Categories
ಬೆಂಗಳೂರು ರಾಜ್ಯ ಶೃಂಗೇರಿ

ಶೃಂಗೇರಿಯಲ್ಲಿ ಕಾಡು ಆನೆ ದಾಳಿಗೆ ಇಬ್ಬರು ಬಲಿ!

ಶೃಂಗೇರಿಯಲ್ಲಿ ಕಾಡು ಆನೆ ದಾಳಿಗೆ ಇಬ್ಬರು ಬಲಿ!
– ಸಹೋದರರನ್ನು ತುಳಿದು ಸಾಯಿಸಿದ ಕಾಡು ಆನೆ
– ಸ್ಥಳದಲ್ಲಿ ಬಿಗುವಿನ ವಾತಾವರಣ: ಜನರ ಆಕ್ರೋಶ

NAMMUR EXPRESS BREAKING NEWS
ಶೃಂಗೇರಿ: ಕಾಡಾನೆ ದಾಳಿಗೆ ಇಬ್ಬರು ರೈತರ ದುರ್ಮರಣವಾಗಿದೆ.
ಶೃಂಗೇರಿಯ ಕೆರೆಕಟ್ಟೆಯಲ್ಲಿ ಕಾಡಾನೆಯ ಭೀಕರ ದಾಳಿಗೆ ಇಂದು ಮುಂಜಾನೆ ಉಮೇಶ್ ಮತ್ತು ಹರೀಶ್ ಎಂಬ ಇಬ್ಬರು ಸಹೋದರರು ರೈತರು ದುರ್ಮರಣ ಹೊಂದಿದ್ದಾರೆ. ಅರಣ್ಯ ಸಚಿವರು ಹಾಗೂ ಶಾಸಕರು ಸ್ಥಳಕ್ಕೆ ಆಗಮನ ಮಾಡಲೇಬೇಕು ಎಂದು ಜನ ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಮಂದಿ ಕಾಡು ಆನೆ ದಾಳಿಗೆ ಈ ವರೆಗೆ ಬಲಿ ಆಗಿದ್ದಾರೆ. ಆಗುಂಬೆ ಬಳಿ ಪ್ರತ್ಯಕ್ಷ ಆಗಿದ್ದ ಆನೆ ಇದು ಎನ್ನಲಾಗಿದೆ.

Categories
ಜ್ಯೋತಿಷ್ಯ ದಿನ ರಾಶಿ ಭವಿಷ್ಯ ರಾಜ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಮಹಾಲಕ್ಷ್ಮಿ ತಾಯಿಯ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
ಇಂದು ಮೇಷ ರಾಶಿಯವರು ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಕೆಲಸದಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವ ಮೂಲಕ ಅವರನ್ನು ಸಂತೋಷವಾಗಿಡಿ. ಸಮೃದ್ಧಿಯು ನಿಮಗೆ ಬುದ್ಧಿವಂತ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ವೃತ್ತಿಪರ ಯಶಸ್ಸು ನಿಮ್ಮ ಶಕ್ತಿಯಾಗಲಿದೆ.

** ವೃಷಭ ರಾಶಿ :
ವಿವಿಧ ಸಂಸ್ಕೃತಿಗಳ ಜನರೊಂದಿಗೆ ಬೋಧನೆ, ಬರವಣಿಗೆ ಅಥವಾ ಸಂಪರ್ಕದ ಅಗತ್ಯವಿರುವ ವ್ಯವಹಾರಗಳನ್ನು ಪರಿಗಣಿಸಲು ಇಂದು ಉತ್ತಮ ದಿನ. ಇತರರೊಂದಿಗಿನ ನಿಮ್ಮ ಸಂಬಂಧಗಳ ಮೇಲೆ ಕೇಂದ್ರೀಕರಿಸಲು ಮತ್ತು ನಿಮ್ಮ ವೈಯಕ್ತಿಕ ಮತ್ತು ಕೆಲಸದ ಜೀವನವನ್ನು ಸಮತೋಲನಗೊಳಿಸಲು ಇದು ಸಮಯ. ಎಲ್ಲಾ ಹಣಕಾಸಿನ ವಿಷಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ.

** ಮಿಥುನ ರಾಶಿ :
ಇಂದು ಹೊಸ ವಿಷಯಗಳನ್ನು ಅನ್ವೇಷಿಸಿ, ಇದು ಹೊಸ ಆಲೋಚನಾ ವಿಧಾನವನ್ನು ಅಭಿವೃದ್ಧಿಪಡಿಸುತ್ತದೆ. ನಿಮ್ಮ ಜಿಜ್ಞಾಸೆ ಮತ್ತು ಉತ್ಸಾಹಭರಿತ ಸ್ವಭಾವವು ಕಲಿಯಲು ಮತ್ತು ಹೆಚ್ಚಿನ ಜ್ಞಾನವನ್ನು ಪಡೆಯಲು ಸಹಾಯಕವಾಗುತ್ತದೆ. ಕೆಲಸ ಮಾಡಲು ನಿಮ್ಮ ಬದ್ಧತೆಯನ್ನು ಮುಂದುವರಿಸಿ. ಇದು ನಿರ್ವಹಣೆಯಿಂದ ಪ್ರಶಂಸೆ ಗಳಿಸಲು ನಿಮಗೆ ಸಹಾಯ ಮಾಡುತ್ತದೆ.

** ಕರ್ಕಾಟಕ ರಾಶಿ :
ಇಂದು ನಿಮ್ಮ ಆದಾಯ ಹೆಚ್ಚಾಗಬಹುದು. ಕುಟುಂಬದಲ್ಲಿ ನಿರಂತರ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಹಿಂದಿನ ಹೂಡಿಕೆಗಳು ಒಳ್ಳೆಯ ಸುದ್ದಿಯನ್ನು ತರಬಹುದು. ಹಳೆಯ ಸ್ನೇಹಿತನೊಂದಿಗೆ ಪುನರ್ಮಿಲನವೂ ಸಾಧ್ಯ. ಇಂದು ಸಮುದಾಯದ ಒಳಗೊಳ್ಳುವಿಕೆ, ಸಾಮಾಜಿಕ ಮಾಧ್ಯಮ ಭಾಗವಹಿಸುವಿಕೆ ಅಥವಾ ತಂಡದ ಕೆಲಸ ಅಗತ್ಯವಿರುವ ಸ್ಥಾನಗಳನ್ನು ಪರಿಗಣಿಸಿ.

** ಸಿಂಹ ರಾಶಿ :
ಇಂದು ಸಣ್ಣ ವ್ಯವಹಾರವನ್ನು ಪ್ರಾರಂಭಿಸಲು ಅಥವಾ ನಿಮ್ಮ ಕೌಶಲ್ಯಗಳನ್ನು ಸುಧಾರಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತಮ ಸಮಯವಾಗಬಹುದು. ಹೃದಯದ ವಿಷಯಗಳಲ್ಲಿ, ನಿಮ್ಮ ಗಮನವು ಸಂಬಂಧಗಳ ಸ್ನೇಹಪರ ಅಂಶದ ಕಡೆಗೆ ಹೆಚ್ಚು ಬದಲಾಗುವುದನ್ನು ನೀವು ಕಾಣಬಹುದು. ವೃತ್ತಿಜೀವನದ ಜವಾಬ್ದಾರಿಗಳು ನಿಮ್ಮ ಪ್ರೇಮ ಜೀವನದ ಮೇಲೆ ಪರಿಣಾಮ ಬೀರಬಹುದು.

** ಕನ್ಯಾ ರಾಶಿ :
ನಿಮ್ಮ ತಂಡದ ಸದಸ್ಯರು ಇಂದು ನಿಮ್ಮ ಕಾರ್ಯಕ್ಷಮತೆಯನ್ನು ಮೆಚ್ಚುತ್ತಾರೆ ಮತ್ತು ನಿಮ್ಮ ಬಾಸ್ ನಿಮ್ಮ ಆಲೋಚನೆಗಳನ್ನು ಹೊಗಳುತ್ತಾರೆ. ನಿಮ್ಮ ದೀರ್ಘಾವಧಿಯ ಹಣಕಾಸು ಯೋಜನೆಗಳನ್ನು ಪರಿಶೀಲಿಸುವುದು ಮತ್ತು ಹೆಚ್ಚಿನ ಆದಾಯವನ್ನು ನೀಡುವ ಹೂಡಿಕೆಗಳಿಗಿಂತ ಹೆಚ್ಚು ಸ್ಥಿರವಾದ ಹೂಡಿಕೆಗಳತ್ತ ಗಮನಹರಿಸುವುದು ಮುಖ್ಯ.

