Categories
ಬೆಂಗಳೂರು

ಮಲೆನಾಡ ನಾಯಕಿ ಡಾ. ಆರತಿ ಕೃಷ್ಣ ಈಗ ಎಂ. ಎಲ್ಸಿ

ಮಲೆನಾಡ ನಾಯಕಿ ಡಾ. ಆರತಿ ಕೃಷ್ಣ ಈಗ ಎಂ. ಎಲ್ಸಿ
– ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿ ಆದೇಶ
– ಹಲವು ದಶಕಗಳ ಸೇವೆಗೆ ಸಂದ ಗೌರವ: ಶುಭಾಶಯಗಳು

NAMMUR EXPRESS NEWS
ಬೆಂಗಳೂರು: ಅನಿವಾಸಿ ಭಾರತೀಯ ಸಂಘಟಕಿ, ಕಾಂಗ್ರೆಸ್ ನಾಯಕಿ ಡಾ.ಆರತಿ ಕೃಷ್ಣ ಅವರಿಗೆ ವಿಧಾನ ಪರಿಷತ್ ಸ್ಥಾನ ಒಲಿದು ಬಂದಿದೆ. ಮಲೆನಾಡ ನಾಯಕಿಯಾಗಿ ಹೊರ ದೇಶದಲ್ಲಿರುವ ಭಾರತೀಯರ ಸಂಕಷ್ಟಕ್ಕೆ ಮಿಡಿಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಸೇವೆ ಮಾಡುತ್ತಿರುವ ಹಾಲಿ ಕರ್ನಾಟಕ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾಗಿರುವ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅನಿವಾಸಿ ಭಾರತೀಯ ಘಟಕದ ಮುಖ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಡಾ.ಆರತಿ ಕೃಷ್ಣ ಅವರನ್ನು ಕರ್ನಾಟಕದ ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆಯೇ ಇವರ ನೇಮಕ ಅಂತಿಮವಾಗಿತ್ತು.
ಹೈಕಮಾಂಡ್ ಅನುಮೋದಿಸಿರುವ ಈ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಅವರು ರಾಜಭವನಕ್ಕೆ ಕಳುಹಿಸಿ ಕೊಟ್ಟಿದ್ದು, ಅಧಿಕೃತ ಆದೇಶ ಬಾಕಿಯಿದೆ.

ಕನ್ನಡ ನಾಡಿಗೆ ಅಪಾರ ಸೇವೆ

ಅಮೆರಿಕ ಹಾಗೂ ಮತ್ತಿತರ ರಾಷ್ಟ್ರಗಳಲ್ಲಿ ಕನ್ನಡಿಗರ ಸಂಘಟನೆಗಳನ್ನು ಒಂದುಗೂಡಿಸುತ್ತಾ ಕನ್ನಡಕ್ಕಾಗಿ ದುಡಿಯುತ್ತಿದ್ದಾರೆ. ಯಶಸ್ವಿ ರಾಜತಾಂತ್ರಿಕ ಅಧಿಕಾರಿಯಾಗಿ, ಕಲಾವಿದೆ ಮತ್ತು ಉತ್ತಮ ಗಾಯಕಿ, ಸಾಮಾಜಿಕ ಕಾರ್ಯಕರ್ತೆ ಮತ್ತು ದಾನಿಯಾಗಿ ಡಾ. ಆರತಿ ಕೃಷ್ಣ ಅವರು ಬಹುಮುಖ ಹುಮುಖ ವ್ಯಕ್ತಿತ್ವ ಹೊಂದಿರುವ ನಾಯಕಿ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಬೇಗಾನೆ ಮೂಲದವರು. ಆದರೆ ಅವರು ಉಡುಪಿಯಲ್ಲಿ ಜನಿಸಿದ್ದು, ತಂದೆ ಬೇಗಾನೆ ರಾಮಯ್ಯ ಮತ್ತು ತಾಯಿ ಸೀತಾ ಬಿ. ರಾಮಯ್ಯ. ಡಾ. ಅರತಿ ಕೃಷ್ಣ ಅವರ ತಂದೆ ಶೃಂಗೇರಿ, ಎನ್.ಆರ್. ಪುರದಲ್ಲಿ ವಕೀಲರಾಗಿದ್ದರು. ಅವರು ಶೃಂಗೇರಿಯ ಶಾಸಕರಾಗಿದ್ದರು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರ ಸ್ಥಾನವನ್ನು ಕೂಡ ನಿರ್ವಹಿಸಿದ್ದರು. ಇತ್ತೀಚಿಗೆ ಅವರು ಇಹ ಲೋಕ ತ್ಯಜಿಸಿದ್ದಾರೆ.

