- ವಿದ್ಯುತ್ ದರ ಏರಿಸಿ ಬರೆ
- ಪ್ರತಿ ಯೂನಿಟ್ 40 ಪೈಸೆ ಹೆಚ್ಚಳ
ಬೆಂಗಳೂರು: ವಿದ್ಯುತ್ ದರ ಏರಿಸಿ ಜನರಿಗೆ ಸರ್ಕಾರ ಶಾಕ್ ನೀಡಿದೆ.
ನ.1ರಿಂದಲೇ ಹೊಸ ದರ ಜಾರಿಯಾಗಲಿದೆ. ಹೆಚ್ಚುವರಿ ವಿದ್ಯುತ್ ಬಳಕೆಯಾಗಿರುವ ಜೊತೆಗೆ ಥರ್ಮಲ್ ಪವರ್ ಪ್ಲಾಂಟ್ ಸ್ಥಾಪನೆಗೂ ಹೆಚ್ಚು ಖರ್ಚಾಗಿದೆ. ಇದನ್ನು ಸರಿದೂಗಿಸಲು ದರ ಏರಿಕೆ ಮಾಡಲಾಗಿದೆ. ಪ್ರತಿ ಯೂನಿಟ್ಗೆ 40 ಪೈಸೆ ಹೆಚ್ಚಳ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕರೋನಾ ಕಾರಣದಿಂದ ತಡೆಹಿಡಿಯಲಾಗಿದ್ದ ವಿದ್ಯುತ್ ದರ ಏರಿಕೆಯನ್ನು ಇದೀಗ ಏರಿಕೆ ಮಾಡಿರುವ ಕೆಇಆರ್ಸಿ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ) ರಾಜ್ಯದ ಜನರಿಗೆ ಶಾಕ್ ನೀಡಿದೆ.
ಮಾರ್ಚ್ ನಲ್ಲಿ ವಿದ್ಯುತ್ ದರ ಏರಿಕೆಯಾಗಬೇಕಿತ್ತು. ಆದರೆ ಕರೋನಾ ಕಾರಣದಿಂದ ದರ ಏರಿಕೆಯನ್ನು ತಡೆ ಹಿಡಿಯಲಾಗಿತ್ತು. ಈಗ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 40 ಪೈಸೆ ಹೆಚ್ಚಳ ಮಾಡಲಾಗಿದೆ. ಐದು ತಿಂಗಳ ಮಟ್ಟಿಗೆ ಹೊಸ ಪರಿಷ್ಕೃತ ದರ ಇರಲಿದೆ.