** ತುಲಾ ರಾಶಿ :
ಇಂದು ನಿಮಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಬಹುದು, ಇದು ನಿಮ್ಮ ಕೆಲಸದ ಹೊರೆಯನ್ನು ಹೆಚ್ಚಿಸುತ್ತದೆ. ನಿಮ್ಮ ಕಠಿಣ ಪರಿಶ್ರಮ ಸ್ವಭಾವ ಮತ್ತು ಸವಾಲಿನ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಗುರುತಿಸಲಾಗುತ್ತದೆ. ಇದು ಬಡ್ತಿ ಅಥವಾ ಜವಾಬ್ದಾರಿಗಳಿಗೆ ಕಾರಣವಾಗಬಹುದು. ನಿಮ್ಮ ಕುಟುಂಬದ ಬೆಂಬಲಕ್ಕೆ ಕೃತಜ್ಞರಾಗಿರಿ.

** ವೃಶ್ಚಿಕ ರಾಶಿ :
ನಿಮ್ಮ ಅಂತಃಪ್ರಜ್ಞೆ ಮತ್ತು ವಿಷಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವು ಇಂದು ಸಹಾಯಕವಾಗಬಹುದು. ಅತಿಯಾದ ಕೆಲಸದ ಒತ್ತಡವನ್ನು ಒಳಗೊಂಡಿರದ ಕೆಲಸಗಳನ್ನು ಪರಿಗಣಿಸಿ. ಹಣದ ವಿಷಯಗಳಲ್ಲಿ ಜಾಗರೂಕರಾಗಿರಿ ಮತ್ತು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ. ನಿಮ್ಮ ಆಲೋಚನೆಗಳು ಮತ್ತು ಸಂವಹನ ಕೌಶಲ್ಯಗಳು ಇಂದು ಇತರರ ಗಮನವನ್ನು ಸೆಳೆಯಬಹುದು, ಇದು ಮನ್ನಣೆಗೆ ಕಾರಣವಾಗಬಹುದು.

** ಧನಸ್ಸು ರಾಶಿ :
ಇಂದು, ನೀವು ನಿಮ್ಮ ಜೀವನದ ಹಲವು ಅಂಶಗಳ ಬಗ್ಗೆ ಚಿಂತಿಸುವಿರಿ. ಕೆಲಸದಲ್ಲಿ, ನಿಮಗೆ ಹೆಸರು ಮತ್ತು ಖ್ಯಾತಿ ಎರಡನ್ನೂ ತರಬಹುದಾದ ಸ್ಥಾನಗಳನ್ನು ಪರಿಗಣಿಸಿ. ಯೋಜನೆಯನ್ನು ಪ್ರಾರಂಭಿಸಲು ಅಥವಾ ಅದನ್ನು ನಿರ್ವಹಣೆಗೆ ಪ್ರಸ್ತುತಪಡಿಸಲು ನಿಮಗೆ ಅವಕಾಶಗಳಿವೆ. ಗಂಟಲು, ಕುತ್ತಿಗೆ ಮತ್ತು ಥೈರಾಯ್ಡ್ ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಿ.

** ಮಕರ ರಾಶಿ :
ಇಂದು ಆಸ್ತಿ ಅಥವಾ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಉತ್ತಮ ಸಮಯ. ನೀವು ಕಾರು ಖರೀದಿಸಲು ಯೋಜಿಸುತ್ತಿದ್ದರೆ, ನಿಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸುವ ಯಾವುದನ್ನಾದರೂ ಆದ್ಯತೆ ನೀಡಿ. ಹಾಗೂ ಇಂದು ಸರಿಯಾದ ಸಂಗಾತಿಯನ್ನು ಹುಡುಕಲು ಉತ್ತಮ ಸಮಯ.

** ಕುಂಭ ರಾಶಿ :
ನಿಮ್ಮ ವ್ಯವಹಾರಕ್ಕೆ ಮಹತ್ವದ ಹೂಡಿಕೆ ಒಪ್ಪಂದವನ್ನು ಪಡೆಯಬಹುದು. ಉದ್ಯೋಗಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಲವಾರು ಅವಕಾಶಗಳು ಸಿಗಬಹುದು. ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. ಇಂದು ನಿಮ್ಮ ಪ್ರೇಮ ಜೀವನದಲ್ಲಿ ಸಂತೋಷ ಕಾಪಾಡಿಕೊಳ್ಳಲು, ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದು ಪ್ರಯೋಜನಕಾರಿಯಾಗಿದೆ.

** ಮೀನ ರಾಶಿ :
ಇಂದು ನಿಮ್ಮ ಸೃಜನಶೀಲತೆಯನ್ನು ಅನ್ವೇಷಿಸುವ ದಿನ. ನಿಮ್ಮ ಸಾಮರ್ಥ್ಯವನ್ನು ಅನ್ವೇಷಿಸಲು ನೀವು ಹೆಚ್ಚು ಒಲವು ತೋರುವಿರಿ. ನಿಮ್ಮ ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ಹೊಸ ಆದಾಯದ ಮೂಲಗಳು ಹೊರಹೊಮ್ಮುತ್ತವೆ ಮತ್ತು ಹಳೆಯ ಮೂಲಗಳಿಂದ ಹಣವೂ ಬರುತ್ತದೆ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ವ್ಯವಹಾರ ಪರಿಸ್ಥಿತಿ ಬಲಗೊಳ್ಳುತ್ತದೆ. ನಿಮ್ಮ ಪ್ರೀತಿಪಾತ್ರರು ಬೆಳೆಯುತ್ತಾರೆ.

Categories
Uncategorized ಅಡಿಕೆ-ದರ ಉಡುಪಿ ಕರಾವಳಿ ಕೃಷಿ ಮಂಗಳೂರು ವಿಶೇಷ ಸುದ್ದಿ

ಐವತ್ತು ಸಾವಿರ ದಾಟಿದ ಚಾಲಿ ಅಡಿಕೆ!

ಐವತ್ತು ಸಾವಿರ ದಾಟಿದ ಚಾಲಿ ಅಡಿಕೆ!

– ಅಡಿಕೆ ಫಸಲು ಕಡಿಮೆ ಇರುವುದರಿಂದ ಅಡಿಕೆ ಬೆಲೆ ಏರಿಕೆ
– ರಾಜ್ಯದಲ್ಲಿ ಎಲ್ಲಾ ಕಡೆ ಅಡಿಕೆ ದರ ಹೆಚ್ಚಳ

NAMMUR EXPRESS NEWS
ಮಂಗಳೂರು : ಚಾಲಿ ಅಡಕೆ (ಸಿಂಗಲ್ ಚೋಲ್) ಮಂಗಳವಾರ ಕೆ.ಜಿಗೆ 520 ರೂ.ಗೆ ಖರೀದಿಯಾಗಿದೆ. ಕಳೆದ ವಾರ 500 ರೂ. ಗಡಿ ತಲುಪಿತ್ತು. ಮುಂದಿನ ದಿನಗಳಲ್ಲಿ ಸಿಂಗಲ್ ಮಂಗಳೂರು ಚಾಲಿ ಅಡಕೆ 550 ರೂ. ಗಡಿ ಚೋಲ್ ದಾಟುವ ನಿರೀಕ್ಷೆ ಇದೆ.
ಸಿಂಗಲ್ ಜೋಲ್ ಅಡಕೆಗೆ ಕ್ಯಾಂಪ್ಲೋ 520 ರೂ. ನಿಗದಿ ಮಾಡಿದ ಬೆನ್ನಲ್ಲೇ ಕೆಲವು ಖಾಸಗಿ ವ್ಯಾಪಾರಸ್ಥರು ವರವನ್ನು ಕೊಂಚ ಏರಿಸಿದ್ದಾರೆ. ಕಳೆದ ವರ್ಷ ಈ ಸಮಯದಲ್ಲಿ ಸಿಂಗಲ್ ಬೋಲ್ ಗೆ 480 ರೂ. ದರವಿತ್ತು. ಕರಿಕೋಕ ಅಡಕೆಗೆ ಕಳೆದ ವರ್ಷ ಬೇಡಿಕೆ ಇಲ್ಲದ ಕಾರಣ ಈ ಸಮಯಕ್ಕೆ ಕೆ.ಜಿಗೆ 70 ರೂ. ದರವಿತ್ತು. ಈ ಬಾರಿ 250 ರೂ. ದರವಿದೆ. ಉತ್ತರ ಭಾರತದಲ್ಲಿ ಅಡಕೆ ಬೇಡಿಕೆ ಹೆಚ್ಚುತ್ತಿದ್ದರೂ ಅವಕ ಕಡಿಮೆ ಇರುವ ಕಾರಣ ಧಾರಣೆ ಜಿಗಿದಿದೆ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ ಈ ಸಾಲಿನ ಅಡಕೆ ಮಾರುಕಟ್ಟೆಗೆ ಅವಕವಾಗುತ್ತಿದ್ದು, ಇದು ಕೆ.ಜಿಗೆ 380 ರೂ.ಗೆ ಖರೀದಿಯಾಗುತ್ತಿದೆ. ಕಳೆದ ವಾರ ಇದರ ದರ 360 ರೂ. ಇತ್ತು.
ಕಳೆದ ಸಾಲಿನಲ್ಲಿ ಅಡಕೆ ಇಳುವರಿ ಕಡಿಮೆಯಿದ್ದು, ಕೊಳೆರೋಗವೂ ಬಾಧಿಸಿತ್ತು. ಸಣ್ಣ ರೈತರು ಜೂನ್ ವೇಳೆ ಮಾರಾಟ ಮಾಡಿದ್ದರೆ, ದೊಡ್ಡ ರೈತರು ಮಾತ್ರ ದಾಸ್ತಾನು ಇರಿಸಿಕೊಂಡಿದ್ದಾರೆ. ಅರ್ಧಕ್ಕರ್ಧ ಬೆಳೆ ನಷ್ಟ ಪ್ರಸ್ತುತ ಸಾಲಿನಲ್ಲೂ ವ್ಯಾಪಕ ಕೊಳೆರೋಗವಿದ್ದು ಮಳೆಗಾಲದಲ್ಲಿ ಅರ್ಧಕರ್ಧ ಅಡಕೆ ಎಳತಿನಲ್ಲೇ ಮರದಿಂದ ಉದುರಿವ ಹೀಗಾಗಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಫಸಲು ನಷ್ಟವಾಗ ಸಾಧ್ಯತೆ ಇದೆ.
ಅಡಕೆ ಫಸಲು ಕಡಿಮೆ ಇದ್ದು, ಉತ್ಪಾದನಾ ವೆಚ್ಚ ಅಧಿಕವಿದೆ. ದರ ಏರಿಕೆಯಾದಲ್ಲಿ ಮಾತ್ರ ಕೃಷಿಕರಿಗೆ ಅನುಕೂಲವಾಗುತ್ತದೆ.

