ರೌಡಿ ಕೋಮುವಾದಿಗಳ ಅಟ್ಟಹಾಸಕ್ಕೆ ಅಮಾಯಕ ಯುವಕರ ಬಲಿ!
– ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಖಂಡನೆ
– ಮುಖ್ಯ ಮಂತ್ರಿಗಳೇ ನೇರವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ
NAMMUR EXPRESS NEWS
ಮಂಗಳೂರು: ಬಂಟ್ವಾಳ ತಾಲೂಕಿನ ಕೊಳ್ತಮಜಲು ಬಳಿ ಕೋಮುವಾದಿ ರೌಡಿ ಶೀಟರ್ ಗಳಿಂದ ಇಬ್ಬರು ಅಮಾಯಕರ ಮೇಲೆ ಹಲ್ಲೆ ನಡೆಸಿ ಒಬ್ಬರನ್ನು ದಾರುಣವಾಗಿ ಹೊಡೆದು ಕೊಲೆ ಮಾಡಿರುವುದನ್ನು ಬೆಂಗಳೂರಿನಲ್ಲಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರವರು ತೀವ್ರವಾಗಿ ಖಂಡಿಸಿದ್ದಾರೆ.
ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಅಮಾಯಕರ ಕೊಲೆ ಸಮಾಜಕ್ಕೆ ಬಹಳ ನೋವು ತರುವಂತಹದ್ದು ಮತ್ತು ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕೋಮು ದ್ವೇಷದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಚರ್ಚಿಸಿ, ಕಳೆದ ಹಲವಾರು ದಿವಸಗಳಿಂದ ಜಿಲ್ಲೆಯ ಶಾಂತಿ ಕದಡುತ್ತಿರುವ ಕೋಮು ಪ್ರಚೋದನೆ ಭಾಷಣ ಕೂಡ ಇದಕ್ಕೆ ಕಾರಣ ಮತ್ತು ಇದರ ಹಿಂದೆ ಇರುವವರ ಬಗ್ಗೆ ಕೂಡಲೇ ತನಿಖೆ ಮಾಡಿ ಕ್ರಮ ಕೈಗೊಳ್ಳಲು ಮುಖ್ಯ ಮಂತ್ರಿಗಳಿಂದಲೇ ನೇರವಾಗಿ ಗೃಹ ಇಲಾಖೆಗೆ ಮಾತನ್ನಾಡಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
