ಸಿ ಎಂ ಸಿದ್ದರಾಮಯ್ಯ ಹೇಳಿಕೆ ಶಾಸಕ ಆರಗ ಬೃಹತ್ ಖಂಡನೆ
– ಯುದ್ಧ ಬೇಡ ಶಾಂತಿ ಬೇಕು ಎಂದು ಹೇಳಿದ್ದಿರಾ,ಒಂದು ದೇಶದ ಮಾನ ಅಪಮಾನದ ಪ್ರಶ್ನೆ
– ಸಿದ್ದರಾಮಯ್ಯ ಮಾತ್ರ ಅಲ್ಪ ಸಂಖ್ಯಾತರ ವೋಟಿಗಾಗಿ ಬೇರೆ ಸಂದೇಶ ತಲುಪಿಸುವ ಪ್ರಯತ್ನ
NAMMUR EXPRESS NEWS
ಪಹಾಲ್ಗಮ್ ಉಗ್ರರ ಧಾಳಿಯಲ್ಲಾದ 26 ಜನರ ಕುಟುಂಬಗಳ ಕಣ್ಣೀರು ಮಾಸುವ ಮುಂಚೆ ಸಿದ್ದರಾಮಯ್ಯ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಹೊರಟಿರುವುದು ತುಷ್ಟಿಕರಣ ರಾಜಕಾರಣದ ಪರಮಾವದಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕಾಂಗ್ರೆಸ್ ಕೇಂದ್ರ ನಾಯಕತ್ವ ಪಾಕಿಸ್ತಾನ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳೋ ನಿರ್ಧಾರಕ್ಕೆ ಬದ್ದ ಎಂದು ಹೇಳಿದ್ದರೆ, ಸಿದ್ದರಾಮಯ್ಯ ಮಾತ್ರ ಅಲ್ಪ ಸಂಖ್ಯಾತರ ವೋಟಿಗಾಗಿ ಅಲ್ಪಸಂಖ್ಯಾತರಿಗೆ ಬೇರೆ ಸಂದೇಶ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಓಲೈಕೆ ರಾಜಕಾರಣವನ್ನು 26 ಜನರ ಶವದ ಮೇಲೆ ಮಾಡ ಹೊರಟಿರುವ ಸಿದ್ದರಾಮಯ್ಯನವರ ಈ ನಿಲುವಿಗೆ ಧಿಕ್ಕಾರವಿರಲಿ.
ಯುದ್ಧ ಬೇಡ ಶಾಂತಿ ಬೇಕು ಎಂದು ಹೇಳಿದ್ದಿರಾ, ಎಲ್ಲರಿಗೂ ಬೇಕಾಗಿರುವುದು ಶಾಂತಿಯೇ, ಆದರೆ ಪದೇ ಪದೇ ನಾವೇ ಶಾಂತಿ ಸೌಹಾರ್ದತೆ ಬಯಸಬೇಕಾ?ಸಿದ್ದರಾಮಯ್ಯನವರೇ ಇದು ಒಂದು ದೇಶದ ಮಾನ ಅಪಮಾನದ ಪ್ರಶ್ನೆಯಿದೆ ಸ್ವಾಭಿಮಾನದ ಪ್ರಶ್ನೆ ಇದೆ. 26 ಜನ ಮರಣ ಹೊಂದಿದ ಕುಟುಂಬದವರಲ್ಲಿ ನಿಮ್ಮ ಹತ್ತಿರದವರು ಇರುತ್ತಿದ್ದರೆ ನಿಮ್ಮ ಹೇಳಿಕೆ ಹೀಗೆ ಇರುತ್ತಿತಾ? ಒಂದೊಮ್ಮೆ ನೀವು ಮತ್ತು ನಿಮ್ಮ ಮಂತ್ರಿ ಮಂಡಲದ ನಿಮ್ಮ ಜೊತೇನೇ ಇರುವ ಜಮೀರ್ ಪೆಹಲ್ಗಮ್ನಲ್ಲಿ ಇದ್ದಿದ್ದರೆ ಜಮೀರ್ ಮಾತ್ರ ವಾಪಾಸ್ ಬರುತ್ತಿದ್ದರು, ನಾನು ಸೆಕ್ಯುಲರ್ ನಾನು ಅಲ್ಪ ಸಂಖ್ಯಾತರ ಪರ ಎಂದು ನೀವು ಏನೇ ಬಡಾಯಿಸಿಕೊಂಡಿದ್ದರು, ಉಗ್ರಗಾಮಿಗಳು ಜೀವಂತವಾಗಿ ನಿಮ್ಮನ್ನು ವಾಪಾಸ್ ಬರಲು ಬಿಡುತ್ತಿದ್ದರಾ?ಈ ರೀತಿ ಧರ್ಮ ಕೇಳಿ ಸಾಯಿಸುವ ಹೀನ ಕೃತ್ಯ ನಡೆದ ಮೇಲೂ ನಿಮ್ಮ ಓಲೈಕೆ ರಾಜಕಾರಣ ಮುಂದುವರಿಸಿದ್ದೀರಾ. ಸಿದ್ದರಾಮಯ್ಯನವರೇ ಈ ಮನೋಭಾವ ಬದಲಾಯಿಸದೇ ಇದ್ದರೆ, ಇದರ ಮುಂದಿನ ಪರಿಣಾಮಗಳು ಈ ದೇಶಕ್ಕೆ ಸಮಾಜಕ್ಕೆ ಅಪಾಯಕಾರಿ ಆಗಿರುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ.