ಡಿ ಗ್ರೂಪ್ ನೌಕರರ ಪರ ನಿಂತ ಡಿ ಗ್ರೂಪ್ ನೌಕರರ ಕೇಂದ್ರ ಒಕ್ಕೂಟ!
– ಅಖಿಲ ಭಾರತ ಡಿ ಗ್ರೂಪ್ ನೌಕರರ ಕೇಂದ್ರ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ಹೆಚ್.ಎಸ್. ನಾಗೇಂದ್ರ ಹೆದ್ದೂರು ಹೇಳಿದ್ದೇನು?
– ದೇಶದಲ್ಲಿ ಡಿ ಗ್ರೂಪ್ ಹುದ್ದೆಗಳೇ ನಿಂತು ಹೋಗುವ ಆತಂಕ ಸೃಷ್ಟಿ
– ಗ್ರಾಮ ಸಹಾಯಕರು ಸೇರಿ ಅನೇಕ ಗುತ್ತಿಗೆ ನೌಕರರ ಶೋಷಣೆ ವಿರುದ್ಧ ಹೋರಾಟ
NAMMUR EXPRESS NEWS
ಅಖಿಲ ಭಾರತ ಡಿ ಗ್ರೂಪ್ ನೌಕರರ ಬಗ್ಗೆ ಸರ್ಕಾರಗಳ ಮಲತಾಯಿ ಧೋರಣೆ ವಿಷಾದನೀಯ ಎಂದು ಡಿ. ಗ್ರೂಪ್ ನೌಕರರ ರಾಷ್ಟ್ರೀಯ ಉಪಾಧ್ಯಕ್ಷ ಹೆಚ್.ಎಸ್. ನಾಗೇಂದ್ರ ಹೆದ್ದೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದಲ್ಲಿ ಡಿ ಗ್ರೂಪ್ ಹುದ್ದೆಗಳೇ ನಿಂತು ಹೋಗುವ ಆತಂಕ ಎದುರಾಗಿದೆ. ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರರು ಒಗ್ಗೂಡಿ ಹೋರಾಟಕ್ಕಿಳಿಯುವ ಅನಿವಾರ್ಯತೆ ಇದೆ ಎಂದಿದ್ದಾರೆ.
ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ಇತ್ತೀಚಿಗೆ ನಡೆದ ಒಕ್ಕೂಟದ ಅಧ್ಯಕ್ಷರಾದ ಗಣೇಶನ್, ಮತ್ತು ನಟರಾಜ್ ಬಿ.ಎಂ., ಹಾಗೂ ಎಲ್ಲಾ ರಾಷ್ಟ್ರೀಯ ಪದಾಧಿಕಾರಿಗಳ ಮತ್ತು ಡಿ ಗ್ರೂಪ್ ನೌಕರರ ನೂತನ ರಾಷ್ಟ್ರೀಯ ಉಪಾಧ್ಯಕ್ಷ ಹೆಚ್.ಎಸ್. ನಾಗೇಂದ್ರ ಹೆದ್ದೂರು ಸನ್ಮಾನ ಸಭೆಯಲ್ಲಿ ಸರೋಜಮ್ಮ ಹೆದ್ದೂರು ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ತಮಿಳುನಾಡಿನಲ್ಲಿ ಅಲ್ಲಿನ ಡಿ ಗ್ರೂಪ್ ನೌಕರರ ರಾಷ್ಟ್ರೀಯ ಉಪಾಧ್ಯಕ್ಷ ಹೆಚ್.ಎಸ್. ನಾಗೇಂದ್ರ ಹೆದ್ದೂರು ಪ್ರಯತ್ನದಲ್ಲಿ ಮದರಾಸು ಸರ್ಕಾರಕ್ಕೆ ಮನವಿ ಮಾಡಿ ಖಂಡಿಸಿ, ಹೋರಾಟದ ಫಲವಾಗಿ 31 ಸಾವಿರ ಡಿ ಗ್ರೂಪ್ ಹುದ್ದೆಗಳನ್ನು ಮಂಜೂರು ಮಾಡಿಸಿಕೊಳ್ಳಲಾಗಿದೆ. ಇದೇ ಪ್ರಯತ್ನವನ್ನು ಇತರೆ ರಾಜ್ಯಗಳಲ್ಲೂ ಮುಂದುವರೆಸಬೇಕಿದೆ. ಹಳೇ ಪಿಂಚಣಿ ನೀತಿಯನ್ನು ಮುಂದುವರಿಸಬೇಕಿದೆ. ಈ ಬಗ್ಗೆ ಅಕ್ಟೋಬರ್ ಹತ್ತರಂದು ಚೆನ್ನೈನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನೌಕರರಂತೆ ದೇಶದ ಎಲ್ಲಾ ರಾಜ್ಯಗಳಲ್ಲೂ ಡಿ ಗ್ರೂಪ್ ನೌಕರರಿಗೆ ಒಂದೇ ಸಮನಾದ ವೇತನ, ವೈದ್ಯಕೀಯ ಭತ್ಯೆ ಸೇರಿದಂತೆ ಎಲ್ಲಾ ಸವಲತ್ತುಗಳು ದೊರೆಯುವಂತಾಗಬೇಕು ಎಂಬುದು ನನ್ನ ಬಯಕೆ. ಮಾಸಿಕ ಕಮಿಷನ್ ಪಡೆಯುವ ಖಾಸಗಿ ಸಂಸ್ಥೆಗಳ ಮೂಲಕ ಮಾಡುವ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಗ್ರಾಪಂ, ಪ.