ಅರ್ಧ ಲಕ್ಷ ರೂ. ತಲುಪಿದ ಚಾಲಿ ದರ :-

ರಾಜ್ಯದ ಅಡಕೆ ಮಾರುಕಟ್ಟೆಯಲ್ಲಿ ಈಗ ಚಾಲಿ ಅಡಕೆ ದರ ಹಂತಹಂತವಾಗಿ ಏರಿಕೆ ಆಗುತ್ತಿದ್ದು ಈಗ ಕ್ವಿಂಟಾಲ್‌ಗೆ ಅರ್ಧ ಲಕ್ಷ ರೂ. ತಲುಪಿದೆ. 3 ತಿಂಗಳ ಹಿಂದಿನ ದರಕ್ಕೆ ಹೋಲಿಸಿದಲ್ಲಿ ಈಗ ಕ್ವಿಂಟಾಲ್‌ಗೆ 8 ಸಾವಿರ ರೂ. ಏರಿಕೆ ಕಂಡಿದೆ. ಶಿರಸಿ ಸೇರಿ ಉತ್ತರ ಕನ್ನಡದ ನಾನಾ ಕಡೆಗಳಲ್ಲಿ ಬಹುಪಾಲು ಬೆಳೆಗಾರರ ಬಳಿ ಅಡಕೆ ಬೆಳೆ ದಾಸ್ತಾನು ಕಡಿಮೆ ಇರುವುದು ದರ ಹೆಚ್ಚಳ ಆಗುವುದಕ್ಕೆ ಮುಖ್ಯ ಕಾರಣವಾಗಿದೆ. ಸಹಕಾರ ಸಂಸ್ಥೆಗಳು ಪ್ರಬಲವಾಗಿರುವ ಕಡೆಗಳಲ್ಲಿ ಅಡಕೆ ಬೆಳೆಗಾರರು ಬೆಳೆಯನ್ನು ದಾಸ್ತಾನು ಮಾಡುವ ಪದ್ಧತಿ ಇದೆ. ಆದರೆ ಈ ದಾಸ್ತಾನು ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅರ್ಧದಷ್ಟು ಕಡಿಮೆ ಇದೆ. ಹೊಸ ಕೆಂಪಡಿಕೆ ಇನ್ನೆರಡು ತಿಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಬಹುದಾದರೂ ಚಾಲಿ ಅಡಕೆ ಹಂಗಾಮು ಪ್ರಾರಂಭವಾಗಿ ಬೆಳೆ ಮಾರಾಟಕ್ಕೆ ಬರುವುದಕ್ಕೆ ಇನ್ನೂ ನಾಲೈದು ತಿಂಗಳು ಕಾಯಬೇಕು. ಆದರೆ ಬೇಡಿಕೆ ಹೆಚ್ಚಿರುವುದರಿಂದ ವ್ಯಾಪಾರಸ್ಥರು ಈಗಲೇ ಖರೀದಿ ಮಾಡಿಕೊಳ್ಳಲು ಮುಂದಾಗಿರುವುದರಿಂದ ದರ ಏರಿಕೆ ಆಗುತ್ತಿದೆ.

Categories
Uncategorized ಉಡುಪಿ ಕರಾವಳಿ ಮಂಗಳೂರು

ಕುಂದಾಪುರ: ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಭಾಗ್ಯ!

ಕುಂದಾಪುರ: ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಭಾಗ್ಯ!
– ಉಷಾ ಗ್ರಾಂಡ್ ಹೋಟೆಲ್ ಎದುರು ನಡೆದ ಸ್ಮಾರ್ಟ್ ಕಾರ್ಡ್ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ ಯಶಸ್ವಿ
– ಆಯೋಜನೆಗೆ ಹೋಟೆಲ್ ಕಾರ್ಮಿಕರಿಂದ ಮೆಚ್ಚುಗೆ

NAMMUR EXPRESS NEWS
ಕುಂದಾಪುರ: ಕುಂದಾಪುರದ ಉಷಾ ಗ್ರಾಂಡ್ ಹೋಟೆಲ್ ಎದುರು, ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ ಮತ್ತು ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅಡಿ ಹೋಟೆಲ್ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸುಮಾರು ಇನ್ನೂರಕ್ಕಿಂತ ಹೆಚ್ಚು ಹೋಟೆಲ್ ಕಾರ್ಮಿಕರು ಭಾಗವಹಿಸಿ, ತಮ್ಮ ಸ್ಮಾರ್ಟ್ ಕಾರ್ಡ್ ನೋಂದಣಿ ಪೂರ್ಣಗೊಳಿಸಿದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆದ ಈ ಶಿಬಿರದಲ್ಲಿ, ಪರಿಸರದ ಅನೇಕ ಹೋಟೆಲ್‌ಗಳ ಕಾರ್ಮಿಕರು ಬಂದು ಯೋಜನೆಯಿಂದ ಪ್ರಯೋಜನ ಪಡೆದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆಯ ಆಯುಕ್ತರು ಹಾಗೂ ಇಲಾಖೆಯ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸುಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ ಗಂಟೆಹೊಳೆ, ಹಾಗೂ ಸಂಘದ ಪದಾಧಿಕಾರಿಗಳಾದ ಪುರುಷೋತ್ತಮ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಸಹಕರಿಸಿದರು.
ಈ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಹೋಟೆಲ್ ಕಾರ್ಮಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

Categories
ತೀರ್ಥಹಳ್ಳಿ ನಮ್ಮೂರ್ ಸಹಾಯ ಹಸ್ತ ವಿಶೇಷ ಸುದ್ದಿ

ತೀರ್ಥಹಳ್ಳಿ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಮನ

ತೀರ್ಥಹಳ್ಳಿ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಮನ
– ಪುನೀತ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನುಡಿ ನಮನ
– ಸಮಾಜ ಸೇವಕ ಸೊಪ್ಪುಗುಡ್ಡೆ ರಾಘವೇಂದ್ರ, ಲೇಖಕಿ ಗಾಯತ್ರಿ ಶೇಷಗಿರಿ, ಕಲಾವಿದರಾದ ಕಾರ್ತಿಕ್, ಸುಧನ್ವ, ನಮನ ಅವರಿಗೆ ಸನ್ಮಾನ

ತೀರ್ಥಹಳ್ಳಿ: ರಾಜ್ಯದ ಕ್ರಿಯಾಶೀಲ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಅ.29ರ ಸಂಜೆ ಸರಳವಾಗಿ ಪುನೀತ್ ನಮನ-2025 ಕಾರ್ಯಕ್ರಮ ಆಚರಣೆ ಮಾಡಲಾಯಿತು.
ತೀರ್ಥಹಳ್ಳಿ ಸಮಾಜ ಸೇವಕರು, ಪಟ್ಟಣ ಪಂಚಾಯತ್ ಸದಸ್ಯರು, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರರಾದ ಸೊಪ್ಪುಗುಡ್ಡೆ ರಾಘವೇಂದ್ರ, ಲೇಖಕಿ ಗಾಯತ್ರಿ ಶೇಷಗಿರಿ, ಪುನೀತ್ ಬ್ರಿಗೇಡ್ ಸಂಸ್ಥೆಯ ಪ್ರಮುಖರಾದ ಸುಧಾಕರ್ ಕುಪ್ಪಳಿ, ಪ್ರಶಾಂತ್ ಕುಮಾರ್, ಶ್ರೀಕಾಂತ್ ಬೆಟ್ಟಮಕ್ಕಿ, ರಾಘವೇಂದ್ರ ಚಿಡುವ, ಶಿರುಪತಿ ಮಂಜುನಾಥ್ ಸೇರಿ ಅನೇಕರು, ನಮ್ಮೂರ್ ಎಕ್ಸ್ ಪ್ರೆಸ್ ಸಿಬ್ಬಂದಿ, ಪುನೀತ್ ಬ್ರಿಗೇಡ್ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಪುನೀತ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸೊಪ್ಪುಗುಡ್ಡೆ ರಾಘವೇಂದ್ರ ಅವರು, ಪುನೀತ್ ಅವರ ಸೇವೆ ಎಲ್ಲರಿಗೂ ಪ್ರೇರಣೆ. ನಾವೆಲ್ಲರೂ ಸೇವೆಗೆ ಕೈ ಜೋಡಿಸೋಣ ಎಂದರು. ನಮ್ಮೂರ್ ಎಕ್ಸ್ಪ್ರೆಸ್ ಸಂಸ್ಥೆಯ ರಾಘವೇಂದ್ರ ತೀರ್ಥಹಳ್ಳಿ ನಿರೂಪಿಸಿ, ಪ್ರಾಸ್ತವಿಕ ಮಾತನಾಡಿದರು. ಇದೇವೇಳೆ ನಮ್ಮೂರ್ ಎಕ್ಸ್ ಪ್ರೆಸ್ ಸಹಾಯ ಹಸ್ತ ಸೇವಾ ಯೋಜನೆಗೆ ಚಾಲನೆ ನೀಡಲಾಯಿತು.

ಸೇವಕರು, ಸಾಧಕರಿಗೆ ಪುನೀತ್ ಸೇವಾ ಪುರಸ್ಕಾರದ ಗೌರವ

ಸಮಾಜ ಸೇವಕರು, ತೀರ್ಥಹಳ್ಳಿಯ ಹತ್ತಾರು ಸಂಘಟನೆಗಳಲ್ಲಿ ನಿಸ್ವಾರ್ಥ ಸೇವೆ ನೀಡುತ್ತಿರುವ ಹಾಲಿ ಪಟ್ಟಣ ಪಂಚಾಯತ್ ಸದಸ್ಯರು, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವ ಅಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ, ಲೇಖಕಿ ಹಾಗೂ ಪತ್ರಕರ್ತೆ ಗಾಯತ್ರಿ ಶೇಷಗಿರಿ, ಕಲಾವಿದರಾದ ಕಾರ್ತಿಕ್ ಶ್ರೇಯನ್, ಸುಧನ್ವ ಗಡಿಕಲ್, ಗಾಯಕಿ ನಮನ ಕ್ಯಾದಿಗೆರೆ ಅವರಿಗೆ ಪುನೀತ್ ಸೇವಾ ಪುರಸ್ಕಾರದ ಗೌರವ ನೀಡಲಾಯಿತು.

Categories
death Uncategorized ಮಲ್ನಾಡ್

ಹಸೆಮಣೆ ಏರಬೇಕಿದ್ದ ಯುವತಿ ಇಂದು ಹೃದಯಾಘಾತಕ್ಕೆ ಬಲಿ

ಹಸೆಮಣೆ ಏರಬೇಕಿದ್ದ ಯುವತಿ ಇಂದು ಹೃದಯಾಘಾತಕ್ಕೆ ಬಲಿ

* ಲೋ ಬ್ಲಡ್ ಪ್ರಷರ್ ಹಾಗೂ ಹೃದಯಾಘಾತದಿಂದ ಸಾವು ಶಂಕೆ
* ಶುಕ್ರವಾರ ನಡೆಯಬೇಕಿದ್ದ ಮದುವೆ,ವಿಧಿಯ ಕ್ರೂರ ಅಟ್ಟಹಾಸ

NAMMMUR EXPRESS NEWS
ಅಜ್ಜಂಪುರ: ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದ ಯುವತಿಯೊಬ್ಬಳು ಅಕಾಲಿಕವಾಗಿ ಮರಣಹೊಂದಿದ ಹೃದಯವಿದ್ರಾವಕ ಘಟನೆ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ, ಸೊಲ್ಲಾಪುರ ಗ್ರಾಮದ ಶೃತಿ(24)ಅವರು ಅಕಸ್ಮಿಕವಾಗಿ ಮೃತಪಟ್ಟಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಶೃತಿ ಅವರಿಗೆ ಲೋ ಬ್ಲಡ್ ಪ್ರೆಶರ್ ಹಾಗೂ ಹೃದಯಾಘಾತ ಉಂಟಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

* ಶುಕ್ರವಾರ ನಡೆಯಬೇಕಿದ್ದ ಮದುವೆಗೆ,ವಿಧಿಯ ಕ್ರೂರ ಅಟ್ಟಹಾಸ
ಶೃತಿ ಅವರ ಮದುವೆ ತರೀಕೆರೆ ಪಟ್ಟಣದ ದಿಲೀಪ್ ಎಂಬ ಯುವಕನೊಂದಿಗೆ ನಾಳೆ (ಶುಕ್ರವಾರ) ನಡೆಯಬೇಕಿತ್ತು. ಮದುವೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದಾಗಲೇ ಈ ದುರ್ಘಟನೆ ನಡೆದಿದ್ದು, ಮನೆಯವರಲ್ಲಿ ಹಾಗೂ ಸಂಬಂಧಿಕರ ವಲಯದಲ್ಲಿ ಆಘಾತದ ಅಲೆ ಹರಡಿದೆ.ಮದುವೆ ಸಂಭ್ರಮದ ಮನೆಯನ್ನು ಕ್ಷಣಾರ್ಧದಲ್ಲಿ ಸೂತಕದ ವಾತಾವರಣ ಆವರಿಸಿದ್ದು, ಕಣ್ಣೀರಿನಲ್ಲಿ ಶೃತಿ ಅವರ ಅಂತ್ಯ ಸಂಸ್ಕಾರಗಳು ನೆರವೇರಲಿದೆ.
ಘಟನೆಯ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗ್ರಾಮಸ್ಥರು ಹಾಗೂ ಬಂಧುಬಳಗದವರು ಈ ದುರ್ಘಟನೆಯಿಂದ ನೋವು ವ್ಯಕ್ತಪಡಿಸುತ್ತಿದ್ದು, “ಮದುವೆ ದಿನಕ್ಕೂ ಮುನ್ನವೇ ಇಂತಹ ದುರಂತ ಸಂಭವಿಸಿರುವುದು ವಿಧಿಯ ಕ್ರೂರ ಅಟ್ಟಹಾಸ ಎಂದು ಕಣ್ಣೀರಿಟ್ಟಿದ್ದಾರೆ.

Categories
ಉಡುಪಿ ಕರಾವಳಿ ಮಂಗಳೂರು

ಕರಾವಳಿ ಟಾಪ್ 10 ನ್ಯೂಸ್

ಕರಾವಳಿ ಟಾಪ್ 10 ನ್ಯೂಸ್

* ಬಂಟ್ವಾಳ: ಕಾಣೆಯಾದ ಆಟೋ ಚಾಲಕ
* ಸುಳ್ಯ: ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
* ಉಳ್ಳಾಲ: ಮಾದಕ ವಸ್ತು ಸೇವನೆ; ಆರೋಪಿ ಪೊಲೀಸರಿಗೆ ಸೆರೆ
* ಬೆಳ್ತಂಗಡಿ: ಸೌಜನ್ಯ ಪರ ಹೋರಾಟಗಾರರ ಅಕ್ರಮ ಕೂಟ
* ಕುಂದಾಪುರ: ರಾತ್ರೋರಾತ್ರಿ ಹಣ ಲಪಟಾಯಿಸಿದ ಅನಾಮಿಕರು
* ಪುತ್ತೂರು: ಮೇಯಲು ಬಿಟ್ಟ ಎರಡು ಆಡುಗಳ ಕಳುವು
* ಕಡಬ: ಬೃಹತ್ ನೀರಿನ ಟ್ಯಾಂಕ್ ತೆರವು
* ಕಾಪು: ಅಪಾಯಕಾರಿಯಾಗಿವೆ ಹೊಂಡಮಯ ರಸ್ತೆಗಳು
* ಕಾರ್ಕಳ: ಸರ್ಕಾರಿ ಬಸ್ ಗಳಿಗಾಗಿ ಬೇಡಿಕೆ
* ಹೆಬ್ರಿ: ತಂತಿ ಬೇಲಿಗೆ ಸಿಲುಕಿದ್ದ ಚಿರತೆಯ ರಕ್ಷಣೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಟ್ವಾಳ: ಹಳೆ ಸೇತುವೆಯ ಬಳಿ ಆಟೋವನ್ನು ನಿಲ್ಲಿಸಿ, ಚಾಲಕ ನಾಪತ್ತೆಯಾಗಿರುವ ಘಟನೆ ಪಾಣೆಮಂಗಳೂರಿನಲ್ಲಿ ನಡೆದಿದೆ. ನಾಪತ್ತೆಯಾಗಿರುವ ಆಟೋ ಚಾಲಕ ಮಾರ್ನಬೈಲು ನಿವಾಸಿ ಪ್ರೀತಮ್ ಲೋಬೋ ಎಂಬ ಮಾಹಿತಿ ಲಭಿಸಿದೆ. ಬುಧವಾರ ಬೆಳಿಗ್ಗೆ ಎಂಟು ಗಂಟೆಯ ಸುಮಾರಿಗೆ ಬ್ಯಾಟರಿ ಚಾಲಿತ ಆಟೋವನ್ನು ಪಾಣೆಮಂಗಳೂರಿನ ಹಳೆ ಸೇತುವೆಯ ಮೇಲೆ ನಿಲ್ಲಿಸಿ, ಕಣ್ಮರೆಯಾಗಿದ್ದಾರೆ. ಇದರಿಂದಾಗಿ ಸ್ಥಳೀಯರಿಂದ ಆಟೋ ಚಾಲಕ ನೇತ್ರಾವತಿ ನದಿಗೆ ಹಾರಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ. ಬಂಟ್ವಾಳದ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸೇತುವೆಯ ಕೆಳಗೆ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ಶೋಧನಾ ಕಾರ್ಯವನ್ನು ನಡೆಸಿದ್ದಾರೆ.

* ಸುಳ್ಯ: ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಸುಳ್ಯ: ಬಸ್ ತಂಗುದಾಣದಲ್ಲಿ ಕುಳಿತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ, ಮುರುಳ್ಯ ಗ್ರಾಮದ ನಿಂತಿಕಲ್ಲು ಜಂಕ್ಷನ್ ಬಳಿ, ಕಳೆದೆರಡು ದಿನಗಳ ಹಿಂದೆ ನಡೆದಿತ್ತು. ಆರೋಪಿಯಾದ ಪಂಜಿಬಿಲದ ಗಿರಿಧರ್ ರೈ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗಿರಿಧರ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿದೆ.

* ಉಳ್ಳಾಲ: ಮಾದಕ ವಸ್ತು ಸೇವನೆ; ಆರೋಪಿ ಪೊಲೀಸರಿಗೆ ಸೆರೆ

ಉಳ್ಳಾಲ: ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಮಾದಕ ವಸ್ತುವನ್ನು ಸೇವಿಸಿ, ಸಾರ್ವಜನಿಕರಿಗೆ ತೊಂದರೆಯಾಗುವಂತೆ ನಡೆದುಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ, ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ, ಸೋಮೇಶ್ವರ ಗ್ರಾಮದ ದ್ವಾರಕನಗರದಲ್ಲಿ ನಡೆದಿದೆ. ಆರೋಪಿಯನ್ನು ಭರತ್ ರಾಜ್ ಎಂದು ಗುರುತಿಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯ ಪಿಎಸ್ಐ ಆಗಿರುವ ಸಂತೋಷ್ ಕುಮಾರ್ ಅವರು ಬಂಧಿಸಿ, ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.

* ಬೆಳ್ತಂಗಡಿ: ಸೌಜನ್ಯ ಪರ ಹೋರಾಟಗಾರರ ಅಕ್ರಮ ಕೂಟ

ಬೆಳ್ತಂಗಡಿ: ಸರ್ಕಾರದ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸುವುದನ್ನು ಪೊಲೀಸ್ ಇಲಾಖೆಯು ನಿರಾಕರಿಸಿದ್ದರೂ, ಪುನಃ ಕಳೆದೆರಡು ದಿನಗಳ ಹಿಂದೆ ಸೌಜನ್ಯ ಪರ ಹೋರಾಟಗಾರರು ಮಿನಿ ವಿಧಾನಸೌಧದ ಬಳಿ ಅಕ್ರಮ ಕೂಟ ಸೇರಿ, ಸಾರ್ವಜನಿಕರಿಗೆ ತೊಂದರೆ ನೀಡಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸೌಜನ್ಯಾಳ ತಾಯಿ ಕುಸುಮಾವತಿ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಪ್ರಜ್ವಲ್ ಗೌಡ, ಪ್ರದೀಪ್ ಕುಲಾಲ್, ಶ್ರೀನಿವಾಸ್ ಗೌಡ, ರವೀಂದ್ರ ಶೆಟ್ಟಿ, ಪ್ರಸನ್ನ ರವಿ, ಉದಯ ಪ್ರ‌ಸಾದ್, ವೆಂಕಪ್ಪ ಕೋಟ್ಯಾನ್, ತನುಷ್ ಶೆಟ್ಟಿ, ಮೋಹನ್ ಶೆಟ್ಟಿ, ಜಯರಾಮ್ ಗೌಡ, ಸಂತೋಷ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಯೋಗೀಶ್ ಕುಲಾಲ್, ನಾರಾವಿ ವಿಜಯ್, ರವೀಂದ್ರ ಶೆಟ್ಟಿ ಮುಡಿಪು, ಶಶಿಕಲಾ ಶೆಟ್ಟಿ, ಪೂಜಾಶ್ರೀ ಧರ್ಮಸ್ಥಳ, ಟಿಕ್ಕಿ ರವಿ ಮತ್ತು ಇತರರ ವಿರುದ್ಧ ಬೆಳ್ತಂಗಡಿ ಪೊಲೀಸರು ಸ್ವಯಂ ಪ್ರೇರಿತರಾಗಿ ಬಿಎನ್ಎಸ್ 189 (2), 19೦, 285, 57 ಕರ್ನಾಟಕ ಪೊಲೀಸ್ ಆ್ಯಕ್ಟ್ 1963 31 (೦), 103ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

* ಕುಂದಾಪುರ: ರಾತ್ರೋರಾತ್ರಿ ಹಣ ಲಪಟಾಯಿಸಿದ ಅನಾಮಿಕರು

ಕುಂದಾಪುರ: ಯಾವುದೇ ಮಾಹಿತಿಗಳನ್ನು ಪಡೆಯದೆ, ಮಧ್ಯರಾತ್ರಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಲಪಟಾಯಿಸಿದ ಘಟನೆ ತೆಕ್ಕಟೆಯಲ್ಲಿ ನಡೆದಿದೆ. ಭಾರತ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ವಾಸವಾಗಿರುವ ರಮೇಶ್ ಮರಕಾಲ ಅವರ ಯೂನಿಯನ್ ಬ್ಯಾಂಕ್ ಖಾತೆಯಿಂದ, ಐಎಂಪಿಸಿ ಮೂಲಕ ಸುಮಾರು 90,೦೦೦ ರೂಪಾಯಿ ಹಣ ಡ್ರಾ ಮಾಡಲಾಗಿದೆ. ಯಾವುದೇ ಒಟಿಪಿಯನ್ನು ಪಡೆಯದೆ, ಯಾವುದೇ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳದೆ, ನಿದ್ದೆಯಲ್ಲಿದ್ದ ಕಾರಣ, ಮೊಬೈಲ್ ಸಹ ಬಳಸದಿದ್ದರೂ ಕೂಡ ಈ ರೀತಿ ನಡೆದಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸೈಬರ್ ವಂಚನೆಯ ದೂರನ್ನು ದಾಖಲಿಸಲಾಗಿದೆ. ಕದ್ದ ಹಣವು ಕೊಲ್ಕತ್ತಾದ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿರುವ ಮಾಹಿತಿ ತಿಳಿದುಬಂದಿದೆ.

