ರಾಜಧಾನಿಯಲ್ಲಿ ಕುಂದಾಪ್ರ ಹಬ್ಬದ ಸಂಭ್ರಮ!
– ಜುಲೈ 26 27ರಂದು ಕುಂದಾಪ್ರ ಕನ್ನಡ ಹಬ್ಬ: ಡಾ. ದೀಪಕ್ ಶೆಟ್ಟಿ ಹೇಳಿಕೆ
– ಎರಡು ದಿನಗಳ ಕಾಲ ಬೆಂಗಳೂರಲ್ಲಿ ಕರಾವಳಿ ಕಲರವ
NAMMUR EXPRESS NEWS
ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯ ಕುಂದಾಪ್ರ ಕನ್ನಡ ಹಬ್ಬವು ಜುಲೈ 26 ಮತ್ತು 27ರಂದು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ ನಲ್ಲಿ ನಡೆಯಲಿದೆ. ಕೊಟ್ಟಿಗೆಪಾಳ್ಯದ ಸುದೀಕ್ಷಾ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ವಾಲ್ಗ ಸಮಾರಂಭದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ದೀಪಕ್ ಶೆಟ್ಟಿ ಅವರು ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಈ ಅದ್ಧೂರಿ ಕಾರ್ಯಕ್ರಮಕ್ಕೆ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದ್ದು, ಐದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕುಂದಾಪುರ ಭಾಗದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ನಡೆಸಲಾಗುವುದು. ವೇದಿಕೆ ಕಾರ್ಯಕ್ರಮಗಳಲ್ಲದೆ, ಹುಲಿ ವೇಷ, ಕೊರಗರ ಡೋಲು, ನವರಾತ್ರಿ ವೇಷ ಸೇರಿದಂತೆ ಕುಂದಾಪುರ ಭಾಗದ ಕಲೆ, ಸಂಸ್ಕೃತಿ, ಜನಪದ ಸಂಬಂಧಿ ಕ್ರೀಡೆಗಳು, ವಸ್ತುಗಳ ಪ್ರದರ್ಶನ ಕೂಡ ನಡೆಯಲಿದೆ.