ಶ್ರೀ ಕ್ಷೇತ್ರ ಹೆಗಲತ್ತಿ ಅಮ್ಮನವರ 9ನೇ ವರ್ಷದ ಜಾತ್ರಾ ಮಹೋತ್ಸವ.!
– 9 ಪಲ್ಲಕ್ಕಿ ದೇವರ ಉತ್ಸವಕ್ಕೆ ಭಂಡಾರದ ಮೆರವಣಿಗೆಯೊಂದಿಗೆ ಸ್ವಾಗತ
– ಮಡಿಲಕ್ಕಿ ಸೇವೆ ಮಾಡುವ ಮೂಲಕ ಆಶೀರ್ವಾದ ಪಡೆದ ಗ್ರಾಮಸ್ಥರು
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಶ್ರೀ ನಾಗಯಕ್ಷೆ ದೇವಾಲಯ ಶ್ರೀ ಕ್ಷೇತ್ರ ಹೆಗಲತ್ತಿಯಲ್ಲಿ ಹೆಗಲತ್ತಿ ಅಮ್ಮನವರ 9ನೇ ವರ್ಷದ ಜಾತ್ರಾ ಮಹೋತ್ಸವವನ್ನು ದಿನಾಂಕ: 21-02-2024 ರಿಂದ 25-02-2024ರ ಐದು ದಿನಗಳವರೆಗೆ ಯಶಸ್ವಿಯಾಗಿ ನಡೆಸಲಾಯಿತು. ನವ 9 ಪಲ್ಲಕ್ಕಿ ದೇವರ ಉತ್ಸವಕ್ಕೆ ಭಂಡಾರದ ಮೆರವಣಿಗೆಯೊಂದಿಗೆ ಸ್ವಾಗತ ಮಾಡಲಾಯಿತು. ಮಾಳೂರು ಸೀಮೆ ಶ್ರೀ ಗುತ್ತಿಯಮ್ಮ ಶ್ರೀ ಕ್ಷೇತ್ರ ಗುತ್ತಿಯಡೆಹಳ್ಳಿ , ಶ್ರೀಗುತ್ತಿಯಮ್ಮ ಶ್ರೀ ಕ್ಷೇತ್ರ ಸೋಮವಾರ ಸಂತೆ ಹೊಸಳ್ಳಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಶ್ರೀ ಕ್ಷೇತ್ರ ಸಮಕಾನೆ, ಶ್ರೀ ಗಾಳಿ ಮಾರಮ್ಮ ಮಾಳೂರು ಸೀಮೆ ಶ್ರೀ ಕ್ಷೇತ್ರ ಮಾಳೂರು, ಶ್ರೀ ಚಾಮುಂಡೇಶ್ವರಿ ಅಮ್ಮನವರು ಶ್ರೀ ಕ್ಷೇತ್ರ ಅಲಬಳ್ಳಿ, ಕುಮಾರರಾಮ ಗ್ರಾಮದೇವರು ಶ್ರೀ ಕ್ಷೇತ್ರ ಕೀಗಡಿ, ಗುತ್ತಿಯಮ್ಮ ಮತ್ತು ದುರ್ಗಮ್ಮ ಶ್ರೀ ಕ್ಷೇತ್ರ ಮಂಡಗದ್ದೆ, ಶ್ರೀ ಚಾಮುಂಡೇಶ್ವರಿ ಅಮ್ಮನವರು ಶ್ರೀ ಕ್ಷೇತ್ರ ಮಂಡಗದ್ದೆ, ಶ್ರೀ ಕುಟ್ಟಲುಗಾರಮ್ಮ ಶ್ರೀ ಕ್ಷೇತ್ರ ಕನ್ನಂಗಿ 9 ಪಲ್ಲಕ್ಕಿ ದೇವರುಗಳ ವಿಶೇಷ ಪೂಜೆ, ಹೋಮ, ಹವನಗಳು ಹಾಗೂ ಬೆಳಕಿನ ಸೇವೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು. ಸುತ್ತಮುತ್ತಲ ಗ್ರಾಮದ ಪ್ರತಿ ಮನೆಯಿಂದ ದೇವಿಯರಿಗೆ ಮಡಿಲಕ್ಕಿ ಸೇವೆ ಮಾಡುವುದರ ಮೂಲಕ ದೇವಿಯ ಆಶೀರ್ವಾದ ಪಡೆದರು.