* ಪುತ್ತೂರು: ಮೇಯಲು ಬಿಟ್ಟ ಎರಡು ಆಡುಗಳ ಕಳುವು

ಪುತ್ತೂರು: ಆಡುಗಳನ್ನು ಕದಿಯಲು ಪ್ರಯತ್ನಿಸಿದ ಸಂದರ್ಭದಲ್ಲಿ, ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಬಜತ್ತೂರು ಗ್ರಾಮದ ವಳಾಲುವಿನಲ್ಲಿ ನಡೆದಿದೆ. ರಮೇಶ್ ಎನ್ನುವವರು ತಮ್ಮ ಆಡುಗಳನ್ನು ಹೆದ್ದಾರಿ ಪಕ್ಕದಲ್ಲಿದ್ದ ಬಯಲಿನಲ್ಲಿ ಮೇಯಲು ಬಿಟ್ಟಿದ್ದ ವೇಳೆ, ಕಾರಿನಲ್ಲಿ ಬಂದ ಕೆಲವರು, ಎರಡು ಆಡುಗಳನ್ನು ಕದ್ದು, ಕಾರಿನಲ್ಲಿ ಹಾಕುತ್ತಿದ್ದರು. ಆಗ ಆಡುಗಳು ಚೀರಿಕೊಂಡಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ, ಅನುಮಾನಗೊಂಡು ವಿಚಾರಿಸಿದಾಗ ಕಳ್ಳತನ ಮಾಡುತ್ತಿರುವುದು ತಿಳಿದುಬಂದಿದೆ.‌ ಬಳಿಕ ಆ ವ್ಯಕ್ತಿ ಸ್ಥಳೀಯರ ಸಹಾಯದಿಂದ, ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕಡಬ: ಬೃಹತ್ ನೀರಿನ ಟ್ಯಾಂಕ್ ತೆರವು

ಕಡಬ: ವಿಶ್ವ ಬ್ಯಾಂಕ್ ಕುಡಿಯುವ ನೀರು ಯೋಜನೆಯ ಅಡಿಯಲ್ಲಿ, 1996ರಲ್ಲಿ ನಿರ್ಮಾಣವಾಗಿದ್ದ, ಸುಮಾರು 50,000 ಲೀಟರ್ ನಷ್ಟು ನೀರನ್ನು ತುಂಬಿಸುವಷ್ಟು ಸಾಮರ್ಥ್ಯ ಹೊಂದಿದ್ದ ಬೃಹತ್ ನೀರಿನ ಟ್ಯಾಂಕ್ ಅನ್ನು, ಸಾರ್ವಜನಿಕರ ಒತ್ತಾಸೆಯ ಮೇರೆಗೆ ತೆರವುಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಜನತಾ ಕಾಲೋನಿಯ ಆಸುಪಾಸಿನ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ನೀರನ್ನು ಪೂರೈಸುತ್ತಿದ್ದ ಈ ಟ್ಯಾಂಕ್ ಮಳೆಯ ತೀವ್ರತೆಯಿಂದಾಗಿ, ಮಣ್ಣು ಸಡಿಲಗೊಂಡು ಕುಸಿಯುವ ಸ್ಥಿತಿಯಲ್ಲಿತ್ತು ಎನ್ನಲಾಗಿದೆ.‌ ಒಂದು ವೇಳೆ ಟ್ಯಾಂಕ್ ಮೇಲಿನಿಂದ ಬಿದ್ದರೆ, ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗುವ, ಇಲ್ಲವೇ ಸುತ್ತಮುತ್ತಲು ಓಡಾಡುವ ಜನರಿಗೆ ಅಪಾಯ ಸಂಭವಿಸುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ, ಸ್ಥಳೀಯರು ಟ್ಯಾಂಕ್ ಅನ್ನು ತೆರವುಗೊಳಿಸುವಂತೆ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿಗೆ ಮನವಿಯನ್ನು ಸಲ್ಲಿಸಿದ್ದರು. ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಅಪಾಯದ ಮುನ್ಸೂಚನೆಯನ್ನು ಅರಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳ ಪರಿಶೀಲನೆಯನ್ನು ನಡೆಸಿ, ಟೆಂಡರ್ ಕರೆದು, ಕಳೆದ ತಿಂಗಳು ಟ್ಯಾಂಕ್ ಅನ್ನು ತೆರವುಗೊಳಿಸುವ ಕಾರ್ಯವನ್ನು ನಿಯಮಾವಳಿಗಳ ಪ್ರಕಾರ ಪ್ರಾರಂಭಿಸಿತು. ಯಾವುದೇ ಮನೆಗಳಿಗೆ ಹಾನಿಯಾಗದ ರೀತಿಯಲ್ಲಿ, ಯಶಸ್ವಿಯಾಗಿ ಟ್ಯಾಂಕ್ ಅನ್ನು ತೆರುವುಗೊಳಿಸಿದ್ದು, ಈ ಮೂಲಕ ಸ್ಥಳೀಯರ ಆತಂಕ ನಿವಾರಣೆಯಾಗಿದೆ.

* ಕಾಪು: ಅಪಾಯಕಾರಿಯಾಗಿವೆ ಹೊಂಡಮಯ ರಸ್ತೆಗಳು

ಕಾಪು: ಅಪಾಯದ ಸ್ಥಿತಿಯಲ್ಲಿರುವ ಹೊಂಡಮಯ ರಸ್ತೆಗೆ ಡಾಂಬರೀಕರಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕುರ್ಕಾಲು ಗ್ರಾಮ ಪಂಚಾಯಿತಿಯ ಸುಭಾಷ್ ನಗರದ ಜಂಕ್ಷನ್ ನಿಂದ, ಬಿಜಂಟ್ಲದಿಂದ ಕುಂಜಾರಗಿರಿ ಪಾಜಕ ಕ್ಷೇತ್ರವನ್ನು ಸಂಪರ್ಕಿಸುವ, ಸುಮಾರು ಮೂರು ಕಿಲೋಮೀಟರ್ ನಷ್ಟು ಉದ್ದವಾಗಿರುವ ಪ್ರಮುಖ ರಸ್ತೆಯೇ ಹೊಂಡ ಗುಂಡಿಗಳಿಂದ ಕೂಡಿದ್ದು, ಮಧ್ವಾಚಾರ್ಯರ ಪಾಜಕ ಕ್ಷೇತ್ರ, ಕುಂಜಾರುಗಿರಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀಪರಶುರಾಮ ದೇವಸ್ಥಾನ, ಆಯುಷ್ ಇಲಾಖೆಯ ಆಯುಷ್ ಚಿಕಿತ್ಸಾಲಯ, ಬಿಜಂಟ್ಲ ಸರ್ಕಾರಿ ಶಾಲೆ ಮೊದಲಾದ ಕಡೆಗಳಿಗೆ ತೆರಳುವ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ. ಗುಂಡಿಗಳಲ್ಲಿ ಮಳೆಯ ನೀರು ನಿಲ್ಲುವ ಕಾರಣ, ವಾಹನಗಳಲ್ಲಿ ಬರುವವರಿಗೆ ಕತ್ತಲಿನಲ್ಲಿ ಕಾಣಿಸದೆ ಅಪಾಯಗಳು ಎದುರಾಗುತ್ತಿವೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಆಗಿರುವ ಸಾಗರ್ ಎಲ್ ಜಿ ಅವರು “ರಸ್ತೆಯಲ್ಲಿ ಇರುವ ಹೊಂಡ ಗುಂಡಿಗಳ ಸಮಸ್ಯೆ ಕುರಿತ ವಿಚಾರ ನಮ್ಮ ಗಮನಕ್ಕೆ ಬಂದಿದೆ, ಈ ಹಿನ್ನೆಲೆಯಲ್ಲಿ ಪರಿಶೀಲನೆಯನ್ನು ನಡೆಸಲಾಗುತ್ತಿದ್ದು, ಕಳೆದ ಬಾರಿ ದೇವಸ್ಥಾನದ ಬಳಿ ಡಾಂಬರೀಕರಣ ಮಾಡಲಾಗಿದೆ. ರಸ್ತೆಗಳ ಡಾಂಬರೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಮಂಜೂರುಗೊಂಡ ಬಳಿಕ, 15 ದಿನಗಳ ಒಳಗಾಗಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು”. ಎಂದು ತಿಳಿಸಿದ್ದಾರೆ.

* ಕಾರ್ಕಳ: ಸರ್ಕಾರಿ ಬಸ್ ಗಳಿಗಾಗಿ ಬೇಡಿಕೆ.

