Categories
ತೀರ್ಥಹಳ್ಳಿ

ಹೊದಲ ಅರಳಾಪುರ ತುಪ್ಪದಮನೆಯಲ್ಲಿ ಚಿರತೆ ಪ್ರತ್ಯಕ್ಷ, ಆಂತಕಗೊಂಡ ಗ್ರಾಮಸ್ಥರು

ಹೊದಲ ಅರಳಾಪುರ ತುಪ್ಪದಮನೆಯಲ್ಲಿ ಚಿರತೆ ಪ್ರತ್ಯಕ್ಷ, ಆಂತಕಗೊಂಡ ಗ್ರಾಮಸ್ಥರು
– ದೇವಸ್ಥಾನದ ಮುಂಭಾಗದಲ್ಲಿ ಚಿರತೆ ಪ್ರತ್ಯಕ್ಷ
– ಅರಣ್ಯ ಇಲಾಖೆಯವರು ಚಿರತೆ ಸೆರೆಹಿಡಿಯಲು ಕಾರ್ಯಚರಣೆ ಮಾಡಬೇಕು ಎಂದು ಗ್ರಾಮಸ್ಥರ ಒತ್ತಾಯ

NAMMUR EXPRESS NEWS
ತೀರ್ಥಹಳ್ಳಿ: ಹೊದಲ ಅರಳಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ತುಪ್ಪದಮನೆಯ ಮುಖ್ಯ ರಸ್ತೆಯಲ್ಲಿ ಕಳೆದ ಹಲವು ದಿನಗಳಿಂದ ಸಾರ್ವಜನಿಕರಿಗೆ ಸಂಜೆ 6 ರಿಂದ 7ರ ಸಮಯದಲ್ಲಿ ಸಾರ್ವಜನಿಕರಿಗೆ ಚಿರತೆ ಕಾಣಿಸಿಕೊಂಡಿದೆ. ತುಪ್ಪದಮನೆ ದೇವಸ್ಥಾನದ ಮುಂಭಾಗದ ಹೊದಲ-ಗುಡ್ಡೆಕೊಪ್ಪ ಮುಖ್ಯ ರಸ್ತೆ ಹಾಗೂ ಎಡಗುಡ್ಡೆ ತಿರುವಿನ ವೃತ್ತದಲ್ಲಿ ಚಿರತೆಯನ್ನು ಕಂಡ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಈಗಾಗಲೇ ಈ ಚಿರತೆಯು ಈ ಪ್ರದೇಶದ ಕೊಪ್ಪಲು ಗೊರಕೋಡು ಹಾಗೂ ಎಡಗುಡ್ಡೆಯಲ್ಲಿನ ಮನೆಯಲ್ಲಿ ಸಾಕಿದ ನಾಯಿಗಳನ್ನು ಹೊತ್ತಯ್ದ ಬಗ್ಗೆ ಅಲ್ಲಿನ ಗ್ರಾಮಸ್ಥರು ಹೇಳಿದ್ದಾರೆ.
ಅರಣ್ಯ ಇಲಾಖೆಯವರು ಈ ಸಂಬಂಧ ಚಿರತೆ ಸೆರೆಹಿಡಿಯಲು ಕಾರ್ಯಚರಣೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.