Categories
ಬೆಂಗಳೂರು

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ಇ ಖಾತಾ ಕಡ್ಡಾಯ..!!

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ಇ ಖಾತಾ ಕಡ್ಡಾಯ..!!
– ಆದಾಯ ಸಂಗ್ರಹಕ್ಕೆ ಸಂಪುಟದ ಮಹತ್ವದ ನಿರ್ಧಾರ
– ಬಿ-ಖಾತಾ ವಿತರಣೆಯಿಂದ ಸಾವಿರಾರು ಕೋಟಿ ನಿರೀಕ್ಷೆ

NAMMUR EXPRESS NEWS
ಬೆಂಗಳೂರು: ಬೆಂಗಳೂರು, ಇತರ ನಗರಗಳ ವ್ಯಾಪ್ತಿಯಲ್ಲಿ ಸೈಟು, ಜಮೀನುಗಳ ಬೆಲೆ ಜಾಸ್ತಿ ಎಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೈಟುಗಳಿಗೆ ಹೋಗುವವರೇ ಹೆಚ್ಚು.. ಆದರೆ, ನೆನಪಿಡಿ ಅಲ್ಲಿನ ಆಸ್ತಿಗಳಿಗೆ ಇನ್ನು ಬಿ ಖಾತಾ ಕಡ್ಡಾಯವಾಗಲಿದೆ. ಸಂಪನ್ಮೂಲ ಕ್ರೋಡೀಕರಣ ದೃಷ್ಟಿಯಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ನೀಡಿ ಆಸ್ತಿ ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಪಂಚಾಯಿತಿಗಳಿಗೆ ವಾರ್ಷಿಕ ಸಾವಿರಾರು ಕೋಟಿ ರೂ. ತೆರಿಗೆ ಸಂಗ್ರಹಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯಿತಿ ರಾಜ್‌ (ತಿದ್ದುಪಡಿ) ವಿಧೇಯಕ -2025’ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಉದ್ದೇಶಿತ ವಿಧೇಯಕಕ್ಕೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತು.

ಅನಧಿಕೃತ ಬಡಾವಣೆಗಳ ರಚನೆ ತಡೆಗಟ್ಟಲು ಇ-ಸ್ವತ್ತು ತಂತ್ರಾಂಶವನ್ನು 2013ರ ಜೂ. 15ರಿಂದ ಜಾರಿಗೊಳಿಸಿದ್ದು, ಪಂಚತಂತ್ರ ತಂತ್ರಾಂಶದಲ್ಲಿ 1.40 ಕೋಟಿ ಆಸ್ತಿಗಳ ವಿವರ ನಮೂದಾಗಿದೆ. ಆದರೆ ಇ-ಸ್ವತ್ತು ತಂತ್ರಾಂಶದಲ್ಲಿ 40 ಲಕ್ಷ ಆಸ್ತಿಗಳಷ್ಟೇ ನೋಂದಣಿಯಾಗಿದ್ದು, ಬಾಕಿ 96 ಲಕ್ಷ ಆಸ್ತಿಗಳು ಇ-ಸ್ವತ್ತು ವ್ಯಾಪ್ತಿಯಿಂದ ಹೊರಗಿವೆ. ಸದ್ಯ ಇ-ಸ್ವತ್ತು ವ್ಯಾಪ್ತಿಯಲ್ಲಿರುವ 40 ಲಕ್ಷ ಆಸ್ತಿಗಳ ಪೈಕಿ 34 ಲಕ್ಷ ಆಸ್ತಿಯಿಂದ 800 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಬಾಕಿ 96 ಲಕ್ಷ ಆಸ್ತಿಗಳು ಬಿ- ಖಾತಾ ಪಡೆದರೆ ಪಂಚಾಯಿತಿಗಳಿಗೆ ಎರಡು- ಮೂರು ಪಟ್ಟು ಆಸ್ತಿ ತೆರಿಗೆ ಹೆಚ್ಚಾಗಲಿದೆ. ಈ ತೀರ್ಮಾನಕ್ಕೆ ಪೂರಕವಾಗಿ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಕಾಯಿದೆಗೆ ಸೆಕ್ಷನ್‌ 199(ಬಿ) ಮತ್ತು 199(ಸಿ) ಸೇರ್ಪಡೆ ಮೂಲಕ ಇದೇ ವಿಧಾನಮಂಡಲ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ವಿಧೇಯಕ ಮಂಡನೆ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮೂಲಗಳಿಂದ ಖಚಿತ ಪಟ್ಟಿದೆ.

ಇ ಖಾತಾ ಕೊಡಿಸಿದರೆ ಹಣ : ಇತ್ತೀಚೆಗೆ, ಬಿಬಿಎಂಪಿಯಿಂದ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲಾಗಿದೆ. ಅದನೇಂದರೆ, ಆಸ್ತಿಗಳ ಮಾಲೀಕರಿಗೆ ಇ ಖಾತಾ ಸಿಗುವಂತೆ ಸಹಾಯ ಮಾಡುವವರಿಗೆ ಬಿಬಿಎಂಪಿ ಹಣ ನೀಡಲಿದೆ. ಒಂದು ಖಾತೆಗೆ 45 ರೂ.ಗಳಂತೆ ಹಣ ನೀಡುತ್ತದೆ. ಇ-ಖಾತಾ ಸೇವೆ ಒದಗಿಸಿ ಪ್ರತಿ ಖಾತಾಗೆ 45 ರೂ. ಗಳಿಸಿ ಕಾರ್ಯಕ್ರಮ ಜಾರಿಗೆ ತಂದ ಬಿಬಿಎಂಪಿ. ಮೊಬೈಲ್‌ ಸಂಖ್ಯೆ, ಆಧಾರ್‌ ಕಾರ್ಡ್‌ ಬಳಸಿ ನೋಂದಣಿ ಮಾಡಿಕೊಂಡು ಇ ಖಾತಾ ಸೇವೆ ನೀಡಬಹುದು. ಪ್ರತಿ ಅರ್ಜಿ, ತಿದ್ದುಪಡಿಗೆ 45 ರೂಪಾಯಿ ಹಣ ಗಳಿಸಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.