ಕಾರ್ಕಳ: ಕಳೆದ ಕೆಲವು ವರ್ಷಗಳಿಂದ ಕಾರ್ಕಳ ಮತ್ತು ಹೆಬ್ರಿ ತಾಲ್ಲೂಕುಗಳ ಗ್ರಾಮೀಣ ಪ್ರದೇಶದಲ್ಲಿ, ಸರ್ಕಾರಿ ಬಸ್ ಗಳ ಚಾಲನೆಗೆ ಸಂಬಂಧಿಸಿದಂತೆ ಬೇಡಿಕೆಗಳು ತೀವ್ರಗೊಂಡಿವೆ. ಆದರೆ ಸಾರಿಗೆ ವ್ಯವಸ್ಥೆಯ ಕುಂದು ಕೊರತೆಯ ಕುರಿತು ಚರ್ಚಿಸುವ ಮತ್ತು ಬೇಡಿಕೆಗಳನ್ನು ಅನುಷ್ಠಾನಗೊಳಿಸಲು ಸಭೆಯನ್ನು ನಡೆಸದಿರುವುದು ಪ್ರಯಾಣಿಕರ ಬಯಕೆಗೆ ತಣ್ಣೀರು ಎರಚಿದಂತಾಗಿದೆ. ಈ ಹಿಂದೆ ಸಾರ್ವಜನಿಕರು ಮನವಿ ಸಲ್ಲಿಸಿದಾಗ ಪಳ್ಳಿ – ಕಣಂಜಾರು ಸೇರಿದಂತೆ, ಕೆಲವು ಮಾರ್ಗಗಳಲ್ಲಿ ಸರ್ಕಾರಿ ಬಸ್ ಗಳ ಸಂಚಾರಕ್ಕೆ ಆಕ್ಷೇಪಣೆ ವ್ಯಕ್ತವಾಗಿತ್ತು. ಹೀಗಾಗಿ ಹೊಸ ಬಸ್ ಮಾರ್ಗಗಳ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಪ್ರಾದೇಶಿಕ ಸಾರಿಗೆ ಕಛೇರಿ ಜಂಟಿಯಾಗಿ ಸಮೀಕ್ಷೆಯನ್ನು ನಡೆಸಿ, ಅದನ್ನು ಪೂರ್ಣಗೊಳಿಸಿತ್ತು.‌ ಆದರೆ ಸಮೀಕ್ಷೆಯ ಫಲಿತಾಂಶ ಮತ್ತು ಎರಡೂ ಕಛೇರಿಗಳ ನಿರ್ಧಾರ ಏನೆಂಬುದು ಕೂಡ ಇನ್ನೂ ತಿಳಿದುಬಂದಿಲ್ಲ ಎನ್ನುವುದು ಸಾರ್ವಜನಿಕರ ಆಕ್ಷೇಪಣೆಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾರ್ಕಳದ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಅವರು “ಆರ್ ಟಿಎ ಸಭೆಯನ್ನು ನಡೆಸದ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನವಿಯನ್ನು ಅನುಷ್ಠಾನಗೊಳಿಸಲು ವಿಳಂಬವಾಗುತ್ತಿದೆ, ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಶೀಘ್ರದಲ್ಲೇ ಆರ್ ಟಿಎ ಸಭೆಯನ್ನು ನಡೆಸಿ, ಕೆಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ” ಎಂದು ತಿಳಿಸಿದ್ದಾರೆ.

* ಹೆಬ್ರಿ: ತಂತಿ ಬೇಲಿಗೆ ಸಿಲುಕಿದ ಚಿರತೆಯ ರಕ್ಷಣೆ

ಹೆಬ್ರಿ: ಆಹಾರದ ಹುಡುಕಾಟದಲ್ಲಿ ಗ್ರಾಮೀಣ ಪ್ರದೇಶಕ್ಕೆ ಆಗಮಿಸಿದ ಚಿರತೆಯು, ತಂತಿ ಬೇಲಿಗೆ ಸಿಲುಕಿದ ಘಟನೆ, ಕಳೆದೆರಡು ದಿನಗಳ ಹಿಂದೆ ಮುದ್ರಾಡಿ ಗ್ರಾಮದ ಬರ್ಸ್ ಬೆಟ್ಟು ಎನ್ನುವಲ್ಲಿ ನಡೆದಿದೆ. ಇದನ್ನು ಗಮನಿಸಿದ ಸಮೀಪದಲ್ಲಿದ್ದ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.‌ ಸ್ಥಳಕ್ಕೆ ಮಂಗಳೂರಿನ ವೈದ್ಯರ ತಂಡದೊಂದಿಗೆ ಆಗಮಿಸಿದ, ಕಾರ್ಕಳ ಮತ್ತು ಹೆಬ್ರಿ ವಲಯದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚಿರತೆಗೆ ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ, ಅದಕ್ಕೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ, ತಂತಿ ಬೇಲಿಯಿಂದ ಹೊರತಂದು, ಬಳಿಕ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ತಲುಪಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ವಲಯ ಅರಣ್ಯ ಇಲಾಖೆಯ ಅಧಿಕಾರಿಯಾದ ಶ್ರೀಧರ್ ಮತ್ತು ಸಿಬ್ಬಂದಿಗಳು, ಹೆಬ್ರಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಮಂಗಳೂರಿನ ವೈದ್ಯರಾದ ಮೇಘನಾ ಮತ್ತವರ ತಂಡ ಹಾಜರಿದ್ದರು.

Categories
ಕರಾವಳಿ ಮಂಗಳೂರು

ಧರ್ಮಸ್ಥಳ ಕೇಸ್ ನಲ್ಲಿ ಬಿಗ್ ಟ್ವಿಸ್ಟ್..!

ಧರ್ಮಸ್ಥಳ ಕೇಸ್ ನಲ್ಲಿ ಬಿಗ್ ಟ್ವಿಸ್ಟ್..!
– ಧರ್ಮಸ್ಥಳಕ್ಕೆ ಮಸಿ ಬಳಿಯುವ ಪ್ರಯತ್ನದಿಂದ ಪ್ರಕರಣವನ್ನು ರದ್ದುಪಡಿಸುವಂತೆ ಸೂಚನೆ
– ಕೇಸ್ ರದ್ದು ಮಾಡಲು ಬುರುಡೆ ಗ್ಯಾಂಗ್ ಹೈಕೋರ್ಟ್ ಗೆ ಅರ್ಜಿ.!

NAMMUR EXPRESS NEWS
ಬೆಂಗಳೂರು : ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂತಿಡಲಾಗಿದೆ. ಉತ್ಖನನ ಮಾಡಿ, ತನಿಖೆ ನಡೆಸಿ ಎಂದು ತಾವೇ ಕೊಟ್ಟ ಅತ್ಯಂತ ಮಹತ್ವದ ದೂರನ್ನು ಇದೀಗ ವಜಾಗೊಳಿಸಿ ಎಂದು ಹೈಕೋರ್ಟ್ ಗೆ ಬುರುಡೆ ಗ್ಯಾಂಗ್ ಅರ್ಜಿ ಸಲ್ಲಿಸಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬುರುಡೆ ಗ್ಯಾಂಗ್ ನೀಡಿದ್ದ ದೂರನ್ನು ವಜಾಗೊಳಿಸಿ ಎಂದು ಬುರುಡೆ ಗ್ಯಾಂಗ್ ಹೈಕೋರ್ಟ್ ಗೆ ಮನವಿ ಮಾಡಿದೆ. ಇವರು ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ, ಎಸ್‌ಐಟಿ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಆರಂಭಿಕ ಎಲ್ಲಾ ಹೇಳಿಕೆಯಲ್ಲಿ ಎಸ್‌ಐಟಿ ತನಿಖೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಬುರುಡೆ ಗ್ಯಾಂಗ್ ಇದೀಗ ಎಫ್‌ಐಆರ್ ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳ ವಿರುದ್ಧ ನಡೆದ ಅಪಪ್ರಚಾರ ಪ್ರಕರಣ ಇದಾಗಿದ್ದು, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್, ಗಿರೀಶ್ ಮಟ್ಟಣ್ಣನವರ್ ವಿಠ್ಠಲ್ ಗೌಡ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದರಿಂದ ಬುರುಡೆಗೆ ಗ್ಯಾಂಗ್ ಸಂಕಷ್ಟಕ್ಕೆ ಸಿಲುಕಿದೆ. ಸುಜಾತಾ ಭಟ್ ಪ್ರಕರಣದಲ್ಲಿ ಮುಖಭಂಗವಾಗಿರುವುದು, ಸುಳ್ಳು ದೂರು, ಸಾಕ್ಷಿ ಸೃಷ್ಟಿ ಹಿನ್ನೆಲೆಯಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಕರಣ ರದ್ದು ಮಾಡುವಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಇಂದು ಅರ್ಜಿ ವಿಚಾರಣೆ ನಡೆಯಲಿದೆ. ಧರ್ಮಸ್ಥಳಕ್ಕೆ ಮಸಿ ಬಳಿಯುವ ಪ್ರಯತ್ನವಾಗಿ ತಾವೇ ಹೋರಾಟ ಮಾಡಿ ಹಾಕಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಬುರುಡೆ ಗ್ಯಾಂಗ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ.

Categories
ದಿನ ರಾಶಿ ಭವಿಷ್ಯ ರಾಜ್ಯ

ಈ ದಿನದ ರಾಶಿ ಭವಿಷ್ಯ ಹೇಗಿದೆ?

ಈ ದಿನದ ರಾಶಿ ಭವಿಷ್ಯ ಹೇಗಿದೆ?
– ಗುರು ರಾಯರ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ?

NAMMUR EXPRESS NEWS
ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು?

** ಮೇಷ ರಾಶಿ :
​ಮೇಷ ರಾಶಿಯವರಿಗೆ ಇಂದು ತುಂಬಾ ಶುಭ ದಿನವಾಗಲಿದೆ. ಉದ್ಯೋಗದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಕೋಪ ಮತ್ತು ವಾದಗಳನ್ನು ನಿಯಂತ್ರಿಸಿ, ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಇಂದು, ನೀವು ಹೆಚ್ಚು ಕೆಲಸ ಮಾಡಬೇಕಾಗಬಹುದು. ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸಮಸ್ಯೆಗಳಿರುವುದಿಲ್ಲ. ಇಂದು, ಹೆಚ್ಚು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ.

** ವೃಷಭ ರಾಶಿ :
ಇಂದು ನಿಮಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿವೆ. ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ನೀವು ಯಾರಿಗಾದರೂ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ನೀಡುವಾಗ ಬಹಳ ಜಾಗರೂಕರಾಗಿರಬೇಕು. ಸಣ್ಣಪುಟ್ಟ ಸಮಸ್ಯೆಗಳ ಹೊರತಾಗಿಯೂ, ನಿಮ್ಮ ಪ್ರೇಮ ಜೀವನ ಇಂದು ಸಂತೋಷವಾಗಿರುತ್ತದೆ.

** ಮಿಥುನ ರಾಶಿ :
ಇಂದು ನಿಮಗೆ ವ್ಯಾಪಾರದಲ್ಲಿ ಲಾಭವಾಗಬಹುದು. ಹಣ ಬರುವ ಸಾಧ್ಯತೆಗಳಿವೆ. ಆದರೆ ನಿಮ್ಮ ಖರ್ಚುಗಳನ್ನು ನಿಯಂತ್ರಿಸಬೇಕಾಗುತ್ತದೆ.. ಮಾನಸಿಕ ಸಂತೋಷವನ್ನು ಪಡೆದುಕೊಳ್ಳುವಿರಿ. ಆರೋಗ್ಯವೂ ಉತ್ತಮವಾಗಿರುತ್ತದೆ. ಅದೇ ಸಮಯದಲ್ಲಿ, ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು.

** ಕರ್ಕಾಟಕ ರಾಶಿ :
ಇಂದು ನಿಮಗೆ ಬಹಳ ವಿಶೇಷವಾದ ದಿನ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಹೊಸ ಅವಕಾಶಗಳಿರಬಹುದು. ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ನಿಮ್ಮ ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ. ಈ ಅವಧಿಯಲ್ಲಿ, ನೀವು ಕೆಲಸಕ್ಕಾಗಿ ಪ್ರಯಾಣಿಸಬೇಕಾಗಬಹುದು.

** ಸಿಂಹ ರಾಶಿ :
ಇಂದು ನಿಮಗೆ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಸಂಬಂಧದಲ್ಲಿ ಅಸಮಾಧಾನವಿರಬಹುದು ಆದರೆ ನೀವು ಅದನ್ನು ತಾಳ್ಮೆಯಿಂದ ಜಯಿಸಬೇಕು. ವೃತ್ತಿ ಬೆಳವಣಿಗೆಗೆ ಹೊಸ ಅವಕಾಶಗಳ ಮೇಲೆ ಕಣ್ಣಿಡಿ. ನಿಮ್ಮ ನಾಯಕತ್ವದ ಗುಣವನ್ನು ಕೆಲಸದ ಸ್ಥಳದಲ್ಲಿ ಪ್ರಶಂಸಿಸಲಾಗುತ್ತದೆ. ಹಾಗಾಗಿ ಇಂದು, ಹೊಸ ಯೋಜನೆಯ ಜವಾಬ್ದಾರಿಯಿಂದ ಹಿಂದೆ ಸರಿಯಬೇಡಿ.

** ಕನ್ಯಾ ರಾಶಿ :
ಇಂದು ನಿಮ್ಮ ಪ್ರೇಮ ಸಂಬಂಧಗಳಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಆದರೆ ಇಂದು, ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.

** ತುಲಾ ರಾಶಿ :
ಇಂದು ನಿಮ್ಮಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಹೂಡಿಕೆ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಖರ್ಚಿನ ಮೇಲೆ ನಿಗಾ ಇರಿಸಿ. ಅನುಪಯುಕ್ತ ವಸ್ತುಗಳಿಗೆ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ. ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ನೀವು ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ.

** ವೃಶ್ಚಿಕ ರಾಶಿ :
ಇಂದು ನಿಮ್ಮ ದಿನವು ಸಾಮಾನ್ಯವಾಗಿರುತ್ತದೆ. ಜೀವನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವಿರಿ. ಕೆಲಸದ ಸ್ಥಳದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯಬಹುದು. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಅತಿಯಾದ ಕೋಪವನ್ನು ತಪ್ಪಿಸಿ. ಇಂದು, ನಿಮ್ಮ ಜೀವನದ ಗುರಿಗಳನ್ನು ಸಾಧಿಸಲು ಹೊಸ ಪ್ರಯತ್ನಗಳನ್ನು ಮಾಡಿ.

** ಧನಸ್ಸು ರಾಶಿ :
ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಬಹುದು. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ, ಆದರೆ ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಅಗತ್ಯವಿದ್ದರೆ ಮಾತ್ರ ಹಣ ಖರ್ಚು ಮಾಡಿ. ಕಷ್ಟದ ಸಮಯವನ್ನು ಎದುರಿಸಲು ಹಣವನ್ನು ಉಳಿಸಲು ಮರೆಯದಿರಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ.

** ಮಕರ ರಾಶಿ :
ಇಂದು ಮಕರ ರಾಶಿಯವರು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವತ್ತ ಗಮನ ಹರಿಸಬೇಕು. ಕೆಲವು ಹೊಸ ಯೋಜನೆಗಳಿಗೆ ಹೆಚ್ಚಿನ ಗಮನ ಬೇಕಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಬಹುದು. ಉದ್ಯಮಿಗಳು ಯಾರನ್ನೂ ಕುರುಡಾಗಿ ನಂಬಬಾರದು. ಸ್ನೇಹಿತರ ಸಹಾಯದಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.

** ಕುಂಭ ರಾಶಿ :
ಇಂದು ಕುಂಭ ರಾಶಿಯವರ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಹಣದ ಒಳಹರಿವಿಗಾಗಿ ಹೊಸ ಮಾರ್ಗಗಳು ಸುಗಮವಾಗುತ್ತವೆ. ಆದರೆ ವಾಹನದ ನಿರ್ವಹಣೆಗೆ ಹಣವನ್ನು ಖರ್ಚು ಮಾಡಬೇಕಾಗಬಹುದು. ಇಂದು ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಕೆಲಸದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

** ಮೀನ ರಾಶಿ :
ಇಂದು ನೀವು ಕೆಲಸದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು. ಕೆಲಸದ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ಜೀವನದಲ್ಲಿ ದೊಡ್ಡ ಬದಲಾವಣೆಗಳಿಗೆ ಸಿದ್ಧರಾಗಿರಿ. ಇಂದು ನಿಮ್ಮ ಮನಸ್ಸು ಕೆಲವು ಅಪರಿಚಿತ ಭಯದಿಂದ ತೊಂದರೆಗೊಳಗಾಗಬಹುದು. ಸಕಾರಾತ್ಮಕ ಮನಸ್ಥಿತಿಯೊಂದಿಗೆ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ಶ್ರಮಿಸುತ್ತಿರಿ.

Categories
ತೀರ್ಥಹಳ್ಳಿ ಮಲ್ನಾಡ್

ಕ್ರಿಕೆಟ್ ಅಲ್ಲಿ ಆಗುಂಬೆ ಠಾಣೆ ಪೊಲೀಸರು ಚಾಂಪಿಯನ್

ಕ್ರಿಕೆಟ್ ಅಲ್ಲಿ ಆಗುಂಬೆ ಠಾಣೆ ಪೊಲೀಸರು ಚಾಂಪಿಯನ್
– ಮಾಳೂರು ಪೊಲೀಸ್ ತಂಡ ರನ್ನರ್ ಅಪ್

NAMMUR EXPRESS NEWS
ತೀರ್ಥಹಳ್ಳಿ: ಅ. 28ರಂದು ಆಯೋಜಿಸಿದ್ದ ಉಪ ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಗುಂಬೆ ಠಾಣೆ ಪೊಲೀಸರು ಚಾಂಪಿಯನ್ ಪಟ್ಟ ಗಳಿಸಿದ್ದಾರೆ.
6 ಪೊಲೀಸ್ ಠಾಣೆಗಳಾದ ತೀರ್ಥಹಳ್ಳಿ, ಆಗುಂಬೆ, ಮಾಳೂರು,ರಿಪ್ಪನಪೇಟೆ,ನಗರ, ಹೊಸನಗರ ತಂಡಗಳು ಭಾಗವಹಿಸಿದ್ದು ಈ ಆರು ತಂಡಗಳ ಪೈಕಿ ಪೈನಲ್ಸ್ ನಲ್ಲಿ ಆಗುಂಬೆ ಪೊಲೀಸ್ ಠಾಣೆಯ ತಂಡ ವಿನ್ನರ್ಸ್ ಆಗಿದ್ದು ಮಾಳೂರು ಪೊಲೀಸ್ ತಂಡ ರನ್ನರ್ ಅಪ್ ಆಗಿರುತ್ತದೆ. ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ಪಡೆದ ತಂಡಗಳಿಗೆ ಅಭಿನಂದನೆಗಳು.