- ಶಿವಮೊಗ್ಗದಲ್ಲಿ ಮೂವರ ಬಂಧನ: ಬೆಟ್ಟಿಂಗ್ ಬೆಟ್ಟಿಂಗ್
- ಕೊಪ್ಪದಲ್ಲಿ ವ್ಯಕ್ತಿ ಸಾವು
ಶಿವಮೊಗ್ಗ: ದೇಶದಲ್ಲಿ ಐಪಿಎಲ್ ಕ್ರಿಕೆಟ್ ಜ್ವರ ಇದೀಗ ಎಲ್ಲಾ ಕಡೆ ಯುವ ಸಮುದಾಯವನ್ನು ಬೆಟ್ಟಿಂಗ್ ಚಟಕ್ಕೆ ದಾಸನಾಗಿಸಿದೆ. ಪ್ರತಿ ದಿನ ಒಂದಲ್ಲ ಒಂದು ಪ್ರಕರಣ ವರದಿಯಾಗುತ್ತಿದೆ. ಈ ನಡುವೆ ಬೆಟ್ಟಿಂಗ್ ಆಡುತ್ತಿದ್ದ ಮೂವರನ್ನು ಶಿವಮೊಗ್ಗ ಜಯನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 2.21ಲಕ್ಷ ರೂ. ಹಾಗೂ 3 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ನಗರದ ಜಯನಗರ ಠಾಣಾ ವ್ಯಾಪ್ತಿಯ
ತಿಲಕ್ ನಗರ ಮುಖ್ಯ ರಸ್ತೆಯ ವಿಶ್ವೇಶ್ವರಯ್ಯ
ಕಾಂಪ್ಲೆಕ್ಸ್‌ನಲ್ಲಿರುವ ಮೊಬೈಲ್ ಆಂಗಡಿಯಲ್ಲಿ
ಆರೋಪಿಗಳು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್
ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ
ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯ
ಪೊಲೀಸ್ ಇನ್ಸ್ಪೆಕ್ಟರ್ ಹಾಗೂ
ಸಿಬ್ಬಂದಿಗಳನ್ನೊಳಗೊಂಡ ತಂಡವು
ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ದಾಖಲಿಸಿ,
ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಪ್ಪದಲ್ಲಿ ಸಾವು!: ಕೊಪ್ಪದ ಜೆಎಂಜೆ ಕ್ರೀಡಾಂಗಣದಲ್ಲಿ ಪತ್ತೆಯಾದ ಅನಾಮಧೇಯ ಪುರುಷ ಶವ ದೇವಂಗಿ ಮೂಲದ ಸಂಜೀವ ಎಂಬಾತನದು ಎಂದು ತಿಳಿದು ಬಂದಿದೆ.
ಕೊಪ್ಪ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಸುಬ್ರಹ್ಮಣ್ಯ ಶೆಟ್ಟಿಯವರ ಪ್ರಯತ್ನದಿಂದ ಸಾರ್ವಜನಿಕ ಪ್ರಕಟಣೆಯನ್ನು ಪ್ರಕಟಿಸಿದ್ದು, ಇದೀಗ ಗುರುತು ಪತ್ತೆಯಾಗಿದೆ.
ತೀರ್ಥಹಳ್ಳಿ ಪಟ್ಟಣದ ಕೆ.ಸಿ ರಸ್ತೆಯಲ್ಲಿ ಹಿಂದೆ ವಾಸವಾಗಿದ್ದ ಪರಮೇಶ್ವರ ಪೂಜಾರಿಯವರ ಪುತ್ರ ಸಂಜೀವ ಎಂದು ತಿಳಿದು ಬಂದಿದೆ. ಇವರು ದೇವಂಗಿ ವಾಸಿ ಎಂದು ಹೇಳಲಾಗಿದೆ.