Categories
ಚಿಕ್ಕಮಗಳೂರು ಮಲ್ನಾಡ್ ಶೃಂಗೇರಿ

ರಾಜೇಗೌಡ ಮತ್ತೆ ಶೃಂಗೇರಿ ಶಾಸಕ!

ರಾಜೇಗೌಡ ಮತ್ತೆ ಶೃಂಗೇರಿ ಶಾಸಕ!
– ರಾಜೇಗೌಡಗೆ ಸುಪ್ರೀಂ‌ನಿಂದ ಸಮ್ಮತಿ
– ರಾಜೇಗೌಡರನ್ನೇ ಶಾಸಕ ಸ್ಥಾನದಲ್ಲಿ ಮುಂದುವರಿಸಲು ಸೂಚನೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶೃಂಗೇರಿ: ಶೃಂಗೇರಿ ಅಂಚೆ ಮತ ವಿವಾದ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ಟಿ.ಡಿ.ರಾಜೇಗೌಡರಿಗೆ ‘ಸುಪ್ರೀಂ’ ರಿಲೀಫ್ ನೀಡಿದ್ದು , ಮತ್ತೆ ಶಾಸಕ ಸ್ಥಾನ ಸಿಕ್ಕಿದೆ. ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಿಂದ ಶಾಸಕ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರಿಗೆ ಸುಪ್ರಿಂ ಕೋರ್ಟ್‌ ಬಿಗ್‌ ರಿಲೀಫ್‌ ನೀಡಿದ್ದು, ಹೈಕೋರ್ಟ್‌ನ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಶಾಸಕ ಸ್ಥಾನವನ್ನು ಮುಂದುವರೆಸುವಂತೆ ಆದೇಶಿಸಿ, ಚುನಾವಣಾ ಆಯೋಗಕ್ಕೆ ನೋಟೀಸ್‌ ನೀಡಿ ವಿಚಾರಣೆಯನ್ನು ಮೇ.21 ಕ್ಕೆ ಮುಂದೂಡಿದೆ.

ಅಂಚೆ ಮತಗಳ ಮರು ಎಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜೇಗೌಡರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್‌ ನ್ಯಾಯಪೀಠ ಚುನಾವಣಾ ಆಯೋಗಕ್ಕೆ ಮತ ಎಣಿಕೆಯ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದೆ. ಪ್ರಸ್ತುತ ಹಿಂದಿನ ಚುನಾವಣಾ ಆಯೋಗದ ಆದೇಶದಂತೆ ರಾಜೇಗೌಡ ಅವರು ಶೃಂಗೇರಿ ಕ್ಷೇತ್ರದ ಶಾಸಕರಾಗಿ ಮುಂದುವರೆಯಲಿದ್ದಾರೆ. ಈ ನಡುವೆ ಕರ್ನಾಟಕ ಹೈಕೋರ್ಟ್‌ ನೀಡಿದ ಆದೇಶಕ್ಕೂ ಕೂಡ ತಡೆ ನೀಡಲಾಗಿದೆ.

ಕಳೆದ ಒಂದು ವಾರದಿಂದ ಈ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಬಿಜೆಪಿಯ ಜೀವರಾಜ್‌ ಅವರು ಅಂಚೆ ಮತಗಳ ಎಣಿಕೆಯಲ್ಲಿ ಲೋಪವಿಧೆಯೆಂದು ಪ್ರಶ್ನಿಸಿ ನ್ಯಾಯಾಲಯದ ಮೊರೆಹೋಗಿದರು. ಮರು ಎಣಿಕೆಗೆ ನ್ಯಾಯಾಲಯ ಆದೇಶ ನೀಡಿತ್ತು. ಮರು ಎಣಿಕೆ ಸಂದರ್ಭದಲ್ಲಿ ಜೀವರಾಜ್‌ ಅವರ ಕೈ ಮೇಲಾಗಿ ಆಯೋಗ ಜೀವರಾಜ್‌ ಅವರನ್ನು ಶಾಸಕ ಎಂದು ಘೋಷಿಸಿ ದೃಢೀಕರಣ ಪತ್ರ ನೀಡಿತ್ತು.

ಕಳೆದ 4 ದಿನಗಳ ಹಿಂದಷ್ಟೆ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಅಂಚೆ ಮತಗಳ ಮರು ಎಣಿಕೆಯಲ್ಲಿ ಲೋಪವನ್ನು ಪ್ರಶ್ನಿಸಿ ಟಿ.ಡಿ.ರಾಜೇಗೌಡ ಅವರು ಸುಪ್ರಿಂ ಕೋರ್ಟ್‌ ಮೊರೆ ಹೋಗಿದ್ದರು. ಇಂದು ನ್ಯಾಯಾಲಯ ತಡೆ ನೀಡಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದ ಪರಿಣಾಮ ರಾಜೇಗೌಡರ ಶಾಸಕಗಿರಿ ಮರುಕಳಿಸಿದಂತಾಗಿದೆ.

Categories
ಚಿಕ್ಕಮಗಳೂರು ಮಲ್ನಾಡ್

ಕೋಳಿ ಗೂಡಿನಲ್ಲಿ 3 ನಾಗರ ಹಾವು ಪ್ರತ್ಯಕ್ಷ!

ಕೋಳಿ ಗೂಡಿನಲ್ಲಿ 3 ನಾಗರ ಹಾವು ಪ್ರತ್ಯಕ್ಷ!
– ಚಿಕ್ಕಮಗಳೂರು ತಾಲೂಕಿನ ಬಿದರೆ ಗ್ರಾಮದಲ್ಲಿ ಘಟನೆ
– ಬಸ್ ಸ್ಟ್ಯಾಂಡಲ್ಲಿ ನುಗ್ಗಿದ ಬಸ್!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಕೋಳಿ ಗೂಡಿನಲ್ಲಿ 3 ನಾಗರ ಹಾವು ಪ್ರತ್ಯಕ್ಷವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಿದರೆ ಗ್ರಾಮದಲ್ಲಿ ಘಟನೆ ನಡೆದಿದ್ದು ಎಲ್ಲರಲ್ಲೂ ಆತಂಕ ಸೃಷ್ಟಿ ಮಾಡಿದೆ. ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲೂಕು ಖಂಡ್ಯ ಹೋಬಳಿ ಬಿದರೆ ಗ್ರಾಮದ ನಿವಾಸಿಗಳಾದ ರಾಮೇಗೌಡ ದೇವರಾಜೇಗೌಡ ಸುಗ್ಗಿಮಕ್ಕಿ ನಾಗರತ್ನ ಕೆರೆಮನೆ ಮನೇಲಿ ಬಿರು ಬಿಸಿಲಿನಲ್ಲಿ ಕೋಳಿ ಗೂಡಿಗೆ ನುಗ್ಗಿ ಕೋಳಿ ಮೊಟ್ಟೆಗಳನ್ನ ನುಂಗಿ ಹೊರ ಬಂದಿದೆ.

