಕ್‌ ಔಟ್‌ ಆದರೇ, ಪ್ರಿನ್ಸ್‌ ಯಾದವ್‌ ನಾಲ್ಕು, ದಿಗ್ವೇಶ್‌ ಒಂದು ರನ್‌ ಗಳಿಸಿ ಔಟಾಗದೇ ಉಳಿದರು.
ಮುಂಬೈ ಪರ ಬುಮ್ರಾ ಪ್ರಮುಖ ನಾಲ್ಕು ವಿಕೆಟ್, ಟ್ರೆಂಟ್‌ ಬೌಲ್ಟ್‌ ಮೂರು ವಿಕೆಟ್‌, ವಿಲ್‌ ಜಾಕ್‌ ಎರಡು ವಿಕೆಟ್‌ ಪಡೆದು ಗಮನಸೆಳೆದರು.

* ಸೇಡಿನ ಚಾಲೆಂಜ್‌ನಲ್ಲಿ ರಾಯಲ್ ಜಯಗಳಿಸಿದ ಬೆಂಗಳೂರು
ಡೆಲ್ಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತವರನಲ್ಲಿ ಡೆಲ್ಲಿ ವಿರುದ್ಧದ ಸೋಲಿಗೆ ಸೇಡನ್ನು ತೀರಿಸಿಕೊಂಡಿದೆ. ಕಳೆದ ಬಾರಿ ತವರು ನೆಲದಲ್ಲಿ ಸೋತಿದ್ದ ಬೆಂಗಳೂರು ತಂಡ, ಈ ಬಾರಿ ಎದುರಾಳಿಯ ನೆಲದಲ್ಲಿ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು ದೆಹಲಿ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ್ದ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ಪವರ್​ ಪ್ಲೇನಲ್ಲೇ 26 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್​ ಜೇಕಬ್​ ಬೆಥೆಲ್​ (12 ರನ್​) ನಿರ್ಗಮಿಸಿದ ಬೆನ್ನಲ್ಲೆ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬ್ಯಾಟಿಂಗ್​​ಗೆ ಬಂದ ಪಡಿಕ್ಕಲ್​ ಶೂನ್ಯಕ್ಕೆ ಪೆವಿಲಿಯನ್​ ಸೇರಿದರೆ, ರಜತ್​ ಪಾಟಿದಾರ್​ (6 ರನ್)​ ನಿರಾಸೆ ಮೂಡಿಸಿದರು. ಇದರಿಂದ ತಂಡದ ಮೇಲೆ ಒತ್ತಡ ಹೆಚ್ಚಿತು.ಆದರೆ ಈ ವೇಳೆ ಬ್ಯಾಟಿಂಗ್​ಗೆ ಆಗಮಿಸಿದ ಕೃನಾಲ್​ ಪಾಂಡ್ಯ ತಮ್ಮ ಅಮೋಘ ಬ್ಯಾಟಿಂಗ್​ ಪ್ರದರ್ಶನ ದಿಂದ ವಿರಾಟ್​ ಕೊಹ್ಲಿ ಜೊತೆಗೂಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ಇಬ್ಬರು 84 ಎಸೆತಗಳಲ್ಲಿ 119ರನ್​ ಬಾರಿಸಿದರು. ಕೊಹ್ಲಿ 47 ಎಸೆತಗಳಲ್ಲಿ 51 ರನ್​ ಬಾರಿಸಿ ನಿರ್ಗಮಿಸಿದರೇ, ಕೃನಾಲ್​ ಪಾಂಡ್ಯ 47 ಎಸೆತಗಳಲ್ಲಿ ಅಜೇಯವಾಗಿ 5 ಬೌಂಡರಿ ಮತ್ತು 4 ಸಿಕ್ಸರ್​ ಸಹಾಯದಿಂದ ಅಜೇಯವಾಗಿ 73ರನ್​ ಬಾರಿಸಿದರು. ಕೊಹ್ಲಿ ಬಿಳಿಕ ಬ್ಯಾಟಿಂಗ್​ಗೆ ಬಂದ ಟಿಮ್​ ಡೇವಿಡ್​ ಕೂಡ5 ಎಸೆತಗಳಲ್ಲಿ 3 ಬೌಂಡರಿ 1 ಸಿಕ್ಸರ್​ ಸಿಡಿಸಿದ ಅಜೇಯವಾಗಿ 19 ರನ್​ ಕಲೆಹಾಕಿದರು. ಇದರಿಂದಾಗಿ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಬೆಂಗಳೂರು ಪಡೆ ಗೆಲುವಿನ ನಗೆ ಬೀರಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ದೆಹಲಿ ತಂಡ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಕೆ.ಎಲ್. ರಾಹುಲ್ (41 ರನ್​) ಮತ್ತು ಟ್ರಿಸ್ಟಾನ್ ಸ್ಟಬ್ಸ್ (38 ರನ್​) ಹೊರತು ಪಡಿಸಿ ಉಳಿದ ಆಟಗಾರರು ಆರ್​ಸಿಬಿಯ ಮಾರಕ ಬೌಲಿಂಗ್​ ದಾಳಿಗೆ ಸಿಲುಕಿ ಬಹುಬೇಗ ಕ್ರೀಸ್​ ತೊರೆದರು. ಬೆಂಗಳೂರು ಪರ ಭುವನೇಶ್ವರ್ 3 ವಿಕೆಟ್ ಪಡೆದರೇ, ಹೆಜೆಲ್​ವುಡ್​ 2, ಯಶ್​ ದಯಾಲ್​, ಸುಯೇಶ್​ ಶರ್ಮಾ, ಕೃನಾಲ್​ ಪಾಂಡ್ಯ ತಲಾ ಒಂದು ವಿಕೆಟ್​ ಉರುಳಿಸಿದರು. ಈ ಗೆಲುವಿನೊಂದಿಗೆ ಬೆಂಗಳೂರು ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ.

