Categories
ಬೆಂಗಳೂರು

ಮುಡಾ ಕೇಸ್‌ ಮುಖ್ಯಮಂತ್ರಿಗೆ ಕೋರ್ಟ್‌ ಬಿಗ್‌ ಶಾಕ್‌!

ಮುಡಾ ಕೇಸ್‌ ಮುಖ್ಯಮಂತ್ರಿಗೆ ಕೋರ್ಟ್‌ ಬಿಗ್‌ ಶಾಕ್‌!

– ಲೋಕಾಯುಕ್ತ ಪೊಲೀಸರಿಗೆ ತನಿಖೆ ಮುಂದುವರಿಸಲು ಸೂಚನೆ!
– ರಿಲೀಫ್‌ ನಿರೀಕ್ಷೆಯಲ್ಲಿದ್ದ ಸಿ. ಎಂ ಆಸೆಗೆ ತಣ್ಣೀರು ಎರಚಿದ ಕೋರ್ಟ್‌

NAMMUR EXPRESS NEWS
ಬೆಂಗಳೂರು: ಮುಡಾ ಕೇಸ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಜನಪ್ರತಿನಿಧಿ ಕೋರ್ಟ್‌ ಬಿಗ್‌ ಶಾಕ್‌ ನೀಡಿದ್ದು, ಲೋಕಾಯುಕ್ತ ಪೊಲೀಸರಿಗೆ ತನಿಖೆ ಮುಂದುವರಿಸಲು ಸೂಚನೆ ನೀಡಿದೆ.
ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್‌ ಸಲ್ಲಿಕೆ ಆದ ಬಳಿಕ ಅದನ್ನು ಜನಪ್ರತಿನಿಧಿ ಕೋರ್ಟ್‌ ಒಪ್ಪಿಕೊಂಡು ರಿಲೀಫ್‌ ಪಡೆಯುವ ನಿರೀಕ್ಷೆಯಲ್ಲಿ ಸಿದ್ಧರಾಮಯ್ಯ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಮುಡಾ ಕೇಸ್‌ನಲ್ಲಿ ಬಿ ರಿಪೋರ್ಟ್‌ ಬಗ್ಗೆ ಸದ್ಯಕ್ಕೆ ಯಾವುದೇ ಆದೇಶವಿಲ್ಲ ಎಂದು ಕೋರ್ಟ್‌ ತಿಳಿಸಿದೆ. ಲೋಕಾಯುಕ್ತರ ಅಂತಿಮ ವರದಿಯ ಬಳಿಕವೇ ಬಿ ರಿಪೋರ್ಟ್‌ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಕೋರ್ಟ್‌ ತಿಳಿಸಿದೆ.
ಅಲ್ಲದೆ, ಇಡಿ ಕೂಡ ತಕರಾರು ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಕೋರ್ಟ್‌ ತಿಳಿಸಿದ್ದು, ಮೇ 7ರ ಒಳಗಾಗಿ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ನೀಡಬೇಕು ಎಂದು ತಿಳಿಸಲಾಗಿದ್ದು, ಅಲ್ಲಿಯವರೆಗೆ ಇಡಿ ತನಿಖೆಗೂ ಕೂಡ ತಡೆ ಇರಲಿದೆ.
ಸದ್ಯಕ್ಕೆ ತನಿಖೆ ಮುಂದುವರಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಕೋರ್ಟ್‌ ತಿಳಿಸಿದ್ದು, ಮೇ 7ರ ಒಳಗಾಗಿ ಕೋರ್ಟ್‌ಗೆ ಅಂತಿಮ ವರದಿ ಸಲ್ಲಿಕೆ ಮಾಡಬೇಕು ಎಂದು ಸೂಚನೆ ನೀಡಲಿದೆ. ಅಲ್ಲಿಯವರೆಗೂ ಬಿ ರಿಪೋರ್ಟ್‌ ಬಗ್ಗೆ ಯಾವುದೇ ಆದೇಶ ಇರೋದಿಲ್ಲ ಎನ್ನಲಾಗಿದೆ.
ಮುಡಾ ಕೇಸ್‌ನಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ ಅನ್ನು ಕೋರ್ಟ್‌ ಒಪ್ಪಿಕೊಳ್ಳಲಿದೆ ಎಂದೇ ಸಿಎಂ ಅಂದಾಜು ಮಾಡಿದ್ದರು. ಆದರೆ, ಜನಪ್ರತಿಧಿನಿಗಳ ಕೋರ್ಟ್‌ ಇದಕ್ಕೆ ಅವಕಾಶ ನೀಡಲಿಲ್ಲ.
ಆದರೆ, ದೂರುದಾರ ಸ್ನೇಹಮಯಿ ಕೃಷ್ಣ ಯಾವುದೇ ಕಾರಣಕ್ಕೂ ಬಿ ರಿಪೋರ್ಟ್‌ ಅನ್ನು ಕೋರ್ಟ್‌ ಒಪ್ಪಿಕೊಳ್ಳಬಾರದು ಎಂದು ಹೇಳಿದ್ದರು. ಮಾತ್ರವಲ್ಲದೇ ಲೋಕಾಯುಕ್ತ ಪೊಲೀಸರು ಅವರ ತನಿಖೆಯ ರೀತಿಯೇ ಸರಿಯಾಗಿಲ್ಲ ಎಂದು ಹೇಳಿದ್ದರು. ಸ್ನೇಹಮಯಿ ಕೃಷ್ಣ ಯಾವೆಲ್ಲಾ ವಿಚಾರದಲ್ಲಿ ತನಿಖೆ ಸರಿಯಾಗಿಲ್ಲ ಎಂದು ತಿಳಿಸಿದ್ದಾರೋ ಆ ಎಲ್ಲಾ ವಿಚಾರಗಳಲ್ಲಿ ತನಿಖೆ ಮಾಡಿ ಲೋಕಾಯುಕ್ತ ಪೊಲೀಸರು ಅಂತಿಮ ವರದಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಬೇಕಿರುತ್ತದೆ.
ಇಡಿ ಪರವಾಗಿ ಬಂದಿದ್ದ ಮಧುಕರ್‌ ದೇಶಪಾಂಡೆ, ಇಡೀ ಪ್ರಕರಣದಲ್ಲಿ ಇಡಿಗೆ ಕೂಡ ತಕರಾರು ಅರ್ಜಿ ಹಾಕುವ ಅವಕಾಶವಿದೆ ಎಂದು ಹೇಳಿದ್ದರು. ಇದನ್ನು ಕೋರ್ಟ್‌ ಕೂಡ ಒಪ್ಪಿಕೊಂಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.