ಈ ಸಂದರ್ಭದಲ್ಲಿ ಊರಿನ ಸ್ಥಳೀಯ ನಿವಾಸಿ ಶಶಿ ಬಿದರೆ ರೋಹಿತ್ ತಕ್ಷಣ ಬಾಳೆಹೊನ್ನೂರಿನ ಉರಗ ತಜ್ಞನಿಗೆ ಆಲ್ಬರ್ಟ್ ಗೆ ಕರೆ ಮಾಡಿ ಬಂದು ಅವುಗಳನ್ನ ರಕ್ಷಣೆ ಮಾಡಿ ಡಬ್ಬಕ್ಕೆ ಹಾಕಿ ಎಲೆಕಲ್ಲು ಸಮೀಪ ಕಾಡಿಗೆ ಬಿಟ್ಟಿದ್ದಾರೆ. ಒಂದೇ ದಿನ 3 ನಾಗರ ಹಾವುನ್ನು ಕಂಡು ವಿಚಿತ್ರ ಘಟನೆ ಎಂದು ಬಿದರೆ ಶಾಕ್ ಆಗಿದ್ದಾರೆ. ಈ ಹಾವುಗಳನ್ನು ಬಿದರೆ ಊರಿನ ಜನ ನೋಡಲು ನಾ ಮುಂದು ತಾ ಮುಂದು ಎಂದು ಬಂದು ವೀಕ್ಷಿಸಿದರು.

ಬಸ್ ಸ್ಟಾಂಡಲ್ಲಿ ನುಗ್ಗಿದ ಬಸ್!

ಚಿಕ್ಕಮಗಳೂರು: ಚಿಕ್ಕಮಗಳೂರಿನ ಕೆಎಸ್ಆರ್ಟಿಸಿ ಬಸ್ಸ್ ನಿಲ್ದಾಣದಲ್ಲಿ ರಾತ್ರಿ ಸಮಯದಲ್ಲಿ ಪ್ರಯಾಣಿಕರನ್ನು ಇಳಿಸಿದ ನಂತರ ಬಸ್ಸ್ ನಿಲುಗಡೆ ಮಾಡಲು ಹೋದ ಸಂದರ್ಭದಲ್ಲಿ ಕಡೂರು ಚಿಕ್ಕಮಗಳೂರು ನಾನ್ ಸ್ಟಾಪ್ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಕಲಾಮಂದಿರದ ಕಾಂಪೌಂಡಿಗೆ ನುಗ್ಗಿದೆ. ಬ್ರೇಕ್ ಫೇಲ್ ಆದ ಕಾರಣ ಬಸ್ಸು ನಿಯಂತ್ರಣ ತಪ್ಪಿದೆ ಎಂದು ಚಾಲಕ ಹೇಳಿದ್ದು, ಅಹಿತಕರ ಘಟನೆಗಳು ನಡೆದಿರುವುದಿಲ್ಲ. ಇನ್ನೊಂದು ಮುಖ್ಯ ಸಂಗತಿ ಎಂದರೆ ರಾತ್ರಿಯಲ್ಲಿ ಹಾಲ್ಟಿಂಗ್ ಮಾಡಲು ಬರುವ ಬಸ್ಸುಗಳಲ್ಲಿ ಕೆಲ ಡೈವರ್, ಕಂಡಕ್ಟರ್ ಗಳು ಈ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುತ್ತಾರೆ. ಸದ್ಯ ಘಟನೆ ನಡೆದ ಸಮಯದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಅನಾಹುತಗಳು ಸಂಭವಿಸಿಲ್ಲ.

Categories
ಚಾಮರಾಜನಗರ ರಾಜ್ಯ

ದೇವಸ್ಥಾನಕ್ಕೆ ಹೋಗಿದ್ದ ಬಾಲಕನ ತಿಂದ ಚಿರತೆ!

ದೇವಸ್ಥಾನಕ್ಕೆ ಹೋಗಿದ್ದ ಬಾಲಕನ ತಿಂದ ಚಿರತೆ!
– ಚಾಮರಾಜ ನಗರದಲ್ಲಿ ಮನಕಲಕುವ ದುರಂತ
– ರಾಜ್ಯದಲ್ಲಿ ಕಾಡು ಆನೆ ಆಯ್ತು, ಈಗ ಚಿರತೆ ಕಾಟ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಾಮರಾಜನಗರ: ಚಾಮರಾಜನ ಗರದಲ್ಲಿ ಮನಕಲಕುವ ದುರಂತ ನಡೆದಿದ್ದು, ಮಲೆ ಮಾದೇಶ್ವರ ಬೆಟ್ಟದ ಸಮೀಪ ಚಿರತೆ ದಾಳಿಗೆ 10 ವರ್ಷದ ಬಾಲಕ ಬಲಿಯಾಗಿದ್ದಾನೆ. ಭಕ್ತಿ ಭಾವದಿಂದ ದೇವರ ದರ್ಶನಕ್ಕೆ ತೆರಳಿದ್ದ ಕುಟುಂಬದ ಸಂತಸದ ಕ್ಷಣವೇ ಕ್ಷಣಾರ್ಧದಲ್ಲಿ ಶೋಕ ಸಾಗರವಾಗಿ ಮಾರ್ಪಟ್ಟಿರುವ ಮನ ಕಲಕುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದ 10 ವರ್ಷದ ಬಾಲಕನೊಬ್ಬ ಚಿರತೆ ದಾಳಿಗೆ ಬಲಿಯಾಗಿದ್ದು, ಈ ದುರ್ಘಟನೆ ರಾಜ್ಯಾದ್ಯಂತ ಆತಂಕ ಮತ್ತು ದುಃಖಕ್ಕೆ ಕಾರಣವಾಗಿದೆ. ಮೃತ ಬಾಲಕನನ್ನು ಬೆಂಗಳೂರಿನ ನಿವಾಸಿ ಸುರೇಶ್ ಅವರ ಪುತ್ರ ಹರ್ಷಿತ್ (10) ಎಂದು ಗುರುತಿಸಲಾಗಿದೆ.

ದೇವರ ದರ್ಶನದ ಬಳಿಕ ಸಂಭವಿಸಿದ ದುರಂತ!

ಕುಟುಂಬದವರು ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಾಗಮಲೆ ಕಡೆಗೆ ತೆರಳುತ್ತಿದ್ದರು. ಮುಂಜಾನೆ ಸುಮಾರು 6 ಗಂಟೆಯ ವೇಳೆಗೆ ಇಂಡಿಗನತ್ತ ಅರಣ್ಯ ಪ್ರದೇಶದ ಬಳಿ ಸಾಗುತ್ತಿದ್ದಾಗ, ಅರಣ್ಯದೊಳಗಿಂದ ಏಕಾಏಕಿ ಹೊರಬಂದ ಚಿರತೆ ಬಾಲಕನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.
ಕುಟುಂಬದವರು ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ ಚಿರತೆ ಬಾಲಕನನ್ನು ಎಳೆದುಕೊಂಡು ಅರಣ್ಯದೊಳಗೆ ಕೊಂಡೊಯ್ದಿದೆ. ಬಾಲಕನನ್ನು ರಕ್ಷಿಸಲು ಕುಟುಂಬದವರು ಕಿರುಚಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಅರಣ್ಯ ಪ್ರದೇಶದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಕಣ್ಣೆದುರೇ ಮಗುವನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಸ್ಥಳದಲ್ಲಿದ್ದವರ ಮನಕಲಕುವಂತಿತ್ತು. ದೇವರ ದರ್ಶನಕ್ಕಾಗಿ ಬಂದಿದ್ದ ಕುಟುಂಬಕ್ಕೆ ಎದುರಾದ ಈ ದುರಂತ ಕಂಡು ಭಕ್ತರು ಹಾಗೂ ಸ್ಥಳೀಯರು ತೀವ್ರ ದುಃಖ ವ್ಯಕ್ತಪಡಿಸಿದರು.