ಹಳ್ಳಿಯಿಂದ ದಿಲ್ಲಿವರೆಗೆ ಸೇವೆ: ಕೃಷ್ಣ ಫೌಂಡೇಶನ್ ಮೂಲಕ ಸೇವೆ

2007ರಲ್ಲಿ ಡಾ.ಅರತಿ ಕೃಷ್ಣ ಅವರು ಶೃಂಗೇರಿಯಲ್ಲಿ ಕೃಷ್ಣ ಫೌಂಡೇಶನ್ ಅನ್ನು ಸ್ಥಾಪಿಸಿದರು. ಅನಾಥ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ಮೂಲಕ ಸ್ಕಾಲರ್‌ಶಿಪ್ ನೀಡುತ್ತಿದ್ದಾರೆ.
ಡಾ.ಆರತಿ ಕೃಷ್ಣ ಅವರು ಎನ್.ಆರ್.ಪುರದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ ನಂತರ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಅಮೇರಿಕಾದಲ್ಲಿ ಸಾರ್ವಜನಿಕ ನೀತಿಗಳು ಮತ್ತು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದರು ಮತ್ತು ನಂತರ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸಕ್ಕೆ ಸೇರ್ಪಡೆಯಾದರು. ರಾಜೀನಾಮೆ ನೀಡಿ, ದೆಹಲಿಯ ರಾಯಭಾರ ಕಚೇರಿಯಲ್ಲಿ ಸಲಹೆಗಾರರ ಕೆಲಸವನ್ನು ಸ್ವೀಕರಿಸಿದರು.
ವಿದೇಶದಲ್ಲಿರುವ ಭಾರತೀಯರು, ಕನ್ನಡಿಗರ ಕರೆ ತರಲು ಸಹಾಯ ಕರೋನಾ, ಇರಾನ್ ಯುದ್ಧ, ಸೇರಿದಂತೆ ಅನೇಕ ತುರ್ತು ಸಂದರ್ಭದಲ್ಲಿ ಡಾ. ಆರತಿ ಕೃಷ್ಣ ಅವರು ಎನ್‌ಆರ್‌ಐಗಳ (ಭಾರತೀಯರ) ಕಷ್ಟಗಳಿಗೆ ಸ್ಪಂದಿಸಿದ್ದರು.
ಕರೋನಾ ಮಹಾ ಮಾರಿಯ ಸಮಯದಲ್ಲಿ ಹಲವಾರು ಎನ್‌ಆರ್‌ಐಗಳನ್ನು ಭಾರತಕ್ಕೆ ಕರೆತರಲು ಯಶಸ್ವಿಯಾದರು. ವಾಣಿಜ್ಯ ವಿಮಾನಗಳಲ್ಲಿ ಎನ್‌ಆರ್‌ಐಗಳನ್ನು ಕರೆತರಲು ರಾಯಭಾರ ಕಚೇರಿಯಿಂದ ಅನುಮತಿಯನ್ನು ಒದಗಿಸಲು ಅವರು ಶ್ರಮಿಸಿದರು.
ನೂರಾರು ಪ್ರಶಸ್ತಿ ಇವರನ್ನು ಅರಸಿ ಬಂದಿವೆ. ಇದೀಗ ಮತ್ತೊಂದು ಸ್ಥಾನ ದೊರಕಿದೆ. ಆಪ್ತರು, ಸ್ನೇಹಿತರು, ಕುಟುಂಬದವರು ಶುಭಾಶಯ ಸಲ್ಲಿಸಿದ್ದಾರೆ.

ನಮ್ಮೂರ್ ಎಕ್ಸ್ ಪ್ರೆಸ್ ಶುಭಾಶಯ ಸಲ್ಲಿಸುತ್ತದೆ 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.