Categories
ಬೆಂಗಳೂರು

ಬಿಸಿಲು-ಮಳೆಯ ನಡುವೆ ಸಾಂಕ್ರಾಮಿಕ ರೋಗಗಳು ಹೆಚ್ಚಳ…!!

ಬಿಸಿಲು-ಮಳೆಯ ನಡುವೆ ಸಾಂಕ್ರಾಮಿಕ ರೋಗಗಳು ಹೆಚ್ಚಳ…!!
– ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲಿ ಹೆಚ್ಚಿದ ರೋಗಿಗಳ ಸಂಖ್ಯೆ
– ಸ್ವಚ್ಛತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಲು ಸಲಹೆ

NAMMUR EXPRESS NEWS
ಬೆಂಗಳೂರು: ಮಳೆಗಾಲದ ಆರಂಭದ ಜತೆ ಸಾಂಕ್ರಾಮಿಕ ಕಾಯಿಲೆಗಳು ಕೂಡ ಹುಟ್ಟಿಕೊಳ್ಳುತ್ತಿವೆ. ನಗರದಲ್ಲಿ ಬಿಸಿಲು ಮಳೆ ವಾತಾವರಣ ಸಾಂಕ್ರಾಮಿಕ ರೋಗ ಉಲ್ಬಣಕ್ಕೆ ಪ್ರಮುಖ ಕಾರಣವಾಗುತ್ತಿದೆ. ನಿರಂತರ ಮಳೆಯಾಗುತ್ತಿದ್ದರೆ ಸೊಳ್ಳೆಗಳ ಸಂತಾನೋತ್ಪತ್ತಿ ಕ್ಷೀಣಿಸುತ್ತದೆ. ಆದರೆ, ಬಿಸಿಲು-ಮಳೆ ಸೊಳ್ಳೆಗಳ ಉತ್ಪತ್ತಿಗೆ ಸಹಕಾರಿಯಾಗಿದ್ದು, ಇದು ಸಾಂಕ್ರಾಮಿಕ ರೋಗಕ್ಕೂ ಕಾರಣವಾಗುತ್ತಿದೆ. ನಗರದಲ್ಲಿ ಸೊಳ್ಳೆಗಳ ಉತ್ಪತ್ತಿ ತಾಣಗಳ ನಿರ್ಮೂಲನೆ ಮಾಡಲಾಗುತ್ತಿದ್ದರೂ, ವಿವಿಧೆಡೆ ಮಳೆ ನೀರು ನಿಲ್ಲುತ್ತಿದ್ದು ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಮುಖ್ಯವಾಗಿ ನಿರ್ಮಾಣ ಹಂತದ ಕಟ್ಟಡಗಳು ಹಾಗೂ ತ್ಯಾಜ್ಯ ಎಸೆಯುವ ಸ್ಥಳಗಳಲ್ಲಿ ನೀರು ನಿಲ್ಲುವ ಪರಿಣಾಮ ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಿವೆ.

ನಗರದಲ್ಲಿ ಮಲೇರಿಯಾ, ಚಿಕೂನ್‌ ಗುನ್ಯ ನಿಯಂತ್ರಣದಲ್ಲಿದೆಯಾದರೂ ಡೆಂಗ್ಯೂ ಹಾವಳಿ ತಪ್ಪಿಲ್ಲ. ಜತೆಗೆ, ವಾಂತಿ- ಬೇಧಿ, ವೈರಲ್ ಜ್ವರದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಘಟನೆಗಳು ಪ್ರತೀ ಮಳೆಗಾಲದಲ್ಲಿಯೂ ಕಾಣಸಿಗುತ್ತವೆ. ಡೆಂಗ್ಯೂ ಮತ್ತು ಚಿಕೂನ್ ಗುನ್ಯ ಪ್ರಕರಣಗಳು ಮಲೇರಿಯಾದ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ. ಉಳಿದಂತೆ ಶೀತ, ಜ್ವರ, ಕೆಮ್ಮು, ವೈರಲ್ ಜ್ವರಗಳು ಹೆಚ್ಚಿನ ಜನರನ್ನು ಬಾಧಿಸುತ್ತಿವೆ.
ಸದ್ಯ ಡೆಂಗ್ಯೂ, ವೈರಲ್ ಜ್ವರ, ಶೀತ, ಕೆಮ್ಮು, ನೀರಿನಿಂದ ಉಂಟಾಗುವ ಸೋಂಕಿತ ರೋಗಿಗಳು ಹೆಚ್ಚಾಗಿ ಬರುತ್ತಿದ್ದಾರೆ. ಬೇರೆ ಯಾವುದೇ ಕಾಯಿಲೆ ಪತ್ತೆಯಾಗಿಲ್ಲ. ವಾತಾವರಣ ಹೀಗೇ ಮುಂದುವರಿದರೆ ಸಾಂಕ್ರಾಮಿಕ ರೋಗ ಹೆಚ್ಚಾಗುವ ಸಾಧ್ಯತೆ ಇದೆ. “ ಮಳೆಗಾಲದ ಸಾಂಕ್ರಾಮಿಕ ರೋಗಗಳು ಇನ್ನೂ ಉಲ್ಬಣವಾಗಿಲ್ಲ. ಜುಲೈನಿಂದ ಆಗಸ್ಟ್‌ವರೆಗೆ ಸೋಂಕಿಗೆ ಒಳಗಾಗುವರ ಸಂಖ್ಯೆ ಹೆಚ್ಚಿರುತ್ತದೆ. ಸದ್ಯ ವೈರಲ್ ಜ್ವರ, ಶೀತ, ಕೆಮ್ಮು ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ”.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.