Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ವೈಭವದ ಎಳ್ಳಮವಾಸ್ಯೆ ಜಾತ್ರೆಗೆ ಸಿದ್ಧತೆ.!

ತೀರ್ಥಹಳ್ಳಿಯಲ್ಲಿ ವೈಭವದ ಎಳ್ಳಮವಾಸ್ಯೆ ಜಾತ್ರೆಗೆ ಸಿದ್ಧತೆ.!
– ಜಾತ್ರಾಸಮಿತಿ ವತಿಯಿಂದ ಪಟ್ಟಣದಲ್ಲಿ ದೇಣಿಗೆ ಸಂಗ್ರಹ!
– ಅಂಗಡಿ ಮುಗ್ಗಟ್ಟುಗಳಿಗೆ ತಯಾರಿ: ಕಿರು ಸೇತುವೆ ನಿರ್ಮಾಣಕ್ಕೆ ಕಾಮಗಾರಿ!

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ತುಂಗಾ ನದಿಯ ದಡದ ಮೇಲ್ಭಾಗದಲ್ಲಿರುವ ಶ್ರೀರಾಮೇಶ್ವರನ ಸನ್ನಿಧಿಯಲ್ಲಿ ಸುಪ್ರಸಿದ್ಧ ವೈಭವದ ಎಳ್ಳಮವಾಸ್ಯೆ ಜಾತ್ರೆಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಎಳ್ಳಮವಾಸ್ಯೆಯಂದು ಸಾವಿರಾರು ಭಕ್ತರು ತುಂಗಾ ನದಿಯ ರಾಮಕುಂಡದಲ್ಲಿ ತೀರ್ಥಸ್ನಾನ ಮಾಡಿ ಪುನೀತರಾಗುತ್ತಾರೆ. ಲಕ್ಷಾಂತರ ಜನರು ಆಗಮಿಸುವ ಜಾತ್ರೆಗೆ ದೇವಸ್ಥಾನದ ಸುತ್ತಮುತ್ತ ಅಲಂಕಾರಗಳು ನಡೆಯುತ್ತಿವೆ. ಮೂರು ದಿನಗಳ ಕಾಲ ನಡೆಯುವ ಜಾತ್ರೆಯೆಂದರೆ ಭಕ್ತರಿಗೆ, ಸ್ಥಳೀಯರಿಗೆ ವಿಶೇಷ ಸಂಭ್ರಮ. ಜಾತ್ರೆಯ ಅಂಗವಾಗಿ ಎಲ್ಲಾ ಭಕ್ತಾದಿಗಳಿಗೂ ಪ್ರತಿದಿನ ಅನ್ನಸಂತರ್ಪಣೆ ಇರುವುದರಿಂದ ಜಾತ್ರಾಸಮಿತಿ ಈಗಾಗಲೇ ಪಟ್ಟಣದಲ್ಲಿ ದೇಣಿಗೆ ಸಂಗ್ರಹ ಕಾರ್ಯವನ್ನು ನಡೆಸುತ್ತಿದೆ.

ಅಂಗಡಿ ಮುಗ್ಗಟ್ಟುಗಳಿಗೆ ತಯಾರಿ : ಇನ್ನು ಬೇರೆ ಬೇರೆ ಊರುಗಳಿಂದ ಜನಸಾಗರ ಆಗಮಿಸುವುದರಿಂದ ಜಾತ್ರೆಗೆ ಆಗಮಿಸುವ ಜನರನ್ನು ಆಕರ್ಷಿಸಲು ವ್ಯಾಪಾರಸ್ಥರು ವಿಧ ವಿಧದ ಅಂಗಡಿಗಳನ್ನು ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಕರ ಸಂಕ್ರಾಂತಿಯವರೆಗೂ ಜಾತ್ರೆಯಲ್ಲಿ ಅಂಗಡಿಗಳನ್ನು ಇಟ್ಟುಕೊಂಡು ಸಂಕ್ರಾಂತಿಯ ದಿನ ಚಿಕ್ಕ ರಥವನ್ನು ಎಳೆಯುವ ಮೂಲಕ ಜಾತ್ರೆಯನ್ನು ಮುಗಿಸಲಾಗುತ್ತದೆ. ಇನ್ನು ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಈಗಾಗಲೇ ಚಾಲನೆಯನ್ನು ಕೂಡ ನೀಡಲಾಗಿದೆ. ಒಟ್ಟಿನಲ್ಲಿ ತೀರ್ಥಹಳ್ಳಿಯ ವೈಭವದ ಜಾತ್ರೆಗೆ ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.