ತೀರ್ಥಹಳ್ಳಿ ತಾಲೂಕಿನ ತೀರ್ಥಮುತ್ತೂರು ಗ್ರಾಮದ ಅಭಿವೃದ್ಧಿಯ ಅವ್ಯವಸ್ಥೆ
– ರಾಜಕಾರಣಿಗಳೇ ನಿಮ್ಮ ಅಭಿವೃದ್ಧಿ ಕೇವಲ ಐದು ವರ್ಷಕ್ಕೆ ಮಾತ್ರ ಸೀಮಿತವೇ..!!
– ಅಧಿಕಾರಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದು ಗ್ರಾಮಸ್ಥರು ಪಟ್ಟು
NAMMUR EXPRESS NEWS
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೀರ್ಥಮುತ್ತೂರು ಗ್ರಾಮದ ಅಭಿವೃದ್ಧಿಯ ಅವ್ಯವಸ್ಥೆಯ ಇಲ್ಲಿ ಪರಿಶಿಷ್ಟ ಜಾತಿಯವರ ಸುಮಾರು 12 ಮನೆಗಳಿದ್ದು ಇಲ್ಲಿಗೆ ತಲುಪಲು ಇರುವ ಒಂದೇ ಮಾರ್ಗ ಅದು ರಸ್ತೆ (ಕಾಂಕ್ರೀಟ್ ರಸ್ತೆ) ಈ ರಸ್ತೆಯ ಪಕ್ಕದಲ್ಲಿ ಮಳೆಗಾಲದಲ್ಲಿ ಎಲ್ಲ ಕಡೆಯ ಮಳೆ ನೀರು ಹರಿದು ನದಿ ಸೇರುವ ಹಳ್ಳವಿದ್ದು ಸುಮಾರು 5 ವರ್ಷದ ಹಿಂದೆ ಅತಿಯಾದ ಮಳೆಯಿಂದ ಹಳ್ಳದ ನೀರು ಹರಿದ ರಭಸಕ್ಕೆ ಮಣ್ಣು ಕುಸಿದು ಈಗ ಅರ್ಧ ಭಾಗದಷ್ಟು ರಸ್ತೆ ಕುಸಿದು ಹೋಗುವ ಹಂತದಲ್ಲಿದು ಇಲ್ಲಿ ಶಾಲಾ ಮಕ್ಕಳು, ಕೂಲಿ ಕೆಲಸಕ್ಕೆ ಹೋಗುವವರು ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ
ಆಸ್ಪತ್ರೆಯಗೆ ತುರ್ತು ವಾಹನ ತರಲು ಇರುವುದು ಇದು ಒಂದೇ ದಾರಿ ನಮಗೆ ಈ ರಸ್ತೆಯಿಂದ ಕೆಳಗೆ(ಅಂದಾಜು 8 ಅಡಿ ಆಳದ ಗುಂಡಿ) ದೊಡ್ಡ ಪ್ರಪಾತವಿದ್ದು ಮಕ್ಕಳು, ಜನ ಸಂಚಾರದ ರಸ್ತೆ ಇದಾಗಿದ್ದು ಇದಕ್ಕೆ ಯಾವದೇ ರೀತಿಯ ತಡೆ ಬೇಲಿ ಇಲ್ಲ ಇಲ್ಲಿಯವರೆಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಆಗಲಿ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ
ಈ ವರ್ಷವೂ ಅತಿಯಾಗಿ ಮಳೆ ಅದರೆ ನಮಗೆ ರಸ್ತೆ ಸಂಪರ್ಕ ಮಾರ್ಗವೇ ಇಲ್ಲದಂತೆ ಆಗುತ್ತದೆ ದಯಮಾಡಿ ಅದಷ್ಟು ಬೇಗ ಇದಕ್ಕೆ ಒಂದು ಕ್ರಮ ತೆಗೆದುಕೊಳ್ಳಿ (ತಡೆ ಗೋಡೆಯ ವ್ಯವಸ್ಥೆ ಮಾಡಿ) ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
