Categories
ಉಡುಪಿ

ಜಯಲಕ್ಷ್ಮೀ ಸಿಲ್ಕ್ ನಲ್ಲಿ ಮಿಸ್ ಫೈರಿಂಗ್

ಜಯಲಕ್ಷ್ಮೀ ಸಿಲ್ಕ್ ನಲ್ಲಿ ಮಿಸ್ ಫೈರಿಂಗ್
– ಒಬ್ಬ ಸಿಬ್ಬಂದಿಗೆ ಗಾಯ

NAMMUR EXPRESS NEWS
ಉಡುಪಿ : ಉಡುಪಿ ನಗರದ ಪ್ರಸಿದ್ಧ ಬಟ್ಟೆ ಅಂಗಡಿಯಾದ ಜಯಲಕ್ಷ್ಮೀ ಸಿಲ್ಕ್ ನಲ್ಲಿ ಇಂದು ಮಧ್ಯಾಹ್ನ ಮಿಸ್ ಫೈರಿಂಗ್ ಆದ ಪರಿಣಾಮ ಸಿಬ್ಬಂದಿಯೋರ್ವರಿಗೆ ಗುಂಡು ತಗುಲಿದ ಘಟನೆ ನಡೆದಿದೆ . ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಗನ್ ಇತ್ತು. ಅದನ್ನು ಎತ್ತಿಕೊಂಡ ಸಿಬ್ಬಂದಿ ಆಪರೇಟ್ ಮಾಡಿ ಪರೀಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಗುಂಡು ತಗುಲಿದೆ. ಅವರನ್ನು ಕೂಡಲೇ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಬಂದು ಗನ್ ವಶಕ್ಕೆ ಪಡೆದಿದ್ದಾರೆ. ಗನ್ ಯಾರದ್ದು? ಮಳಿಗೆಯಲ್ಲಿ ತಂದಿಟ್ಟಿದ್ದು ಯಾರು ಅನ್ನೋದರ ಕುರಿತು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.