ಡಿ.10ಕ್ಕೆ ಬೆಂಗಳೂರಿನಲ್ಲಿ ಆರ್ಯ ಈಡಿಗರ ಸಮಾವೇಶ
– ಸಮುದಾಯವನ್ನು ಸ್ವಾಗತಿಸಿದ ರೇಣುಕಾನಂದ ಸ್ವಾಮೀಜಿ
– ತೀರ್ಥಹಳ್ಳಿ, ಹೊಸನಗರದ ಮುಳುಗಡೆ ರೈತರಿಗೆ ನ್ಯಾಯಕ್ಕೆ ಪಟ್ಟು
– ಶಿವಮೊಗ್ಗ ಜಿಲ್ಲೆಯಿಂದ 400 ಬಸ್, 4 ಲಕ್ಷ ಜನ ಸೇರುವ ನಿರೀಕ್ಷೆ
NAMMUR EXPRESS NEWS
ತೀರ್ಥಹಳ್ಳಿ: ಡಿ.10ಕ್ಕೆ ಬೆಂಗಳೂರಿನಲ್ಲಿ ಆರ್ಯ ಈಡಿಗರ ಸಮಾವೇಶ ನಡೆಯಲಿದ್ದು ಸಮುದಾಯವನ್ನು ಶ್ರೀ ನಾರಾಯಣಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಸ್ವಾಗತಿಸಿದ್ದಾರೆ. ರಾಜ್ಯದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಆರ್ಯ ಈಡಿಗ ಜನಾಂಗದಲ್ಲಿ ಒಟ್ಟು 26 ಒಳ ಪಂಗಡಗಳಿದ್ದು ಅವುಗಳನ್ನು ಒಂದು ಮಾಡುವ ದೃಷ್ಠಿಯಿಂದ ಡಿಸೆಂಬರ್ 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಬೃಹತ್ ಜಾಗೃತ ಸಮಾವೇಶ ಇಟ್ಟುಕೊಂಡಿದ್ದೇವೆ.ಆರ್ಯ ಈಡಿಗರ ಸಂಘದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಡಿಸೆಂಬರ್ 10, 2023ರ ಭಾನುವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ.
ಈ ಸಮಾವೇಶವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರು, ಮಾಜಿ ಸಚಿವರು ಸಮಾಜದ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪನವರು, ಖ್ಯಾತ ಚಲನಚಿತ್ರ ನಟ ಡಾ. ಶಿವರಾಜ್ಕುಮಾರ್ರವರು, ಈಡಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು, ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು, ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿಗಳು, ಕಾರ್ತಿಕೇಯ ಪೀಠದ ಶ್ರೀ ಶ್ರೀ ಯೋಗೇಂದ್ರ ಅವಧೂತರು, ಶ್ರೀಕ್ಷೇತ್ರ ಸಿಂಗದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಾಮಪ್ಪನವರು ಹಾಗೂ ಸಚಿವ ಸಂಪುಟದ ಮಾನ್ಯ ಸಚಿವರುಗಳು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ. ಈ ಸಮಾವೇಶದ ಅಧ್ಯಕ್ಷತೆಯನ್ನು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷರಾದ ಡಾ|| ಎಂ. ತಿಮ್ಮೆಗೌಡರವರು ವಹಿಸಲಿದ್ದಾರೆ.
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪನವರು, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವರಾದ ಎಸ್. ಕುಮಾರ ಬಂಗಾರಪ್ಪನವರು, ಹೆಚ್. ಹಾಲಪ್ಪನವರು, ಮಾಜಿ ಶಾಸಕರುಗಳಾದ ಬಿ. ಸ್ವಾಮಿರಾವ್ರವರು ಮತ್ತು ಡಾ| ಜಿ.ಡಿ. ನಾರಾಯಣಪ್ಪನವರು ಹಾಗೂ ನಮ್ಮ ಸಮಾಜದ ಹಿರಿಯ ಮುಖಂಡರುಗಳು ಈ ಐತಿಹಾಸಿಕ ಸಮಾವೇಶದಲ್ಲಿ ಪಕ್ಷಾತೀತವಾಗಿ ಉಪಸ್ಥಿತರಿರಲಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲೆಯಿಂದ 400 ಬಸ್
ಈಡಿಗರ ಸಮಾವೇಶವು 1995ರಲ್ಲಿ ನಡೆದಿದ್ದು ಇಲ್ಲಿಯವರೆಗೆ ಯಾವುದೇ ಸಮಾವೇಶ ನಡೆಸಲಿಲ್ಲ. ನಮ್ಮ ಜನಾಂಗವನ್ನು ಒಂದು ಮಾಡುವ ಪ್ರಯತ್ನ ನಡೆಸಿಲ್ಲ. ಒಂದು ಮಾಡುವ ಉದ್ದೇಶದಿಂದಲೇ ಈ ಸಮಾವೇಶ ನಡೆಸಲಾಗುತ್ತಿದ್ದು ಸುಮಾರು 4 ಲಕ್ಷ ಜನ ಸೇರಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ 400 ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು ತೀರ್ಥಹಳ್ಳಿಯಿಂದ 25 ಬಸ್ಗಳು ಹೋಗಲಿದೆ. ಹೊಸನಗರ ತಾಲ್ಲೂಕಿನ ಎಲ್ಲ ಈಡಿಗರ ಸಮುದಾಯಗಳು ಒಂದುಗೂಡಿಸಿಕೊಂಡು ಈ ಸಮಾವೇಶಕ್ಕೆ ಆಗಮಿಸಿ ಈ ಬೃಹತ್ ಜಾಗೃತ ಸಮಾವೇಶವನ್ನು ಉಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.
ಮುಳುಗಡೆ ಸಂತ್ರಸ್ಥರಿಗೆ ಭೂಮಿ ನೀಡುವಂತೆ ಒತ್ತಾಯ:
ತೀರ್ಥಹಳ್ಳಿ, ಹೊಸನಗರದ ಕೆಲವು ಊರುಗಳು ಮುಳುಗಡೆ ಪ್ರದೇಶವಾಗಿದ್ದು ದೀಪದ ಕೆಳಗೆ ಕತ್ತಲೆಯಂಬಂತೆ ನೂರಾರು ವರ್ಷಗಳಿಂದ ಮುಳುಗಡೆ ಪ್ರದೇಶದ ರೈತರು ಸರ್ಕಾರಕ್ಕೆ ಸಾವಿರಾರು ಮನವಿ ಪತ್ರ ಸಲ್ಲಿಸಿದರೂ ಇಲ್ಲಯವರೆಗೆ ಮುಳುಗಡೆ ಸಂತ್ರಸ್ಥರಿಗೆ ನ್ಯಾಯ ಸಿಗಲಿಲ್ಲ. ಈ ವಿಷಯವನ್ನು ಸಮಾವೇಶದಲ್ಲಿ ಪ್ರಾಸ್ತಾಪಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ಈ ಸುದ್ದಿಗೋಷ್ಟಿಯಲ್ಲಿ ಈಡಿಗರ ಸಂಘದ ಅಧ್ಯಕ್ಷರಾದ ಮಟ್ಟಿನಮನೆ ರಾಮಚಂದ್ರ, ಪ್ರಮುಖರಾದ ಮುಡುಬ ರಾಘವೇಂದ್ರ, ಹೊದಲ ಶಿವು, ವಿಶಾಲ್ ಕುಮಾರ್, ಟೆಂಕಬೈಲು ಲೋಕೇಶ್ ಸೇರಿ ಹಲವರು ಉಪಸ್ಥಿತರಿದ್ದರು.