ಕರಾವಳಿಯಲ್ಲಿ ಗಣಪತಿ ಹಬ್ಬಕ್ಕೆ ಮಳೆ ಅಡ್ಡಿ!?
– 4 ದಿನ ತೀವ್ರ ಮಳೆಯಾಗುವ ಸಾಧ್ಯತೆ
– ಮೀನುಗಾರರಿಗೆ ಎಚ್ಚರಿಕೆ: ಮಳೆ ಅಲರ್ಟ್
– ಕರಾವಳಿಯಲ್ಲಿ ಗಣಪತಿ ಹಬ್ಬಕ್ಕೆ ಮಳೆ ಅಡ್ಡಿ!?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕರಾವಳಿ: ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಮೋಡಕವಿದ ವಾತಾವರಣವಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 26ರಿಂದ ನಾಲ್ಕು ದಿನಗಳ ಕಾಲ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ತೀವ್ರವಾಗುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆಯು ತಿಳಿಸಿದೆ.
ಕರಾವಳಿಯಲ್ಲಿ ಗಣಪತಿ ಹಬ್ಬಕ್ಕೆ ಮಳೆ ಅಡ್ಡಿ!?
ಕರಾವಳಿಯಲ್ಲಿ ಗೌರಿ ಗಣೇಶ ಹಬ್ಬ ಸಡಗರ ಸಂಭ್ರಮದಿಂದ ನಡೆಯಲು ಸಿದ್ಧತೆ ನಡೆದಿದೆ. ಈಗಾಗಲೇ ಎಲ್ಲೆಡೆ ತಯಾರಿ ಆಗಿದೆ. ಆದ್ರೆ ಮಳೆ ಅಡ್ಡಿ ಈಗ ಆತಂಕ ಸೃಷ್ಟಿ ಮಾಡಿದೆ.