Categories
ಬೆಂಗಳೂರು

ಬಿಗ್‌ಬಾಸ್‌ ಮನೆಯಲ್ಲಿ ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಯತ್ನ.!?

ಬಿಗ್‌ಬಾಸ್‌ ಮನೆಯಲ್ಲಿ ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಯತ್ನ.!?
-ದೊಡ್ಡ ಮನೆಯಲ್ಲಿ ಕಾಣದ ಡ್ರೋನ್ ಪ್ರತಾಪ್!
– ನಿಜವಾದ ಮಾಹಿತಿ ಏನು? ಇಲ್ಲಿದೆ ಸ್ಪಷ್ಟನೆ

NAMMUR EXPRESS NEWS
ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಈಗ ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಇಷ್ಟೂ ವಾರಗಳೂ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದರೆ ಫಿನಾಲೆಗೆ ಕೆಲವೇ ದಿನ ಇರುವಾಗಲೇ ಹೊಸ ಆತಂಕಕಾರಿ ಸಂಗತಿಯೊಂದು ತಿಳಿದು ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್‌ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಎಲ್ಲಾ ಕಡೆ ವೈರಲ್ ಆಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ಕೂಡ ಕಲರ್ಸ್ ಕನ್ನಡ ಕೊಟ್ಟಿದೆ.

ಡ್ರೋನ್ ಪ್ರತಾಪ್ ಅವರದ್ದು ಸುಸೈಡ್ ಅಟೆಂಪ್ಟ್ ಅಲ್ಲ. ಪ್ರತಾಪ್ ಅವರು ಎರಡು ದಿನದಿಂದ ಊಟ ಮಾಡಿರಲಿಲ್ಲ. ಹಾಗಾಗಿ ಫುಡ್ ಪಾಯಿಸನ್ ಆಗಿ ರಾತ್ರಿ ಆಸ್ಪತ್ರೆಗೆ ದಾಖಲಿಸಿದ್ದೆವು. ಇಂದು ಸಂಜೆ ವೇಳೆಗೆ ಬಿಗ್ ಬಾಸ್ ಮನೆಗೆ ಹಿಂದಿರುಗಲಿದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಯಾವುದೇ ಆತಂಕವಿಲ್ಲ ಎಂದು ವಾಹಿನಿ ಸ್ಪಷ್ಟನೆ ಕೊಟ್ಟಿದೆ. ಮನೆಯಲ್ಲಿ ಕೆಲವು ವಿಚಾರದಲ್ಲಿ ಪ್ರತಾಪ್ ಬೇಸರಗೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರಿಯಾಗಿ ಊಟ ಮಾಡಿರಲಿಲ್ಲ. ಖಾಲಿ ಹೊಟ್ಟೆಯಲ್ಲಿ ವಿಟಮಿನ್ ಮಾತ್ರೆ ಸೇವಿಸಿದ್ದರು ಎನ್ನಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಅವರು ಆಗಾಗ ಸೈಲೆಂಟ್ ಆಗುತ್ತಾರೆ. ಕಷ್ಟದ ಸಂದರ್ಭದಲ್ಲಿ ಪ್ಯಾನಿಕ್ ಆಗುತ್ತಾರೆ ಎನ್ನುವ ಅಭಿಪ್ರಾಯವೂ ಅನೇಕರದ್ದು. ಇದೇ ವಿಚಾರ ಇಟ್ಟುಕೊಂಡು ಮನೆಯಲ್ಲಿ ಟಾಸ್ಕ್‌ನಿಂದ ಹೊರಗೆ ಇಡಲಾಗಿದೆ. ‘ನನಗೆ ಒಂದು ಚಾನ್ಸ್ ಕೊಟ್ಟರೆ ತಾನೇ ಗೊತ್ತಾಗೋದು. ಪದೇಪದೆ ಪ್ಯಾನಿಕ್ ಆಗ್ತಿಯಾ ಎಂದರೆ ಅದು ಎಷ್ಟು ಸರಿ’ ಎಂದು ಪ್ರತಾಪ್ ಅವರು ಸಂಗೀತಾ ಹಾಗೂ ನಮ್ರತಾನ ಪ್ರಶ್ನೆ ಮಾಡಿದ್ದಾರೆ. ಈ ಪ್ರೋಮೊ ಕೂಡ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

ಬಿಗ್‌ಬಾಸ್ ಮನೆಗೆ ಹೊಸ ವರ್ಷದ ಮೊದಲ ದಿನದಂದು ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿ ಡ್ರೋನ್ ಪ್ರತಾಪ್ ಗೆ ಕುಟುಂಬದಿಂದ ದೂರವೇ ಇರಬೇಕಾಗುತ್ತದೆ. ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ಎಂಬುದಾಗಿ ಹೇಳಿದ್ದರು. ಅಂದಿನಿಂದ ಪ್ರತಾಪ್ ತುಂಬಾ ಚಿಂತಿಸುತ್ತಿದ್ದರು ಎಂದು ಹೇಳಲಾಗಿದೆ. ಕಳೆದ ವಾರವಷ್ಟೇ ಬಿಗ್‌ಬಾಸ್ ಮನೆಗೆ ಪ್ರತಾಪ್‌ ಅವರ ತಂದೆ-ತಾಯಿ ಬಂದು ಹೋಗಿದ್ದರು. ಬಹಳ ಖುಷಿಪಟ್ಟಿದ್ದ ಪ್ರತಾಪ್‌, ಸ್ವಾಮೀಜಿ ಭವಿಷ್ಯದಿಂದ ತುಂಬಾ ಕುಗ್ಗಿದ್ದರು. ಇದೀಗ ಅನಾರೋಗ್ಯ ಬಂದಿರುವುದು ಪ್ರತಾಪ್‌ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ. ಆದಷ್ಟು ಬೇಗ ಗುಣಮುಖರಾಗಲಿ ಎಂದು ಬಯಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.