ಕೋಟ್ಯಂತರ ಎಟಿಎಂ ಬಳಕೆದಾರರೇ ಅಲರ್ಟ್!
– ಮೇ 1 ರಿಂದ ಎಟಿಎಂ ಇಂಟರ್ಚೇಂಜ್ ಶುಲ್ಕ ಹೆಚ್ಚಳ
– ಈಗ ಶುಲ್ಕ ಎಷ್ಟು ಗೊತ್ತಾ?
NAMMUR EXPRESS
ಬೆಂಗಳೂರು: ಡೆಬಿಟ್ ಕಾರ್ಡ್ (ಎಟಿಎಂ ಕಾರ್ಡ್)ಗಳನ್ನು ಬಳಸುವ ಕೋಟ್ಯಂತರ ಬಳಕೆದಾರರಿಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಇನ್ಮುಂದೆ ಎಟಿಎಂ ಬಳಕೆಗೆ ಸ್ವಲ್ಪ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ವಾಸ್ತವವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ ಇಂಟರ್ಚೇಂಜ್ ಶುಲ್ಕ ಹೆಚ್ಚಳವನ್ನು ಅನುಮೋದಿಸಿದೆ. ಈ ಹೊಸ ನಿಯಮವು 2025ರ ಮೇ 1 ರಿಂದ ಜಾರಿಗೆ ಬರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಎಟಿಎಂ ಶುಲ್ಕವನ್ನು ಹಣಕಾಸು ವಹಿವಾಟುಗಳಿಗೆ 2 ರೂಪಾಯಿ ಮತ್ತು ಹಣಕಾಸೇತರ ವಹಿವಾಟುಗಳಿಗೆ 1 ರೂಪಾಯಿ ಹೆಚ್ಚಿಸಲು ಅನುಮೋದನೆ ನೀಡಿದೆ. ಒಂದು ಪರಿಷ್ಕೃತ ನಿಯಮಗಳು ಜಾರಿಯಾದರೆ, ದೇಶದ ಕೋಟ್ಯಂತರ ಗ್ರಾಹಕರು ಎಟಿಎಂ ಮೂಲಕ ಹಣವನ್ನು ಹಿಂಪಡೆಯಲು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.
ಎಟಿಎಂ ಇಂಟರ್‌ಚೇಂಜ್ ಎಂದರೇನು?
ಒಂದು ಬ್ಯಾಂಕಿನ ಗ್ರಾಹಕರು ಮತ್ತೊಂದು ಬ್ಯಾಂಕಿನ ಎಟಿಎಂ ಸೇವೆ ಬಳಸುವುದನ್ನೇ ಎಟಿಎಂ ಇಂಟರ್‌ಚೇಂಜ್ ಎನ್ನುತ್ತಾರೆ. ಬೇರೆ ಬ್ಯಾಂಕಿನ ಎಟಿಎಂ ಬಳಸುವುದಕ್ಕಾಗಿ ಎಟಿಎಂ ಇಂಟರ್ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ. ಇದು ಸಾಮಾನ್ಯವಾಗಿ ವಹಿವಾಟಿನ ಶೇಕಡಾವಾರು ಮೊತ್ತವಾಗಿರುತ್ತದೆ ಮತ್ತು ಇದನ್ನು ಗ್ರಾಹಕರಿಂದಲೇ ಸಂಗ್ರಹಿಸಲಾಗುತ್ತದೆ.
ಈಗ ಶುಲ್ಕ ಎಷ್ಟು ಗೊತ್ತಾ?
ಇದಕ್ಕೂ ಮೊದಲು, ಭಾರತೀಯ ರಿಸರ್ವ್ ಬ್ಯಾಂಕ್ 2021ರ ಜೂನ್ ನಲ್ಲಿ ಎಟಿಎಂ ಇಂಟರ್ಚೇಂಜ್ ಶುಲ್ಕವನ್ನು ಪರಿಷ್ಕರಿಸಿತ್ತು. ಈ ಬಾರಿ ಎಟಿಎಂ ಮೂಲಕ ನಗದು ಹಿಂಪಡೆಯಲು ಇಂಟರ್‌ಚೇಂಜ್ ಶುಲ್ಕವನ್ನು ₹17 ರಿಂದ ₹19ಕ್ಕೆ ಹೆಚ್ಚಿಸಲಾಯಿತು. ಬ್ಯಾಲೆನ್ಸ್ ವಿಚಾರಣೆಯಂತಹ ಹಣಕಾಸೇತರ ವಹಿವಾಟುಗಳಿಗೆ ಇಂಟರ್‌ಚೇಂಜ್ ಶುಲ್ಕವನ್ನು ₹6 ರಿಂದ ₹7 ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ, ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕ್‌ಗಳ ಎಟಿಎಂಗಳಿಂದ ನೀವು ಐದು ವಹಿವಾಟುಗಳನ್ನು ಉಚಿತವಾಗಿ ಮಾಡಬಹುದು. ಇದರರ್ಥ ಬೇರೆ ಬ್ಯಾಂಕಿನ ಎಟಿಎಂ ಅನ್ನು ಐದು ಬಾರಿ ಬಳಸುವುದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಆದರೆ ಮೆಟ್ರೋಯೇತರ ನಗರಗಳಲ್ಲಿ ಈ ಮಿತಿ ಮೂರು ವಹಿವಾಟುಗಳಿಗೆ ಸೀಮಿತವಾಗಿದೆ.