Categories
ಚಿಕ್ಕಮಗಳೂರು

ಶೃಂಗೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧ

ಶೃಂಗೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧ

* ರಾ. ಹೆದ್ದಾರಿ -169 ರಲ್ಲಿ ಪದೇ ಪದೇ ಗುಡ್ಡಕುಸಿತ ಹಿನ್ನೆಲೆ,ಶೃಂಗೇರಿ ತಹಶೀಲ್ದಾರ್ ಆದೇಶ
* 17/06/2025 ರಿಂದ 20/06/2025 ರವರೆಗೆ ಸಂಜೆ 7 ರಿಂದ ಬೆಳಿಗ್ಗೆ 8 ರವರೆಗೆ ನಿರ್ಬಂಧ

NAMMMUR EXPRESS RAIN BREAKING
ಶೃಂಗೇರಿ: ತಾಲೂಕಿನಾದ್ಯಂತ ವಿಪರೀತ ಮಳೆ ಹಿನ್ನೆಲೆ ಶೃಂಗೇರಿಯಿಂದ ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-169 ರಲ್ಲಿ ಗುಡ್ಡ ಕುಸಿತ ಘಟನೆಗಳು ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಈ ಮಾರ್ಗವಾಗಿ ಭಾರೀ ವಾಹನ ಸಂಚಾರವನ್ನು ನಿಷೇಧಿಸಿ ಬದಲಿ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಇಂದು ಈ ಮಾರ್ಗದಲ್ಲಿ ವಿಪರೀತ ಮಳೆಯಿರುವುದರಿಂದ ಗುಡ್ಡ ಕುಸಿತವಾಗೋ ಸಂಭವವಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕಿನ ದುರ್ಗಾದೇವಸ್ಥಾನದಿಂದ ಎಸ್.ಕೆ ಬಾರ್ಡರ್ ವರೆಗೆ ದಿನಾಂಕ 17/06/2025 ರಿಂದ 20/06/2025 ರ ವರೆಗೆ ಸಂಜೆ 7 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಿ ಶೃಂಗೇರಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.

* ವಾಹನ ಸವಾರರಿಗೆ ಸೂಚಿಸಿರುವ ಬದಲಿ ಮಾರ್ಗ
1. ಚಿಕ್ಕಮಗಳೂರು ಕಡೆಯಿಂದ ಬರುವ ವಾಹನಗಳು ಬಾಳೆಹೊನ್ನೂರು -ಮಾಗುಂಡಿ ಕಳಸ – ಕುದುರೆಮುಖ-ಎಸ್. ಕೆ. ಬಾರ್ಡರ್ ರ್ಮಾರ್ಗವಾಗಿ ಸಂಚರಿಸುವುದು.

2. ಎನ್.ಆರ್ ಪುರ ಕಡೆಯಿಂದ ಬರುವ ವಾಹನಗಳು ಕೊಪ್ಪ ಜಯಪುರ – ಬಾಳಹೊಳೆ – ಕಳಸ ಕುದುರೆಮುಖ ಮಾರ್ಗವಾಗಿ ಸಂಚರಿಸುವುದು.

ಮಳೆ ವಿಪರೀತವಾಗಿರುವ ಹಿನ್ನೆಲೆ ವಾಹನ ಸವಾರರು ಸುರಕ್ಷತೆ ಹಾಗೂ ಎಚ್ಚರಿಕೆಯಿಂದ ವಾಹನ ಚಲಾಯಿಸಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.