ಎಚ್ಚರಿಕೆ ಸೂಚನೆ

ರಾಜ್ಯದ ಹಲವು ಭಾಗದಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಅರಣ್ಯ ಪ್ರದೇಶಗಳಲ್ಲಿ ಸಂಚರಿಸುವ ವೇಳೆ ಮಕ್ಕಳನ್ನು ಒಂಟಿಯಾಗಿ ಬಿಡಬಾರದು, ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಜೊತೆಗೆ ಅರಣ್ಯ ಅಂಚಿನ ಗ್ರಾಮಗಳಲ್ಲಿ ಗಸ್ತು ಬಲಪಡಿಸುವುದು, ಎಚ್ಚರಿಕೆ ಫಲಕ ಅಳವಡಿಸುವುದು ಹಾಗೂ ತ್ವರಿತ ಪ್ರತಿಕ್ರಿಯಾ ತಂಡಗಳನ್ನು ರಚಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Categories
ಕರಾವಳಿ ರಾಜ್ಯ ಹವಾಮಾನ ಸುದ್ದಿ

ರಾಜ್ಯಾದ್ಯಂತ 5 ದಿನ ಬಿರುಗಾಳಿ ಮಳೆ!

ರಾಜ್ಯಾದ್ಯಂತ 5 ದಿನ ಬಿರುಗಾಳಿ ಮಳೆ!
– ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ
– ಎಲ್ಲೆಲ್ಲಿ ಎಷ್ಟು ಮಳೆ? ಜನರಿಗೆ ಎಚ್ಚರಿಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದಲ್ಲಿ ಮುಂದಿನ 5 ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಗುಡುಗು-ಮಿಂಚಿನ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣ, ಮೇ 14 ರಿಂದ ಮಳೆಯ ಸಿಂಚನ ಆಗಲಿದೆ. ಇಂದಿನಿಂದ ಮುಂದಿನ ಐದು ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಎಚ್ಚರಿಕೆ ರವಾನಿಸಿದೆ.

ಹವಾಮಾನ ತಜ್ಞರ ಪ್ರಕಾರ, ಈ ಸುಳಿಗಾಳಿಯ ಪ್ರಭಾವದಿಂದಾಗಿ ಮುಂದಿನ 48 ಗಂಟೆಗಳಲ್ಲಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಲಘು ವಾಯುಭಾರ ಕುಸಿತ ಉಂಟಾಗುವ ನಿರೀಕ್ಷೆಯಿದೆ. ಈ ವ್ಯವಸ್ಥೆಯು ತೇವಾಂಶ ಭರಿತ ಮಾರುತಗಳನ್ನು ಭೂಭಾಗದತ್ತ ತಳ್ಳುವುದರಿಂದ, ಕರ್ನಾಟಕದ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಹವಾಮಾನ ಸಂಪೂರ್ಣವಾಗಿ ಬದಲಾಗಲಿದ್ದು, 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.

ಕರಾವಳಿ ಹಾಗೂ ದಕ್ಷಿಣ ಒಳನಾಡು: ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇ 14ರವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಇದೇ ಅವಧಿಯಲ್ಲಿ ದಕ್ಷಿಣ ಒಳನಾಡಿನ ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿಯೂ ನಿರಂತರವಾಗಿ ಗುಡುಗು ಸಹಿತ ಮಳೆಯಾಗಲಿದ್ದು, ತಾಪಮಾನದಲ್ಲಿ ಗಣನೀಯ ಇಳಿಕೆ ಕಂಡುಬರಲಿದೆ.

ಉತ್ತರ ಒಳನಾಡು: ಉತ್ತರ ಒಳನಾಡಿನ ಪ್ರಮುಖ ಜಿಲ್ಲೆಗಳಾದ ಹಾವೇರಿ, ಗದಗ, ಧಾರವಾಡ ಮತ್ತು ಬೆಳಗಾವಿ ಭಾಗಗಳಲ್ಲಿ ಹವಾಮಾನ ವೈಪರೀತ್ಯದ ಪ್ರಭಾವ ಹೆಚ್ಚಿರಲಿದ್ದು, ಪ್ರತಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸುವ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಇದರ ಜೊತೆಗೆ, ಮೇ 14 ರಂದು ಕಲಬುರಗಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ಹಾಗೂ ಸುತ್ತಮುತ್ತ: ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಿರಲಿದೆ. ಆರಂಭಿಕ ದಿನಗಳಲ್ಲಿ ಈ ಭಾಗಗಳಲ್ಲಿ ಬಹುತೇಕ ಮೋಡಕವಿದ ವಾತಾವರಣ ಮುಂದುವರೆಯಲಿದ್ದು, ಮೇ 14 ರಿಂದ ಸಾಧಾರಣ ಮಳೆಯ ಸಿಂಚನವಾಗುವ ನಿರೀಕ್ಷೆಯಿದೆ.

Categories
ರಾಜಕೀಯ ರಾಜ್ಯ

ಸಿನಿಮಾ ಸ್ಟೈಲಲ್ಲೇ ಸಿಎಂ ಆದ ವಿಜಯ್!

ಸಿನಿಮಾ ಸ್ಟೈಲಲ್ಲೇ ಸಿಎಂ ಆದ ವಿಜಯ್!
– ಪ್ರಮಾಣ ವಚನ: ತಮಿಳುನಾಡಲ್ಲಿ ಹೊಸ ಯುಗ
– ಕೊಟ್ಟ ಭರವಸೆ ಈಡೇರಿಸುವುದೇ ದೊಡ್ಡ ಸವಾಲು
– ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಿಂಚಿದ ತ್ರಿಷಾ!

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ನಟ, ಟಿವಿಕೆ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಕೀಯ ‘ವಿಜಯ’ದ ಹಾದಿಯಲ್ಲಿರುವ ವಿಜಯ್ ಅವರು ನಟನಾಗಿದ್ದುಕೊಂಡು ಸಿನಿಮಾ ಬಿಟ್ಟು ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲಿ ಹೊಸ ಸಂಚಲನ ಉಂಟು ಮಾಡಿದೆ. ಗವರ್ನರ್ ವಿಜಯ್ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ವಿಜಯ್ ಜತೆ 9 ಮಂದಿ ಸಚಿವರಾಗಿ ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ವಿಜಯ್ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಅವರ ತಂದೆ ಹಾಗೂ ತಾಯಿ ಅವರು ಕೈಮುಗಿದುಕೊಂಡು ತಲ್ಲೀನರಾಗಿ ಮಗನ ನೋಡಿದ್ದಾರೆ. ಎಲ್ಲೆಲ್ಲೂ ಚಪ್ಪಾಳೆ, ಶಿಳ್ಳೆ, ಕುಣಿತ ಕಂಡು ಬಂದಿತ್ತು. ಇಡೀ ತಮಿಳುನಾಡಲ್ಲಿ ಹಬ್ಬದ ವಾತಾವರಣ ಕಂಡು ಬಂದಿತ್ತು. ಸೋಷಿಯಲ್ ಮೀಡಿಯಾದಲ್ಲಿ ಅವರ ಪ್ರಮಾಣ ವಚನ ಡೈಲಾಗ್ ರಾರಾಜಿಸುತ್ತಿದೆ. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನಟಿ, ಗೆಳತಿ ತ್ರಿಷಾ ಸಕತ್ ಮಿಂಚಿದ್ದಾರೆ.

