Categories
ಬೆಂಗಳೂರು

ರಾಜ್ಯದಲ್ಲಿ ಭಾರಿ ಮಳೆ, ಗುಡುಗು ಮತ್ತು ಸಿಡಿಲು ಗ್ಯಾರಂಟಿ..!

ರಾಜ್ಯದಲ್ಲಿ ಭಾರಿ ಮಳೆ, ಗುಡುಗು ಮತ್ತು ಸಿಡಿಲು ಗ್ಯಾರಂಟಿ..!
– ಮಾರ್ಚ್ 1ರಿಂದ ಮಳೆ ಅಬ್ಬರ ಶುರು!
– ಹವಮಾನ ಇಲಾಖೆ ಮುನ್ಸೂಚನೆ

NAMMUR EXPRESS NEWS
ಬೆಂಗಳೂರು: ಮಳೆ.. ಮಳೆ.. ಮಳೆ.. ಹೀಗೆ ಮಳೆಗಾಗಿ ರೈತರು, ಜನರು ಕಾಯುತ್ತಾ ಕೂತಿದ್ದಾರೆ. ಆದರೂ ಈವರೆಗೂ ಮಳೆರಾಯ ಕರುಣೆ ತೋರಿಸುತ್ತಿಲ್ಲ. ಮಳೆ ಬಿಡಿ ಬೇಸಿಗೆ ಆರಂಭಕ್ಕೂ ಮೊದಲು ಈ ಸಮಯದಲ್ಲಿ ಕೊತ ಕೊತ ಕುದಿಯುವ ಬಿಸಿಲು ಇದೆ. ಹೀಗಾಗಿ ಜನರು ಕೂಡ ಪ್ರತಿನಿತ್ಯ ಭಾರಿ ದೊಡ್ಡ ಸಂಕಷ್ಟ ಎದುರಿಸುವಂತಾಗಿದೆ. ಹೀಗಿದ್ದಾಗ ಹವಾಮಾನ ಇಲಾಖೆಯಿಂದ ಗುಡ್ ನ್ಯೂಸ್ ಹೊರಬಿದ್ದಿದೆ, ಭಾರಿ ಮಳೆಯ ಮುನ್ಸೂಚನೆ ಕೂಡ ನೀಡಲಾಗಿದೆ! ಹಾಗಾದರೆ ಯಾವ ಯಾವ ಜಾಗದಲ್ಲಿ ಮಳೆ ಬೀಳಲಿದೆ ಗೊತ್ತಾ?ಬೇಸಿಗೆ ಕೊತ ಕೊತ ಕುದಿಯುತ್ತಿದೆ. ಅದರಲ್ಲೂ ಕಳೆದ ವರ್ಷ ಮಳೆಯ ಕೊರತೆ ಎದುರಾದ ಕಾರಣ, ಈಗ ಕುಡಿಯುವ ನೀರಿಗೆ ಕೂಡ ಬರ ಬಂದಿದೆ.

ಗ್ರಾಮೀಣ ಭಾಗದಲ್ಲಿ ಅಂದರೆ, ಹಳ್ಳಿ ಜನರಿಗೆ ನೀರು ತುಂಬಿಸುವುದೇ ಸಾಹಸ ಆಗಿದೆ. ಪರಿಸ್ಥಿತಿ ಹೀಗಿದ್ದಾಗ ಹವಾಮಾನ ಇಲಾಖೆಯ ಕಡೆಯಿಂದ ಭರ್ಜರಿ ಸುದ್ದಿ ಸಿಕ್ಕಿದೆ. ಮುಂದಿನ ಕೆಲ ದಿನ ಕಾಲ ಭರ್ಜರಿ ಮಳೆ ಬಿದ್ದು, ಭೂಮಿ ತಂಪಾಗುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿಯೆ ಜನ, ಅನ್ನದಾತ ರೈತರು ಈ ಸುದ್ದಿಯಿಂದ ನಿಟ್ಟುಸಿರನ್ನ ಬಿಡುತ್ತಿದ್ದಾರೆ. ಅಲ್ಲದೆ ಒಣಗುತ್ತಿರುವ ಬೆಳೆ ಉಳಿಸಿಕೊಳ್ಳುವ ಆತ್ಮವಿಶ್ವಾಸ ಹೊಂದಿದ್ದಾರೆ ನಮ್ಮ ರಾಜ್ಯದ ರೈತರು. ಕರ್ನಾಟಕದಲ್ಲಿ ಮಳೆ ಯಾವಾಗ?: ಚಳಿಗಾಲ ಮುಗಿದು ಇನ್ನೇನು ಬಿರು ಬೇಸಿಗೆ ಶುರುವಾಗುತ್ತಿದೆ, ಹೀಗಿದ್ದಾಗ ನೀರಿಗೆ ಎಲ್ಲಾ ಕಡೆಗೆ ಕೊರತೆ ಉಂಟಾಗಿದೆ.

ಜನ ಕೂಡ ನೀರು ಸಂಗ್ರಹಿಸಲು ಪರದಾಡುತ್ತಿದ್ದಾರೆ, ಈ ಹೊತ್ತಲ್ಲಿ ಮಳೆ ಬೀಳಬೇಕು ಅಂತಾ ಆಕಾಶ ನೋಡುವ ಸಮಯದಲ್ಲೇ ಮಾರ್ಚ್ 1 ರಿಂದ 3ರ ತನಕ ಭಾರಿ ಮಳೆ ಬೀಳುವ ಸೂಚನೆ ಸಿಕ್ಕಿದೆ. ಅದ್ರಲ್ಲೂ ಪಶ್ಚಿಮ ಹಿಮಾಲಯದ ತಪ್ಪಲಿನಲ್ಲಿ ದೊಡ್ಡ ಪ್ರಮಾಣದ ಹವಾಮಾನ ಬದಲಾವಣೆ ಉಂಟಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆ ಬೀಳುವ ಸೂಚನೆ ಸಿಕ್ಕಿದೆ. ನದಿ ಹರಿಯುವ ಹಳ್ಳಿಗಳಲ್ಲೇ ನೀರಿಗೆ ಬರ ಎದುರಾಗಿದೆ, ಹಾಗೇ ಬೋರ್ ಕೂಡ ಬತ್ತಿ ಹೋಗುತ್ತಿವೆ. ಇದೇ ಕಾರಣಕ್ಕೆ ಜನರು ಕೂಡ ಪರದಾಡುತ್ತಿದ್ದಾರೆ. ಹೀಗಾಗಿ ಮಳೆಗೆ ಮೊರೆ ಇಟ್ಟಿದ್ದರು. ಹವಾಮಾನ ಇಲಾಖೆ ಇದೀಗ ನೀಡುತ್ತಿರುವ ಮಾಹಿತಿ ಪ್ರಕಾರ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಗುತ್ತಿದೆ. ಹೀಗಾಗಿ ಜನ ಕೂಡ ಖುಷಿಯಿಂದ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.