ಅಯ್ಯೋ ಇನ್ನು ಅಕ್ಕಿ ಕೊಳ್ಳುವ ಹಾಗಿಲ್ಲ!
– ಈಗ ದುಬಾರಿ ಆಯ್ತು ಅಕ್ಕಿ: ಅಕ್ಕಿಗೆ ಹೆಚ್ಚಿದ ಬೇಡಿಕೆ
– ಅಕ್ಕಿ ಬೆಳೆಯುವ ಪ್ರಮಾಣ ಕಡಿಮೆ ಕಾರಣ
NAMMUR EXPRESS NEWS
ಬೆಂಗಳೂರು: ಅಕ್ಕಿ ಬೆಲೆ ಗಗನಮುಖಿ ಆಗುತ್ತಿದೆ. ದಿನೇ ದಿನೇ ಅಕ್ಕಿ ದರ ಏರಿಕೆ ಆಗುತ್ತಿರುವುದು ಆತಂಕ ಸೃಷ್ಟಿ ಮಾಡಿದೆ.
ರಾಜ್ಯದ ಪ್ರಮುಖ ಆಹಾರ ಬೆಳೆ ಅಕ್ಕಿ ಕಳೆದ ಕೆಲವು ವಾರಗಳಿಂದ ಸರಾಸರಿ 15% ರಷ್ಟು ಏರಿಕೆ ಕಂಡಿದೆ. ಅದರಲ್ಲೂ ಇಡೀ ಏಷ್ಯಾದಲ್ಲಿ ಅಕ್ಕಿ ಬೆಲೆ ದಾಖಲೆ ಏರಿಕೆ ಕಂಡಿದ್ದು, ಕಳೆದ 15 ವರ್ಷಗಳಲ್ಲೇ ಅತಿ ಹೆಚ್ಚಿನ ಮಟ್ಟಕ್ಕೆ ಜಿಗಿದಿದೆ. ಇದರಿಂದ ರಾಜ್ಯದ ಹಲವೆಡೆ ಅಕ್ಕಿ ದರ ಹೆಚ್ಚಿದೆ. ಅಕ್ಕಿಯನ್ನು ಪ್ರಧಾನವಾಗಿ ಸೇವಿಸುವ ಪ್ರದೇಶಗಳಲ್ಲಿನ ಜನರಿಗೆ ಅಕ್ಕಿ ದರ ಏರಿಕೆ ಶಾಕ್ ಕೊಟ್ಟಿದೆ. ಕಳೆದ ವರ್ಷ ಭಾರೀ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದೆ. ಇದರ ಜೊತೆಗೆ ಈ ವರ್ಷ ಮುಂಗಾರು ಮಳೆ ವಿಳಂಬ ಮತ್ತು ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಾಮಾನ್ಯ ಏರಿಕೆಯು ಅಕ್ಕಿ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
ರಿಟೇಲ್ ದರ ಸಾಮಾನ್ಯವಾಗಿ ಹೋಲ್ ಸೇಲ್ ಬೆಲೆಗಿಂತ ಕನಿಷ್ಠ 10% ಹೆಚ್ಚಾಗಿದೆ. ಕಳೆದ ವರ್ಷ ಭಾರಿ ಮಳೆಯಿಂದಾಗಿ ಕಡಿಮೆ ಉತ್ಪಾದನೆ, ಈ ವರ್ಷ ಮುಂಗಾರು ವಿಳಂಬದಿಂದಾಗಿ ಕಡಿಮೆ ಉತ್ಪಾದನೆಯ ಭಯ ಮತ್ತು ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಾಮಾನ್ಯ ಏರಿಕೆ ಸೇರಿದಂತೆ ಹಲವಾರು ಕಾರಣಗಳು ಅಕ್ಕಿಯ ಬೆಲೆ ಏರಿಕೆಗೆ ಕಾರಣವಾಗಿವೆ ಎಂದು ಉದ್ಯಮದ ತಜ್ಞರು ಹೇಳುತ್ತಾರೆ. ನವೆಂಬರ್ ವೇಳೆಗೆ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಮಲೆನಾಡಲ್ಲಿ ಕಡಿಮೆಯಾದ ಭತ್ತದ ಗದ್ದೆಗಳು!
ಮಲೆನಾಡಿನಲ್ಲಿ ಭತ್ತದ ಗದ್ದೆಗಳು ಕಡಿಮೆ ಆಗಿರುವುದು ಇದೀಗ ಮತ್ತಷ್ಟು ಬೇಡಿಕೆ ಸೃಷ್ಟಿ ಮಾಡಿದೆ. ಅಡಿಕೆ ತೋಟಗಳು ಭತ್ತದ ಗದ್ದೆಯನ್ನು ಅವರಿಸಿವೆ. ಹೀಗಾಗಿ ಭತ್ತದ ದರ ಹೆಚ್ಚಿದೆ. ದೇಶಿಯ ತಳಿ ಅಕ್ಕಿಗೆ ಇನ್ನು ಹೆಚ್ಚಾಗಿದೆ.
ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ
