Categories
ಬೆಂಗಳೂರು

ಫಲಿತಾಂಶದ ಬೆನ್ನಲ್ಲೇ ಪಿಯು ತರಗತಿಗಳು ಆರಂಭಕ್ಕೆ ಡೇಟ್ ಫಿಕ್ಸ್!

ಫಲಿತಾಂಶದ ಬೆನ್ನಲ್ಲೇ ಪಿಯು ತರಗತಿಗಳು ಆರಂಭಕ್ಕೆ ಡೇಟ್ ಫಿಕ್ಸ್!

– ಜೂನ್ 2ರಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭ!
– SSLC ಫಲಿತಾಂಶ ಪ್ರಕಟವಾದ ಬಳಿಕ ಪಿಯು ದಾಖಲಾತಿ ಪ್ರಕ್ರಿಯೆ

NAMMUR EXPRESS NEWS
ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ 2025-26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜೂನ್ 2ರಿಂದಲೇ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿವೆ.
SSLC ಪರೀಕ್ಷೆ ಫಲಿತಾಂಶ ಬಾಕಿ ಇರುವಾಗಲೇ ಪ್ರಥಮ ಹಾಗೂ ದ್ವಿತೀಯ ಪಿಯು ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ದೇಶಕರು ಆದೇಶಿಸಿದ್ದಾರೆ.
ವೇಳಾಪಟ್ಟಿ ಪ್ರಕಾರ, ಜೂನ್ 2ರಂದು ಪ್ರಥಮ ಹಾಗೂ ದ್ವಿತೀಯ ಪಿಯು ತರಗತಿಗಳು ಆರಂಭವಾಗಲಿದೆ. ಇದರ ಮೊದಲ ಅವಧಿ ಜೂನ್ 2ರಿಂದ ಆರಂಭವಾಗಿ ಸೆ. 21ರವರೆಗೆ ಹಾಗೂ ಎರಡನೇ ಅವಧಿ ಅ.8 ರಿಂದ 2026ರ ಮಾರ್ಚ್ 31ರವರೆಗೆ ಇರಲಿದ್ದು, ಸೆ. 22ರಿಂದ ಅ. 7ರವರೆಗೆ ಮಧ್ಯಂತರ ರಜೆ ಘೋಷಿಸಲಾಗಿದೆ.
ಅದೇ ರೀತಿ, ದ್ವಿತೀಯ ಪಿಯುಸಿ ದಾಖಲಾತಿ ಪ್ರಕ್ರಿಯೆ ಮೇ 22ರಿಂದ ಆರಂಭವಾಗಿ ಜೂನ್ 14ರವರೆಗೆ ಇರಲಿದೆ.
ನಂತರ ಜೂನ್ 16ರಿಂದ 21ರವರೆಗೆ ದಂಡ ಸಹಿತವಾಗಿ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು, SSLC ಫಲಿತಾಂಶ ಪ್ರಕಟವಾದ ಒಂದೇ ದಿನದಲ್ಲಿ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಆದೇಶಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.