Categories
ಬೆಂಗಳೂರು

ರಾಜ್ಯದ LPG ಗ್ಯಾಸ್ ಬಳಕೆದಾರರ ಗಮನಕ್ಕೆ

ರಾಜ್ಯದ LPG ಗ್ಯಾಸ್ ಬಳಕೆದಾರರ ಗಮನಕ್ಕೆ
– ಆಧಾರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕ ನಿಗದಿಪಡಿಸಿಲ್ಲ
-ವದಂತಿ ನಂಬಿ ಗ್ಯಾಸ್‌ ಏಜೆನ್ಸಿ ಮುಂದೆ ನೂಕುನುಗ್ಗಲು

NAMMUR EXPRESS NEWS
ಬೆಂಗಳೂರು: ಅಡುಗೆ ಅನಿಲಕ್ಕೆ ಸಬ್ಸಿಡಿ ಪಡೆಯುತ್ತಿರುವವರು ಇ-ಕೆವೈಸಿ ಮಾಡಿಸಲು ಡಿ.31 ಕೊನೇ ದಿನ ಎಂಬ ವದಂತಿ ನಂಬಿ ಗ್ಯಾಸ್ ಪೂರೈಕೆ ಏಜೆನ್ಸಿಗಳ ಮುಂದೆ ಗ್ರಾಹಕರು ಬೆಳ್ಳಂಬೆಳಗ್ಗೆ ಸಾಲು ನಿಂತು ನೂಕುನುಗ್ಗಲು ಉಂಟಾದ ಪ್ರಸಂಗ ಎಲ್ಲಾ ಕಡೆಯಲ್ಲೂ ಕೂಡ ನಡೆದಿದೆ. ಡಿ.31ರೊಳಗೆ ಇ-ಕೆವೈಸಿ ಮಾಡಿಸಿದರಷ್ಟೇ ಸರ್ಕಾರದ ಸಬ್ಸಿಡಿ ಸಿಗುತ್ತದೆ, ಕೇಂದ್ರ ಸರ್ಕಾರ ಗ್ರಾಹಕರ ಖಾತೆಗೆ ಹಣ ಹಾಕುತ್ತದೆ ಎಂಬ ವದಂತಿ ನಂಬಿ ಕಳೆದೊಂದು ತಿಂಗಳಿಂದ ರಾಜ್ಯದ ಅನೇಕ ಕಡೆ ಸಾರ್ವಜನಿಕರು ಗ್ಯಾಸ್ ಏಜೆನ್ಸಿಗಳಿಗೆ ಮುಗಿಬಿದ್ದು ಬರುತ್ತಿದ್ದಾರೆ. ಎಲ್ಲಾ ಗ್ಯಾಸ್ ಏಜೆನ್ಸಿ ಇರುವಂತಹ ಸ್ಥಳಗಳಲ್ಲಿ ಜನರು ನೂಕು ನುಗ್ಗಲು ಗಮನಿಸಬಹುದಾಗಿದೆ. ಡಿಸೆಂಬರ್ 31 ನೇ ತಾರೀಕು ಕೊನೆಯ ದಿನಾಂಕ ಎಂದು ಜನರು ಈ ರೀತಿ ಬರುತ್ತಿರುವುದನ್ನ ನಾವು ಕೂಡ ಗಮನಿಸಬಹುದು.

ವದಂತಿ ನಂಬಿದ ಜನ ಬೆಳ್ಳಂಬೆಳಗ್ಗೆ ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲು ನಿಂತು ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಕೆಲವೆಡೆ ಹಣಕೊಟ್ಟು ಇ-ಕೆವೈಸಿ ಮಾಡಿಸಿದ ಪ್ರಕರಣಗಳೂ ನಡೆದಿವೆ. ಇನ್ನೂ ಕೂಡ ಕೊನೆಯ ದಿನಾಂಕ ನಿಗದಿಪಡಿಸಿಲ್ಲ. ಗ್ಯಾಸ್ ಸಬ್ಸಿಡಿ ಪಡೆಯುತ್ತಿರುವವರು ಮಾಡಿಸಬೇಕಿದೆ ಎಂದು ಸುತ್ತೋಲೆ ಹೊರಡಿಸಲಾಗಿದೆ ಎನ್ನಲಾದರೂ, ಅದಕ್ಕೆ ಅಂತಿಮ ದಿನಾಂಕ ನಿಗದಿಯಾಗಿಲ್ಲ. ಕೆವೈಸಿಯನ್ನು ಗ್ಯಾಸ್ ಅಂಗಡಿಗೆ ಬಂದು ಮಾಡಿಸುವ ಅಗತ್ಯವೂ ಇಲ್ಲ. ಅಡುಗೆ ಅನಿಲವನ್ನು ಮನೆಗೆ ಪೂರೈಸಲು ಬರುವವರಿಗೆ ದಾಖಲೆಗಳನ್ನು ಕೊಟ್ಟು ಕೆವೈಸಿ ಮಾಡಿಸಬಹುದು ಎನ್ನಲಾಗುತ್ತಿದೆ. ಆದರೆ, ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲದ ಕಾರಣ ವದಂತಿ ನಂಬಿ ಏಜೆನ್ಸಿಗಳ ಬಳಿ ಬರುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.