Categories
ಚಿಕ್ಕಮಗಳೂರು ಬೆಂಗಳೂರು ರಾಜಕೀಯ ರಾಜ್ಯ ಶಿವಮೊಗ್ಗ

ಬೇಳೂರು, ಟಿ. ಡಿ.ರಾಜೇಗೌಡ, ಸಂಗಮೇಶ್ ಅವರಿಗೆ ನಿಗಮ ಮಂಡಳಿ ಯಲ್ಲಿ ಸ್ಥಾನ

ಬೇಳೂರು, ಟಿ. ಡಿ.ರಾಜೇಗೌಡ, ಸಂಗಮೇಶ್ ಅವರಿಗೆ ನಿಗಮ ಮಂಡಳಿ ಯಲ್ಲಿ ಸ್ಥಾನ 
– 32 ಮಂದಿಗೆ ಹುದ್ದೆ: ಯಾರಿಗೆ ಯಾವ ಸ್ಥಾನ?

NAMMUR EXPRESS NEWS
ರಾಜ್ಯ ಸರ್ಕಾರ 32 ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದು ಮಲೆನಾಡಿನ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಭದ್ರಾವತಿಯ ಸಂಗಮೇಶ್ ಅವರಿಗೆ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ಶೃಂಗೇರಿ ಶಾಸಕ ರಾಜೇಗೌಡ ಅವರಿಗೆ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದೆ. 32 ಜನರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಗೆ ಅರಣ್ಯ ಮತ್ತು ಕೈಗಾರಿಕೆ ಮಂಡಳಿ ಅಧ್ಯಕ್ಷ ಸ್ಥಾನ ದೊರಕಿದೆ. ಗಣರಾಜ್ಯೋತ್ಸವದ ದಿನದಂದೇ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಪಟ್ಟಿ ಪ್ರಕಟವಾಗಿದೆ.

ಯಾವೆಲ್ಲ ಶಾಸಕರಿಗೆ ಸ್ಥಾನ ಸಿಕ್ಕಿದೆ?

ಹಂಪನಗೌಡ ಬಾದರ್ಲಿ – ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ

ಅಪ್ಪಾಜಿ ಸಿಎಸ್ ನಾಡಗೌಡ – ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್

ಭರಮಗೌಡ ಅಲಗೌಡ ಕಾಗೆ – ಹುಬ್ಬಳ್ಳಿ ಸಾರಿಗೆ ನಿಗಮ

ಯಮುನಪ್ಪ ವೈ ಮೇಟಿ – ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ

ಎಸ್ ಆರ್ ಶ್ರೀನಿವಾಸ್ – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ಬಸವರಾಜ್ ನೀಲಪ್ಪ ಶಿವಣ್ಣನವರ್ – ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ

ಬಿಜಿ ಗೋವಿಂದಪ್ಪ – ಆಹಾರ ಮತ್ತು ನಾಗರಿಕ ಸರಬರಾಜು ನಿಗಮ

ಹೆಚ್ ಸಿ ಬಾಲಕೃಷ್ಣ – ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ

ಜಿಎಸ್ ಪಾಟೀಲ್ – ಕರ್ನಾಟಕ ಖನಿಜ ನಿಗಮ ಅಭಿವೃದ್ಧಿ ನಿಯಮಿತ

ಎನ್ ಎ ಹ್ಯಾರೀಸ್ – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಕೌಜಲಗಿ ಮಹಾಂತೇಶ್ ಶಿವಾನಂದ – ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ

ಪುಟ್ಟರಂಗಶೆಟ್ಟಿ – ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್

ಜೆಟಿ ಪಾಟೀಲ್ – ಹಟ್ಟಿ ಚಿನ್ನದಗಣಿ

ರಾಜಾ ವೆಂಕಟಪ್ಪ ನಾಯಕ್ – ಕರ್ನಾಟಕ ರಾಜ್ಯ ಉಗ್ರಾಹಣ ನಿಗಮ

ಬಿಕೆ ಸಂಗಮೇಶ್ – ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ, ಲ್ಯಾಂಡ್ ಆರ್ಮಿ

ಕೆಎಂ ಶಿವಲಿಂಗೇಗೌಡ – ಕರ್ನಾಟಕ ಗೃಹ ಮಂಡಳಿ

ಅಬ್ಬಯ್ಯ ಪ್ರಸಾದ್ – ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ

ಬಿಕೆ ಗೋಪಾಲಕೃಷ್ಣ ಬೇಳೂರು – ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ

ಎಸ್ ಎನ್ ನಾರಾಯಣಸ್ವಾಮಿ – ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಮಕಾಸು ನಿಗಮ ನಿಯಮಿತ

ಪಿಎಂ ನರೇಂದ್ರಸ್ವಾಮಿ – ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಟಿ ರಘುಮೂರ್ತಿ – ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ

ಎ ಬಿ ರಮೇಶ್ ಬಂಡಿ ಸಿದ್ದೇಗೌಡ – ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ

ಬಿ ಶಿವಣ್ಣ – ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಎಸ್ ಎನ್ ಸುಬ್ಬಾರೆಡ್ಡಿ – ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ

ವಿನಯ್ ಕುಲಕರ್ಣಿ- ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಅನಿಲ್ ಚಿಕ್ಕಮಾದು – ಜಂಗಲ್ ಲಾಡ್ಜಸ್

ಬಸವನಗೌಡ ದದ್ದಲ್ – ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ

ಕನೀಜ್ ಫಾತಿಮಾ – ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ

ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ – ಕರ್ನಾಟಕ ಕ್ರೀಡಾ ಪ್ರಾಧಿಕಾರ

ಶ್ರೀನಿವಾಸ ಮಾನೆ – ಉಪಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು

ಟಿಡಿ ರಾಜೇಗೌಡ – ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತ

ರೂಪಕಲಾ ಎಂ – ಕರ್ನಾಟಕ ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ

ನಮ್ಮೂರ್ ಎಕ್ಸ್ ಪ್ರೆಸ್ ಶುಭಾಶಯಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.