ವಿಜಯ್‌ಗೆ ‘ಭರವಸೆ’ಗಳೇ ಸವಾಲು!?

ಚುನಾವಣೆ ಭರವಸೆ ಈಡೇರಿಸುವ ಸವಾಲು ವಿಜಯ್ ಮುಂದೆ ಇರಲಿದೆ. ಮನೆ ಯಜಮಾನಿಗೆ ಮಾಸಿಕ 2,500 ರೂ, ಪ್ರತಿ ಕುಟುಂಬಕ್ಕೆ ವಾರ್ಷಿಕ 6 ಉಚಿತ ಸಿಲಿಂಡರ್, ಬಡ ಹೆಣ್ಮಗಳ ಮದುವೆಗೆ 8 ಗ್ರಾಂ ಚಿನ್ನ, ರೇಷ್ಮೆ ಸೀರೆ, ಮಹಿಳಾ ಸಂಘಗಳಿಗೆ ₹5 ಲಕ್ಷ ಬಡ್ಡಿ ರಹಿತ ಸಾಲ, ಸಾರಿಗೆ ಬಸ್ಗಳಲ್ಲಿ ಸ್ತ್ರೀಯರಿಗೆ ಉಚಿತ ಪ್ರಯಾಣ, ನವಜಾತ ಶಿಶುಗೆ ಚಿನ್ನದ ಉಂಗುರ, ವೆಲ್ಕಮ್ ಕಿಟ್, ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಪ್ರತಿ ಮನೆಗೆ ಉಚಿತ ಕುಡಿಯುವ ನೀರು, ರೈತರ ಸಾಲ ಶೇಕಡಾ 50ರಷ್ಟು ಮನ್ನಾ, ನಿರುದ್ಯೋಗಿ ಪದವೀಧರರಿಗೆ ಧನಸಹಾಯ, 2 ಸಾವಿರದಿಂದ 4 ಸಾವಿರ ರೂ. ಸಹಾಯಧನ, 5 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ, ವೃದ್ಧರಿಗೆ, ವಿಶೇಷ ಚೇತನರಿಗೆ ಮಾಸಿಕ ₹3,000 ಪಿಂಚಣಿ, ಪ್ರತೀ ಕುಟುಂಬಕ್ಕೆ 25 ಲಕ್ಷ ರೂ. ಉಚಿತ ಆರೋಗ್ಯ ವಿಮೆ ಘೋಷಣೆ ಮಾಡಿದ್ದಾರೆ.

29 ವರ್ಷಕ್ಕೆ ಮೊದಲ ಬಾರಿಗೆ ಗೆದ್ದು ಸಚಿವೆಯಾದ ಕೀರ್ತಿನಾ!

29ನೇ ವಯಸ್ಸಿನಲ್ಲಿ ಎಸ್ ಕೀರ್ತನಾ, ಸಿ ಜೋಸೆಫ್ ವಿಜಯ್ ನೇತೃತ್ವದ ಮೊದಲ ಸಚಿವ ಸಂಪುಟದ ಅತ್ಯಂತ ಕಿರಿಯ ಸಚಿವೆಯಾಗಿ ಗುರುತಿಸಿಕೊಂಡಿದ್ದಾರೆ. ರಾಜಕೀಯ ತಂತ್ರಜ್ಞೆಯಾಗಿದ್ದ ಕೀರ್ತನಾ, ಈಗ ಮೊದಲ ಬಾರಿಗೆ ಎಂ. ಎಲ್. ಎ ಆಗಿ ಗೆದ್ದು ನೇರವಾಗಿ ಸಚಿವ ಸ್ಥಾನಕ್ಕೇರಿರುವುದು ತಮಿಳುನಾಡು ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.ವಿರುದುನಗರ ಜಿಲ್ಲೆಯ ಶಿವಕಾಶಿ ಕ್ಷೇತ್ರದಿಂದ ಸ್ಪರ್ಧಿಸಿದ ಕೀರ್ತನಾ, ಕಾಂಗ್ರೆಸ್ ಅಭ್ಯರ್ಥಿ ಅಶೋಕನ್ ಜಿ ಅವರನ್ನು 11,670 ಮತಗಳ ಅಂತರದಿಂದ ಸೋಲಿಸಿ ಇತಿಹಾಸ ನಿರ್ಮಿಸಿದರು. ಶಿವಕಾಶಿಯಿಂದ ಆಯ್ಕೆಯಾದ ಮೊದಲ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಮಿಳು ನಾಡಲ್ಲಿ ಗೆದ್ದ ಮೂವರು ಕನ್ನಡಿಗರು!

ತಮಿಳುನಾಡಿನ ಚುನಾವಣೆಯಲ್ಲಿ ಮೂವರು ಕನ್ನಡಿಗರು ಆಯ್ಕೆ ಆಗಿದ್ದಾರೆ. ಥಳಿ ಕ್ಷೇತ್ರದಿಂದ ರಾಮಚಂದ್ರ, ವೇಪನಹಳ್ಳಿ ಇಂದ ಶ್ರೀನಿವಾಸ್, ಮೆಟ್ಟುಪಾಳ್ಯಂ ನಿಂದ ಸುನಿಲ್ ಆನಂದ್.ಮೂವರು ಕನ್ನಡಿಗರಿಗೆ ಅಭಿನಂದನೆಗಳು.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಆಗುಂಬೆ ಬಳಿ ಕೋಳಿ ಫಾರ್ಮ್ ನುಗ್ಗಿದ ಚಿರತೆ!

