Categories
ಬೆಂಗಳೂರು

ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಆರಂಭ

ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಆರಂಭ
– ಮುಂಜಾಗ್ರತೆಯಾಗಿ ಹಾಸಿಗೆಗಳನ್ನೂ ಮೀಸಲಿಡಲು ತೀರ್ಮಾನ
– ಗರ್ಭಿಣಿಯರು, ಮಕ್ಕಳು, ಉಸಿರಾಟದ ತೊಂದರೆ ಇದ್ದವರಿಗೆ ಟೆಸ್ಟ್

NAMMUR EXPRESS NEWS
ಬೆಂಗಳೂರು: ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಆಸ್ಪತ್ರೆಗಳಲ್ಲಿ ಮಂಗಳವಾರದಿಂದ ಅಗತ್ಯವುಳ್ಳವರಿಗೆ ಆರ್‌ಟಿಪಿಸಿಆರ್. ಆರ್‌ಟಿ ತಪಾಸಣೆ ಆರಂಭಿಸಲಾಗಿದೆ. ಜತೆಗೆ ಮುಂಜಾಗ್ರತೆಯಾಗಿ ಹಾಸಿಗೆಗಳನ್ನು ಮೀಸಲು ಇಟ್ಟುಕೊಳ್ಳಲಾಗಿದೆ.
ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ಹಾಗೂ ಉಸಿರಾಟದ ತೊಂದರ ಇರುವವರು, ಕ್ಯಾನ್ಸರ್ ರೋಗಿಗಳಲ್ಲಿ, ಜ್ವರ ಕಂಡು ಬಂದಿದ್ದರೆ ಕೋವಿಡ್ ಪರೀಕ್ಷೆ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್‌ ತಪಾಸಣೆ ಮಾಡಲಾಗುತ್ತಿದ್ದು, ಪ್ರಕರಣ ಹೆಚ್ಚಾದಲ್ಲಿ ಅಗತ್ಯ ಪ್ರಮಾಣದ ಪರಿಕ್ಷೆಗಾಗಿ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಆ‌ರ್ ಟಿಪಿಸಿಆರ್ ತಪಾಸಣೆಗಾಗಿ ಲ್ಯಾಬ್ ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ. ಬೌರಿಂಗ್ ಆಸತ್ರೆಯಲ್ಲಿ ಐದು ಐಸಿಯು, ಜನರಲ್ 30 ಹಾಗೂ ಮಕ್ಕಳ ವಿಭಾಗದಲ್ಲಿ 25 ಹಾಸಿಗೆಗಳನ್ನು ಮೀಸಲು ಇಟ್ಟುಕೊಳ್ಳಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ಎಡ್ ಬ್ಲಾಕ್‌ನಲ್ಲಿ ಪುರುಷ ಮತ್ತು ಮಹಿಳೆಯರಿಗೆ ತಲಾ 20 ಆಕ್ಸಿಜನ್ ಹಾಸಿಗೆ ಮತ್ತು 10 ಐಸಿಯು ಹಾಸಿಗೆ ಮೀಸಲು ಇಟ್ಟುಕೊಳ್ಳಲಾಗಿದೆ.

ಹೋಟೆಲ್/ಮೆಟ್ರೋದಲ್ಲಿ ಎಚ್ಚರ: ನಗರದ ಕೆಲ ಹೋಟೆಲ್ಗಳಲ್ಲಿ ಕಡ್ಡಾಯವಾಗಿ ಮಾಸ್ಟ್‌ಧರಿಸುವಂತೆ ಫಲಕ ಅಳವಡಿಸಲಾಗಿದೆ. ಮೆಟ್ರೋ ರೈಲಿನಲ್ಲಿ ಕೂಡ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಕಡ್ಡಾಯ ಕುರಿತಂತೆ ಮಾರ್ಗಸೂಚಿ ತರಲು ಬೆಂಗಳೂರು ಮೆಟ್ರೋ ರೈಲು ನಿಗಮ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.