Categories
ಕರಾವಳಿ

ಮಂಜೇಶ್ವರ: ಯುವಕನ ಮೇಲೆ ಶೂಟೌಟ್!

ಕರಾವಳಿ ಟಾಪ್ ನ್ಯೂಸ್

ಮಂಜೇಶ್ವರ: ಯುವಕನ ಮೇಲೆ ಶೂಟೌಟ್!

– ಉಡುಪಿಯಲ್ಲಿ ಭಾರಿ ಮಳೆ, ಊರೇ ಅಲ್ಲೋಲ ಕಲ್ಲೋಲ!
– ಹೆಬ್ರಿ: ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು
– ಇಂದ್ರಾಳಿ ರೈಲು ನಿಲ್ದಾಣದ ಸನಿಹ ಯುವಕನ ಶವ ಪತ್ತೆ

NAMMUR EXPRESS NEWS
ಮಂಜೇಶ್ವರ: ಬೈಕಿನಲ್ಲಿ ತೆರಳುತಿದ್ದ ಯುವ ಅಡಿಕೆ ವ್ಯಾಪಾರಿಗೆ ಗುಂಡೇಟು ತಗಲಿರುವ ಘಟನೆ ಕೇರಳದ ಮಂಜೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಯ ಕರ್ನಾಟಕ ಗಡಿಭಾಗ ಮುಡಿಪು ಸಮೀಪದ ಕಜೆಪದವು ಎಂಬಲ್ಲಿ ಏ. 27ರ ತಡರಾತ್ರಿ ಸಂಭವಿಸಿದೆ.
ಬಾಕ್ರಬೈಲ್ ನಡೀಬೈಲು ನಿವಾಸಿ ಸವಾದ್ (20) ಎಂಬಾತನ ಮೇಲೆ ಶೂಟೌಟ್ ನಡೆದಿದೆ. ಸಂಜೆ ವೇಳೆ ಬೈಕ್ ನಲ್ಲಿ ಮನೆ ಕಡೆಗೆ ತೆರಳುವ ಸಂದರ್ಭ ಕಜೆಪದವು ತಿರುವಿನಲ್ಲಿ ಈ ಶೂಟೌಟ್ ನಡೆದಿದೆ.
ಕಾಲಿಗೆ ಗಂಭೀರ ಗಾಯಗೊಂಡ ಸಾವಾದನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಿ ಭೇಟೆ ಬಂದವರು ತಪ್ಪಿ ಗುಂಡು ಹಾರಿಸಿರುವ ಸಾಧ್ಯತೆ ಇರುವುದಾಗಿ ಮಂಜೇಶ್ವರ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಹರ್ಷಾದ್ ವರ್ಕಾಡಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಗಾಂಜಾ ವ್ಯಸನಿಗಳು ಅಥವಾ ವ್ಯಾಪಾರಿಗಳು ಕೃತ್ಯ ಎಸೆದಿರುವ ಸಾಧ್ಯತೆಯೂ ವ್ಯಕ್ತವಾಗಿದೆ.

– ಉಡುಪಿಯಲ್ಲಿ ಭಾರಿ ಮಳೆ, ಊರೇ ಅಲ್ಲೋಲ ಕಲ್ಲೋಲ!