ಪಂ. ಮತ್ತು ಪುರಸಭೆಗಳಲ್ಲಿ ಕೆಲಸ ಮಾಡುವ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆಯಾಗಬೇಕು. ಶಿಕ್ಷಣ ಪಡೆದ ನೌಕರರನ್ನು ಹಿರಿತನದ ಆಧಾರದಲ್ಲಿ ಭಡ್ತಿ ನೀಡಬೇಕು. ರಾತ್ರಿ ಕಾವಲುಗಾರರು ಮತ್ತು ಕ್ಲೀನರ್ ಹುದ್ದೆಗಳಿಗೂ ಡಿ ವರ್ಗದ ನೌಕರರನ್ನು ಭರ್ತಿ ಮಾಡುವಂತೆ ಸರ್ಕಾರವನ್ನು ಆಗ್ರಹಿಸುವುದಾಗಿ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ರಾಷ್ಟ್ರೀಯ ಉಪಾಧ್ಯಕ್ಷರಾದ ಹೆಚ್.ಎಸ್. ನಾಗೇಂದ್ರ, ಸರ್ಕಾರಗಳು ಡಿ ಗ್ರೂಪ್ ನೌಕರರ ಬಗ್ಗೆ ಮಲತಾಯಿ ಧೋರಣೆ ವಿಷಾದನೀಯ ಸಂಗತಿಯಾಗಿದೆ ಎಂದ ಅವರು, ಖಾಯಂ ಸರ್ಕಾರಿ ನೌಕರರ ನಾಲ್ಕುಪಟ್ಟು ಕೆಲಸ ತೆಗೆದುಕೊಳ್ಳುವ ದಿನಗೂಲಿ ನೌಕರರ ಕಾರ್ಯಕ್ಷಮತೆಯ ಬಗ್ಗೆ ಅರಿವಿದ್ದರೂ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ದೂರಿದರು.
ಕೆಲವು ದಿನಗೂಲಿ ನೌಕರರನ್ನು ಖಾಯಂಗೊಳಿಸಿದ್ದರೂ ಸಹ ಅವರಿಗೆ ಪಿಂಚಣಿಯನ್ನು ನೀಡದೆ ಸತಾಯಿಸುತ್ತಿರುವುದು ಖಂಡನೀಯ, ದಿನಗೂಲಿ ನೌಕರರು, ಹೊರಗುತ್ತಿಗೆದಾರರು, ಕಂದಾಯ ಇಲಾಖೆಯಲ್ಲಿ ಮತ್ತು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕಿಯರನ್ನು ಡಿ ಗ್ರೂಪ್ ಗೆ ಸೇರಿಸಿ ಖಾಯಂಗೊಳಿಸಬೇಕು. ತಮಿಳುನಾಡಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯ ಜವಾಬ್ದಾರಿಯನ್ನು ನನಗೆ ನೀಡಿದ್ದು, ನೌಕರರ ಪರವಾಗಿ ನಾನು ಪ್ರತಿಭಟನೆ ನಡೆಸಿ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ. ಕಂದಾಯ ಇಲಾಖೆಯಲ್ಲಿ ಗ್ರಾಮ ಸಹಾಯಕರು ಸುಮಾರು 4 ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಯಾವ ಸೌಲತ್ತನ್ನೂ ಕೊಡದೆ, ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆ. ನಮ್ಮ ಕರ್ನಾಟಕ ರಾಜ್ಯದಿಂದಲೂ ಪಾಲ್ಗೊಳ್ಳುವ ನೌಕರರ ಖರ್ಚು-ವೆಚ್ಚವನ್ನು ಭರಿಸಲು ಸಿದ್ಧನಿದ್ದೇನೆ ಎಂದರು. ಈ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕಾಗಿ ಹೇಳಿದರು.
