Categories
ರಾಜ್ಯ

ಟಾಪ್ 5 ನ್ಯೂಸ್ ಕರ್ನಾಟಕ

ಟಾಪ್ 5 ನ್ಯೂಸ್ ಕರ್ನಾಟಕ

ಬೆಂಗಳೂರು : ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
– ಹಾಸನ : ಕಾಡಾನೆ ದಾಳಿಗೆ ಮತ್ತೋರ್ವ ಮಹಿಳೆ ಸಾವು..!
– ರಾಯಚೂರು: ತುಂಗಭದ್ರಾ ಕಾಲುವೆಯಲ್ಲಿ ಹೋಳಿ ಆಚರಣೆ ನಂತರ ಸ್ನಾನಕ್ಕೆ ತೆರಳಿದ್ದ ಯುವಕ ಸಾವು..!
– ವಿಜಯಪುರ : ಬಾವಿಗಿಳಿದು ನೀರು ಕುಡಿಯುವಾಗ ಕಾಲುಜಾರಿ ಬಾಲಕ, ಅಜ್ಜಿ ಸಾವು..!!
– ಬೆಳಗಾವಿ: ಹೋಳಿ ಹಬ್ಬ ಹಿನ್ನೆಲೆ ಪಾರ್ಟಿ ಮಾಡುವಾಗ ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ಗಲಾಟೆ, ಚಾಕು ಇರಿತ

NAMMUR EXPRESS NEWS
ಬೆಂಗಳೂರು : ಮೂಕ ಪ್ರಾಣಿ ಮೇಲೆ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿ ಗಾಯಗೊಳಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಬೆಂಗಳೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ ಬಳಿ ಈ ಘಟನೆ ನಡೆದಿದೆ. ಇಬ್ಬರು ಪುರುಷರು ಶ್ವಾನದ ಮರ್ಮಾಂಗವನ್ನು ಕೊಯ್ದು ಸಂಬೋಗ ಮಾಡಿದ ಆರೋಪ ಕೇಳಿಬಂದಿದೆ. ಸದ್ಯ ಸಾರ್ವಜನಿಕರು ನೋಡಿ ವ್ಯಕ್ತಿಗೆ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಜಯನಗರದ ಸುತ್ತಮುತ್ತ ವಿದ್ಯಾ ಎಂಬುವ ಮಹಿಳೆ ಶ್ವಾನಗಳಿಗೆ ಪ್ರತಿನಿತ್ಯ ಊಟ ಹಾಕುತ್ತಾರೆ. ಮಾರ್ಚ್​ 13 ರಾತ್ರಿ ಅದೇ ರೀತಿ ಶ್ವಾನಕ್ಕೆ ಊಟ ನೀಡಲು ಹೋಗಿದ್ದಾರೆ. ಆ ವೇಳೆ ವ್ಯಕ್ತಿಯೋರ್ವ ಶ್ವಾನದ ಜೊತೆ ಸಂಬೋಗ ಮಾಡುತ್ತಿರುವುದನ್ನು ನೋಡಿದ್ದಾರೆ. ಕುಡಲೇ ಶ್ವಾನವನ್ನು ರಕ್ಷಣೆ ಮಾಡಿದ್ದಾರೆ. ನಂತರ ಶಾಲಿನಿ ಮೈದಾನದ ಬಳಿ ಶ್ವಾನಪ್ರೀಯರು ತೆರಳಿದ್ದಾರೆ. ಈ ವೇಳೆ ಅದೇ ವ್ಯಕ್ತಿ ಕಂಡಿದ್ದಾನೆ. ಬಳಿಕ ವ್ಯಕ್ತಿಯನ್ನು ಹಿಡಿದು ಥಳಿಸಿ ಬಳಿಕ ಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

– ಹಾಸನ : ಕಾಡಾನೆ ದಾಳಿಗೆ ಮತ್ತೋರ್ವ ಮಹಿಳೆ ಸಾವು..!

ಹಾಸನ : ಕಾಡಾನೆ ದಾಳಿಯಿಂದ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಬೊಮ್ಮನಹಳ್ಳಿ ನಡೆದಿದೆ. ಸುಶೀಲಮ್ಮ (63) ಮೃತ ಮಹಿಳೆ. 2 ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ ನಾಲ್ಕನೇ ಬಲಿ ಆಗಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಸೊಂಡಲಿನಿಂದ ಮಹಿಳೆಯನ್ನು ಎತ್ತಿ ಬಿಸಾಡಿ, ಕಾಲಿನಿಂದ ತಲೆಯನ್ನು ತುಳಿದು ಸಾಯಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಾಡಾನೆ ದಾಳಿಗೆ ಮಹಿಳೆ ಸಾವು ಖಂಡಿಸಿ ಚೀಕನಹಳ್ಳಿ-ಬೇಲೂರು ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಕಳೆದ 2 ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ. ಹೀಗಾಗಿ ಕಾಡಾನೆ ಹಾವಳಿ ನಿಯಂತ್ರಿಸದ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

– ರಾಯಚೂರು: ತುಂಗಭದ್ರಾ ಕಾಲುವೆಯಲ್ಲಿ ಹೋಳಿ ಆಚರಣೆ ನಂತರ ಸ್ನಾನಕ್ಕೆ ತೆರಳಿದ್ದ ಯುವಕ ಸಾವು..!

