Categories
ಬೆಂಗಳೂರು

ಸರ್ಕಾರಿ ಫೋನ್ ನಂಬರ್ ರಿಸೀವ್ ಮಾಡದ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು!

ಸರ್ಕಾರಿ ಫೋನ್ ನಂಬರ್ ರಿಸೀವ್ ಮಾಡದ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು!
– ಜನರ ಪರದಾಟ: ಸರ್ಕಾರಿ ಸೇವೆಗಳಿಗಾಗಿ ನಿಯೋಜಿತರಾಗಿರುವ ಅಧಿಕಾರಿಗಳೇ ಹೀಗೆ ಮಾಡಿದ್ರೆ ಕೇಳೋರು ಯಾರು?
– ಸರ್ಕಾರ ಮತ್ತು ಕೋರ್ಟ್ ತಕ್ಷಣ ಗಮನಿಸಲು ಜನರ ಪಟ್ಟು

NAMMUR EXPRESS NEWS
ಬೆಂಗಳೂರು : ರಾಜ್ಯದ ಸರ್ಕಾರಿ ಇಲಾಖೆಗಳ ಎಲ್ಲಾ ಅಧಿಕಾರಿಗಳಿಗೆ ಹಾಗೂ ಆಯಾ ವಿಭಾಗದ ನೌಕರರಿಗೆ ಸರ್ಕಾರವೇ ಮೊಬೈಲ್ ಹಾಗೂ ಸರ್ಕಾರಿ ಮೊಬೈಲ್ ಫೋನ್ ನಂಬರ್ ನೀಡಿದೆ.
ಗ್ರಾಮೀಣ ಅಭಿವೃದ್ಧಿ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ನೌಕರರು ಮತ್ತು ಅಧಿಕಾರಿಗಳಿಗೆ ಮೊಬೈಲ್ ಮತ್ತು ಮೊಬೈಲ್ ರೀಚಾರ್ಜ್ ಹಣವನ್ನ ಕೂಡ ಸರ್ಕಾರವೇ ಭರಿಸುತ್ತಿದೆ. ಆದರೆ ಈ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರು ಸಂಬಂಧಪಟ್ಟ ಇಲಾಖೆಯ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲು ಆ ನಂಬರ್ ಗೆ ಬರುವ ಕರೆಯನ್ನು ರಿಸೀವ್ ಮಾಡುತ್ತಿಲ್ಲ ಎನ್ನುವ ಆರೋಪ ದೊಡ್ಡ ಪ್ರಮಾಣದಲ್ಲಿ ರಾಜ್ಯದಾದ್ಯಂತ ವ್ಯಕ್ತವಾಗುತ್ತಿದೆ.
ಅರಣ್ಯ, ಆರೋಗ್ಯ, ಕಂದಾಯ, ನೀರಾವರಿ, ವೈದ್ಯಕೀಯ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಸರ್ಕಾರ ಕೊಟ್ಟಿರುವಂತಹ ಮೊಬೈಲ್ ನಂಬರ್ ಕರೆ ಸ್ವೀಕರಿಸುತ್ತಿಲ್ಲ. ಇದರಿಂದಾಗಿ ಜನರು ಪ್ರತಿ ದಿನ ಮಾಹಿತಿಗಾಗಿ ಅಥವಾ ಸೇವೆಗಾಗಿ ಸರ್ಕಾರದ ಸೇವೆಯನ್ನು ಪಡೆಯಲು ಪರದಾಟ ನಡೆಸುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಇದುವರೆಗೆ ಯಾರೂ ಗಮನಿಸದಿರುವುದು ಮತ್ತೊಂದು ಅನಾಹುತಕ್ಕೆ ಕಾರಣವಾಗಿದೆ.
ಪ್ರತಿನಿತ್ಯ ಇಂತಹ ಸಮಸ್ಯೆಗಳಿಂದಾಗಿ ಜನರು ತಮ್ಮ ಕೆಲಸವನ್ನು ಬಿಟ್ಟು, ಕಚೇರಿಗಳಿಗೆ ಸಣ್ಣಪುಟ್ಟ ವಿಚಾರಗಳಿಗೆ ಕಚೇರಿಗಳಿಗೆ ಅಲೆಯುವಂತಾಗಿದೆ. ಇನ್ನು ದೂರು, ಸಾಂತ್ವಾನದಂತಹ ಸಮಸ್ಯೆಗಳಿಗೂ ಕೂಡ ಕರೆ ಸ್ವೀಕಾರ ಮಾಡುತ್ತಿಲ್ಲ
ಈಗಾಗಲೇ ಸರ್ಕಾರದ ಅನೇಕ ಸಹಾಯವಾಣಿಗಳು ಇದ್ದರೂ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಈ ಬಗ್ಗೆ ತಕ್ಷಣ ಸರ್ಕಾರ ಒಂದು ತನಿಖಾ ಸಮಿತಿಯನ್ನ ನೇಮಿಸಿ, ಕರೆ ಮಾಡುವ ವಿಭಾಗಕ್ಕೆ ಮಾಹಿತಿಯನ್ನು ನೀಡಬೇಕಾಗಿದೆ. ಇಲ್ಲವಾದಲ್ಲಿ ಸರ್ಕಾರಿ ಸೇವೆಗಾಗಿ ಅಧಿಕಾರಿಗಳನ್ನ ನಿಯೋಜಿಸಿ ಸಹಾಯವಾಣಿಗಳನ್ನು ತೆರೆದರು ಪ್ರಯೋಜನಕ್ಕೆ ಬಾರದಂತಾಗುತ್ತಿದೆ.

ಸರ್ಕಾರಿ ವೆಬ್ ಕೂಡ ಪ್ರಯೋಜನಕ್ಕಿಲ್ಲ!

ಇನ್ನು ಸರ್ಕಾರ ಕೆಲವು ವೆಬ್ಸೈಟ್ ಗಳಲ್ಲಿ ಹಾಗೂ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಕರೆ ಹಾಗೂ ಮಾಹಿತಿ, ಸೇವೆಗಾಗಿ ನೀಡಿರುವ ನಂಬರ್ಗಳು ಕೂಡ ಅನೇಕ ಬಾರಿ ಕಾರ್ಯ ನಿರ್ವಹಿಸುತ್ತಿಲ್ಲ.
ಇಲ್ಲಿ ಇರುವ ಫೋನ್ ನಂಬರ್ ಕೂಡ ಅನೇಕ ಬಾರಿ ರಿಸೀವ್ ಮಾಡದೇ ಇರುವ ಬಗ್ಗೆ ಆರೋಪಗಳಿವೆ. ಸರ್ಕಾರ ತಕ್ಷಣ ಸರ್ಕಾರ ಗಮನಿಸಬೇಕು. ಇಲ್ಲವಾದಲ್ಲಿ ಸರ್ಕಾರದ ಹಣ ಒಂದು ಕಡೆ ದುಂದು ವೆಚ್ಚ ಆಗುವುದಲ್ಲದೆ, ಸಾರ್ವಜನಿಕರಿಗೆ ಪರದಾಡುವಂತಹ ಪರಿಸ್ಥಿತಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಈ ಬಗ್ಗೆ ಸರ್ಕಾರ ತನಿಖಾ ಸಮಿತಿ ನಿಯೋಜಿಸಬೇಕು ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.