ಎಂಎಲ್ಸಿಯಾಗಿ ಡಾ.ಆರತಿ ಕೃಷ್ಣ ಅಧಿಕಾರ ಸ್ವೀಕಾರ!
– ವಿಧಾನ ಸೌಧದಲ್ಲಿ ರಮೇಶ್ ಬಾಬು ಸೇರಿ ನಾಲ್ವರ ಅಧಿಕಾರ ಸ್ವೀಕಾರ
– ಸಿಎಂ, ಡಿಸಿಎಂ, ಸಚಿವರ ಶುಭಾಶಯ: ಕಾಫಿ ನಾಡಿನಿಂದ ನೂರಾರು ಜನ
– ಸೇವೆಯೇ ನನ್ನ ಗುರಿ, ತಂದೆ ಹೆಸರನ್ನು ಉಳಿಸುವೆ: ಡಾ. ಆರತಿ ಕೃಷ್ಣ
NAMMMUR EXPRESS NEWS
ಬೆಂಗಳೂರು: ವಿಧಾನ ಪರಿಷತ್ ನೂತನ ಸದಸ್ಯರಾಗಿ ಆಯ್ಕೆಯಾದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಗುರುವಾರ ವಿಧಾನ ಸೌಧದಲ್ಲಿ ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಗೃಹ ಸಚಿವ ಡಾ. ಪರಮೇಶ್ವರ್, ಸಚಿವರಾದ ಬೋಸರಾಜ್, ಜಮೀರ್ ಅಹಮದ್, ವೆಂಕಟೇಶ್ ಸೇರಿ ಕಾಂಗ್ರೆಸ್ ಅನೇಕ ನಾಯಕರು ಹಾಜರಿದ್ದರು.
ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಡಾ. ಆರತಿ ಕೃಷ್ಣ ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು, ಸಂಘ ಸಂಸ್ಥೆ ಪ್ರಮುಖರು, ದೇಶ ವಿದೇಶದಲ್ಲಿರುವ ಎನ್. ಆರ್. ಐ ಪ್ರಮುಖರು ಹಾಜರಿದ್ದರು.
ಸೇವೆಯೇ ನನ್ನ ಗುರಿ, ತಂದೆ ಹೆಸರನ್ನು ಉಳಿಸುವೆ: ಡಾ. ಆರತಿ ಕೃಷ್ಣ
ಪಕ್ಷದ ವರಿಷ್ಠ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಶಿವಕುಮಾರ್ ಸೇರಿ ಪಕ್ಷದ ಎಲ್ಲಾ ನಾಯಕರು ನನ್ನ ಸೇವೆ ಗುರುತಿಸಿ ಸ್ಥಾನ ನೀಡಿದ್ದಾರೆ. ಕರೋನಾ, ಯುದ್ಧ, ವಿಶ್ವ ವಿಪತ್ತಿನಲ್ಲಿ ಸಿಲುಕಿದ್ದ ಕನ್ನಡಿಗ ಸೇವೆಗೆ ಸಂದ ಫಲ ಇದು. ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಮಲೆನಾಡ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಶೃಂಗೇರಿ, ಚಿಕ್ಕಮಗಳೂರು, ತೀರ್ಥಹಳ್ಳಿ ಭಾಗದ ಜನ ಆಗಮನ
ತವರು ಊರು ಶೃಂಗೇರಿ ಸೇರಿದಂತೆ ನಾಡು, ದೇಶ, ವಿದೇಶದ ವಿವಿಧ ಭಾಗದಿಂದ ನೂರಾರು ಅಭಿಮಾನಿಗಳು, ಕುಟುಂಬಸ್ಥರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಶುಭಾಶಯ ಕೋರಿದರು. ಇದೇ ವೇಳೆ ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಮತ್ತು ದಲಿತ ಮುಖಂಡ ಎಫ್.ಹೆಚ್ ಜಕ್ಕಪ್ಪನವರ್ ಅವರು ಕೂಡ ಪ್ರಮಾಣ ವಚನ ಸ್ವೀಕರಿಸಿದರು.