ಕಾರ್ಕಳ: ಉಡುಪಿ ಮತ್ತು ದಕ್ಷಿಣಕನ್ನಡದಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮ ಹಲವು ಕಡೆಗಳಲ್ಲಿ ಅಪಾರ ಹನಿಯಾಗಿ ಭಾರಿ ಪ್ರಮಾಣದ ನಷ್ಟವುಂಟಾಗಿದೆ.
ಒಂದು ಮನೆಯಲ್ಲಿ ಅಡಿಕೆ ಮರಗಳು ಬಿದ್ದು, ನಾಶವಾಗಿದ್ದು, ಜೊತೆಗೆ ಸುಮಾರು ಕೋಳಿ ಮರಿಗಳು ಸಾವನ್ನಪ್ಪಿದೆ. ಒಟ್ಟಾರೆಯಾಗಿ 1ಲಕ್ಷ ರೂ. ನಷ್ಟವಾಗಿದೆ.
ನಿರ್ಮಾಣ ಹಂತದಲ್ಲಿದ್ದ ಮನೆಯ ಮೇಲ್ಚಾವಣಿ ಗಾಳಿಯಿಂದ ಹಾರಿ ಹೋಗಿದ್ದು, ಅಡಿಕೆ ಮರಗಳು ಹಾನಿಯಾಗಿ ಸುಮಾರು ನಷ್ಟ ಅನುಭವಿಸುವಂತಾಗಿದೆ.
ಮಿಯ್ಯಾರು ಗ್ರಾಮದಲ್ಲಿ ವಾಸದ ಮನೆಗೊಂದು ಹಾನಿ, ಜೊತೆಗೆ ಇನ್ನೊಂದು ಮನೆಯ ಸಿಮೆಂಟ್ ಒಡೆದು ಹೋಗಿದೆ. ನಲ್ಲೂರು ಗ್ರಾಮದಲ್ಲಿ ವಾಸದ ಮನೆ ಹಾನಿಯಾಗಿ ಭಾರಿ ಪ್ರಮಾಣದಲ್ಲಿ ಏರುಪೇರಾಗಿದೆ.

– ಹೆಬ್ರಿ: ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು

ಹೆಬ್ರಿ: ಸೀತಾನದಿ ಹೊಳೆಯಲ್ಲಿ ಯುವಕನೋರ್ವ ಕಾಲು ಜಾರಿ ಬಿದ್ದು ಸಾವನಪ್ಪಿದ ಘಟನೆ ಎಪ್ರಿಲ್ 26ರಂದು ಸಂಭವಿಸಿದೆ.
ಮೃತರನ್ನು ಹೆಬ್ರಿ ಕಿನ್ನಿ ಗುಡ್ಡೆ ನಿವಾಸಿ ಸುಧಾಕ‌ರ್ ಶೆಟ್ಟಿ ಅವರ ಪುತ್ರ ಸಂಕೇತ್ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ನದಿಗೆ ಸ್ಥಾನಕ್ಕೆ ತೆರಳಿದಾಗ ಕಾಲು ಜಾರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹೆಬ್ರಿ ಗ್ರಾಮ ಪಂಚಾಯತ್‌ನ ಅಂಗವಿಕಲರ ಪುನರ್‌ವಸತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು ಹೆಬ್ರಿ ಜೆಸಿಐ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು.

– ಇಂದ್ರಾಳಿ ರೈಲು ನಿಲ್ದಾಣದ ಸನಿಹ ಯುವಕನ ಶವ ಪತ್ತೆ

ಉಡುಪಿ: ಇಂದ್ರಾಳಿಯ ರೈಲು ನಿಲ್ದಾಣದ ಸನಿಹ ಹಳಿಯಲ್ಲಿ ಏ. 26ರಂದು ರಾತ್ರಿ ಯುವಕನ ಶವ ಪತ್ತೆಯಾದ ಘಟನೆ ನಡೆದಿದೆ.
ಚಲಿಸುವ ರೈಲಿಗೆ ಅಡ್ಡ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದುಬಂದಿಲ್ಲ.
ಘಟನಾ ಸ್ಥಳದಲ್ಲಿದ್ದು ರೈಲ್ವೇ ಇನ್ಸಪೆಕ್ಟರ್ ಮಧುಸೂದನ್, ಮತ್ತು ಮಣಿಪಾಲ ಪೋಲಿಸ್ ಠಾಣೆಯ ಇ ಎಸ್ ಐ ರಾಮ್ ಪ್ರಭು, ಹೆಡ್ ಕಾನ್ಸಟೇಬಲ್ ಶ್ರವಣ್ ಮಹಜರು ಪ್ರಕ್ರಿಯೆ. ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಶವವನ್ನು ಮರಣೋತ್ತರ ಪರೀಕ್ಷೆಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲು ನೆರವಾದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.