ಆಗುಂಬೆ ಬಳಿ ಕೋಳಿ ಫಾರ್ಮ್ ನುಗ್ಗಿದ ಚಿರತೆ!
– ಕೋಳಿಯೊಂದನ್ನು ಹೊತ್ತೋಯ್ದ ದೃಶ್ಯ ಎಲ್ಲೆಡೆ ವೈರಲ್
– ಭದ್ರಾ ಅಚ್ಚುಕಟ್ಟಿನ ಪ್ರದೇಶದಲ್ಲಿ ಆನೆ ಹಿಂಡು ಪ್ರತ್ಯಕ್ಷ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಲ್ಲಿ ಚಿರತೆ ಹೆಚ್ಚಾಗಿವೆ. ದಿನದಿಂದ ದಿನಕ್ಕೆ ಚಿರತೆ ಕಾಟ ಹೆಚ್ಚುತ್ತಿದ್ದೂ, ಆಗುಂಬೆ ಸಮೀಪ ಗುಡ್ಡೆಕೇರಿ ಹಸಿರುಮನೆ ಎಂಬಲ್ಲಿ ಕೋಳಿ ಫಾರ್ಮ್ ನುಗ್ಗಿದ ಚಿರತೆ ಕೋಳಿಯೊಂದನ್ನು ಹೊತ್ತೋಯ್ದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಆಗುಂಬೆ ಭಾಗದಲ್ಲೂ ಚಿರತೆ ಕಾಟ ಹೆಚ್ಚಾಗಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ತೀರ್ಥಹಳ್ಳಿ ತಾಲೂಕಿನ ಹೊದಲ, ಮೇಲಿನ ಕುರುವಳ್ಳಿ ಭಾಗದಲ್ಲಿ ಚಿರತೆ ಇತ್ತೀಚಿಗೆ ಕಂಡು ಬಂದಿದ್ದವು.
ಮಂಡಗದ್ದೆ ಸಕ್ರೆಬೈಲ್ ಬಳಿ ಶುಕ್ರವಾರ ಚಿರತೆ ಬೈಕಿಗೆ ಡಿಕ್ಕಿ ಹೊಡೆದು ಸಾವನ್ನು ಕಂಡಿತ್ತು. ಇದೀಗ ಆಗುಂಬೆ ಭಾಗದಲ್ಲೂ ಚಿರತೆ ಕಾಟ ಹೆಚ್ಚಿದೆ.

ಭದ್ರಾ ಅಚ್ಚುಕಟ್ಟಿನ ಪ್ರದೇಶದಲ್ಲಿ ಆನೆ ಹಿಂಡು ಪ್ರತ್ಯಕ್ಷ!

ಎನ್. ಆರ್. ಪುರದ ಭದ್ರಾ ಹಿನ್ನಿರು ಪ್ರದೇಶದಲ್ಲಿ ಕಾಡು ಆನೆಗಳ ಹಿಂಡು ಕಂಡು ಬಂದಿದೆ. ಇತ್ತೀಚಿಗೆ ಈ ಭಾಗದಲ್ಲಿ ಕಾಡು ಆನೆ ಹಿಂಡು ಕಂಡು ಬಂದಿದ್ದು ಆತಂಕ ಸೃಷ್ಟಿ ಮಾಡಿದೆ.

Categories
ಮಾಹಿತಿ ಸುದ್ದಿ ರಾಜ್ಯ

ಸಿಲಿಂಡರ್ 50 ರೂ., ಪೆಟ್ರೋಲ್-ಡೀಸೆಲ್ 7 ರೂಪಾಯಿ ಏರಿಕೆ!?

ಸಿಲಿಂಡರ್ 50 ರೂ., ಪೆಟ್ರೋಲ್-ಡೀಸೆಲ್ 7 ರೂಪಾಯಿ ಏರಿಕೆ!?
– ಅಗತ್ಯ ವಸ್ತು ಬೆಲೆ ಗಗನಕ್ಕೆ: ಈಗ ಇಂಧನ ದುಬಾರಿ ಸಾಧ್ಯತೆ
– ಬಡವರ ಜೀವನ ಇನ್ನು ಕಷ್ಟ ಕಷ್ಟ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ದೇಶದಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಬರಸಿಡಿಲಿನಂತಹ ಸುದ್ದಿ ಎದುರಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ತೈಲ ಮಾರುಕಟ್ಟೆ ಕಂಪನಿಗಳು ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಸುಮಾರು 50 ರೂಪಾಯಿಗಳಷ್ಟು ಹೆಚ್ಚಿಸಲು ಚಿಂತನೆ ನಡೆಸುತ್ತಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಸಬ್ಸಿಡಿ ರಹಿತ ಸಿಲಿಂಡರ್ ದರ ಮತ್ತು ಅಂತರಾಷ್ಟ್ರೀಯ ದರಗಳ ನಡುವಿನ ವ್ಯತ್ಯಾಸವನ್ನು ಸರಿದೂಗಿಸಲು ಈ ಕ್ರಮ ಅನಿವಾರ್ಯ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ದರ ಏರಿಕೆ ಜಾರಿಗೆ ಬಂದಲ್ಲಿ, ಸಾಮಾನ್ಯ ಕುಟುಂಬಗಳ ಅಡುಗೆ ಮನೆಯ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ.

ಇಂಧನ ದರದಲ್ಲೂ ಭಾರೀ ಏರಿಕೆ ಸಾಧ್ಯತೆ

ಬರೀ ಅಡುಗೆ ಅನಿಲ ಮಾತ್ರವಲ್ಲದೆ, ವಾಹನ ಸವಾರರಿಗೂ ತೈಲ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿ ಲೀಟರ್‌ಗೆ 5 ರಿಂದ 7 ರೂಪಾಯಿಗಳವರೆಗೆ ಏರಿಕೆಯಾಗಬಹುದು ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಏರಿಕೆ ಕಂಡಿರುವುದು ಮತ್ತು ರೂಪಾಯಿ ಮೌಲ್ಯದಲ್ಲಿನ ಏರಿಳಿತಗಳು ಈ ಬದಲಾವಣೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇಂಧನ ದರ ಏರಿಕೆಯು ಕೇವಲ ವಾಹನ ಸವಾರರಿಗೆ ಮಾತ್ರವಲ್ಲದೆ, ಸರಕು ಸಾಗಣೆ ವೆಚ್ಚದ ಮೇಲೆಯೂ ನೇರ ಪ್ರಭಾವ ಬೀರುತ್ತದೆ.

ಲಾರಿ ಮತ್ತು ಟೆಂಪೋಗಳ ಬಾಡಿಗೆ ದರ ಹೆಚ್ಚಾಗುವುದರಿಂದ ಮಾರುಕಟ್ಟೆಗೆ ಬರುವ ತರಕಾರಿ, ಹಣ್ಣು ಮತ್ತು ದಿನಸಿ ಸಾಮಗ್ರಿಗಳ ಬೆಲೆಯೂ ಸಹಜವಾಗಿಯೇ ಗಗನಕ್ಕೇರಲಿದೆ. ಇದು ಪರೋಕ್ಷವಾಗಿ ಎಲ್ಲ ವರ್ಗದ ಜನರ ಮೇಲೆಯೂ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅಸ್ಥಿರತೆ ಮತ್ತು ಪೂರೈಕೆ ವ್ಯವಸ್ಥೆಯಲ್ಲಿನ ಅಡಚಣೆಗಳಿಂದಾಗಿ ತೈಲ ಕಂಪನಿಗಳು ಈ ನಿರ್ಧಾರಕ್ಕೆ ಬರುತ್ತಿವೆ. ಇದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಿದೆ.

Categories
ಬೆಂಗಳೂರು ರಾಜ್ಯ

ಬಿಟ್‌ಕಾಯಿನ್ ಹಗರಣ: ಶ್ರೀಕಿ ಸೇರಿ ಮೂವರು ಅರೆಸ್ಟ್!

