ಟಾಪ್ 4 ನ್ಯೂಸ್ ಕರ್ನಾಟಕ
ನಟ ದರ್ಶನ್ ಕೇಸ್ ಜಡ್ಜ್ ಮನೆಯಲ್ಲಿ ಕಳ್ಳತನ ಯತ್ನ..!
– ಕೊಡಗು: ಸೋಲಾರ್ ತಂತಿ ತಗುಲಿ ಕಾಡಾನೆ ಸಾವು…!
– ಭದ್ರಾವತಿ: ಖಾಕಿ ಮೇಲೆ ಕೈ ಮಾಡಿದ ಗಾಂಜಾ ಆರೋಪಿಗೆ ಶೂಟ್..!!
– ಬೆಂಗಳೂರು: ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ 65 ಲಕ್ಷ ರು. ಕಳೆದುಕೊಂಡ, ಹೂಡಿಕೆ ನೆಪದಲ್ಲಿ ಹಣ ವಂಚನೆ..!!
NAMMUR EXPRESS NEWS
ಹಾಸನ: ಎಸ್‌ಬಿಎಂ ಕಾಲೋನಿಯಲ್ಲಿರುವ ನ್ಯಾಯಾಧೀಶರೊಬ್ಬರಿಗೆ ಸೇರಿದ ಮನೆಯಲ್ಲಿ ಕಳ್ಳತನದ ಯತ್ನ ನಡೆದಿದೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಜಡ್ಜ್ ಜೈಶಂಕರ್ ಅವರಿಗೆ ಸೇರಿದ ಮನೆಯನ್ನು ಬೇರೊಬ್ಬರಿಗೆ ಬಾಡಿಗೆ ನೀಡಲಾಗಿತ್ತು. ಕಳ್ಳರು ಹಿಂಬದಿ ಬಾಗಿಲ ಬೀಗ ಮುರಿದು ಒಳನುಗ್ಗಿದ್ದಾರೆ. ಮಲಗಿದ್ದ ಚಾಲಕ ಎಚ್ಚೆತ್ತು ಲೈಟ್ ಹಾಕಿದ್ದರಿಂದ ಕಳ್ಳರು ಬಂದೂಕು, ಕಬ್ಬಿಣದ ರಾಡ್, ಬಿಟ್ಟು ಓಡಿ ಹೋಗಿದ್ದಾರೆ. ಜೈ ಶಂಕರ್, ನಟ ದರ್ಶನ್ ಪ್ರಕರಣದ ಜಡ್ಜ್ ಕೂಡ ಆಗಿದ್ದಾರೆ. ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
– ಕೊಡಗು: ಸೋಲಾರ್ ತಂತಿ ತಗುಲಿ ಕಾಡಾನೆ ಸಾವು…!!
ಕೊಡಗು : ಸೋಲಾರ್ ತಂತಿ ತಗುಲಿ 20 ವರ್ಷದ ಹೆಣ್ಣು ಕಾಡಾನೆಯೊಂದು ಮೃತಪಟ್ಟಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪ ತಾಲೂಕಿನ ಕಂಬಿಬಾಣೆ ಕಾಫಿ ತೋಟದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಆನೆ ಮೇಲ್ನೋಟಕ್ಕೆ ಸಾವನ್ನಪ್ಪಿ ಅಂದಾಜು ಒಂದು ವಾರ ಕಳೆದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
– ಭದ್ರಾವತಿ: ಖಾಕಿ ಮೇಲೆ ಕೈ ಮಾಡಿದ ಗಾಂಜಾ ಆರೋಪಿಗೆ ಶೂಟ್..!!
