Categories
Uncategorized ರಾಜ್ಯ

ಕರ್ನಾಟಕ ಟಾಪ್ ನ್ಯೂಸ್ !!

ಕರ್ನಾಟಕ ಟಾಪ್ ನ್ಯೂಸ್ !!

* ಫೋಕ್ಸೋ ಕೇಸ್ ಮಾಜಿ ಸಿ.ಎಂ ಬಿಎಸ್‌ವೈ‌ಗೆ ಬಿಗ್ ರಿಲೀಫ್
* ಬದ್ಧತೆಯ ನಾಯಕರನ್ನು ಹೊಂದಿರುವ ಜಿಲ್ಲಾ ಸೌಟ್ ಗೈಡ್ಸ್ ಸಂಸ್ಥೆ -ಪಿ.ಜಿ.ಆರ್ ಸಿಂಧ್ಯಾ
* ಹೋಂ ಸ್ಟೇ, ರೆಸಾರ್ಟ್ಸ್ ಮಾಲೀಕರ ವಿರುದ್ಧ ಗರಂ ಆದ ಎಸ್ಪಿ ವಿಕ್ರಂ ಅಮಟೆ

NAMMUR EXPRESS NEWS
* ಪೋಕ್ಸ ಕೇಸ್ ಮಾಜಿ ಸಿ.ಎಂ ಬಿಎಸ್‌ವೈಗೆ ಬಿಗ್ ರಿಲೀಫ್

ಬೆಂಗಳೂರು: ಫೋಕ್ಸೋ ಕೇಸ್‌ನಲ್ಲಿ ಮಾಜಿ ಸಿ‌.ಎಂ ಯಡಿಯೂರಪ್ಪಗೆ ಬಿಗ್ ರಿಲೀಫ್ ಸಿಕ್ಕಿದೆ. ಕಾಗ್ನಿಜೆನ್ಸ್, ಸಮನ್ಸ್ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಜೊತೆಗೆ ಬಿಎಸ್‌ವೈ ಖುದ್ದು ಹಾಜರಾತಿಗೂ ವಿನಾಯಿತಿ ನೀಡಿದೆ.
ಯಡಿಯೂರಪ್ಪ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ನಂತರ ಈ ಪ್ರಕರಣವನ್ನು ಸರ್ಕಾರ CIDಗೆ ವಹಿಸಿತ್ತು.

* ಬದ್ಧತೆಯ ನಾಯಕರನ್ನು ಹೊಂದಿರುವ ಜಿಲ್ಲಾ ಸೌಟ್ ಗೈಡ್ಸ್ ಸಂಸ್ಥೆ -ಪಿ.ಜಿ.ಆರ್ ಸಿಂಧ್ಯಾ

ಶಿವಮೊಗ್ಗ : ಜಿಲ್ಲಾ ಸೌಟ್ ಗೈಡ್ ಸಂಸ್ಥೆ ಬದ್ಧತೆಯ ನಾಯಕರನ್ನು ಹೊಂದಿದೆ ಎಂದು ಪಿ.ಜಿ.ಆ‌ರ್ ಸಿಂಧ್ಯಾ ಹೇಳಿದರು.
ಭಾರತ್ ಸೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆಗೆ ಭೇಟಿ ನೀಡಿ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಇತಿಹಾಸದಲ್ಲಿ ಬದ್ಧತೆಯ ನಾಯಕರು ಕಟ್ಟಿ ಬೆಳೆಸಿರವ ಸಂಸ್ಥೆಯನ್ನು ಉಳಿಸಿಕೊಂಡು, ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸಿಕೊಂಡು ಹೋಗುವಂತೆ, ಗಣತಿಯನ್ನು ಹೆಚ್ಚಿಸುವಂತೆ, ರಚನಾತ್ಮಕ ಚಟುವಟಿಕೆಯನ್ನು ಹಮ್ಮಿಕೊಳ್ಳುವಂತೆ, ಮುಂದಿನ ಬೇಸಿಗೆ ಶಿಬಿರಗಳನ್ನು ಯಶಸ್ವಿಗೊಳಿಸುವಂತೆ ಪದಾಧಿಕಾರಿಗಳಿಗೆ ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲಾ ಸಂಸ್ಥೆ ಸ್ಥಳೀಯ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ದೇಶದಲ್ಲೇ ನಮ್ಮ ಕರ್ನಾಟಕ ರಾಜ್ಯ ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಪ್ರಥಮ ಸ್ಥಾನದಲ್ಲಿದೆ ಎಂದರು.

* ಹೋಂ ಸ್ಟೇ, ರೆಸಾರ್ಟ್ಸ್ ಮಾಲೀಕರ ವಿರುದ್ಧ ಗರಂ ಆದ ಎಸ್ಪಿ ವಿಕ್ರಂ ಅಮಟೆ

ಚಿಕ್ಕಮಗಳೂರು: ಕೊಪ್ಪಳದಲ್ಲಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣ ದಿಂದ ಅಲರ್ಟ್ ಆಗಿರುವ ಚಿಕ್ಕಮಗಳೂರು ಪೊಲೀಸರು ಇಂದು ಜಿಲ್ಲೆಯಲ್ಲಿರುವ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರ ಸಭೆಯನ್ನು ಎಸ್ಪಿ ವಿಕ್ರಮ್ ಅಮಟೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆದಿದ್ದರು. ಆದರೆ ಜಿಲ್ಲೆಯಲ್ಲಿರುವ 1300 ಕ್ಕೂ ಹೆಚ್ಚು ಹೋಂ ಸ್ಟೇ ಹಾಗೂ ರೆಸಾರ್ಟ್ ಗಳ ಪೈಕಿ ಕೇವಲ 99 ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಸಭೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರ ವಿರುದ್ಧ ಗರಂ ಆದರು.
ಜಿಲ್ಲಾಡಳಿತ ಸಭೆ ಕರೆದಾಗ ಬರಲ್ಲ ಅಂದ್ರೆ ನೀವು ಎಷ್ಟೇ ದೊಡ್ಡ ಹೋಂಸ್ಟೇ, ರೆಸಾರ್ಟ್ ಮಾಲೀಕರಾದರೂ ನಿಮ್ಮ ಲೈಸನ್ಸ್ ಹೇಗೆ ರಿನೆವಲ್ ಆಗುತ್ತೆ ನೋಡೋಣ ಅಂತ ಬಿಸಿ ಮುಟ್ಟಿಸಿದ್ರು. ಕೆಲ ಹೋಂ ಸ್ಟೇ ರೆಸಾರ್ಟ್ ಮಾಲೀಕರು ಜಿಲ್ಲಾಡಳಿತವನ್ನು ಲಘುವಾಗಿ ಪರಿಗಣಿಸಿದ್ದಾರೆ ಅಂತವರ ವಿರುದ್ಧ ನಮಗೆ ಹೇಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಚನ್ನಾಗಿ ಗೊತ್ತಿದೆ ಎಂದು ಎಸ್‌ಪಿ ವಿಕ್ರಂ ಆಮಟೆ ವಾರ್ನಿಂಗ್ ನೀಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.