ಬಿಟ್‌ಕಾಯಿನ್ ಹಗರಣ: ಶ್ರೀಕಿ ಸೇರಿ ಮೂವರು ಅರೆಸ್ಟ್!
– ಇಡಿ ತನಿಖೆಗೆ ಹೊಸ ತಿರುವು: ಬಿಟ್ ಕಾಯಿನ್ ದಂಧೆ ಬಯಲು
– ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ: ಒಂದಷ್ಟು ಮಂದಿ ಬಲೆಗೆ?!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು : ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ, ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗಡೆ ಎಂಬ ಮೂವರು ಇಡಿ ಬಲೆಗೆ ಬಿದ್ದಿದ್ದಾರೆ.

ಏನಿದು ಆರೋಪ?: ಬಿಟ್‌ಕಾಯಿನ್ ವಿನಿಮಯ ಕೇಂದ್ರಗಳನ್ನು ಹ್ಯಾಕ್ ಮಾಡಿ ಭಾರಿ ಪ್ರಮಾಣದ ಡಿಜಿಟಲ್ ಹಣ ಲೂಟಿ ಮಾಡಿದ ಆರೋಪ ಇವರ ಮೇಲಿದೆ. ಅಷ್ಟೇ ಅಲ್ಲ, ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಅನ್ನು ಹ್ಯಾಕ್ ಮಾಡಿ ಅಕ್ರಮ ಹಣ ವರ್ಗಾವಣೆ ನಡೆಸಿದ ಗಂಭೀರ ಆರೋಪವೂ ಮುಖ್ಯ ಆರೋಪಿ ಶ್ರೀಕಿ ಮತ್ತು ಆತನ ತಂಡದ ಮೇಲಿದೆ. ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗಡೆ, ಕಳ್ಳತನದ ಬಿಟ್‌ಕಾಯಿನ್‌ಗಳನ್ನು ನಗದೀಕರಿಸುವ ಕಾರ್ಯದಲ್ಲಿ ನೆರವಾಗುತ್ತಿದ್ದರು ಎಂಬ ಬಲವಾದ ಶಂಕೆ ತನಿಖಾಧಿಕಾರಿಗಳಿಗೆ ಇದೆ. ಅಕ್ರಮ ಗಳಿಕೆಯನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಾಗಿದ್ದು, ಆ ಮೂಲಗಳ ಪತ್ತೆಗೆ ಇಡಿ ತನಿಖೆ ಮುಂದುವರಿದಿದೆ. ಈ ಹಿಂದೆ ಸಿಸಿಬಿ (ಸೆಂಟ್ರಲ್ ಕ್ರೈಂ ಬ್ರಾಂಚ್) ಪೊಲೀಸರು ನಡೆಸಿದ್ದ ತನಿಖೆಯ ಆಧಾರದ ಮೇಲೆ ಇಡಿ ತನ್ನ ಕಾರ್ಯಾಚರಣೆಯನ್ನು ವ್ಯಾಪಕವಾಗಿ ವಿಸ್ತರಿಸಿತ್ತು. ಕಳೆದ ಕೆಲವು ವರ್ಷಗಳಿಂದ ಜಾಡು ಹಿಡಿದಿದ್ದ ಅಧಿಕಾರಿಗಳು ಇದೀಗ ನಿರ್ಣಾಯಕ ಹೆಜ್ಜೆ ಇಟ್ಟಿದ್ದಾರೆ.

ತೀವ್ರ ವಿಚಾರಣೆ ಆರಂಭ: ಬಂಧಿತ ಮೂವರನ್ನು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಹಗರಣದ ಹಿಂದೆ ಇರುವ ಪ್ರಭಾವಿ ವ್ಯಕ್ತಿಗಳ ಪತ್ತೆ, ಲೂಟಿ ಹಣ ಯಾರ ಕೈ ಸೇರಿದೆ ಎಂಬ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಈ ಬಂಧನದಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಮಾಹಿತಿ ಹೊರಬರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

Categories
ಮಲ್ನಾಡ್ ರಾಜ್ಯ ಶಿವಮೊಗ್ಗ ಹೊಸನಗರ

ಸಮಸ್ಯೆಗೆ ದನಿ ಕೊಟ್ಟು ಗೆದ್ದ

ಸಮಸ್ಯೆಗೆ ದನಿ ಕೊಟ್ಟು ಗೆದ್ದ

ಹೊಸನಗರ ಹುಡುಗ ಪ್ರಭು ವಾರಂಬಳ್ಳಿ

– ನೆಟ್ವರ್ಕ್ ಹೋರಾಟದ ಮೂಲಕ ಮೋದಿಗೂ ಸವಾಲು
– ಮಲೆನಾಡ ಆಚರಣೆ, ಪದ್ಧತಿ, ಜನ ಜೀವನದ ಪರಿಚಯದ ಕೆಲಸ

ಎಲೆಮರೆಯ ಕಾಯಿಯಂತಿದ್ದರೂ, ಕನ್ನಡನಾಡಿಗೆ ತನ್ನದೇ ಆದ ಮಹತ್ವದ ಕೊಡುಗೆ ನೀಡಿದ ಸಾವಿರಾರು ಜನ ಇಂದು ನಮ್ಮೆದುರು ಮಾದರಿಯಾಗಿ ನಿಲ್ಲುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಪ್ರಭು ವಾರಂಬಳ್ಳಿ ಎನ್ನುವ ಯುವಕ ಕೂಡ ಒಬ್ಬರು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ವಾರಂಬಳ್ಳಿ ಎಂಬ ಪ್ರದೇಶದಲ್ಲಿ ಹುಟ್ಟಿ, ಬೆಳೆದು ಇದೀಗ ತಮ್ಮ ಊರಿನ ಅನೇಕ ಸೌಲಭ್ಯವನ್ನು ತನ್ಮ ದನಿ ಮೂಲಕವೇ ತರಿಸಿಕೊಂಡಾತ.

ಒಳ್ಳೆ ಲೇಖಕ ಕೂಡ ಹೌದು.

ಹೊಸನಗರ ತಾಲ್ಲೂಕಿನ ವಾರಂಬಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ 1996ರ ಆಗಸ್ಟ್ 12ರಂದು ನಾಗೇಶ್ ಪ್ರಭು ಮತ್ತು ಜಯಂತಿ ನಾಗೇಶ್ ಪ್ರಭು ಅವರ ಪುತ್ರರಾಗಿ ಜನಿಸಿದರು. ಸಹೋದರ ವೆಂಕಟೇಶ್ ಪ್ರಭು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಬಿಕಾಂ ಪದವೀಧರರಾದ ವಿನಾಯಕ ಅವರು ಬರವಣಿಗೆಯ ಆಸಕ್ತಿಯನ್ನೂ ಹೊಂದಿದ್ದಾರೆ. ಇವರ ಲೇಖನಗಳು ವಿಕ್ರಮ, ಕಾರಣಗಿರಿ ಕಲಾದರ್ಶನ ಸೇರಿದಂತೆ ಅನೇಕ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಮಲೆನಾಡ ಆಚರಣೆ ಬಗ್ಗೆ ವಿಶೇಷ ದನಿ

