ಟಾಪ್ 5 ನ್ಯೂಸ್ ಕರ್ನಾಟಕ
ಚಾಮರಾಜನಗರ : ಬೋಳು ತಲೆ ಎಂದು ಪತ್ನಿ ನಿಂದಿಸಿದ್ದಕ್ಕೆ ಪತಿ ಆತ್ಮಹತ್ಯೆ…!
– ಮಂಡ್ಯ: ಹೋಳಿ ಊಟ ಸೇವಿಸಿ ಮಂಡ್ಯದ ವಸತಿ ನಿಲಯದ ಬಾಲಕ ಸಾವು..!!
– ಬೀದರ್ : ಈಜಲು ಹೋಗಿ ಯುವಕ ನೀರುಪಾಲು…!
– ಚಿಕ್ಕಬಳ್ಳಾಪುರ: 2 ತಿಂಗಳಲ್ಲಿ 85 ಜನಕ್ಕೆ ಹಾವು ಕಡಿತ!
– ಬೀದರ್ : ಬಾವಿಯಲ್ಲಿ ಬಿದ್ದು ಇಬ್ಬರು ಯುವಕರು ದುರ್ಮರಣ..!!
NAMMUR EXPRESS NEWS
ಚಾಮರಾಜನಗರ: ಬೋಳು ತಲೆ, ಸರಿಯಾಗಿ ಕೂದಲು ಇಲ್ಲ ಎಂದು ಪತ್ನಿ ನಿಂದಿಸಿದ್ದಕ್ಕೆ ಮನನೊಂದ ಪತಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಭಾನುವಾರ ನಡೆದಿದೆ. ಉಡಿಗಾಲ ಗ್ರಾಮದ ಪರಶಿವ (28) ಮೃತ ವ್ಯಕ್ತಿ. ಜೆಸಿಬಿ ಡ್ರೈವರ್ ಆಗಿದ್ದ ಪರಶಿವ ಮತ್ತು ಮಮತ ಇಬ್ಬರಿಗೂ 4 ವರ್ಷ ಹಿಂದೆ ಮದುವೆಯಾಗಿತ್ತು. ದಿನ ಕಳೆದಂತೆ ಪತ್ನಿ ಮಮತ ರೀಲ್ಸ್ ಹಾಗೂ ಸಾಮಾಜಿಕ ಜಾಲತಾಣಕ್ಕೆ ಪೋಟೊಗಳನ್ನು ಹಾಕುವ ಹವ್ಯಾಸ ಬೆಳೆಸಿಕೊಂಡಿದ್ದಳು. ಗಂಡಿನಿಗೆ ನಿನಗೆ ಕೂದಲು ಇಲ್ಲ. ಬೋಳು ತಲೆ ನೀನು ನನಗೆ ಸರಿಯಾದ ವರ ಅಲ್ಲ ಎಂದು ಸಂಬಂಧಿಕರ ಮುಂದೆ ಅವಮಾನ ಮಾಡಿದ್ದಾರೆ. ಅಲ್ಲದೇ ಗಂಡನ ವಿರುದ್ಧ ವರದಕ್ಷಿಣೆ ಕೇಸ್ ಹಾಕಿ ಒಂದೂವರೆ ತಿಂಗಳು ಜೈಲಲ್ಲಿರುವಂತೆ ಮಾಡಿದ್ದಳು. ಇದರಿಂದ ಬೇಸತ್ತ ಪತಿ ‘ನನ್ನ ಸಾವಿಗೆ ಪತ್ನಿಯ ಕಿರುಕುಳ’ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
– ಮಂಡ್ಯ: ಹೋಳಿ ಊಟ ಸೇವಿಸಿ ಮಂಡ್ಯದ ವಸತಿ ನಿಲಯದ ಬಾಲಕ ಸಾವು..!!
ಮಂಡ್ಯ :ಹೋಳಿ ಹಬ್ಬದ ಊಟ ಸೇವಿಸಿ ವಸತಿ ನಿಲಯದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿ, 29 ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿರುವ ಘಟನೆ ಭಾನುವಾರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಾಗೇಪುರದಲ್ಲಿ ನಡೆದಿದೆ. ಇಲ್ಲಿನ ಗೋಕುಲ ವಿದ್ಯಾ ಸಂಸ್ಥೆ ವಿದ್ಯಾರ್ಥಿ, ಮೇಘಾಲಯದ ಕಿರ್ಶನ್ ಲ್ಯಾಂಗ್ (13) ಮೃತ ವಿದ್ಯಾರ್ಥಿ, ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮಳವಳ್ಳಿ ತಾಲೂಕಿನ ಭೂಗತಹಳ್ಳಿ ಸಮೀಪದ ಸಮುದಾಯ ಭವನವೊಂದರಲ್ಲಿ ಸಮುದಾಯವೊಂದು ಹೋಳಿ ಆಚರಣೆ ಮಾಡಿ ಉಳಿದ ಊಟವನ್ನು ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಗೆ ನೀಡಿದ್ದರು. ಊಟ ಸೇವಿಸಿದ 30 ವಿದ್ಯಾರ್ಥಿಗಳು ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ಭಾನುವಾರ ಎಲ್ಲಾ ವಿದ್ಯಾರ್ಥಿಗಳನ್ನು ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
– ಬೀದರ್ : ಈಜಲು ಹೋಗಿ ಯುವಕ ನೀರುಪಾಲು…!