Categories
ಮಂಗಳೂರು

ಮಂಗಳೂರು: ರೈಲ್ವೆ ಪರೀಕ್ಷೆ ಅಭ್ಯರ್ಥಿಗಳಿಗೆ ಜನಿವಾರ, ಮಂಗಳಸೂತ್ರ ನಿಷಿದ್ಧ

ಮಂಗಳೂರು: ರೈಲ್ವೆ ಪರೀಕ್ಷೆ ಅಭ್ಯರ್ಥಿಗಳಿಗೆ ಜನಿವಾರ, ಮಂಗಳಸೂತ್ರ ನಿಷಿದ್ಧ

– ಧಾರ್ಮಿಕ ಸಂಕೇತಗಳನ್ನೆಲ್ಲ ತೆಗೆದಿರಿಸಿ ಪರೀಕ್ಷೆ ಹಾಜರಾಗಬೇಕೆಂದು ಸೂಚನೆ
– ಪರೀಕ್ಷೆಗೆ ನೀಡಲಾದ ಹಾಲ್‌ಟಿಕೆಟ್‌ನಲ್ಲಿ ಉಲ್ಲೇಖ

NAMMUR EXPRESS NEWS
ಮಂಗಳೂರು: ರೈಲ್ವೇ ನೇಮಕಾತಿ ಮಂಡಳಿ ಪರೀಕ್ಷೆ 29ರಂದು ನಡೆಯಲಿದೆ. ನರ್ಸಿಂಗ್‌ ಸೂಪರಿಂಟೆಂಡೆಂಟ್‌ ಪರೀಕ್ಷೆ ಹಮ್ಮಿಕೊಳ್ಳಲಾಗಿದ್ದು, ಅಭ್ಯರ್ಥಿಗಳಿಗೆ ಹಾಲ್‌ಟಿಕೆಟ್‌ ನೀಡಲಾಗಿದೆ. ಇದರಲ್ಲಿ ಮಂಗಳಸೂತ್ರ ಮತ್ತು ಧಾರ್ಮಿಕ ಸಂಕೇತಗಳನ್ನೆಲ್ಲ ತೆಗೆದಿರಿಸಿ ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.
ರೈಲ್ವೆ ನೇಮಕಾತಿ ಮಂಡಳಿಯ ಈ ಕ್ರಮಕ್ಕೆ ಜಿಲ್ಲೆಯ ಹಿಂದೂ ಪರ ಸಂಘಟನೆಗಳ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಮಣೇಲ್‌ ಬೆಸೆಂಟ್‌ ವಿದ್ಯಾ ಕೇಂದ್ರದಲ್ಲಿ ಈ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ನೀಡಲಾದ ಹಾಲ್‌ಟಿಕೆಟ್‌ನಲ್ಲಿ ಮಂಗಳಸೂತ್ರ ತೆಗೆದಿರಿಸುಂತೆ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಜನಿವಾರ ಮತ್ತು ಮಂಗಳಸೂತ್ರ ಹಿಂದೂಗಳ ಧಾರ್ಮಿಕ ಸಂಪ್ರದಾಯ. ಇದನ್ನು ತೆಗೆದು ಪರೀಕ್ಷೆ ಬರೆಯುವಂತೆ ಉಲ್ಲೇಖ ಮಾಡಿರುವುದನ್ನು ಪ್ರವೇಶ ಪತ್ರದಲ್ಲಿ ತಿಳಿಸಲಾಗಿದೆ.

Categories
ಅಡಿಕೆ-ದರ ಚಿನ್ನದ ದರ

ಅಡಿಕೆ ದರ ಲಕ್ಷದ ಸನಿಹಕ್ಕೆ… ಚಿನ್ನವೂ ಏರಿಕೆ!