ಹೊಸನಗರ ತಾಲ್ಲೂಕಿನ ಇತಿಹಾಸವನ್ನು ಒಳಗೊಂಡ ‘ನಮ್ಮೂರ ಕಣಜ’ ಎನ್ನುವ ಹೊತ್ತಿಗೆಯಲ್ಲಿ ಇವರು ‘ತಾಲ್ಲೂಕಿನ ಸಾರಿಗೆ ವ್ಯವಸ್ಥೆ’ ಕುರಿತು ಲೇಖನವನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ ಯೂಟ್ಯೂಬ್, ಇನ್ಸ್ಟಾಗ್ರಾಂ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮಲೆನಾಡಿನ ದೈನಂದಿನ ಬದುಕಿನ ಛಾಯಾಚಿತ್ರ, ಮಲೆನಾಡಿನ ಆಚರಣೆ, ಸಂಪ್ರದಾಯ, ಪುರಾತನ ದೇವಾಲಯಗಳನ್ನು ಶೋಧಿಸಿ, ಅವುಗಳ ಕುರಿತು ವೀಡಿಯೋಗಳ ಮೂಲಕ ಜನರಿಗೆ ಮಾಹಿತಿ ನೀಡಿ ಹಲವಾರು ಚಂದಾದಾರರನ್ನು, ಅನುಯಾಯಿಗಳನ್ನು ಹೊಂದಿದ್ದಾರೆ.

ಪ್ರಧಾನಿ ಕಚೇರಿ ಮುಟ್ಟಿಸಿದ ನೆಟ್ವರ್ಕ್ ಬೇಕು ಹೋರಾಟ!

ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಿನಾಯಕ ಅವರ ಸಮಾಜಮುಖಿ ಚಟುವಟಿಕೆಗೆ ‘ನೆಟ್ವರ್ಕ್ ಬೇಕು’ ಹೋರಾಟ ಕೈಗನ್ನಡಿಯಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ನೆಟ್ವರ್ಕ್ ಸಂಬಂಧಿ ಹೋರಾಟ ಆರಂಭಗೊಂಡಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ವಾರಂಬಳ್ಳಿಯಲ್ಲಿ. ಅಂದರೆ ವಿನಾಯಕ ಪ್ರಭು ಅವರ ಹುಟ್ಟೂರಿನಲ್ಲಿ. 2017ರಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ನೆಟ್ವರ್ಕ್ ಸಮಸ್ಯೆ ಕುರಿತು ಪತ್ರ ಬರೆಯುವ ಮುಖಾಂತರ ತನ್ನೂರಿಗೆ ತನ್ನಿಂದ ಕಿಂಚಿತ್ತು ಸೇವೆ ಸಲ್ಲಿಕೆಯಾಗಬೇಕೆಂದು ಪಣತೊಟ್ಟರು.

ಕೂಡಲೆ ಅವರಿಗೆ ಸ್ಪಂದನೆ ದೊರಕಲಿಲ್ಲ. ಆದರೆ ವಿನಾಯಕ ಅವರು ಛಲಬಿಡದ ತ್ರಿವಿಕ್ರಮನಂತೆ ಸತತವಾಗಿ ಹದಿನಾಲ್ಕು ಬಾರಿ ಪ್ರಧಾನಿಗಳಿಗೆ ಹಾಗೂ ಅಂದಿನ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದರು. ಅಂತಿಮವಾಗಿ 2025ರಲ್ಲಿ ‘ನೆಟ್ಟಗಿಲ್ಲದ ನೆಟ್ವರ್ಕಿಗಾಗಿ ನಮ್ಮ ಹೋರಾಟ’ ಎಂಬ ಘೋಷಣೆಯೊಂದಿಗೆ ವಾರಂಬಳ್ಳಿಯಿಂದ ಹೊಸನಗರದವರೆಗೆ ಸ್ಥಳೀಯರೊಂದಿಗೆ ಪಾದಯಾತ್ರೆ ನಡೆಸುವ ಮೂಲಕ ತಮ್ಮ ಹಠ ಸಾಧಿಸಿ, ತಮ್ಮ ಊರಿಗೆ ನೆಟ್ವರ್ಕ್ ಕಲ್ಪಿಸಿಕೊಟ್ಟರು. ಈ ಹೋರಾಟದ ಕುರಿತು ಅನೇಕ ರಾಷ್ಟ್ರೀಯ ಸುದ್ಧಿ ವಾಹಿನಿಗಳು, ಇಂಗ್ಲಿಷ್ ಪತ್ರಿಕೆಗಳು, ರಾಜ್ಯದ ಪ್ರಮುಖ ಸುದ್ಧಿ ವಾಹಿನಿಗಳು ಸಂದರ್ಶನ ನಡೆಸಿದವು.

ತಮ್ಮ ಊರ ಜನರಿಗೆ ಕೈಯಲ್ಲಾದ ಸೇವೆ..!

ವಿನಾಯಕ ಅವರು ಊರಿಗೆ ರಸ್ತೆ ಬೇಕು ಎನ್ನುವ ಮತ್ತೊಂದು ಹೋರಾಟವನ್ನೂ ಸಹ ನಡೆಸಿದ್ದಾರೆ. ಕೋವಿಡ್ ಸಮಯದಲ್ಲಿ ಗ್ರಾಮ ಪಂಚಾಯಿತಿಗೆ ‘ಕರೋನಾ ಸೈನಿಕ’ ಎಂಬ ಹೆಸರಿನಲ್ಲಿ ಸ್ವಯಂ ಸೇವಕರಾಗಿ ಮಾತ್ರೆ ಔಷಧಿಗಳನ್ನು ಪ್ರತಿನಿತ್ಯ ಪಡೆಯುವ ಪರಿಸ್ಥಿತಿಯಲ್ಲಿರುವವರಿಗೆ ಅವುಗಳನ್ನು ತಲುಪಿಸುವುದು ಮತ್ತು ಅಸೌಖ್ಯಕ್ಕೆ ಒಳಗಾದವರಿಗೆ ಕೋವಿಡ್ ಬಾಧಿಸದಂತೆ ತುರ್ತು ಚಿಕಿತ್ಸೆ ಕೊಡಿಸಲು, ಆಸ್ಪತ್ರೆಗೆ ದಾಖಲಿಸುವುದು ಮೊದಲಾದ ಸೇವೆಗಳನ್ನು ಸಲ್ಲಿಸಿದರು.

ಇವುಗಳೊಂದಿಗೆ ಪರಿಚಯಸ್ಥ ದಾನಿಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಸಮವಸ್ತ್ರ ನೋಟ್ ಪುಸ್ತಕ ಬ್ಯಾಗ್ ವಿತರಣೆ, ಸ್ಥಳೀಯರ ಸಹಕಾರದಿಂದ ವಾರಂಬಳ್ಳಿಯ ಕಲ್ಯಾಣೇಶ್ವರ ದೇವಾಲಯದ ಜೀರ್ಣೋದ್ಧಾರ, ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆ, ದೇಶವನ್ನು ಕಾಯುವ ಯೋಧರಿಗೆ ದೇವಾಲಯದ ಪ್ರಸಾದ ಕಳುಹಿಸುವುದು ಇನ್ನೂ ಹತ್ತು ಹಲವು ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಏನೇ ಆಗಲಿ ಇಂತಹ ಸಮಾಜ ಪರ ಕಾಳಜಿ ಹೊಂದಿರುವ ಯುವ ಜನತೆಯೇ ದೇಶದ ಆಸ್ತಿ. ಸೋಷಿಯಲ್ ಮೀಡಿಯಾದಲ್ಲಿ prabhu vaaramballi ಎಂದು ಹುಡುಕಿ ಅವರಿಗೊಂದು ಥ್ಯಾಂಕ್ಸ್ ಹೇಳಿ.

