ಸಹ್ಯಾದ್ರಿ ಸಂಘದಿಂದ ಜ.7ಕ್ಕೆ ವಾರ್ಷಿಕ ಕ್ರೀಡಾಕೂಟ
– ಮಲೆನಾಡಿಗರು ಒಟ್ಟಿಗೆ ಸೇರಲು ಒಳ್ಳೆಯ ಅವಕಾಶ
– ಸರ್ವರನ್ನು ಸ್ವಾಗತಿಸಿದ ಸಹ್ಯಾದ್ರಿ ಸಂಘದ ಪದಾಧಿಕಾರಿಗಳು
NAMMUR EXPRESS NEWS
ಬೆಂಗಳೂರು: ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆ ಸಹ್ಯಾದ್ರಿ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಬೆಂಗಳೂರಿನಲ್ಲಿರುವ ಮಲೆನಾಡಿಗರ 20ನೇ ವರ್ಷದ ವಾರ್ಷಿಕ ಕ್ರೀಡಾ ಕೂಟವನ್ನು ದಿನಾಂಕ 7-1-2024 ಭಾನುವಾರದಂದು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಮಲೆನಾಡಿಗರು ಒಟ್ಟಿಗೆ ಸೇರಲು ಒಂದು ಒಳ್ಳೆಯ ಅವಕಾಶವಾಗಿದ್ದು ಸರ್ವರನ್ನು ಸಹ್ಯಾದ್ರಿ ಸಂಘದ ಪದಾಧಿಕಾರಿಗಳು ಸ್ವಾಗತಿಸಿದ್ದಾರೆ.
ಸುಮಾರು 19 ವರ್ಷಗಳಿಂದ ಶ್ರೀಯುತ ಶಾಂತವೇರಿ ಗೋಪಾಲ ಗೌಡ ಹಾಗೂ ರಾಷ್ಟ್ರಕವಿ ಕುವೆಂಪು ರವರ ಆಶಯದಂತೆ ವಿಶ್ವಮಾನವ ಕಲ್ಪನೆಯ ಅಡಿಯಲ್ಲಿ ಜಾತಿ ಧರ್ಮ ರಾಜಕೀಯ ಮೀರಿ ಅತ್ಯಂತ ಉತ್ತಮ ಕಾರ್ಯಕ್ರಮ ಮಾಡುತ್ತಿದ್ದಾರೆ. ಒಕ್ಕಲಿಗರ ಪ್ರೌಢಶಾಲಾ ಆವರಣ ಶ್ರೀಗಂಧಕಾವಲ್,ಸುಂಕದಕಟ್ಟೆ,ಬೆಂಗಳೂರಲ್ಲಿ ಕಾರ್ಯಕ್ರಮ ನಡೆಯಲಿದೆ. ಸರ್ವರನ್ನು ಸಹ್ಯಾದ್ರಿ ಸಂಘದ ಅಧ್ಯಕ್ಷರಾದ ಶ್ರೀಧರ್, ಕಾರ್ಯದರ್ಶಿ ಜಯಪ್ರಕಾಶ್ ಎಚ್. ಸಿ ಸ್ವಾಗತಿಸಿದ್ದಾರೆ.
ದಿನಾಂಕ: 7-1-2024 ಭಾನುವಾರ
ಸಮಯ: ಬೆಳಿಗ್ಗೆ 10 ಗಂಟೆ
ಸ್ಥಳ: ಒಕ್ಕಲಿಗರ ಪ್ರೌಢಶಾಲಾ ಆವರಣ ಶ್ರೀಗಂಧಕಾವಲ್,ಸುಂಕದಕಟ್ಟೆ, ಬೆಂಗಳೂರು
