ಐಸ್ ಕ್ರೀಮ್ ಪ್ರಿಯರೇ ಎಚ್ಚರ…!!
– ಐಸ್‌ಕ್ರೀಂನಲ್ಲೂ ಹಾನಿಕಾರಕ ರಾಸಾಯನಿಕ ಅಂಶ ಪತ್ತೆ.!
– ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಅಧಿಕಾರಿಗಳ ದಾಳಿ
NAMMUR EXPRESS NEWS
ಬೆಂಗಳೂರು: ಬೇಸಿಗೆಯ ಬಿಸಿಯಲ್ಲಿ ತಂಪಾದ ಆಹಾರ ಸೇವನೆ ಮಾತ್ರವಲ್ಲದೆ, ಐಸ್‌ಕ್ರೀಂ ಕೂಡಾ ಮಾರಕ ಎಂಬ ಅಂಶ ಬೆಳಕಿಗೆ ಬಂದಿದೆ. ಪ್ಲಾಸ್ಟಿಕ್ ಹಾಳೆ ಬಳಸಿ ಇಡ್ಲಿ ಮಾಡುತ್ತಿದ್ದದ್ದು, ಕಲ್ಲಂಗಡಿ ಕೆಂಪಾಗಿ ಕಾಣಲು ಚುಚ್ಚುಮದ್ದು ಮೂಲಕ ಕಲರ್ ತುಂಬುತ್ತಿದ್ದದ್ದು ಕಬಾಬ್, ಗೋಬಿ ಮಂಚೂರಿಗೆ ರುಚಿ ಬರಲು ಬಳಸುತ್ತಿದ್ದ ಪದಾರ್ಥವನ್ನು ನಿಷೇಧ ಮಾಡಿದ್ದಾ ಬೇಗೆಯಲ್ಲಿ ದೇಹ ತಣ್ಣಗಾಗಿಸುವ ಐಸ್ ಕ್ರೀಂನಲ್ಲೂ ರಾಸಾಯನಿಕ ಅಂಶ ಇರುವುದು ಗೊತ್ತಾಗಿದೆ.
ಬೇಸಿಗೆಯಲ್ಲಿ ಬಿಸಿಲು ಜಾಸ್ತಿ ಎಂದು ಐಸ್‌ಕ್ರೀಂ ಮಾರಾಟ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಐಸ್ ಕ್ರೀಂ ಮಾದರಿಗಳನ್ನು ಲ್ಯಾಬ್‌ಗೆ ರವಾನೆ ಮಾಡಿದ್ದಾರೆ. ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಕೂಡ ಆಹಾರ ಪದಾರ್ಥಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಈಗ ಬೇಸಿಗೆ ಬಿಸಿಲು ಜಾಸ್ತಿ ಇರುವುದರಿಂದ ಐಸ್‌ಕ್ರೀಂ ಅನ್ನು ಜನರು ಜಾಸ್ತಿ ಸೇವನೆ ಮಾಡುತ್ತಾರೆ. ಐಸ್ ಕ್ರೀಂನಲ್ಲಿ ಕಲರ್ ಬಳಸಿರುವ ಕಾರಣ ಎಚ್ಚೆತ್ತುಕೊಂಡ ಸುರಕ್ಷತಾ ಇಲಾಖೆ ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ರವಾನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಅನಧಿಕೃತ ಫ್ಯಾಕ್ಟರಿಯಲ್ಲಿ ವಿವಿಧ ಬಣ್ಣಗಳನ್ನು ಹಾಕಿ ಐಸ್ಕ್ರೀಂ ತಯಾರು ಮಾಡಲಾಗುತ್ತಿತ್ತು. ಈ ವಿಷಯ ತಿಳಿದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಐಸ್ ಕ್ರೀಂ ತಯಾರು ಮಾಡುತ್ತಿದ್ದ ವಿವಿಧ ಘಟಕಗಳ ಮೇಲೆ ದಾಳಿ ಮಾಡಿ ಅಲ್ಲಿ ಐಸ್ ಕ್ರೀಂ ತಯಾರು ಮಾಡಲು ಬಳಕೆ ಮಾಡುತ್ತಿದ್ದ ವಸ್ತುಗಳು ಹಾಗೂ ಬಣ್ಣದ ಮಾದರಿಯನ್ನು ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.