Categories
ತೀರ್ಥಹಳ್ಳಿ ಮಲ್ನಾಡ್ ಶಿವಮೊಗ್ಗ

ಟಾಪ್ 3 ನ್ಯೂಸ್ ತೀರ್ಥಹಳ್ಳಿ

ಟಾಪ್ 3 ನ್ಯೂಸ್ ತೀರ್ಥಹಳ್ಳಿ

ಸಕ್ರೆಬೈಲ್ ಬಳಿ ಬೈಕಿಗೆ ಸಿಕ್ಕಿ ಚಿರತೆ ಸಾವು!
– ಬೈಕ್ ಸವಾರ ಗಂಭೀರ: ಕೇಸು ದಾಖಲು

ತೀರ್ಥಹಳ್ಳಿಯಲ್ಲಿ ಗೋ ಸಾಗಿಸುತ್ತಿದ್ದವರ ಮೇಲೆ ಹಲ್ಲೆ!
– ವಾಹನ ಸಮೇತ ಮೂವರ ತೀರ್ಥಹಳ್ಳಿ ಪೊಲೀಸರು ವಶಕ್ಕೆ: ಸಂಧಾನ?

ತೀರ್ಥಹಳ್ಳಿ, ತಳುವೆ, ಹಿಲಿಕೆರೆಯಲ್ಲಿ ಕಾರು ಆಕ್ಸಿಡೆಂಟ್!
– ತೀರ್ಥಹಳ್ಳಿ ತಾಲೂಕಲ್ಲಿ ಹೆಚ್ಚಿದ ಅಪಘಾತ: ಕಾರಣ ಏನು?

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಸಕ್ರೆಬೈಲ್ ಬಳಿ ಶುಕ್ರವಾರ ಮಧ್ಯಾಹ್ನ ಬೈಕ್ ಹಾಗೂ ಚಿರತೆ ನಡುವೆ ಸಂಭವಿಸಿದ ಅಪಘಾತದಲ್ಲಿ ಚಿರತೆಯೊಂದು ಸಾವನ್ನಪ್ಪಿದ್ದು ಬೈಕ್ ಸವಾರನನ್ನು ಮೆಗ್ಗನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರನಿಗೆ ಅರಣ್ಯ ಪ್ರದೇಶದಿಂದ ಚಿರತೆ ಹಠಾತ್ತನೆ ರಸ್ತೆ ದಾಟಲು ಬಂದಿದ್ದು, ಕ್ಷಣಾರ್ಧದಲ್ಲಿ ಬೈಕ್ ಚಿರತೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಘಟನೆ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಗೋ ಸಾಗಿಸುತ್ತಿದ್ದವರ ಮೇಲೆ ಹಲ್ಲೆ!
– ವಾಹನ ಸಮೇತ ಮೂವರ ತೀರ್ಥಹಳ್ಳಿ ಪೊಲೀಸರು ವಶಕ್ಕೆ: ಸಂಧಾನ?

ತೀರ್ಥಹಳ್ಳಿ ನಗರದಿಂದ ದಾವಣಗೆರೆಗೆ ಈಚರ್ ವಾಹನದಲ್ಲಿ ಗೋವನ್ನು ಸಾಗಿಸುತ್ತಿದ್ದ ವಾಹನದ ಸಮೇತ ಮೂವರನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಣಂದೂರು ಸಮೀಪ ವಾಹನವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದು ವಾಹನದಲ್ಲಿ ಹತ್ತು ಗೋವುಗಳು ಇದ್ದವು. ಮಾಹಿತಿ ಪ್ರಕಾರ ಗೋವನ್ನು ದಾವಣಗೆರೆಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಕೆಲ ಯುವಕರು ಘಟನೆ ವೇಳೆ ಓರ್ವನ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ವಾಹನವನ್ನು ಇರಿಸಲಾಗಿದ್ದು ವಾಹನದಲ್ಲಿ ಗೋವನ್ನು ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ.. ಹೈವೇ ಪೆಟ್ರೋಲ್ ಮಾಳೂರು ಠಾಣೆಯ ಮಂಜಪ್ಪ ಹಾಗೂ ಡ್ರೈವರ್ ಡಿಸೋಜ ಅವರು ಕಾರ್ಯಾಚರಣೆ ನಡೆಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗದ ಗೋಶಾಲೆಗೆ ದನಗಳನ್ನು ಸಾಗಿಸುತ್ತಿದ್ದ ಬಿಜೆಪಿ ಮುಖಂಡ ಒಡ್ಡಿನ ಬೈಲು ಸುಬ್ಬಣ್ಣ ಎಂಬುವರು ದನ ಕದಿಯುತ್ತಿದ್ದಾರೆ ಎಂಬ ತಪ್ಪು ತಿಳುವಳಿಕೆಯಿಂದ ಸುಬ್ಬಣ್ಣ ಅವರನ್ನ ಹಿಡಿದು ತಳ್ಳಾಡಿ, ಚಾಲಕನ ಮೇಲೆ ಹಲ್ಲೆಗೈದು ವಾಹನ ಸಮೇತ ಪೊಲೀಸರಿಗೆ ಒಪ್ಪಿಸಿದ್ದರೆ, ಶಾಸಕ ಜ್ಞಾನೇಂದ್ರರ ಮಧ್ಯ ಪ್ರವೇಶ ಮಾಡಿ ಪೊಲೀಸರಿಗೆ ವಾಸ್ತವ ಮನವರಿಕೆ ಮಾಡಿಕೊಟ್ಟು ದನಗಳನ್ನು ಚಿತ್ರದುರ್ಗದ ಗೋಶಾಲೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿತ್ತು ಎಂದು ಸಂಧಾನ ಮಾಡಿದರು ಎಂದು ತಿಳಿದು ಬಂದಿದೆ.

ತಳುವೆ, ಹಿಲಿಕೆರೆಯಲ್ಲಿ ಕಾರು ಅಪಘಾತ: ಗಾಯ

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ತಳುವೆ, ಹಿಲಿಕೆರೆ ಬಳಿ ನಡೆದ ಪ್ರತ್ಯೇಕ ಕಾರು ಅಪಘಾತದಲ್ಲಿ ಎರಡು ಕಾರುಗಳು ಶುಕ್ರವಾರ ಜಖಮ್ ಗೊಂಡಿವೆ. ತಳುವೆ ಬಳಿ ಕಾರೊಂದು ಮೋರಿಗೆ ಡಿಕ್ಕಿ ಹೊಡೆದು ನುಜ್ಜುಗುಜ್ಜಾಗಿದೆ. ಇನ್ನು ಹಿಲಿಕೆರೆ ಜಟ್ಟಿನಮಕ್ಕಿ ತಿರುವಿನಲ್ಲಿ ಕಾರೊಂದು ಅಪಘಾತಕ್ಕೆ ಒಳಗಾಗಿದೆ.