ಭದ್ರಾವತಿ: ಗಾಂಜಾ ಪ್ರಕರಣದಲ್ಲಿ ಬಂಧಿಸಲು ತೆರಳಿದ್ದಾಗ ಪೊಲೀಸ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಮಂಗಳವಾರ ಭಧ್ರಾವತಿಯಲ್ಲಿ ನಡೆದಿದೆ. ಹಳೇನಗರ ಠಾಣೆ ಪೊಲೀಸರು ಗಾಂಜಾ ಪ್ರಕರಣದಲ್ಲಿ ಪ್ರಮುಖ ಆರೋಪಿ ನಸ್ರುಲ್ಲಾ ಕಾಲಿಗೆ ಗುಂಡು ಹಾರಿಸಲಾಗಿದೆ. ಮಂಗಳವಾರ ಬೆಳಗ್ಗೆ ಬಂಧಿಸಲು ತೆರಳಿದ್ದಾಗ ಸಿಬ್ಬಂದಿ ಮೌನೇಶ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಠಾಣೆಯ ಉಪನಿರೀಕ್ಷಕ ಚಂದ್ರ ಶೇಖರನಾಯ್ಕ ಅವರು ಕಾಲಿಗೆ ಗುಂಡು ಹಾರಿಸಿದ್ದಾರೆ.
– ಬೆಂಗಳೂರು: ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡಿ 65 ಲಕ್ಷ ರು. ಕಳೆದುಕೊಂಡ, ಹೂಡಿಕೆ ನೆಪದಲ್ಲಿ ಹಣ ವಂಚನೆ..!!
ಬೆಂಗಳೂರು : ಅಧಿಕ ಲಾಭದ ಅಮಿಷವೊಡ್ಡಿ ಹೂಡಿಕೆ ನೆಪದಲ್ಲಿ ವ್ಯಕ್ತಿಯೊಬ್ಬರಿಂದ 65.51 ಲಕ್ಷ ಪಡೆದು ವಂಚಿಸಿದ ಆರೋಪದಡಿ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನಶಂಕರಿ 3ನೇ ಹಂತದ ಪಿ. ಎನ್.ಮಂಜುನಾಥ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಸೈಬರ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ದೂರುದಾರ ಮಂಜುನಾಥ ಅವರ ವಾಟ್ಸಾಪ್ ಗೆ ಇತ್ತೀಚೆಗೆ ಅಪರಿಚಿತ ಸಂಖ್ಯೆಯಿಂದ MIRAE ASSET Sharekhan Securities Ltd ಹೆಸರಿನ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಸಂದೇಶದ ಲಿಂಕ್ ಬಂದಿದೆ. ಮಂಜುನಾಥ ಅವರು ಈ ಲಿಂಕ್ ತೆರೆದಾಗ ನೋಂದಣಿ ಮಾಡಿಕೊಳ್ಳುವಂತೆ ಮತ್ತೊಂದು ಲಿಂಕ್ ಕಳುಹಿಸಲಾಗಿದೆ. ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಅಪರಿಚಿತರು ಸೂಚಿಸಿದ್ದಾರೆ. ಅದರಂತೆ ಮಂಜುನಾಥ ಆ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈ ವೇಳೆ ಅಪರಿಚಿತರು ನಮ್ಮ ಕಂಪನಿಯು ಸೆಬಿಯಲ್ಲಿ ನೋಂದಣಿಯಾಗಿದೆ. ಈ ಆ್ಯಪ್ ಮುಖಾಂತರ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ಅಧಿಕ ಲಾಭ ಬರಲಿದೆ ಎಂದು ಆಮಿಷವೊಡ್ಡಿದ್ದಾರೆ. ಇದನ್ನು ನಂಬಿದ ಮಂಜುನಾಥ, ಅಪರಿಚಿತರ ಸೂಚನೆ ಮೇರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು 265.51 ಲಕ್ಷ ವರ್ಗಾಯಿಸಿದ್ದಾರೆ. ಬಳಿಕ ಆ ಆ್ಯಪ್‌ನಲ್ಲಿ ಹೂಡಿಕೆ ಮತ್ತು ಲಾಭ ಸೇರಿ ಒಟ್ಟು 1.08 ಕೋಟಿ ರು. ತೋರಿಸಿದೆ. ಈ ವೇಳೆ ಮಂಜುನಾಥ ಬಂಡವಾಳ ಮತ್ತು ಲಾಭ ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ, ಅಪರಿಚಿತರು ಸಂಪರ್ಕ ಕಡಿದು ಕೊಂಡು ವಂಚಿಸಿದ್ದಾರೆ.