ಬೀದರ್: ಕೆರೆಗೆ ಈಜಲು ಹೋಗಿದ ಯುವಕ ನಾಪತ್ತೆಯಾಗಿದ್ದ, ನಾಪತ್ತೆಯಾಗಿದ್ದ ಯುವಕನನ್ನು ಬೇಲೂರ ಗ್ರಾಮದ ಆಕಾಶ ಗುಂಗೆ (23) ಎಂಬ ಯುವಕನ ಶವ 24 ಗಂಟೆಗಳ ಕಾರ್ಯಾಚರಣೆ ಬಳಿಕ ಪತ್ತೆಯಾಗಿದೆ.
– ಚಿಕ್ಕಬಳ್ಳಾಪುರ: 2 ತಿಂಗಳಲ್ಲಿ 85 ಜನಕ್ಕೆ ಹಾವು ಕಡಿತ!
ಚಿಕ್ಕಬಳ್ಳಾಪುರ: ಬೇಸಿಗೆಯ ಉಷ್ಣತೆ ಏರಿಕೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾವುಗಳ ಕಾಟ ಹೆಚ್ಚಾಗಿದೆ. ಕಳೆದ 2 ತಿಂಗಳಲ್ಲಿ 85 ಜನರಿಗೆ ಹಾವುಗಳು ಕಚ್ಚಿದ್ದು, ಕಳೆದ 1 ವರ್ಷದಲ್ಲಿ 4 ಜನರು ಹಾವಿನ ಕಡಿತಕ್ಕೆ ಬಲಿಯಾಗಿದ್ದಾರೆ. ಈ ಸಂಬಂಧ ಆರೋಗ್ಯ ಇಲಾಖೆ ಎಚ್ಚರಗೊಂಡಿದ್ದು, ಜಿಲ್ಲೆಯ ಪ್ರತಿಯೊಂದು ಪ್ರಾಥಮಿಕ ಆಸ್ಪತ್ರೆಗಳಲ್ಲಿ ತಲಾ 10 ಹಾವಿನ ವಿಷ ನಿರೋಧಕ ಚುಚ್ಚು ಮದ್ದುಗಳನ್ನು ಸಂಗ್ರಹಿಸಿದೆ.
– ಬೀದರ್ : ಬಾವಿಯಲ್ಲಿ ಬಿದ್ದು ಇಬ್ಬರು ಯುವಕರು ದುರ್ಮರಣ..!!
ಚಿಟಗುಪ್ಪ: ತೋಟದಲ್ಲಿನ ಬಾವಿಯಲ್ಲಿ ಗೆಳೆಯರ ಜೊತೆಗೆ ಈಜಲು ಹೋಗಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಉಸಿರು ಗಟ್ಟಿ ಸಾವಿಗೀಡಾದ ಘಟನೆ ಚಿಟಗುಪ್ಪ ತಾಲೂಕಿನ ವಿಠಲಪುರ ಗ್ರಾಮದಲ್ಲಿ ಜರುಗಿದೆ. ವಿಠಲಪುರ ಗ್ರಾಮದ ಪ್ರಶಾಂತ (22) ಹಾಗೂ ಬಸವಕಲ್ಯಾಣ ತಾಲೂಕಿನ ದಾಸರವಾಡಿ ಗ್ರಾಮದ ಶಿವಾಜಿ ( 22) ಎಂಬ ಯುವಕರು ಮೃತಪಟ್ಟಿದ್ದಾರೆ. ನಾಲ್ವರು ಗೆಳೆಯರು ಜೊತೆಗೂಡಿ ತೋಟಕ್ಕೆ ತೆರಳಿದಾಗ ಒಬ್ಬ ಈಜಾಡಲು ನೀರಿಗೆ ಇಳಿಯುವ ವೇಳೆ ಕಾಲು ಜಾರಿ ಬಿದ್ದಿದ್ದ. ಅವನನ್ನು ಉಳಿಸಲು ಮತ್ತೊಬ್ಬ ಸ್ನೇಹಿತ ನೀರಿಗಿಳಿದಾಗ ಇಬ್ಬರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಕುರಿತು ಬೇಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