Categories
ಬೆಂಗಳೂರು

ಇಡ್ಲಿ ಆಯ್ತು ಈಗ ಪೇಪರ್ ಕಪ್ ಸರದಿ..!!

ಇಡ್ಲಿ ಆಯ್ತು ಈಗ ಪೇಪರ್ ಕಪ್ ಸರದಿ..!!
– ಪ್ಲಾಸ್ಟಿಕ್, ಪೇಪರ್ ಲೋಟದಲ್ಲೂ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆ.!
– ಮೈಕ್ರೋಪ್ಲ್ಯಾಸ್ಟಿಕ್ ಬಳಕೆಯಿಂದ ಹೊಟ್ಟೆ ಸೇರ್ತಿದೆ ವಿಷ

NAMMUR EXPRESS NEWS
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಕ್ಯಾನ್ಸ‌ರ್ ಕಾರಕ ಅಂಶಗಳು ಪತ್ತೆಯಾಗುತ್ತಿದ್ದು, ಸಣ್ಣ ಪುಟ್ಟ ಹೋಟೆಲ್‌ಗಳಲ್ಲಿ ಕಾಫಿ, ಟೀ ಸೇವನೆ ಮಾಡಲು ಬಳಸುತ್ತಿರುವ ಪ್ಲಾಸ್ಟಿಕ್, ಪೇಪರ್ ಲೋಟಗಳಲ್ಲೂ ಕ್ಯಾನ್ಸ‌ರ್ ಕಾರಕ ಅಂಶವಿರುವುದು ಪತ್ತೆಯಾಗಿದೆ. ಆಹಾರ ಇಲಾಖೆ ಪೇಪರ್ ಲೋಟಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದು, ಅವುಗಳ ಬಳಕೆಯಿಂದ ಕ್ಯಾನ್ಸರ್ ಬರುವ ಅಂಶ ಪತ್ತೆಯಾಗಿದೆ. ಪೇಪರ್ ಲೋಟದಲ್ಲಿ ಶೇಕಡಾ 20 ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ, ಅವುಗಳಲ್ಲಿ ಬಿಸಿಯಾದ ಟೀ, ಕಾಫಿ ಹಾಕಿದ್ರೆ ಪ್ಲಾಸ್ಟಿಕ್ ಕರಗುತ್ತದೆ. ಕರಗಿದ ಪ್ಲಾಸ್ಟಿಕ್ ಅಂಶ ಮನುಷ್ಯನ ದೇಹ ಸೇರಿದರೆ ಕ್ಯಾನ್ಸರ್ ಬರುವ ಸಾಧ್ಯತೆ ಅತೀ ಹೆಚ್ಚು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ತಜ್ಞರು ಪ್ಲಾಸ್ಟಿಕ್ ಹಾಗೂ ಪೇಪರ್ ಲೋಟಗಳನ್ನು ನೀರು ಕುಡಿಯಲು ಮಾತ್ರ ಬಳಕೆ ಮಾಡಬೇಕು. ಇಂತಹ ಲೋಟಗಳಲ್ಲಿ ಬಿಸಿ ನೀರು, ಕಾಫಿ, ಟೀ ಮತ್ತಿತರ ಬಿಸಿ ಪದಾರ್ಥಗಳನ್ನು ಸೇವಿಸಬಾರದು ಎಂದು ಹೇಳಿದ್ದರು. ಆದರೆ, ತಜ್ಞರ ಮಾತಿಗೆ ಬೆಲೆ ಸಿಕ್ಕಿಲ್ಲ. ಇದರ ಬೆನ್ನಲ್ಲೇ ಆಹಾರ ಮತ್ತು ಸುರಕ್ಷತಾ ಇಲಾಖೆ ಕೂಡಾ ಪ್ಲಾಸ್ಟಿಕ್ ಅಂಶ ಇಲ್ಲದಿರುವ ಪೇಪರ್ ಲೋಟಗಳನ್ನು ಬಳಕೆ ಮಾಡುವಂತೆ ಸೂಚನೆ ನೀಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.