ಅಡಿಕೆ ದರ ಲಕ್ಷದ ಸನಿಹಕ್ಕೆ… ಚಿನ್ನವೂ ಏರಿಕೆ!
– ಮಲೆನಾಡ ಅಡಿಕೆಗೆ ಭಾರೀ ಡಿಮ್ಯಾಂಡ್
– ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಉತ್ಸಾಹ

NAMMUR EXPRESS NEWS
ಮಲೆನಾಡು/ ಕರಾವಳಿ: ರಾಜ್ಯದಲ್ಲಿ ಅಡಿಕೆ ದರವು ನಿರೀಕ್ಷೆಯನ್ನು ಮೀರಿ ಏರಿಕೆ ಕಾಣುತ್ತಿದೆ. ಇದರಿಂದಾಗಿ ಅಡಿಕೆ ಬೆಳೆಗಾರರಲ್ಲಿ ನಿಮ್ಮದಿ ಮೂಡಿದೆ. ಅಚ್ಚರಿಯೇನೆಂದರೆ ಕ್ವಿಂಟಾಲ್ ಗೆ 96,000 ರೂ ಗೆ ಅಡಿಕೆ ದರ ತಲುಪಿದೆ.
ಅತಿದೊಡ್ಡ ಅಡಕೆ ಮಾರುಕಟ್ಟೆ ಎಂದೇ ಹೇಳಲಾಗುವ ಶಿವಮೊಗ್ಗ ಎಪಿಎಂಸಿಯಲ್ಲಿ ಸರಕು ಅಡಿಕೆ ದರ ಕ್ವಿಂಟಾಲ್ ಗೆ ಒಂದು ಲಕ್ಷ ರೂ. ತಲುಪುವ ಆಶಾಭಾವನೆ ಮೂಡಿಸಿದೆ. ಏಪ್ರಿಲ್ 24ರಂದು ಸರಕು ಅಡಕೆ ಕ್ವಿಂಟಾಲ್ ಗೆ 96,340 ರೂ. ದರ ಸಿಕ್ಕಿದೆ.
ಅಂದಹಾಗೆ ಅತಿ ಹೆಚ್ಚು ಆವಕವಾಗುವ ಬೆಟ್ಟೆ, ರಾಶಿ, ಇಡಿ ಧಾರಣೆ ಕೂಡ 60 ಸಾವಿರ ರೂ. ಆಸುಪಾಸಿನಲ್ಲಿದೆ. ಚಾಲಿ ಅಡಕೆ ದರ 40 ರಿಂದ 45 ಸಾವಿರ ರೂ. ನಡುವೆ ಇದೆ. ದಶಕದ ಹಿಂದೆ ಸರಕು ಅಡಿಕೆ ದರ ಕ್ವಿಂಟಾಲ್ ಗೆ 95,000 ರೂ., ರಾಶಿ ಇಡಿ ಅಡಿಕೆ ದರ 80,000 ರೂ. ಗಡಿ ದಾಟಿತ್ತು. ಇದೀಗ ಸರಕು ಅಡಿಕೆಗೆ ಕ್ವಿಂಟಾಲ್ ಗೆ 96 ಸಾವಿರ ರೂ. ದರ ಬಂದಿದೆ.

ಅಕ್ಷಯ ತೃತೀಯಕ್ಕೆ ಕುಗ್ಗದ ಆಭರಣ ಖರೀದಿ ಉತ್ಸಾಹ

ಬೆಂಗಳೂರು : ಅಕ್ಷಯ ತೃತೀಯಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ವಜ್ರ, ಬೆಳ್ಳಿ ಆಭರಣ ಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ.
ಈ ವರ್ಷ ಏ.30ರಂದು ಅಕ್ಷಯ ತೃತೀಯವಿದ್ದು, ಗ್ರಾಹಕರು ಒಂದು ತಿಂಗಳು ಮೊದಲೇ ಮುಂಗಡ ಬುಕಿಂಗ್ ಮಾಡಿ ಆ ದಿನದ ದರಕ್ಕೆ ಆಭರಣಗಳನ್ನು ಮನೆಗೆ ಕೊಂಡೊಯ್ಯಲು ಮುಂದಾಗಿದ್ದಾರೆ. ಬಂಗಾರದ ಬೆಲೆ ದುಬಾರಿಯಾದರೂ ಖರೀದಿದಾರರಲ್ಲಿ ಉತ್ಸಾಹ ಕುಂದಿಲ್ಲ, ಬದಲಿಗೆ ಮತ್ತಷ್ಟು ಹೆಚ್ಚಾಗಿದೆ.
ವಜ್ರದ ಆಭರಣಗಳು ಹೆಚ್ಚು ಆಕರ್ಷಕವಾಗಿದ್ದು, ದುಬಾರಿಯಾದರೂ ಗ್ರಾಹಕರು ಖರೀದಿಗೆ ಒಲವು ತೋರುತ್ತಿದ್ದಾರೆ. ಜತೆಗೆ ಬೆಳ್ಳಿ ಆಭರಣಗಳ ಬುಕಿಂಗ್ ಕೂಡ ಹೆಚ್ಚಾಗಿದೆ. ಈ ಬಾರಿಯ ಅಕ್ಷಯ ತೃತೀಯಕ್ಕೆ ಕಳೆದ ವರ್ಷಕ್ಕಿಂತ ಶೇ.20ರಷ್ಟು ಗ್ರಾಹಕರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎಂದು ತಿಳಿಸಿದರು.