ರಾಯಚೂರು: ಹೋಳಿ ಆಚರಣೆ ನಂತರ ಸ್ನಾನಕ್ಕೆ ತೆರಳಿದ್ದ ಯುವಕ ನೀರುಪಾಲು ಅದೇ ರೀತಿಯಾಗಿ ಹೋಳಿ ಆಚರಣೆ ನಂತರ ತುಂಗಭದ್ರಾ ಕಾಲುವೆಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕ ನೀರುಪಾಲಾಗಿರುವಂತಹ ಘಟನೆ ರಾಯಚೂರು ತಾಲೂಕಿನ ಗಿಲ್ಲೇಸೂಗೂರು ಕ್ಯಾಂಪ್ ಬಳಿ ನಡೆದಿದೆ. ಯರಗೇರಾ ಗ್ರಾಮದ ನಿವಾಸಿ ಗಂಗರಾಮ್(29) ನೀರುಪಾಲಾದ ಯುವಕ. 6 ಜನ ಸ್ನೇಹಿತರ ಜತೆ ಸೇರಿ ಹೋಳಿ ಆಚರಿಸಿದ್ದ ಗಂಗರಾಮ್, ಬಳಿಕ ಕಾಲುವೆಯಲ್ಲಿ ಸ್ನಾನಕ್ಕೆ ಹೋಗಿದ್ದಾರೆ. ಈ ವೇಳೆ ಈಜು ಬಾರದ ಬಾಲಕನ ರಕ್ಷಣೆ ‌ಮಾಡಲು ಹೋಗಿ ನೀರುಪಾಲಾಗಿದ್ದಾರೆ. ಇಡಪನೂರು ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

– ವಿಜಯಪುರ : ಬಾವಿಗಿಳಿದು ನೀರು ಕುಡಿಯುವಾಗ ಕಾಲುಜಾರಿ ಬಾಲಕ, ಅಜ್ಜಿ ಸಾವು..!!

ವಿಜಯಪುರ: ಬಾಲಕ ಹಾಗೂ ಅಜ್ಜಿ ನೀರುಪಾಲಾಗಿರುವಂತಹ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ತೋಟದಲ್ಲಿ ನಡೆದಿದೆ. ಅಸಾದ್‌ ಮುಲ್ಲಾ(12), ಸಲೀಮಾ‌ ಮುಲ್ಲಾ(55) ಮೃತರು. ಮೃತ ಬಾಲಕ ಬಾವಿಗಿಳಿದು ನೀರು ಕುಡಿಯುವಾಗ ಕಾಲುಜಾರಿ ಬಿದಿದ್ದಾನೆ. ಆತನ ರಕ್ಷಣೆಗೆ ಹೋಗಿದ್ದ ವೃದ್ಧೆ ಕೂಡ ಮುಳುಗಿ ಸಾವನ್ನಪ್ಪಿದ್ದಾರೆ. ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.

– ಬೆಳಗಾವಿ: ಹೋಳಿ ಹಬ್ಬ ಹಿನ್ನೆಲೆ ಪಾರ್ಟಿ ಮಾಡುವಾಗ ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ಗಲಾಟೆ, ಚಾಕು ಇರಿತ

ಬೆಳಗಾವಿ: ಹೋಳಿ ಹಬ್ಬ ಹಿನ್ನೆಲೆ ಜಮೀನಿನಲ್ಲಿ ಪಾರ್ಟಿ ವೇಳೆ ಗಲಾಟೆಯಾಗಿ ಓರ್ವ ಯುವಕನಿಗೆ ಚಾಕು ಇರಿದಿರುವಂತಹ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ಮಧ್ಯೆ ಕಿರಿಕ್ ಆಗಿದೆ. ಅಲ್ಲೇ ಗುಂಪು ಕಟ್ಟಿಕೊಂಡು ಯುವಕರು ಹೊಡೆದಾಡಿದ್ದಾರೆ. ಗಲಾಟೆ ವೇಳೆ ಪ್ರಕಾಶ್ ಚತುರ್​ಗೆ ಚಾಕು ಇರಿಯಲಾಗಿದೆ. ಪ್ರಕಾಶ್ ಚತುರ್​ಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.