ಸರ್ಕಾರದ ಕೆಲಸಗಳು ಸುಗಮವಾಗಿ ನಡೆಯುವ ಶ್ರಮಿಸುವ ಹೊರಗುತ್ತಿಗೆದಾರರು ಈ ನೌಕರರಿಗೆ ಸಕಾಲದಲ್ಲಿ ವೇತನವನ್ನು ನೀಡದೆ ವಂಚಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡುವ ಸಲುವಾಗಿ ಅಕ್ಟೋಬರ್ 12 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಈ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಮತ್ತು ಹಲವಾರು ಮಂತ್ರಿಗಳು ಭಾಗವಹಿಸಲಿದ್ದು, ಈ ಸಮ್ಮೇಳನಕ್ಕೆ ರಾಜ್ಯದಿಂದ ಬರುವ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಲು ಸಿದ್ಧನಿದ್ದೇನೆ ಎಂದು ಹೇಳಿದರು. ಎಲ್ಲಾ ರಾಜ್ಯಗಳಲ್ಲೂ ನೌಕರರಿಗೆ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಹೋರಾಟ ನಿಲ್ಲಿಸುವ ಸಾಧ್ಯತೆ ಇಲ್ಲ ಎಂದು ಮನವಿ ಮಾಡಿದ್ದು, ಎಲ್ಲಾ ರಾಜ್ಯದ ಸರ್ಕಾರಕ್ಕೆ ನೂತನವಾಗಿ ಆಯ್ಕೆಯಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಹೆಚ್ಎಸ್ ನಾಗೇಂದ್ರ ಹೆದ್ದೂರು ಎಚ್ಚರಿಕೆ ನೀಡಿದ್ದಾರೆ.
ವೇದಿಕೆಯಲ್ಲಿ ಈ ಸಂದರ್ಭದಲ್ಲಿ ಬಿ. ಎಂ. ನಟರಾಜ್ ಗೌರವಾಧ್ಯಕ್ಷರು, ಅಖಿಲ ಭಾರತ ಅಧ್ಯಕ್ಷರಾದ ಕೆ.ಗಣೇಶನ್ ಆಲ್ ಇಂಡಿಯಾ ಅಧ್ಯಕ್ಷರು, ದರ್ಶನ್ ಸಿಂಗ್ ಲುಬಾನಾ, ರಾಮ್ ರಾಜ್ ದುಬೇ, ಸೀತಾರಾಮ ಸುಲಾನಿಯ, ಮಹೇಂದ್ರ ಶರ್ಮ ಆಲ್ ಇಂಡಿಯಾ ಟ್ರಸರರ್, ಅಖಿಲ ಭಾರತ ಉಪಾಧ್ಯಕ್ಷರುಗಳಾದ ಬಾವು ಶ್ಯಾಯದ್ ಪಥನ್ ಮಹಾರಾಷ್ಟ್ರ, ಹೆಚ್.ಎಸ್.ನಾಗೇಂದ್ರ ಹೆದ್ದೂರು ಶಿವಮೊಗ್ಗ, ರಾಂಚಂದ್ರ ಗುಪ್ತ ಉತ್ತರ ಪ್ರದೇಶ, ರಂಜಿತ್ ಸಿಂಗ್ ರನ್ನಾ ಪಂಜಾಬ್, ಎಸ್. ಮಾತುರಾಂ ತಮಿಳುನಾಡು, ವೆಂಕಟೇಶ್ವರ ಆಲುರಾಜು ಆಂಧ್ರಪ್ರದೇಶ, ಚಂದ್ರಶೇಖರ್ ಗುಜಾರ್ ರಾಜಸ್ತಾನ್, ದಿನೇಶ್ ಕುಮಾರ್ ರಾಯ್ಕ ಚಂಡಿಗಡ್, ಹರಿಸಿಂಗ್ ರಾಥೋಡ್ ದೆಹಲಿ, ದೀಪೇಶ್ ಕುಮಾರ್ ಸಾಲಂಕಿ ಗುಜರಾತ್, ರಾಂಬು ಪಂಚಾಲ್ ಮಹಾರಾಷ್ಟ್ರ, ರೋಹಿತ್ ಬಾರ್ಕಿ ಒಡಿಸ್ಸಾ, ಅಜಯ್ ಕುಮಾರ್ ದುಬೆ ಮಧ್ಯಪ್ರದೇಶ್, ಆಲ್ ಇಂಡಿಯಾ ಜನರಲ್ ಸೆಕ್ರೆಟರಿಗಳಾದ ಗೋವಿಂದ ಸಿಂಗ್ ನೇಗಿ ಉತ್ತರಖಾಂಡ್, ಉಮೇಶ್ ಬಹದ್ದೂರು ಸಿಂಗ್ ಉತ್ತರಪ್ರದೇಶ, ಕೃಷ್ಣಪರ್ಶನ್ ಚಂಡಿಘಡ್, ಲೇಖರಾಜ್ ವರ್ಮ ರಾಜಸ್ತಾನ್, ಅನಿಲ್ ಬಾವರಿಯ ಗುಜರಾತ್, ಶ್ಯಾಂ ಸುಂದರ್ದಾಸ್ ಒಡಿಸ್ಸಾ, ಸುರೇಶ್ ಸಿಂಗ್ ಯಾದವ್, ಉತ್ತರ ಪ್ರದೇಶ, ನರೇಶ್ ಕುಮಾರ್ ಹೆಚ್.ಪಿ.. ಪ್ರವೀಣ್ ಕುಮಾರ್ ಬಿಹಾರ್, ಸುಧೀರ್ ಭಾರ್ಗವ್ ಮಧ್ಯಪ್ರದೇಶ, ಚಿತ್ರನ್ ‘ದಾಸ್ ಒಡಿಸ್ಸಾ, ಶ್ರೀಮತಿ ಮಾಯಾ ದೇವಿ ಯಾದವ್ ಉತ್ತರಪ್ರದೇಶ, ಕಾನು ಭಾಯಿ ಪಿ. ಸೋಲಂಕಿ ಗುಜರಾತ್, ರಾಮೇಂದ್ರಕುಮಾರ್ ಶ್ರೀವಾತ್ಸವ್ ಉತ್ತರಪ್ರದೇಶ, ತಪನ್ ಚಕ್ರವರ್ತಿ ಪಶ್ಚಿಮ ಬಂಗಾಳ, ಜ್ವಾರಾಸಿಂಗ್ ಜಾರ್ಖಂಡ್, ರಾಮದಾಸ್ ಸಿರಾಲಿಯಾ ಮಹಾರಾಷ್ಟ್ರ, ಮೋಹನ್ ಲಾಲ್ ಮೀಯಾಂರಾಜಸ್ತಾನ್, ಶ್ರೀಮತಿ ಕಲಾವತಿ ತಿವಾರಿ ಉತ್ತರ ಪ್ರದೇಶ, ಶ್ರೀಮತಿ ನೀಲು ಓಗ್ರೇ, ಶ್ರೀಮತಿ ಸೀತಾ ಪಾಂಡೇಕರ್ ಮಹಾರಾಷ್ಟ್ರ, ಶ್ರೀಮತಿ ಎ. ಅಭಿತಮಲ್, ಶ್ರೀಮತಿ ದೇವಗಂಗಾ ಮಿಶ್ರಾ, ರಾಂ ಗೋಪಾಲ್, ಪಿ. ಮುರಿಯಪ್ಪ, ಸುರೇಶ್ ಸೊನಾಲಿ ಆಯಕರ್ ಮಹಾರಾಷ್ಟ್ರ, ಕೆ. ಅಪ್ಪಾ ರಾವ್ ಒಡಿಸ್ಸಾ ಸರೋಜಮ್ಮ, ಅಖಿಲ ಒಕ್ಕೂಟದ ರಾಷ್ಟ್ರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ರಾಜ್ಯದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಜಿಲ್ಲೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ತಾಲ್ಲೂಕಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಎಲ್ಲರೂ ಉಪಸ್ಥಿತರಿದ್ದರು.ಎಲ್ಲಾ ನೌಕರರು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಹೆಚ್. ಎಸ್. ನಾಗೇಂದ್ರ ಹೆದ್ದೂರು ಇವರ ಮಾತೃಶ್ರೀಯವರಾದ ಇವರಿಗೆ ಅದ್ಧೂರಿಯಾಗಿ ಸನ್ಮಾನಿಸಲಾಯಿತು.
