Categories
ಬೆಂಗಳೂರು

ಗ್ರಾಪಂ ಪಿಡಿಒ, ಕಾರ್ಯದರ್ಶಿ ವರ್ಗಾವಣೆಗೆ ಕೌನ್ಸೆಲಿಂಗ್

ಗ್ರಾಪಂ ಪಿಡಿಒ, ಕಾರ್ಯದರ್ಶಿ ವರ್ಗಾವಣೆಗೆ ಕೌನ್ಸೆಲಿಂಗ್
– ಏ.17ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭ
– ಶೇ.15ರಷ್ಟು ಮಾತ್ರ ವರ್ಗಾವಣೆಗೆ ಅವಕಾಶ

NAMMUR EXPRESS NEWS
ಬೆಂಗಳೂರು : ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ 1 ಮತ್ತು 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ಮಾಡುವೆ ಸಂಬಂಧ ಕೌನ್ಸೆಲಿಂಗ್ ಪ್ರಕ್ರಿಯೆ ಏ. 17 ರಿಂದ ಮೇ 13ರವರೆಗೆ ನಡೆಯಲಿದೆ.

ಈ ಸಂಬಂಧ ಪಂಚಾಯತ್‌ರಾಜ್ ಆಯುಕ್ತಾಲಯ ಅಧಿಸೂಚನೆ ಹೊರಡಿಸಿದ್ದು, ಒಟ್ಟಾರೆ ಶೇ.15ರಷ್ಟು ಮಾತ್ರ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಪೈಕಿ ಕಡ್ಡಾಯ ಹಾಗೂ ಸಾಮಾನ್ಯ ವರ್ಗಾವಣೆ ಶೇ. 9, ಒಂಟಿ ಮಹಿಳೆ,ಪತಿ, ಪತ್ನಿ ಪ್ರಕರಣ ಶೇ. 3, ಏಕ ಪೋಷಕರು, ಹಾಗೂ 12 ವರ್ಷ ಒಳಗೆ ಇರುವ ಮಕ್ಕಳು ಅಥವಾ ಪತಿ ಅಥವಾ ಪತ್ನಿ ಅಂಗವಿಕಲರಾಗಿದ್ದಲ್ಲಿ, ಇಲ್ಲವೇ ಮಕ್ಕಳು ಗಂಭೀರವಾದ ಅಂಗವಿಕಲತೆಯಿಂದ ಬಳಲುತ್ತಿದ್ದರೆ ಅಂತಹ ನೌಕರರಿಗೆ ಶೇ.1 ಹಾಗೂ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದವರು ಹಾಗೂ ಗಂಭೀರವಾದ ಅಂಗವಿಕಲತೆ ಇರುವ ಪ್ರಕರಣಗಳಿಗೆ ತಲಾ 1ರಷ್ಟು ವರ್ಗಾವಣೆಗೆ ಅವಕಾಶ ನೀಡಲಾಗಿದೆ. ವರ್ಗಾವಣೆ ಬಯಸುವವರ ಆನ್ ಲೈನ್ ಮೂಲಕ ಏ. 17ರಿಂದ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.