ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದಿಂದ ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
– ಜೂನ್ 15ರವರೆಗೆ ಅರ್ಜಿ ಸಲ್ಲಿಸಲು ಅವಕಾಶ: ಏನಿದು ಯೋಜನೆ?
– ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಆದ್ಯತೆ
NAMMUR EXPRESS NEWS
ಬೆಂಗಳೂರು: ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘದ ಸದಸ್ಯತ್ವ ಪಡೆದ ಕಾರ್ಮಿಕರ ಮಕ್ಕಳಿಗೆ 2023 – 24ನೇ ಸಾಲಿನಲ್ಲಿ SSLC ಹಾಗೂ PUC ಅಲ್ಲಿ ಶೇ. 80ಕ್ಕಿಂತ ಅಧಿಕ ಅಂಕಗಳಿಸಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವುದಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ನೋಂದಾಯಿತ ಹೋಟೆಲ್ ಕಾರ್ಮಿಕರ ಮಕ್ಕಳು ಈ ಸೌಲಭ್ಯ ಬಳಸಿಕೊಳ್ಳಬೇಕೆಂದು ರಾಜ್ಯ ಹೋಟೆಲ್ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷರಾದ ಸತೀಶ್ ಜೋಗಿ ಮತ್ತು ಎಲ್ಲಾ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ನಿಯಮಗಳೇನು?
1. ಅರ್ಜಿ ಹಾಕುವ ವಿದ್ಯಾರ್ಥಿಗಳ ತಂದೆ ಅಥವಾ ತಾಯಿ ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘಟನೆಯಲ್ಲಿ ಕಡ್ಡಾಯವಾಗಿ ಐಡಿ ಕಾರ್ಡ್ ಹೊಂದಿರಬೇಕು.
2. ಏಪ್ರಿಲ್ 30 2024ರ ಮೊದಲು ಸದಸ್ಯತ್ವ ಪಡೆದವರಿಗೆ ಮಾತ್ರ ಅವಕಾಶ.
3. 2023-2024ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಅಥವಾ ಪಿಯುಸಿಯಲ್ಲಿ 80% ಗಿಂತ ಜಾಸ್ತಿ ಅಂಕ ಬಂದಿರಬೇಕು.
4. ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯ ಆಧಾರ್ ಕಾರ್ಡ್ ಮತ್ತು ಅಂಕ ಪ್ರತಿ ಕಡ್ಡಾಯ.
5. ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯ ಒಂದು ಭಾವಚಿತ್ರ ಅರ್ಜಿ ಜೊತೆ ಲಗತ್ತಿಸಿರಬೇಕು.
6. ಅರ್ಜಿಯನ್ನು ತುಂಬಿಸಿ ಕೆಳಗೆ ಕೊಟ್ಟ ಅಡ್ರೆಸ್ಸಿಗೆ ಜೂನ್ 15ರ ಒಳಗೆ ತಲುಪುವಂತೆ ಇರಬೇಕು.
7. ಜೂನ್ 15ರ ನಂತರ ಬಂದ ಅರ್ಜಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
8. ಕಡ್ಡಾಯವಾಗಿ ಇದು ಕರ್ನಾಟಕ ಹೋಟೆಲ್ ಕಾರ್ಮಿಕರ ಮಕ್ಕಳಿಗೆ ಮಾತ್ರ ಲಭ್ಯ.
9. ಅರ್ಜಿ ಫಾರ್ಮ್ ಅನ್ನು ವಾಟ್ಸಪ್ ಮುಖಾಂತರ ಕೆಳಗೆ ಕೊಟ್ಟ ನಂಬರಿಗೆ ಮೆಸೇಜ್ ಮಾಡಿ ಪಡೆದುಕೊಳ್ಳಬಹುದು.
10. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟ ನಂಬರನ್ನು ಸಂಪರ್ಕಿಸಿ.
ವಿಳಾಸ :
ಅನಘಾ ಗ್ರಾಂಡ್
ನಂ. 1353, 29ನೇ ಮುಖ್ಯ ರಸ್ತೆ, ಉತ್ತರಹಳ್ಳಿ ಮುಖ್ಯ ರಸ್ತೆ, ಪೂರ್ಣ ಪ್ರಜ್ಞಾ ಬಡಾವಣೆ, ಬೆಂಗಳೂರು 560061
# 51, ಶೇಷಪ್ಪ ಬಿಲ್ಡಿಂಗ್, 5ನೇ ಮೇನ್ ರೋಡ್, “ಬಿ” ಚನ್ನಸಂದ್ರ, ಬೆಂಗಳೂರು-560043
E-mail: khotelkarimikarasanga202@gmail.com
ಮೊ: 9035655406/9743539990