Categories
ಸಿನಿಮಾ

ಕನ್ನಡ ಸಿನಿ ಪ್ರಿಯರೇ ಬರ್ತಿದ್ದಾನೆ ಟೋಬಿ!

ಕನ್ನಡ ಸಿನಿ ಪ್ರಿಯರೇ ಬರ್ತಿದ್ದಾನೆ ಟೋಬಿ!
– ಆ.25ರಂದು ಟೋಬಿ ತೆರೆಗೆ: ಭಾರೀ ಕುತೂಹಲ
– ರಾಜ್ ಬಿ ಶೆಟ್ಟಿ ನಟನೆಯ ಹೊಸ ಟ್ರೆಂಡ್

NAMMUR EXPRESS NEWS
ರಾಜ್ ಬಿ ಶೆಟ್ಟಿ ತಮ್ಮ ಪ್ರತಿಭೆ ಮೂಲಕವೇ ಸ್ಯಾಂಡಲ್ ವುಡ್ ಅಲ್ಲಿ ತಮ್ಮ ಹೆಸರನ್ನು ಮೂಡಿಸಿದ ನಟ. ಇದೀಗ ಅವರ ಬಹು ನಿರೀಕ್ಷೆಯ ಚಿತ್ರ ಟೋಬಿ ಆ.25ಕ್ಕೆ ತೆರೆ ಕಾಣಲಿದೆ. ಒಂದು ಮೊಟ್ಟೆಯ ಕಥೆ ಹಾಗೂ ಗರುಡ ಗಮನ ವೃಷಭ ವಾಹನ ಸಿನಿಮಾ ಮೂಲಕ ಕನ್ನಡ ಸಿನೆಮಾ ಲೋಕದಲ್ಲಿ ಹೊಸ ಟ್ರೆಂಡ್‌ ಹುಟ್ಟು ಹಾಕಿರುವ ರಾಜ್‌ ಬಿ. ಶೆಟ್ಟಿ ಅವರ ನೇತೃತ್ವದಲ್ಲಿ “ಟೋಬಿ’ ಕನ್ನಡ ಸಿನೆಮಾ ಆ. 25ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈಗಾಗಲೇ ಈ ಸಿನಿಮಾಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟೋಬಿ ಸಿನಿಮಾ ಕಥೆ ಮೊದಲು ಪುನೀತ್ ರಾಜ್ ಕುಮಾರ್, ಆಮೇಲೆ ರಿಷಬ್ ಶೆಟ್ಟಿ ಅವರಿಗೆ ಈ ಸಿನಿಮಾ ಕಥೆ ಹೋಗಿತ್ತು. ಆದರೆ ಆ ಬಳಿಕ ಇಬ್ಬರೂ ಒಪ್ಪದಿದ್ದಾಗ ರಾಜ್ ಬಿ ಶೆಟ್ಟಿ ಈ ಕಥೆ ಒಪ್ಪಿಕೊಂಡಿದ್ದರು.

ಗರುಡ ಗಮನ ವೃಷಭ ವಾಹನಕ್ಕೂ ಸಂಬಂಧ ಇಲ್ಲ

ಇಲ್ಲೂ ಟ್ರೇಲರ್‌ನಲ್ಲಿ ನಾನು ಲುಂಗಿ ಉಟ್ಟಿರುವುದರಿಂದ ಜಿಜಿವಿವಿ ಚಿತ್ರದ ಛಾಯೆ ಇದರಲ್ಲಿ ಕಂಡಿರಬಹುದು. ಜಿಜಿವಿವಿ ನಮ್ಮ ಹೊಸ ಪ್ರಯತ್ನವಾದ್ದರಿಂದ ಜನರನ್ನು ಸೆಳೆಯಲು ಟ್ರೇಲರ್‌ನಲ್ಲಿ ಚಿತ್ರದ ಮುಖ್ಯಾಂಶಗಳನ್ನು ಹಾಕಿದ್ದೆವು, ಆದರೆ “ಟೋಬಿ’ ಟ್ರೇಲರ್‌ನಲ್ಲಿ ಚಿತ್ರದ ಯಾವುದೇ ಕಥೆಯ ಸುಳಿವು ಕೂಡ ಕೊಟ್ಟಿಲ್ಲ. ಹಾಗಾಗಿ ಇದಕ್ಕೂ ಜಿಜಿವಿವಿಗೂ ಯಾವುದೇ ಲಿಂಕ್‌ ಇರುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಜ್‌ ಬಿ. ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಜಿಜಿವಿವಿಗೆ ಹೋಲಿಸಿದರೆ ಟೋಬಿ ಹತ್ತು ಪಟ್ಟು ಹೆಚ್ಚು ಪ್ರಯತ್ನ, ವೆಚ್ಚ, ಶ್ರಮ ಹಾಕಿರುವ ಚಿತ್ರ. ಜಿಜಿವಿವಿ ಯಲ್ಲಿ ಹರಿ, ಶಿವ ಇಬ್ಬರೂ ಕುಟುಂಬದಿಂದ ವಿಮುಖರಾದವರು, ಟೋಬಿಹಾಗಿಲ್ಲ, ಇದು ಕೌಟುಂಬಿಕ ಬಾಂಧವ್ಯ ಇರುವ ಚಿತ್ರ ಎರಡೂ ಬೇರೆಯೇ ಆಗಿವೆ ಎಂದರು.

ಅಗತ್ಯವಿದ್ದರೆ ಮಾತ್ರ ಡಬ್ಬಿಂಗ್‌ ಟೋಬಿಯನ್ನು ನಮ್ಮ ಜನರಿಗೆ ತಲಪಿಸಬೇಕು ಎಂಬ ಬಯಕೆ ಹೊಂದಿದ್ದೇವೆ, ಟ್ರೇಲರ್‌ ನೋಡಿದವರು, ತೆಲುಗು ತಮಿಳು ಚಿತ್ರ ವಿತರಕರು ಆ ಭಾಷೆಗಳಿಗೂ ಡಬ್‌ ಮಾಡಬೇಕು ಎಂದು ಕೇಳಿ ದ್ದಾರೆ, ನಮ್ಮ ಜನರ ಸ್ಪಂದನೆ ನೋಡಿಕೊಂಡು ಮುಂದಿನ ಕೆಲಸ ಮಾಡುತ್ತೇವೆ ಎಂದರು.

ಹೊಸ ಮುಖಗಳ ಎಂಟ್ರಿ!

ನಿರ್ಮಾಪಕ ರವಿ ರೈ ಕಳಸ, ರಾಜ್‌ ದೀಪಕ್‌ ರೈ, ಯತೀಶ್‌ ಬೈಕಂಪಾಡಿ, ನಟಿ ಚೈತ್ರಾ ಆಚಾರ್‌, ಬಾಸಿಲ್‌ ಅಲ್ಚಾಲಕ್ಕಲ್‌ ನಿರ್ದೇಶನವಿರುವ ಚಿತ್ರಕ್ಕೆ ಮಿಥುನ್‌ ಮುಕುಂದನ್‌ ಹಿನ್ನೆಲೆ ಸಂಗೀತ, ಪ್ರವೀಣ್‌ ಶ್ರೀಯಾನ್‌ ಛಾಯಾಗ್ರಹಣವಿದೆ. ಸಂಯುಕ್ತ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ

ಇದನ್ನೂ ಓದಿ : ರೇಷನ್ ಕಾರ್ಡ್‌ನಲ್ಲಿ ಮನೆ ಯಜಮಾನಿ ತಿದ್ದುಪಡಿಗೆ 4 ದಿನ ಅವಕಾಶ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.